ತೀವ್ರ ಪ್ರಮಾಣದಲ್ಲಿ ಹೃದಯಾಘಾತವಾದಾಗ ರೋಗಿಗಳು ಬದುಕುವುದು ಕಷ್ಟ. ಅದರಲ್ಲೂ ಮಹಿಳೆಯರಿಗೆ ಈ ಅಪಾಯ ಇನ್ನಷ್ಟು ಹೆಚ್ಚು. ತೀವ್ರ ಹೃದಯಾಘಾತವಾದ ಬಳಿಕ ಮಹಿಳೆಯರಿಗೆ ಕಾರ್ಡಿಯೋಜೆನಿಕ್ ಶಾಕ್ ಉಂಟಾದರೆ, ಅವರು ಪುರುಷರಷ್ಟು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ.
ನೀವು ಯಾರನ್ನಾದರೂ ಕೇಳಿ, “ನಿಮ್ಮ ಸಾವು (Death) ಹೇಗೆ ಆಗಬೇಕೆಂದು ನೀವು ಬಯಸುತ್ತೀರಿ?’ ಎಂದು. ಗೊತ್ತೇ ಆಗದ ಹಾಗೆ, ಯಾರಿಗೂ ತೊಂದರೆ ನೀಡದೆ, ಹೀಗೆ ಫಟ್ ಅಂತ ಹೋಗಿ ಬಿಡಬೇಕು ಎನ್ನುವ ಉತ್ತರ ಬಹುತೇಕ ಎಲ್ಲರಿಂದಲೂ ಬರುತ್ತದೆ. ನಮ್ಮ ಹಿರಿಯರೂ ಅದನ್ನೇ ಹೇಳಿದ್ದಾರೆ, “ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ’ ಎಂದು. ಅಂದರೆ ಸಾವು ಸುಲಭವಾಗಿ ಬರಬೇಕು, ಹೆಚ್ಚು ಕಾಲ ರೋಗ-ರುಜಿನ (Disease) ಎಂದು ಮಲಗಿ ದೈನ್ಯದಿಂದ ಜೀವನ ಕಳೆಯುವಂತಾಗಬಾರದು ಎಂದು. ಆದರೆ, ಯಾರ ಮರಣ ಹೇಗಾಗುತ್ತದೆ ಎಂದು ಯಾರಿಗೆ ಗೊತ್ತಿದೆ? ಯಾರಿಗೂ ಗೊತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು. ಅರ್ಧ ಗಂಟೆಯ ಹಿಂದೆ ಎಲ್ಲರೊಂದಿಗೆ ನಗುನಗುತ್ತಿರುವ ವ್ಯಕ್ತಿ ಸ್ವಲ್ಪ ಹೊತ್ತಿನ ಬಳಿಕ ಇರುವುದು ಗ್ಯಾರೆಂಟಿ ಇರುವುದಿಲ್ಲ. ಹೆಚ್ಚುತ್ತಿರುವ ಹೃದಯಾಘಾತ (Heart Attack), ಹೃದಯ ಸ್ತಂಭನಗಳಿಂದ (Heart Stroke) ವ್ಯಕ್ತಿಯೊಬ್ಬ ದಿಢೀರ್ ಎಂದು ಈ ಲೋಕವನ್ನೇ ತ್ಯಜಿಸಿಬಿಡುತ್ತಾರೆ. ಇಂದಿನ ದಿನಗಳಲ್ಲಿ ಹೃದ್ರೋಗವು ಅತಿ ಸಾಮಾನ್ಯವಾಗಿದೆ. ಮಹಿಳೆಯರು(Women), ಪುರುಷರು (Men) ಎಲ್ಲರೂ ಇದಕ್ಕೆ ಬಲಿಯಾಗುತ್ತಿದ್ದಾರೆ.
ಹೃದಯಾಘಾತ ಅಥವಾ ಹೃದಯ ಸ್ತಂಭನವಾದಾಗ ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯೆಯೇ ಜೀವ ತ್ಯಜಿಸುವವರು ಹೆಚ್ಚು. ತೀವ್ರ ಹೃದಯಾಘಾತವಾದರೆ ಯಾರೂ ಸಹ ಬದುಕುಳಿಯುವುದಿಲ್ಲ. ಆದರೆ, ಮಹಿಳೆಯರಿಗೆ ಇದರ ಅಪಾಯ (Risk) ಇನ್ನಷ್ಟು ಹೆಚ್ಚು. ಈ ಕುರಿತು ಇತ್ತೀಚೆಗೆ ಒಂದು ಸಂಶೋಧನೆಯೂ (Study) ನಡೆದಿದೆ.
ಈ ಅಧ್ಯಯನ ಹೇಳುವ ಪ್ರಕಾರ, ಕಾರ್ಡಿಯೋಜೆನಿಕ್ ಶಾಕ್ (Cardiogenic Shock)ಗೆ ಒಳಗಾದ ಮಹಿಳೆಯರು ಪುರುಷರಷ್ಟು ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ನಿಮಗೆ ಗೊತ್ತಿರಲಿ, ತೀವ್ರ ಹೃದಯಾಘಾತವಾದಾಗ ಕಾರ್ಡಿಯೋಜೆನಿಕ್ ಶಾಕ್ ಉಂಟಾಗಬಹುದು. ಆದರೆ, ಎಲ್ಲ ಬಾರಿಯೂ ಶಾಕ್ ಉಂಟಾಗುವುದಿಲ್ಲ. ಈ ಸನ್ನಿವೇಶದಲ್ಲಿ ಪುರುಷರು ಚಿಕಿತ್ಸೆಗೆ ಬೇಗ ಸ್ಪಂದಿಸುತ್ತಾರೆ ಹಾಗೂ ಅವರ ಜೀವ ಉಳಿಸಬಹುದು. ಆದರೆ, ಹೃದಯಾಘಾತಕ್ಕೆ ಒಳಗಾಗುವ ಮಹಿಳೆಯರ ಜೀವವುಳಿಸುವ ಸಾಧ್ಯತೆ ಕಡಿಮೆ.
ಹೀಗೆಲ್ಲಾ ಆಗ್ತಿದ್ರೆ ನೀವು Love Addict ಆಗಿದ್ದೀರಾ ಎಂದರ್ಥ
ತೀವ್ರ ಹೃದಯಾಘಾತವಾದ 30 ದಿನಗಳ ಬಳಿಕ ಕೇವಲ ಶೇ.38ರಷ್ಟು ಮಹಿಳೆಯರು ಬದುಕುತ್ತಾರೆ. ಆದರೆ, ಪುರುಷರ ಪ್ರಮಾಣ ಶೇ.50ರಷ್ಟಿದೆ. ಇನ್ನು ದೀರ್ಘ (Long Term) ಸಮಯದಲ್ಲಿ ನೋಡುವುದಾದರೆ, ಹೃದಯಾಘಾತವಾದ ಸುಮಾರು 9 ವರ್ಷಗಳ ಬಳಿಕ ಕೇವಲ ಶೇ.27ರಷ್ಟು ಮಹಿಳೆಯರು ಬದುಕಿದರೆ, ಶೇ.39ರಷ್ಟು ಪುರುಷರು ಬದುಕಿರುತ್ತಾರೆ.
ಮಹಿಳೆಯರಿಗೆ ಅಪಾಯ ಹೆಚ್ಚು
ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯೋಲಜಿ (European Society of Cardiology) ಯ ಸಮ್ಮೇಳನದಲ್ಲಿ ಈ ಕುರಿತ ಅಧ್ಯಯನ ವರದಿಯನ್ನು ಮಂಡಿಸಲಾಗಿದೆ. ಪುರುಷರಷ್ಟೇ ತೀವ್ರವಾದ ಹೃದಯಾಘಾತಕ್ಕೆ ತುತ್ತಾದ ಮಹಿಳೆಯರು ಬದುಕುವ ಸಾಧ್ಯತೆ ಪ್ರಮಾಣ ಕಡಿಮೆ ಎಂದು ಈ ಸಂಶೋಧನೆ ಹೇಳಿದೆ.
ಇವರು ಕಾಫಿ ಜತೆ ಮಿಕ್ಸ್ ಮಾಡೋದು ಹಾಲಲ್ಲ, ಆಲ್ಕೋಹಾಲ್!
ಅಧ್ಯಯನದ ಲೇಖಕಿ ಡೆನ್ಮಾರ್ಕ್ ನ ಕೋಪನ್ ಹೇಗನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಡಾ.ಸಾರಾ ಹೊಲ್ಲೆ (Dr Sarah Holle) “ಮಹಿಳೆಯರ ಹೃದಯ ಸಮಸ್ಯೆಯನ್ನು ವಿಭಿನ್ನವಾಗಿ ನಿಭಾಯಿಸುವ ಹಾಗೂ ಹೃದಯಾಘಾತವಾದಾಗ ಅವರಿಗೆ ನೀಡುವ ಚಿಕಿತ್ಸೆಯ ಕುರಿತು ಅರಿವು ಮೂಡಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ.
ತೀವ್ರ ಹೃದಯಾಘಾತ ಸಂಭವಿಸಿದಾಗ ಕೆಲವೊಮ್ಮೆ ಕಾರ್ಡಿಯೋಜೆನಿಕ್ ಶಾಕ್ ಉಂಟಾಗುತ್ತದೆ. ಇದು ಜೀವಕ್ಕೆ ಅತ್ಯಂತ ಅಪಾಯಕಾರಿ. ದೇಹದ ವಿವಿಧ ಅಂಗಾಂಗಳಿಗೆ ರಕ್ತ ಪೂರೈಕೆ ಮಾಡಲು ಹೃದಯವು ಈ ಸಮಯದಲ್ಲಿ ಏಕಾಏಕಿ ವಿಫಲವಾಗುತ್ತದೆ. ದೇಹಕ್ಕೆ ಸರಿಯಾಗಿ ಆಮ್ಲಜನಕ ಲಭ್ಯವಾಗುವುದಿಲ್ಲ. ಹೃದಯಾಘಾತಕ್ಕೆ ಒಳಗಾಗುವ ಶೇ.10ರಷ್ಟು ಜನರಿಗೆ ಕಾರ್ಡಿಯೋಜೆನಿಕ್ ಶಾಕ್ ಆಗುತ್ತದೆ. ಹೀಗಾಗುವವರಲ್ಲಿ ಅರ್ಧದಷ್ಟು ಜನ ಮಾತ್ರ ಬಚಾವಾಗುತ್ತಾರೆ. (Safe)
ಈ ಅಧ್ಯಯನದ ಉದ್ದೇಶವೆಂದರೆ, ಹೃದ್ರೋಗಗಳಿಗೆ ನೀಡುವ ಚಿಕಿತ್ಸಾ ವಿಧಾನದ ಬಗ್ಗೆ ಹೆಚ್ಚಿನ ಪರಾಮರ್ಶೆ ನಡೆಯಬೇಕು ಎನ್ನುವುದಾಗಿದೆ.