ಮನೆ (Home)ಯನ್ನು ಸಂಭಾಳಿಸೋ ಕಷ್ಟ ಹೆಂಗಸರಿ (Women)ಗಷ್ಟೇ ಗೊತ್ತು. ಎಲ್ಲೆಲ್ಲೋ ಬಟ್ಟೆ ಎಸಿಯೋ ಗಂಡ(Husband), ಕರೆದ್ರೂ ಊಟಕ್ಕೆ ಬಾರದ ಮಕ್ಕಳು (Children). ಎಲ್ಲರನ್ನೂ ಕರೆದು, ಬೈದು ಹೆಂಗಸರಿಗೆ ಸಾಕಾಗಿ ಹೋಗುತ್ತೆ. ಇಷ್ಟೆಲ್ಲಾ ಕಷ್ಟ ಬೇಡಾಂತ ಇಲ್ಲೊಬ್ಬಾಕೆ ಏನ್ ಮಾಡಿದ್ದಾಳೆ ನೋಡಿ. ಆಕೆ ಮಾಡಿರೋದು ಏನೂಂತ ಗೊತ್ತಾದ್ರೆ ನೀವು ಕೂಡಾ ಏನ್ ಐಡಿಯಾನಪ್ಪಾ ಈಕೆದು ಅನ್ನೋದು ಖಂಡಿತ.
ಒಂದು ಮನೆಯನ್ನು ನಿರ್ವಹಿಸುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಹೆಂಗಸರಿಗಂತೂ ಅತಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮನೆ ಕ್ಲೀನಿಂಗ್, ಅಡುಗೆ, ವಾಶಿಂಗ್ ಎಂದು ಹಲವು ಕೆಲಸಗಳನ್ನು ಜತೆಯಾಗಿ ನಿರ್ವಹಿಸಬೇಕಾಗುತ್ತದೆ. ಇದೆಲ್ಲದರ ಮಧ್ಯೆ ಬಟ್ಟೆ, ಬ್ಯಾಗ್, ಶೂಗಳನ್ನು ತಂದು ಎಲ್ಲೆಲ್ಲಿ ಎಸೆಯುವ ಗಂಡ-ಮಕ್ಕಳ ವರ್ತನೆ ಸಿಟ್ಟು ಬರಿಸದೆ ಇರುತ್ತಾ ? ಹೀಗಾಗಿ ಮನೆಯಲ್ಲಿ ಹೆಂಗಸರ ಗದ್ದಲ, ಗಲಾಟೆ, ಕಿರುಚಾಟ ಹೆಚ್ಚಾಗಿಯೇ ಇರುತ್ತೆ. ಊಟ ಮಾಡದ ಮಕ್ಕಳಿಗೆ ಗದರುವುದು, ಗಂಟೆಗಟ್ಟಲೆ ಸ್ನಾನ ಮಾಡುವ ಗಂಡನನ್ನು ಆಪೀಸಿಗೆ ಲೇಟಾಯಿತೆಂದು ಎಚ್ಚರಿಸುವುದು. ಹೀಗೆ ದಿನಪೂರ್ತಿ ಕೂಗುತ್ತಲೇ ಇರಬೇಕಾಗುತ್ತದೆ.
ದಿನವಿಡೀ ಕೆಲಸ ಮಾಡಿ ಜತೆಗೆ ಹೀಗೆ ಎಲ್ಲಾ ವಿಷಯಗಳಿಗೂ ಗಂಡ, ಮಕ್ಕಳನ್ನು ಕೂಗುತ್ತಾ ಇರುವುದು ಹೆಂಗಸರಿಗೂ ತಲೆನೋವು ಕೊಡುವ ವಿಷಯ. ಕರೆದು ಕರೆದೂ ಗಂಟಲು ನೋವೂ ಬಂದು ಬಿಡುತ್ತದೆ. ಹೀಗಾಗಿಯೇ ಇಲ್ಲೊಬ್ಬಾಕೆ ಡಿಫರೆಂಟ್ ಮಾಮ್ ಹ್ಯಾಕ್ ಕಂಡುಹಿಡಿದಿದ್ದಾರೆ. ಅರೆ ಅದೇನೂಂತ ನಿಮ್ಗೂ ಕುತೂಹಲವಿದ್ಯಾ ಹೇಳ್ತೀವಿ ಕೇಳಿ.
ನಾಲ್ಕು ಮಕ್ಕಳ ತಾಯಿಯಾದ ಆರಿನ್ ಜುರಾ, ಊಟ ಸಿದ್ಧವಾಗಿದೆ ಎಂದು ಮಕ್ಕಳಿಗೆ ಸೂಚಿಸಲು, ಟಾಯ್ಲೆಟ್‌ನಲ್ಲಿ ಮೂರು ಗಂಟೆ ಕೂರುವ ಗಂಡನಿಗೆ ಎಚ್ಚರಿಕೆ ಕೊಡಲು ಈ ರೀತಿ ಮನೆಯಲ್ಲಿ ಬೆಲ್ ಸಿಸ್ಟಮ್ ಅಳವಡಿಸಿದ್ದಾರೆ. ಆರಿನ್ ಜುರಾ ಕಿಚನ್‌ನಲ್ಲಿರುವ ಬೆಲ್ ಒತ್ತಿದರೆ ಮಕ್ಕಳ ರೂಮಿನಲ್ಲಿ, ಶೌಚಾಲಯದಲ್ಲಿರುವ ಘಂಟೆ ಬಡಿಯುತ್ತದೆ.
ಮಹಿಳೆಯರಿಗೆ ಗುಡ್‌ನ್ಯೂಸ್: ನಯಾಪೈಸೆ ಖರ್ಚು ಮಾಡ್ದೇ ಪಡೆಯಿರಿ ಹೊಲಿಗೆ ಮೆಷಿನ್
ಗಂಡ ಬಾತ್‌ರೂಮ್‌ಗೆ ಗಂಟೆಗಟ್ಟಲೆ ಅಲ್ಲೇ ಇರ್ತಾನೆ. ಹೆಂಡ್ತಿ ರಗಳೆ ಬೇಡಾಂತ ಸುಮ್ನೆ ಕೂತಿರ್ತಾನಾ, ಇಲ್ಲ ಆಫೀಸಿಗೆ ಬಂದ ಹೊಸ ಹುಡುಗಿ ಜತೆ ಚಾಟ್ ಮಾಡ್ತಿರ್ತಾನ ಏನೂ ಗೊತ್ತಿಲ್ಲ. ಬಾತ್‌ರೂಮ್ ಒಳಗೆ ಹೋದ ಗಂಡನನ್ನು ಹೆಂಡ್ತಿಯಾದ್ರೂ ಎಷ್ಟೂಂತ ಕರೆಯೋದು. ಎಲ್ಲಾ ಕೆಲ್ಸ ಬಿಟ್ಟು ಹೋಗಿ ಬಾತ್‌ರೂಮ್ ಬಡೀತಾ ಇರೋಕಾಗುತ್ತಾ. ಇದ್ಯಾವ ಕಷ್ಟ ಬೇಡಾಂತ ಹೆಂಡ್ತಿ ಬಾತ್‌ರೂಮ್‌ಗೆ ಕನೆಕ್ಟ್ ಆಗೋ ಹಾಗೆ ಬೆಲ್ ಫಿಕ್ಸ್ ಮಾಡಿದ್ದಾಳೆ. ಹೆಚ್ಚು ಹೊತ್ತು ಬಾತ್‌ರೂಮ್‌ನಲ್ಲಿ ಕಳೆದ್ರೆ ಬೆಲ್ ಪ್ರೆಸ್ ಮಾಡಿಬಿಡ್ತಾಳೆ. ಬಾತ್‌ರೂಮ್‌ನಲ್ಲಿ ಗಂಡ ಒಮ್ಮೆ ಬೆಚ್ಚಿಬೀಳ್ತಾನೆ. ಹೆಂಡ್ತಿ ಕರೀತಿದ್ದಾಳೆ ಅಂತ ಗೊತ್ತಾಗಿ ಬೇಗ ಹೊರಗೆ ಬರ್ತಾನೆ. ಹೇಗಿದೆ ಐಡಿಯಾ ?
ಅಷ್ಟಕ್ಕೂ ಈ ಗಂಡನೆಂಬ ಆಸಾಮಿ ಬಾತ್‌ರೂಮ್, ಟಾಯ್ಲೆಟ್‌ನಲ್ಲಿ ಭರ್ತಿ ಮೂರು ಗಂಟೆ ಕಳೀತಿದ್‌ನಂತೆ ನೋಡಿ. ಅಷ್ಟು ಹೊತ್ತು ಯಾರಾದೂ ಕರೀತಾ ಕೂರೋಕಾಗುತ್ತಾ ಬಿಡಿ. ಬೆಲ್ ಫಿಕ್ಸ್ ಮಾಡ್ದೆ ಇನ್ನೇನು ಮಾಡೋಕಾಗುತ್ತೆ.
Heart Attackಗೆ ಬಲಿಯಾಗುವವರಲ್ಲಿ ಮಹಿಳೆಯರೇ ಹೆಚ್ಚು
ಈ ಡಿಫರೆಂಡ್ ಮಾಮ್ ಹ್ಯಾಕ್ ಇಲ್ಲಿಗೆ ನಿಲ್ಲಲ್ಲ. ಊಟಕ್ಕೆ ಅದೆಷ್ಟು ಬಾರಿ ಕರೆದರೂ ಬಾರದ ಮಕ್ಕಳು ಮಾತು ಕೇಳೋಕೆ ಇದೇ ಐಡಿಯಾ ಯೂಸ್ ಮಾಡಿದ್ದಾಳೆ ಈ ಲೇಡಿ. ಮಕ್ಕಳ ಕೋಣೆಯಲ್ಲೂ ಇದೇ ರೀತಿಯ ಘಂಟೆಗಳನ್ನು ಅಳವಡಿಸಿದ್ದಾಳೆ. ರಾತ್ರಿಯ ಊಟವು ಸಿದ್ಧವಾಗಿದೆ ಎಂದು ತಿಳಿಸಲು ತನ್ನ ಮಕ್ಕಳ ಮಲಗುವ ಕೋಣೆಗಳಲ್ಲಿ ನಾಲ್ಕು ಡೋರ್‌ಬೆಲ್‌ಗಳನ್ನು ಅಳವಡಿಸಿದ್ದಾಳೆ, ಆದ್ದರಿಂದ ಅವಳು ಮತ್ತೆ ಮತ್ತೆ ಕೂಗಬೇಕಾಗಿಲ್ಲ. ಜಸ್ಟ್ ಒಮ್ಮೆ ಬೆಲ್ ಒತ್ತಿದರೆ ಸಾಕು. ಪ್ರತಿ ಮಗುವಿಗೆ ಒಂದು ಡೋರ್‌ಬೆಲ್ ಬಟನ್ ಇದೆ ಎಂದು ತಾಯಿ ವಿವರಿಸಿದರು, ಅದನ್ನು ಅವರು ಅಡುಗೆಮನೆಯಲ್ಲಿ ಕಬೋರ್ಡ್‌ನಲ್ಲಿ ಇರಿಸಿದ್ದಾರೆ.
ಡೋರ್‌ಬೆಲ್ ಚೈನ್‌ನ್ನು ಮಕ್ಕಳ ಮಲಗುವ ಕೋಣೆಗಳಲ್ಲಿ ಹೊಂದಿಸಲಾಗಿದೆ. ಅವಳು ತನ್ನ ಮಕ್ಕಳನ್ನು ಕರೆಯಬೇಕಾದಾಗ, ಅವಳು ಕೇವಲ ಒಂದು ಗುಂಡಿಯನ್ನು ಒತ್ತಿ ಮತ್ತು ಅವರ ಕೋಣೆಯಲ್ಲಿ ಡೋರ್‌ಬೆಲ್ ರಿಂಗಣಿಸುತ್ತದೆ. ಅಡುಗೆ ಮನೆಯಲ್ಲಿರುವ ಗುಂಡಿ ಒತ್ತಿದಾಗ ಟಾಯ್ಲೆಟ್‌ನಲ್ಲಿರುವ ಗಂಡನಿಗೆ ಸೂಚನೆ ಹೋಗುತ್ತೆ. ಅದೇನೆ ಇರ್ಲಿ, ಈ ಡಿಫರೆಂಟ್ ಮಾಮ್ ಹ್ಯಾಕ್ ಎಲ್ಲರನ್ನೂ ಬೆರಗುಗೊಳಿಸುತ್ತಿರೋದಂತೂ ನಿಜ.