
ಆರಕ್ಕೇರದ, ಮೂರಕ್ಕಿಳಿಯದ ಜನರು ಮಧ್ಯಮ ವರ್ಗ (Middle Class) ದವರು ಅಂದ್ರೆ ತಪ್ಪಾಗೋದಿಲ್ಲ. ಎಲ್ಲ ಕಷ್ಟಗಳ ಮಧ್ಯೆ ಜೀವನ (Life) ಮಾಡುವ ಕಲೆ ಅವರಿಗೆ ತಿಳಿದಿರುತ್ತದೆ. ಯಾವುದೇ ವಸ್ತು (Material) ವನ್ನಾದ್ರೂ ಅವರು ಹಾಳು ಮಾಡುವುದಿಲ್ಲ. ಮರು ಬಳಕೆ (Recycling) ಕಲೆ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಅದ್ರಲ್ಲೂ ಮಹಿಳೆಯರು ಇದ್ರಲ್ಲಿ ಎತ್ತಿದ ಕೈ. ಮರುಬಳಕೆ ವಿಷ್ಯದಲ್ಲಿ ಮಹಿಳೆಯರ ಬಗ್ಗೆ ಅನೇಕ ಜೋಕ್ ಗಳು ಬರ್ತಿರುತ್ತವೆ. ಕವರ್ ಹಾಗೂ ಡಬ್ಬದ ಮೇಲೆ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ. ಅಂಗಡಿಯಿಂದ ಸಾಮಾನು ತಂದ ಕವರನ್ನು ಎಂದಿಗೂ ಮಹಿಳೆಯರು ಕಸಕ್ಕೆ ಎಸೆಯುವುದಿಲ್ಲ. ಅದು ಮುಂದೆ ಉಪಯೋಗಕ್ಕೆ ಬರುತ್ತದೆ ಎಂಬ ಕಾರಣ ಹೇಳಿ ಅದನ್ನು ಸಂಗ್ರಹಿಸಿರುತ್ತಾರೆ. ಹಾಲಿನ ಕವರ್ ಸಂಗ್ರಹಿಸುವವರೂ ಇದ್ದಾರೆ. ಅದನ್ನು ಸ್ವಚ್ಛಗೊಳಿಸಿ, ಒಣಸಿಟ್ಟುಕೊಳ್ತಾರೆ. ಅಗತ್ಯ ಬಿದ್ದಾಗ ಅದ್ರಲ್ಲಿ ಸಾಮಾನುಗಳನ್ನು ಹಾಕಿ ಕೊಡ್ತಾರೆ.
ಬರೀ ಕವರ್ ಗೆ ಮುಗಿದಿಲ್ಲ. ಬಾಟಲ್ ಹಾಗೂ ಡಬ್ಬಗಳ ಮೇಲೆ ಅವರಿಗಿರುವ ಪ್ರೀತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಹೊರಗೆಡೆಯಿಂದ ಪ್ಲಾಸ್ಟಿಕ್ ಡಬ್ಬದಲ್ಲಿ ಊಟ ಬಂದಿರಲಿ ಇಲ್ಲ ಐಸ್ ಕ್ರೀಂ ಡಬ್ಬವಿರಲಿ ಇಲ್ಲ ಸಣ್ಣ ಮಾತ್ರೆ ಡಬ್ಬವಿರಲಿ ಎಲ್ಲದರ ಸಂಗ್ರಹ ಅವರ ಬಳಿಯಿರುತ್ತದೆ. ಅವೆಲ್ಲವನ್ನು ಸ್ವಚ್ಛಗೊಳಿಸಿ ಎತ್ತಿಡುವ ಮಹಿಳೆಯರು ಅದ್ರಲ್ಲಿ ದಿನ ಬಳಕೆ ವಸ್ತುಗಳನ್ನು ತುಂಬಿರುತ್ತಾರೆ. ಹಾರ್ಲೆಕ್ಸ್, ಬೂಸ್ಟ್ ಡಬ್ಬಗಳಲ್ಲಿ ಬೇಳೆ – ಕಾಳುಗಳಿರುತ್ತವೆ. ಸ್ವಲ್ಪ ಗಟ್ಟಿಯಿರುವ, ಕ್ವಾಲಿಟಿ ಇರುವ ಡಬ್ಬವಿರಲಿ ನೀರಿನ ಬಾಟಲಿಯನ್ನೂ ಮಹಿಳೆಯರು ಬಿಡುವುದಿಲ್ಲ. ಅದನ್ನು ಬೇರೆಯವರಿಗೆ ಕೊಟ್ಟರೆ ಅದನ್ನು ಮರೆಯದೆ ವಾಪಸ್ ಪಡೆಯುತ್ತಾರೆ. ಐಷಾರಾಮಿ ವೈನ್ ಬಾಟಲಿಗಳನ್ನೂ ಸುರಕ್ಷಿತವಾಗಿ ಇಡ್ತಾರೆ. ಕೆಲವರ ಮನೆಯಲ್ಲಿ ವೈನ್ ಬಾಟಲಿಗಳು ಮನಿ ಪ್ಲಾಂಟ್ ಬೆಳೆಸಲು ಬಳಕೆಯಾಗಿರುತ್ತವೆ. ಮತ್ತೆ ಕೆಲವರು ಶೋಕೇಸ್ ನಲ್ಲಿ ಹಾಗೆ ಇಟ್ಟಿರುತ್ತಾರೆ. ಸಾಮಾನ್ಯವಾಗಿ ಮಹಿಳೆಯರ ಈ ಹವ್ಯಾಸ ಎಲ್ಲರಿಗೂ ತಿಳಿದಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಗನೊಬ್ಬ ಹಾಕಿದ ಫೋಟೋ ವೈರಲ್ ಆಗಿದೆ.
ಈ ಹೋಂ ಮೇಡ್ Hair Mask ಬಳಸಿ ಕೂದಲಿನ ಸಮಸ್ಯೆಗೆ ಬೈ ಬೈ ಹೇಳಿ
ತಾಯಿ ವೋಡ್ಕಾ ಬಾಟಲಿಯಲ್ಲಿ ದೇವರ ದೀಪದ ಎಣ್ಣೆ ಹಾಕಿದ ಫೋಟೋವನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಮಾರ್ಚ್ 17 ರಂದು @sssaagar ಹೆಸರಿನ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಫೋಟೋಕ್ಕೆ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ 12ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಆದ್ರೆ ನನ್ನ ತಾಯಿ ನನ್ನನ್ನು ಸಂಪೂರ್ಣ ಮುಜುಗರಕ್ಕೊಳಪಡಿಸುವ ಪಣ ತೊಟ್ಟಿದ್ದರು..! ಎಂದು ಶೀರ್ಷಿಕೆ ಹಾಕಿದ್ದಾರೆ.
ಈ ಫೋಟೋದಲ್ಲಿ ನೀವು ಪೂಜಾ ಸಾಮಗ್ರಿಯನ್ನು ನೋಡಬಹುದು. ಆದರೆ ಮಧ್ಯದಲ್ಲಿ ‘ಅಬ್ಸೊಲ್ಯೂಟ್ ವೋಡ್ಕಾ’ದ ಚಿಕ್ಕ ಬಾಟಲಿ ಕಾಣಿಸುತ್ತದೆ. ಅದರಲ್ಲಿ ವೋಡ್ಕಾ ಇಲ್ಲ. ಬದಲಾಗಿ ಪೂಜೆಗೆ ಬಳಸಲೇಬೇಕಾದ ಎಣ್ಣೆಯಿದೆ. ತಾಯಿಯ ಈ ಕೆಲಸದ ಫೋಟೋ ಟ್ವೀಟ್ ನಲ್ಲಿ ಫುಲ್ ವೈರಲ್ ಆಗಿದೆ. ಈವರೆಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ.650 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ. ಜನರ ಇದಕ್ಕೆ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ.
ಗಾಡಿಗಳಿಗೆ ಪಂಕ್ಚರ್ ಹಾಕುವ ಗಟ್ಟಿಗಿತ್ತಿ: ಪುರುಷ ಪ್ರಾಬಲ್ಯಕ್ಕೆ ಸವಾಲ್ ಈ ಆದಿಲಕ್ಷ್ಮಿ
ಬಳಕೆದಾರರಿಂದ ನಗು ತರಿಸುವ ಕಮೆಂಟ್
ಖಾಲಿ ಡಬ್ಬಗಳು, ಬಾಟಲಿಗಳು ಮತ್ತು ಪ್ಲಾಸ್ಟಿಕ್ ಬಾಕ್ಸ್ ಗಳನ್ನು ತಾಯಿ ಏಕೆ ಇಷ್ಟಪಡುತ್ತಾರೆ ಎಂದು ಒಬ್ಬ ಬಳಕೆದಾರ ಪ್ರಶ್ನೆ ಮಾಡಿದ್ದಾನೆ. ತಾಯಿ ನಂತ್ರ ಮಕ್ಕಳು ಕೂಡ ಇದನ್ನು ಫಾಲೋ ಮಾಡ್ತಾರೆ ಎಂದೂ ಆತ ಕಮೆಂಟ್ ಮಾಡಿದ್ದಾನೆ. ಇದಕ್ಕೆ @sssaagar ಪ್ರತಿಕ್ರಿಯೆ ನೀಡಿದ್ದಾನೆ. ಬಾಕ್ಸ್ ಗೆ ಸಂಬಂಧಿಸಿದಂತೆ ವಿಭಿನ್ನ ಕಥೆಯಿದೆ ಎಂದು ಇನ್ನೊಂದು ವಿಷ್ಯ ಬರೆದಿದ್ದಾನೆ. ಒಮ್ಮೆ ಬಿರಿಯಾನಿಯ ಖಾಲಿ ಡಬ್ಬದಲ್ಲಿ ನೆರೆ ಮನೆಯಲ್ಲಿ ವಾಸಿಸುವ ಜೈನ್ ಕುಟುಂಬಕ್ಕೆ ಸಿಹಿತಿಂಡಿಗಳನ್ನು ಕೊಡಲು ತಾಯಿ ಹೊರಟಿದ್ದರಂತೆ. ಅದನ್ನು ನಾನು ತಡೆದೆ. ಇಲ್ಲವೆಂದ್ರೆ ಮಹಾಯುದ್ಧ ನಡೆಯುತ್ತಿತ್ತು ಎಂದು ಬರೆದಿದ್ದಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.