
ಶಾಪಿಂಗ್ ಮಾಲ್ (Shopping Mall) ಗಳಿಗೆ ಹೋದಾಗ ಇಂಥಾ ಸೀನ್ ನಾವೆಲ್ರೂ ನೋಡಿರ್ತೀವಿ. ಹುಡುಗಿಯರು, ಹೆಂಗಸರೆಲ್ಲಾ ಪರ್ಚೇಸಿಂಗ್‌ನಲ್ಲಿ ಬಿಝಿ ಇರ್ತಾರೆ. ಬಾಯ್‌ಫ್ರೆಂಡ್, ಗಂಡಂದಿರು (Husband) ಸಪ್ಪೆ ಮೋರೆ ಹಾಕಿಕೊಂಡು ಅಡ್ಡಾಡ್ತಾ ಇರ್ತಾರೆ. ಬಿಲ್ ಎಷ್ಟು ಬರುತ್ತಪ್ಪಾ ಅನ್ನೋ ಟೆನ್ಶನ್ ಒಂದೆಡೆಯಾದ್ರೆ, ಇವ್ರ ಶಾಪಿಂಗ್ ಎಷ್ಟು ಹೊತ್ತಾದ್ರೂ ಮುಗೀತಾನೆ ಇಲ್ಲ ಅನ್ನೋ ಚಿಂತೆ ಬೇರೆನೆ.
ಶಾಪಿಂಗ್‌ಗೆ ಹೋದ ಹೆಂಗಳೆಯರು ಸೀರೆ ಖರೀದಿಸೋದಾದ್ರೂ ಒಂದ್ ಸಣ್ಣ ಕರ್ಚೀಫ್ ಕೊಳ್ಳೋದಾದ್ರೂ ಗಂಟೆಗಟ್ಟಲೆ ಟೈಂ ವೇಸ್ಟ್ ಮಾಡ್ತಾರೆ ಅನ್ನೋದು ಸುಳ್ಳೇನಲ್ಲ. ಆ ಕಲರ್, ಈ ಡಿಸೈನ್, ಈ ಸ್ಟೈಲ್ ಹೀಗೆ ಹೇಳ್ತಾನೆ ಒಂದಷ್ಟು ಬಟ್ಟೆ, ಐಟಂಗಳನ್ನು ರಾಶಿ ಪೇರಿಸಿಡ್ತಾರೆ. ಹೆಂಡ್ತಿ ಒಂದನ್ನು ಸೆಲೆಕ್ಟ್ ಮಾಡಿಟ್ಟುಕೊಂಡಾಗ ಗಂಡಸರು ಇನ್ನೇನು ಪರ್ಚೇಸಿಂಗ್ ಫೈನಲ್ ಆಯ್ತು ಅಂದ್ಕೊಂಡ್ರೆ ಕಂಪೇರಿಸನ್ ಮಾಡಿ ಮತ್ತೆ ಶಾಪಿಂಗ್ ಶುರು ಮಾಡ್ತಾರೆ.
Online Shopping: ದಿನಸಿ ಖರೀದಿಸೋ ಮುನ್ನ ತಿಳ್ಕೊಳ್ಳಿ
ಚೀನಾದ ಮಾಲ್‌ನಲ್ಲಿ ಹಸ್ಬೆಂಡ್ಸ್ ರೂಮ್
ಶಾಪಿಂಗ್‌ಗೆ ಬಂದ ಜತೆಗೆ ಬರುವ ಗಂಡಸರ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಎಲ್ಲೆಲ್ಲೋ ಆಡಾಡುತ್ತಾ, ಗೇಮಿಂಗ್ ನೋಡ್ತಾ, ಅದೂ ಬೋರಾದ್ರೆ ಮೊಬೈಲ್ ನೋಡ್ತಾ, ಆಕಳಿಸ್ತಾ ಸಮಯ ಕಳೆಯೋ ಪರಿಸ್ಥಿತಿ. ಗಂಡಸರ ಇಂಥಾ ಅವಸ್ಥೆ ಗಮನಿಸಿಕೊಂಡೇ ಚೀನಾದಲ್ಲೊಂದು ಶಾಪಿಂಗ್ ಮಾಲ್ ಹೊಸ ಐಡಿಯಾವನ್ನು ಇಂಟ್ರಡ್ಯೂಸ್ ಮಾಡಿದೆ.
ಶಾಪಿಂಗ್ ಮಾಡುವಾಗ ಲೇಟಾಯ್ತು, ಆಯ್ತಾ, ಮುಗೀತಾ ಅನ್ನೋ ಗಂಡಸರ ಡೈಲಾಗ್ ಹೆಂಗಸರಿಗೂ ಕಿರಿಕಿರಿಯೇ. ಹೀಗಾಗಿಯೇ ಯಾವಾಗ್ಲೂ ಸರಿಯಾಗಿ ಶಾಪಿಂಗ್ ಮಾಡಲು ಬಿಡದ ಗಂಡನನ್ನು ಏನ್ಬೋಡದಪ್ಪಾ ಅಂದ್ಕೊಳ್ತಿರ್ತಾರೆ. ಹೆಂಡತಿಯರ (Wife) ಈ ಮನಸ್ಥಿತಿಯನ್ನು ಮಾಲ್ ಒಂದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ನೀವು ಬನ್ನಿ ಶಾಪಿಂಗ್ ಎಂಜಾಯ್ ಮಾಡಿ, ನಿಮ್ಮ ಗಂಡಂದಿರನ್ನು ನಾವು ನೋಡಿಕೊಳ್ಳುತ್ತೇವೆ ಎಂದಿದೆ. ಶಾಪಿಂಗ್ ಮಾಲ್. ಹೊಸ ಐಡಿಯಾವನ್ನು ಇಂಟ್ರಡ್ಯೂಸ್ ಮಾಡಿರೋ ಮಾಲ್ನ ಈ ಐಡಿಯಾ ಕ್ಲಿಕ್ ಆಗಿದೆ.
ಚೀನಾದ ಮಾಲ್‌ನಲ್ಲಿ ಮಹಿಳೆಯರು ತಮ್ಮ ಸಂಗಾತಿಯನ್ನು ಶಾಪಿಂಗ್ ಮಾಡುವಾಗ ಡ್ರಾಪ್ ಮಾಡಲು ಹಸ್ಬೆಂಡ್ಸ್ ರೂಮ್ (Husbands Room)ನ್ನು ರೆಡಿ ಮಾಡಿದೆ. ಚೀನಾದ ಶಾಂಘೈನಲ್ಲಿರುವ ಗ್ಲೋಬಲ್ ಹಾರ್ಬರ್ ಮಾಲ್ ಇನ್ನು ಮುಂದೆ ಶಾಪಿಂಗ್ ಸೆಂಟರ್‌ಗಳ ಸುತ್ತಲೂ ಶಾಪಿಂಗ್‌ಗೆ ಹೆಂಡ್ತಿ ಜತೆ ಬರುವ ಗಂಡಂದಿರಿಗಾಗಿ ಹಲವಾರು ಗಾಜಿನ ಕೋಣೆಗಳನ್ನು ನಿರ್ಮಿಸಲಾಗಿದೆ.
Parentig Tips : ಮೊದಲ ಬಾರಿ ಪಾಲಕರಾಗ್ತಿದ್ದೀರಾ? ಹಾಗಿದ್ದರೆ ಈ ವಸ್ತುಗಳನ್ನು ಖರೀದಿಸಿಟ್ಟುಕೊಳ್ಳಿ
ಇಡೀ ದಿನವನ್ನು ಎಂಜಾಯ್ ಮಾಡಲು ವ್ಯವಸ್ಥೆ
ಹೆಂಗಸರು ಶಾಪಿಂಗ್ ಮಾಡ್ತಾ ಎಷ್ಟು ಸಮಯವನ್ನು ಕಳೆದ್ರೂ ಪರ್ವಾಗಿಲ್ಲ. ಗಂಡಸರು ಇಲ್ಲಿ ಇಡೀ ದಿನವನ್ನು ಎಂಜಾಯ್ ಮಾಡಬಹುದು. ಪ್ರಸ್ತುತ ಇಲ್ಲಿ ಆಟ ಆಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗದೆ. ಈ ವಿಶೇಷ ಕೋಣೆಗಳು ಆರಾಮದಾಯಕವಾದ ಕುರ್ಚಿ, ಮಾನಿಟರ್, ಕಂಪ್ಯೂಟರ್ ಮತ್ತು ಗೇಮ್‌ಪ್ಯಾಡ್‌ಗಳನ್ನು ಒಳಗೊಂಡಿವೆ, ರೆಟ್ರೊ 1990ರ ಆಟಗಳು ಆ ಸುದೀರ್ಘ ಶಾಪಿಂಗ್ ಕಾಯುವಿಕೆಗಾಗಿ ಪುರುಷರಿಗೆ ಸಮಯ ಕಳೆಯಲು ಅತ್ಯುತ್ತಮವಾಗಿದೆ.
ಈ ವಿಶೇಷ ಕೋಣೆಗಳು ಆರಾಮದಾಯಕವಾದ ಕುರ್ಚಿ, ಮಾನಿಟರ್, ಕಂಪ್ಯೂಟರ್ ಮತ್ತು ಗೇಮ್‌ಪ್ಯಾಡ್‌ಗಳನ್ನು ಒಳಗೊಂಡಿವೆ, ರೆಟ್ರೊ 1990ರ ಆಟಗಳು ಆ ಸುದೀರ್ಘ ಶಾಪಿಂಗ್ ಕಾಯುವಿಕೆಗಾಗಿ ಪುರುಷರಿಗೆ ಸಮಯ ಕಳೆಯಲು ಅತ್ಯುತ್ತಮವಾಗಿದೆ. ಆದರೆ ಶೀಘ್ರದಲ್ಲೇ ಬಳಕೆದಾರರು QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ ಮತ್ತು ಸೇವೆಯನ್ನು ಆನಂದಿಸಲು ಸಣ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ..
ಈ ಸ್ಟೋರ್ ರೂಂನಲ್ಲಿ ನಿಂತ ಗಂಡಸರು ಈ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೋಣೆಗಳು ನಿಜವಾಗಿಯೂ ಅದ್ಭುತವಾಗಿದೆ' ಎಂದು ಅವರು ಹೇಳಿದ್ದಾರೆ. ದೊಡ್ಡ ಶಾಪಿಂಗ್ ಸೆಂಟರ್ ಒಳಗೆ ಸಿಲುಕಿಕೊಂಡಾಗ ಅಲ್ಲಿ ಕುಳಿತು ಏಕಾಂತವನ್ನು ಎಂಜಾಯ್ ಮಾಡಬಹುದು ಎಂದು ಕೆಲವರು ತಿಳಿಸಿದ್ದಾರೆ. ಇನ್ನೂ ಕೆಲವೊಬ್ಬರು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾವುದೇ ಹವಾನಿಯಂತ್ರಣವಿಲ್ಲ, ನಾನು ಐದು ನಿಮಿಷಗಳ ಕಾಲ ಆಟವಾಡುತ್ತಾ ಕುಳಿತೆ. ಬೆವರಿನಿಂದ ಮುಳುಗಿದೆ ಎಂದು ಅಲ್ಲಿನ ತೊಂದರೆಗಳನ್ನು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.