ಸೀರೆಯಂಥ ಭಾರತೀಯ ಸಂಪ್ರದಾಯ ಉಡುಗೆಯಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಕಂಗೊಳಿಸಲು ಇಷ್ಟ ಪಡುತ್ತಾಳೆ. ಚೆಂದದ ಸೀರೆಯುಟ್ಟು, ಚೆನ್ನಾಗಿ ಅಲಂಕರಿಸಿಕೊಂಡರೆ ಎಂಥವರೂ ವಾವ್ ಎನ್ನುವಂತೆ ಕಾಣಿಸಿಕೊಳ್ಳುತ್ತಾರೆ ಮಹಿಳೆಯರು. ಒಟ್ಟಿನಲ್ಲಿ ಸೀರೆ ಹೆಣ್ಣಿನ ಸೌಂದರ್ಯವನ್ನೇ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ಸೀರೆ ತೊಡುವಾಗ ಮಾಡೋ ಕೆಲವು ತಪ್ಪುಗಳು ಅಭಾಸವೆನಿಸುತ್ತದೆ. ಅಷ್ಟಕ್ಕೂ ಯಾವುದರ ಕಡೆ ಗಮನ ಹರಿಸಬೇಕು? ಯಾವ ತಪ್ಪು ಮಾಡಬಾರದು?
ಮದುವೆ ಅಥವಾ ಹಬ್ಬ ಏನೇ ಇರಲಿ, ಮಹಿಳೆಯರಿಗೆ ಸೂಟ್ ಆಗೋದು ಸೀರೆ. ಈ ಸೀಸನ್‌ನಲ್ಲಿ ಭಾಗಿಯಾಗಲು, ನಾವು ಒಂದು ಸೀರೆಯನ್ನಾದರೂ ರೆಡಿ ಮಾಡಿಟ್ಟುಕೊಳ್ಳುತ್ತೇವೆ. ದೇಹದ ಆಕಾರ ಹೇಗೇ ಇರಲಿ, ಈ ಸೀರೆ ಮಾತ್ರ ಎಲ್ಲರಿಗೂ ಒಪ್ಪುವಂಥ ಉಡುಗೆ ಎನ್ನುವುದರಲ್ಲಿ ಅನುಮಾನವೇ ಇಲ್ಲ,. ಸೀರೆಯಿಂದ ಹೆಣ್ಣಿನ ಸೌಂದರ್ಯ ಹೆಚ್ಚಾಗುತ್ತೋ, ಹೆಣ್ಣಿನಿಂದ ಆ ಸೀರೆಯ ಲುಕ್ ಹೆಚ್ಚುತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಸೀರೆಯಲ್ಲಿ ಪ್ರತಿಯೊಂದೂ ಮಹಿಳೆಯೂ ಆಕರ್ಷಕ ಲುಕ್ ಹೊಂದುತ್ತಾರೆ.
ಬೇರೆ ಬೇರೆ ರೀತಿಯ ಸಾಂಪ್ರದಾಯಿಕ ಉಡುಗೆ (Ethnic Wear)ಇಷ್ಟ ಪಡುವವರಾದರೂ ಮಾಡರ್ನ್ ಹುಡುಗಿಯರೂ (Modern Women) ಇಷ್ಟ ಪಡೋದು ಸೀರೆಯನ್ನೇ. ಅದರಲ್ಲಿಯೂ ವಿವಿಧ ಕ್ವಾಲಿಟಿಯ ಸೀರೆ ಇದೀಗ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇದ್ದು, ಅದಕ್ಕೆ ತಕ್ಕಂತೆ ರಿಚ್ ಲುಕ್ ಇರೋ ಬ್ಲೌಸ್ ಹಾಕ್ಕೊಂಡರಂತೂ ಬ್ಯೂಟಿಫುಲ್ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಅಷ್ಟಕ್ಕೂ ಈ ಉಡುಗೆ ಧರಿಸುವಾಗ ಯಾವ ಅಂಶಗಳನ್ನು ಗಮನಿಸಬೇಕು?
ಎಲ್ಲಾ ಡ್ರೆಸ್ ಗಿಂತಲೂ ಸೆಕ್ಸಿ ಔಟ್ ಫಿಟ್ (sexy out fit)ಈ ಭಾರತೀಯ ಉಡುಗೆ. ಈ ಧಿರಿಸನ್ನು ಧರಿಸುವಾಗ ಚೆನ್ನಾಗಿಯೇ ಕಾಣಬೇಕು. ಒಂದು ವೇಳೆ ಸೀರೆ ಉಟ್ಟಿದ್ದು ಸರಿ ಇಲ್ಲವೆಂದರೆ ನಗೆ ಪಾಟಲಿಗೀಡಾಗುವುದು ಗ್ಯಾರಂಟಿ. ಸೀರೆ ಉಟ್ಟು ತುಂಬಾ ಚೆನ್ನಾಗಿ ಕಾಣಬೇಕೆಂದರೆ ಕೆಲವು ತಪ್ಪುಗಳಾಗದಂತೆ ನೋಡಿಕೊಳ್ಳುವುದು ಅನಿವಾರ್ಯ.
ನವರಾತ್ರಿ ಹಬ್ಬಕ್ಕೆ ಇಲ್ಲಿ ಪುರುಷರೂ ಸೀರೆಯುಟ್ಟು ಡ್ಯಾನ್ಸ್ ಮಾಡ್ತಾರೆ !
ಬ್ಲೌಸ್ ಫಿಟ್ಟಿಂಗ್ ಸರಿಯಾಗಿರಲಿ (blouse fitting):
ಬ್ಲೌಸ್ ಟೈಟ್ ಆದರೂ ಸರಿ ಕಾಣಿಸೋಲ್ಲ. ಜೋಲಬಾಲವಿದ್ದರೂ ಸೀರೆ ಹಾಗೂ ಔಟ್ ಫಿಟ್‌ನ ಲುಕ್ಕೇ ಹೋಗುತ್ತದೆ. ಸೀರೆಗೆ ಸೂಟ್ ಆಗೋ ಬ್ಲೌಸ್ ಧರಿಸಿದರೆ ಚೆಂ. ಅದರಲ್ಲಿಯೂ ಈಗೀಗ ಮಾರುಕಟ್ಟೆಯಲ್ಲಿ ಚೆಂದ ಚೆಂದ ರೆಡಿಮೇಡ್ ಬ್ಲೌಸ್ ಲಭ್ಯವಿದ್ದು, ಇದು ಸೌಂದರ್ಯ ಇಮ್ಮಡಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಹೆಚ್ಚಿಗೆ ದುಡ್ಡು ಕೊಟ್ಟು, ತೆಗೆದುಕೊಂಡಷ್ಟು ಬ್ಲೌಸಿನ ಫಿಟ್ ಸಹ ಸರಿ ಹೋಗುವಂತಿರುತ್ತದೆ. ಇಂಥ ಸೀರೆ, ಬ್ಲೌಸ್ ಧರಿಸಿದರೆ ಚೆಂದ ಕಂಡೇ ಕಾಣುತ್ತಾರೆ.
ಬ್ರಾ ಕಡೆಗೆ ಗಮನ ಇರಲಿ (perfect bra): ಹೆಣ್ಣುಮಕ್ಕಳು ಸಾವಿರಾರು ರುಪಾಯಿ ದುಡ್ಡು ಕೊಟ್ಟು ಸೀರೆ ತೆಗೆದುಕೊಳ್ಳಲು ಸ್ವಲ್ಪವೂ ಯೋಚಿಸುವುದಿಲ್ಲ. ಆದರೆ, ಅದಕ್ಕೆ ಸೂಟ್ ಆಗುವಂತೆ ಇನ್ನರ್ ವೇರ್ ಕಡೆ ಗಮನ ಹರಿಸುವುದೇ ಇಲ್ಲ. ಅದರಲ್ಲಿಯೂ ಬ್ರಾ ಬಗ್ಗೆ ಸ್ವಲ್ಪ ಹೆಚ್ಚಿಗೆ ನಿರ್ಲಕ್ಷ್ಯ ವಹಿಸುವುದು ಕಾಮನ್. ಹಾಗಾಗಿ ಬ್ಲೌಸ್ ಕಲರ್‌ಗೆ ಹಾಗೂ ಡಿಸೈನ್‌ಗೆ ಸೂಟ್ ಆಗುವಂಥ ಬ್ರಾ ತೆಗೆದುಕೊಳ್ಳಬೇಕು. ಅಲ್ಲದೇ ಅದು ಫಿಟ್ ಆಗರಿಲಿ. ಬ್ಲೌಸ್ ಡೀಪ್ ಆಗಿದ್ದರೆ ಅದಕ್ಕೆ ಹೊಂದುವಂತೆಯೇ ಬ್ರಾ ಇರಲಿ. ಅರದಲ್ಲಿ ಪ್ಯಾಡೆಡ್ ಬ್ಲೌಸ್ ಇದ್ದರಂತೆ ಬ್ರಾ ಧರಿಸದೇ ಹೋದರೆ ಒಳ್ಳೇಯದು. ಅಪ್ಪ ತಪ್ಪಿಯೂ ಬ್ರಾ ಸ್ಟ್ರಿಪ್ ಬ್ಲೌಸಿನಿಂದ ಈಚೆ ಇಣುಕದಂತೆ ಗಮನ ಹರಿಸಿ. ಇದು ಹೆಣ್ಣಿನ ಲುಕ್ ಅನ್ನು ಇಮ್ಮಡಿಗೊಳಿಸುತ್ತದೆ.
ಫೂಟ್ ವೇರ್ (footwear) : ಹೀಲ್ಡ್ ಹಾಕುತ್ತೀರೋ ಅಥವಾ ಫ್ಲ್ಯಾಟ್ ಸ್ಲಿಪ್ಪರ್ (Flat Slipper) ಧರುಸುತ್ತೀರಾ ಎಂಬುದನ್ನು ಮೊದಲೇ ಡಿಸೈಡ್ ಮಾಡಿ. ಅದಕ್ಕೆ ತಕ್ಕಂತೆ ಸೀರೆ ಉಡಿ. ಸೀರೆಗೆ ತಕ್ಕಂತೆ ಸ್ಲಿಪ್ಪರ್ ರೆಡಿ ಮಾಡಿ ಕೊಳ್ಳಿ. ಸೀರೆ ಜೊತೆ ತಪ್ಪಿಯೂ ಸಹ ಕ್ಯಾಶುಯಲ್ ಫ್ಲಾಟ್ ಫಾರ್ಮ್ ಹೀಲ್ ಅಥವಾ ವೇಜಸ್ ಧರಿಸಬೇಡಿ. ಫ್ಲಾಟ್ ಮತ್ತು ಸ್ಲಿಪ್ಪರ್ ಧರಿಸದೇ ಇದ್ದರೆ ಒಳ್ಳೆಯದು. ಸುಂದರವಾಗಿ ಕಾಣಿಸಲು ಹೈ ಹೀಲ್ ಚೆಂದ. ಸ್ಟಿಲಿಟೊಸ್ ಸಹ ಓಕೆ. ಇದು ನಿಮ್ಮನ್ನು ಸಣ್ಣಗೆ ಮತ್ತು ಉದ್ದ ಕಾಣುವಂತೆ ಮಾಡುತ್ತದೆ.
Life Hacks: ಹಬ್ಬಗಳ ಸಂಭ್ರಮ ಹೆಚ್ಚಿಸಲು ಹಳೆ ಸೀರೆಯನ್ನು ಹೀಗೆ reuse ಮಾಡಿ
ಜ್ಯುವೆಲ್ಲರಿ (Heavy Jewelry): ನೀವು ಧರಿಸಿಕೊಳ್ಳುವ ಒಡವೆ ಮದುವೆಗಾದರೆ ಒಂದು ರೀತಿ ಇರಬೇಕು ಇಲ್ಲವೇ ಬೇರೆ ಪಾರ್ಟಿಗಾದರೆ ಮತ್ತೊಂದು ರೀತಿ. ಸಾಮಾನ್ಯವಾಗಿ ಪಾರ್ಟಿಗಳಿಗೆ ಹೋಗುವಾಗ ಬಂಗಾರದ ಒಡವೆಗಳು ಸೂಟ್ ಆಗೋಲ್ಲ. ಹಾಗೆಯೇ ರೇಶ್ಮೆ ಸೀರೆಗಿಂದ ಮಾರ್ಡರ್ನ್ ಸೀರೆಯೋ ಪಾರ್ಟಿಗೆ ಪರ್ಫೆಕ್ಟ್ ಅನಿಸೋದು. ಆದರೆ, ಮದುವೆ ಹಾಗೂ ಇತರೆ ಧಾರ್ಮಿಕ ಕಾರ್ಯಗಳಿಗೆ ರೇಶ್ಮೆ ಸೀರೆ, ಬಂಗಾರದ ಒಡವೆಯೇ ಚೆಂದ. ಸೀರೆಗೆ ಹೆವಿ ಜುವಲ್ಲರಿಗಿಂತ ಸಿಂಪಲ್ ಆಗಿ ಬ್ರೇಸ್‌ಲೆಟ್ ಹಾಗೂ ತೆಳ್ಳನೆ ಸರ, ಓಲೆ ಧರಿಸಿದರೆ ಡಿಗ್ನಿಫೈಡ್ ಅನಿಸುತ್ತೆ.
ಪೆಟಿಕೋಟ್ (Petticoat): ಸೀರೆಯ ಕ್ವಾಲಿಟಿಗೆ ತಕ್ಕಂತೆ ತೊಡುವ ಪೆಟಿಕೋಟ್ ಇರಬೇಕು. ಈಗ ಎಷ್ಟೇ ದಪ್ಪಗಿದ್ದರೂ ತೆಳ್ಳ ತೆಳ್ಳಗೆ ಕಾಣಿಸುವಂಥ ಪೆಟಿಕೋಟ್ ಸಿಗುತ್ತದೆ. ಪೆಟಿಕೋಟ್ ಸರಿಯಾಗಿ ಧರಿಸಿದರೆ, 9 ಗಜ ಸೀರೆಯಲ್ಲಿಯೂ ಯಾರು ಬೇಕಾದರೂ ಸುಂದರವಾಗಿ ಕಾಣಬಹುದು. ಇದು ನಿಜವಾಗಿಯೂ ಸೀರೆಯಿಂದ ಹಿಡಿದು ನಿಮ್ಮ ಒಟ್ಟಾರೆ ಸೌಂದರ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ಎಂದಿಗೂ ಈ ವಿಷಯ ನಿರ್ಲಕ್ಷಿಸಬಾರದು.
ಸ್ಟೈಲ್ ಜೊತೆಗೆ ಎಕ್ಸ್ ಪೆರಿಮೆಂಟ್ (self experiment):ಭಾರತದ ವಿವಿಧ ರಾಜ್ಯಗಳಲ್ಲಿ ಸೀರೆಯನ್ನೇ ಉಡುವುದಾದರೂ ಉಡುವ ಶೈಲಿ ವಿಭಿನ್ನವಾಗಿರುತ್ತದೆ. ಬೇರೆ ರಾಜ್ಯಗಳ ಕಥೆ ಬಿಡಿ, ನಮ್ಮ ಕರ್ನಾಟಕದಲ್ಲಿ ಕೊಡಗಿನಲ್ಲಿ ಉಡೋ ಸೀರೆಗೂ ರಾಜ್ಯದ ಬೇರೆ ಕಡೆಗಳಲ್ಲಿ ಉಡುವ ಸೀರೆ ಶೈಲಿಗೆ ವ್ಯತ್ಯಾಸವಿರುತ್ತದೆ. ಹೊಸ ಸ್ಟೈಲಿನಲ್ಲಿ ಉಡಲು ಬಯಸಿದರೆ ಮೊದಲು ಕಂಫರ್ಟೇಬಲ್ ಆಗಿರುತ್ತೀರಿ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳಿ. ನಿಮಗೆ ಸರಿಯಾಗಿ ಗೊತ್ತಿರುವ ರೀತಿಯಲ್ಲಿಯಾದರೂ ಸರಿ, ಸ್ವಲ್ಪ ಸ್ಟೈಲಿಶ್ ಆಗಿ ಸೀರೆ ಉಡಿ.
ತುಂಬಾ ಪಿನ್ ಬೇಡ (safety pins): ಕೆಲವರಿಗೆ ಸೀರೆ ಉಟ್ಟರೆ, ಎಲ್ಲೆಂದರಲ್ಲಿ ಪಿನ್ ಹಾಕುವ ಅಭ್ಯಾಸವಿರುತ್ತದೆ. ನೀವು ತುಂಬಾ ಪಿನ್ ಹಾಕಿದರೆ ಸೀರೆಯೇ ಹರಿದು ಹೋಗಬಹುದು. ಆದುದರಿಂದ ಸೀರೆ ಸರಿಯಾಗಿ ನಿಲ್ಲಲು ಎಷ್ಟು ಪಿನ್ ಬೇಕೋ ಅಷ್ಟು ಕಡಿಮೆ ಸಂಖ್ಯೆಯಲ್ಲಿ ಪಿನ್ ಹಾಕಿ. ಇದರಿಂದ ಸೀರೆ ಬಿಚ್ಚುವಾಗಲೂ ಅನುಕೂಲ.
ನವರಾತ್ರಿಯಲ್ಲಿ ಎಥ್ನಿಕ್ ಡ್ರೆಸ್ ಜೊತೆ ಶರ್ಟ್ ಹೀಗೆ ಕ್ಯಾರಿ ಮಾಡಿ
ಸಂದರ್ಭಕ್ಕೆ ಸರಿಯಾಗಿರಲಿ (Occasion): ಒಂದೇ ರೀತೀಯ ಸೀರೆ ಎಲ್ಲಾ ಕಡೆಗೂ ಧರಿಸಬಾರದು. ಆಫೀಸ್‌ಗೆ (office)ಹೋಗುವಾಗ ಕಾಟನ್ ಸೀರೆ (cotton saree) ಅಥವಾ ಹಗುರ ಫ್ಯಾಬ್ರಿಕ್ ಸೀರೆ (Light fabric saree), ಮದುವೆ ಸಂದರ್ಭದಲ್ಲಿ ರೇ, ಡಿಸೈನರ್ ಸೀರೆ ಆಯ್ಕೆ ಮಾಡಿದರೆ ಚೆಂದ.
ನೆರಿಗೆ ಸರಿಯಾಗಿರಲಿ (Untidy Pleats):ನೆರಿಗೆ ಸರಿಯಾಗಿದ್ದರೆ ಮಾತ್ರ ಸೀರೆ ಅಂದ ಹೆಚ್ಚೋದು. ಅಚ್ಚುಕಟ್ಟಾಗಿ ಮಾಡಿದ ಪ್ಲೀಟ್‌ಗಳಿಲ್ಲವೆಂದರೆ ಅಂದ ಕೆಡುವುದು ಖಂಡಿತಾ. ಆದುದರಿಂದ ಮೊದಲು ಸರಿಯಾಗಿ ನೆರಿಗೆ ಹಾಕುವುದ ಕಲಿಯಿರಿ. ಇದು ಸುಂದರ ಲುಕ್ ನೀಡುತ್ತದೆ.
ಅಮ್ಮನನ್ನೂ ಮೀರಿಸುವಂತಿದೆ ಇಶಾ ಅಂಬಾನಿ ಲೈಫ್‌ಸ್ಟೈಲ್, ಅಬ್ಬಬ್ಬಾ ಸೀರೆ ಕಲೆಕ್ಷನ್ ಹೆಂಗಿದೆ ನೋಡಿ