Education: 100ರಲ್ಲಿ 84 ಅಂಕ ಪಡೆದ 104 ವರ್ಷದ ಕುಟ್ಟಿಯಮ್ಮ

Published : Nov 15, 2021, 02:47 PM ISTUpdated : Nov 15, 2021, 03:01 PM IST
Education: 100ರಲ್ಲಿ 84 ಅಂಕ ಪಡೆದ 104 ವರ್ಷದ ಕುಟ್ಟಿಯಮ್ಮ

ಸಾರಾಂಶ

Age is just a number: ಕುಟ್ಟಿಯಮ್ಮನಿಗೆ ವಯಸ್ಸಿನ ಲೆಕ್ಕವೇ ಇಲ್ಲ ಸಾಕ್ಷರತಾ ಪರೀಕ್ಷೆಯಲ್ಲಿ 100ರಲ್ಲಿ 84 ಅಂಕ

Age is Just a number ಅನ್ನೋದು ಸುಮ್ನೇನಾ ? ಇಂಥ ಘಟನೆಗಳೇ ನೋಡಿ ಈ ಮಾತಿಗೆ ಸಾಕ್ಷಿ. ಕೇರಳದ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವೃದ್ಧೆಯ ವಯಸ್ಸು 104 ಅಂದರೆ ನೀವು ನಂಬುತ್ತೀರಾ ? ಮಾರ್ಕ್ಸ್ ಪಡೆದೇನು ಮಾಡೋಣ ಎನ್ನುವವರಿಗೆ 104ರ ವಯಸ್ಸಲ್ಲಿ ಅಂಕಗ ಗಳಿಸಿದ ಸಾಧನೆ ಮಾಡಿದ ಕುಟ್ಟಿಯಮ್ಮನೇ ಉತ್ತರ. ಇವರ ಉತ್ಸಾಹವೇ ಪ್ರೇರಣೆ.

ತನ್ನ ಪ್ರಸಿದ್ಧ ಸಾಕ್ಷರತೆಯ ಪ್ರಯತ್ನಗಳ ಬಗ್ಗೆ ಹೆಮ್ಮೆಪಡಲು ಕೇರಳ ಸರ್ಕಾರಕ್ಕೆ ಮತ್ತೊಂದು ಕಾರಣವನ್ನು ನೀಡಿದ್ದಾರೆ ಶತಾಯುಷಿ ಕುಟ್ಟಿಯಮ್ಮ(Kuttiyamma). ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‌ಕುಟ್ಟಿ ಅವರು ಶುಕ್ರವಾರ 104 ವರ್ಷದ ಕುಟ್ಟಿಯಮ್ಮ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯ ಸರ್ಕಾರದ ಮುಂದುವರಿದ ಶಿಕ್ಷಣ ಉಪಕ್ರಮವು ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನಂತರ ಅವರಿಗೆ ಶುಭ ಹಾರೈಸಿದ್ದಾರೆ.

ಭಿಕ್ಷೆ ಬೇಡಿ ದೇವಾಲಯಗಳಿಗೆ ಲಕ್ಷ-ಲಕ್ಷ ಹಣ ದಾನ ಮಾಡೋ 80ರ ಅಜ್ಜಿ ಮತ್ತೆ ಸುದ್ದಿಯಲ್ಲಿ

ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ಪರೀಕ್ಷೆಯಲ್ಲಿ 89/100 ಅಂಕಗಳನ್ನು ಗಳಿಸಿದ್ದಾರೆ. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಇತರ ಎಲ್ಲ ಕಲಿಕಾ ಅಭ್ಯರ್ಥಿಗಳಿಗೆ ನಾನು ಶುಭ ಹಾರೈಸುತ್ತೇನೆ. ಭಾವಪರವಶಳಾಗಿರುವ ಕುಟ್ಟಿಯಮ್ಮನ ಚಂದದ ಫೋಟೋದೊಂದಿಗೆ ಅವರು ಟ್ವೀಟ್ ಮಾಡಿದ್ದಾರೆ.

ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ರಾಜ್ಯ ಸರ್ಕಾರದಿಂದ ಧನಸಹಾಯವನ್ನು ಹೊಂದಿದೆ. ಎಲ್ಲಾ ನಾಗರಿಕರಿಗೆ ಸಾಕ್ಷರತೆ, ಮುಂದುವರಿದ ಶಿಕ್ಷಣ ಮತ್ತು ಜೀವಮಾನದ ಕಲಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ, ಇದು 4ನೇ, 7ನೇ, 10ನೇ, 11ನೇ ಮತ್ತು 12ನೇ ತರಗತಿಗಳಿಗೆ ಸಮಾನತೆ ಕಲಿಕಾ ಕಾರ್ಯಕ್ರಮಗಳನ್ನು ಒದಗಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!