
ಅದೃಷ್ಟವನ್ನು ನಂಬಿ ಕುಳಿತ್ರೆ ಸಾಧಿಸಲು ಸಾಧ್ಯವಿಲ್ಲ. ಅದೃಷ್ಟದ ಜೊತೆ ಪರಿಶ್ರಮ ಬಹಳ ಅಗತ್ಯ. ಜೀವನ ಹೇಗೆ ಇರಲಿ, ಪರಿಸ್ಥಿತಿ ಏನೇ ಬರಲಿ, ಅದನ್ನು ಎದುರಿಸಿ ಗುರಿ ಮುಟ್ಟುವುದು ಸುಲಭವಲ್ಲ. ಮನಸ್ಸು ಮಾಡಿದ್ರೆ ಇದು ಅಸಾಧ್ಯವೂ ಅಲ್ಲ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು, ಬಡತನವೆಂಬ ಭೂತವನ್ನು ಜಯಿಸಿ ದೂರ ದೂರ ಹಾರುವ ಕನಸನ್ನು ಈ ಬಾಲೆ ನನಸು ಮಾಡಿದ್ದಾಳೆ. ಸ್ಲಂನಲ್ಲಿ ವಾಸವಾಗಿದ್ರೂ ಆಕೆಯ ಗುರಿ ಮಾತ್ರ ಸ್ಟೇಜ್ ಮೇಲೆ ಬೆಕ್ಕಿನ ಹೆಜ್ಜೆ ಹಾಕಿ, ಸಾವಿರಾರು ಕಣ್ಣುಗಳು ಆಕೆಯನ್ನು ನೋಡ್ಬೇಕು ಎನ್ನುವುದಾಗಿತ್ತು. ಅದನ್ನು ಮಲಿಶಾ ಖರ್ವಾ ಮಾಡಿ ತೋರಿಸಿದ್ದಾಳೆ. ನಾವಿಂದು 14 ವರ್ಷದ ಮಾಡೆಲ್ ಮಲಿಶಾ ಖರ್ವಾ ಸ್ಫೂರ್ತಿದಾಯಕ ಜೀವನವನ್ನು ನಿಮ್ಮ ಮುಂದೆ ಇಡ್ತೆವೆ.
ಸ್ಲಂ (Slum) ಪ್ರಿನ್ಸೆಸ್ ಆಫ್ ಇಂಡಿಯಾ (India) ಎಂದೇ ಮಲಿಶಾ ಖಾರ್ವಾ (Malisha Kharwa) ರನ್ನು ಕರೆಯಲಾಗುತ್ತದೆ. ಮಲಿಶಾ ಹದಿಹರೆಯದ ಮಾಡೆಲ್. ಆಕೆ ಜೀವನ ಅನೇಕ ಯುವತಿಯರಿಗೆ ಸ್ಫೂರ್ತಿ. 14 ವರ್ಷ ವಯಸ್ಸಿನ ಮಲಿಶಾ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮಲಿಶಾ ಇತ್ತೀಚೆಗೆ ಫ್ಯಾಶನ್ ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಿಶಾ ಜೀವನಾಧಾರಿತ ಕಿರುಚಿತ್ರ ಕೂಡ ತೆರೆಗೆ ಬಂದಿದೆ.
ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!
ಮಲಿಶಾ ಖರ್ವಾ ಯಾರು ? : ಮಲಿಶಾ ತನ್ನ ಕುಟುಂಬದೊಂದಿಗೆ ಮುಂಬೈನ ಕೊಳೆಗೇರಿಯಲ್ಲಿ ವಾಸಿಸುತ್ತಾರೆ. ಅವರ ತಂದೆ ಮಕ್ಕಳ ಪಾರ್ಟಿಗಳಲ್ಲಿ ವೇಷ ಧರಿಸಿ ಮಕ್ಕಳನ್ನು ನಗಿಸುವ ಕೆಲಸ ಮಾಡ್ತಾರೆ. ಮನಿಶಾಗೆ ತಮ್ಮನಿದ್ದಾನೆ. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವಳು ಮಲಿಶಾ.
ಸ್ಟೆಪ್ ಅಪ್ 2 ಚಿತ್ರದ ನಟ ರಾಬರ್ಟ್ ಹಾಫ್‌ಮನ್ ಕಣ್ಣಿಗೆ ಬಿದ್ದವಳು ಮಲಿಶಾ. ರಾಬರ್ಟ್, ಮಲಿಶಾ ಸೋದರಸಂಬಂಧಿಯೊಂದಿಗೆ ಸಂಗೀತ ವೀಡಿಯೊವನ್ನು ಚಿತ್ರೀಕರಿಸಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆ ವೇಳೆ ರಾಬರ್ಟ್ ಕಣ್ಣಿಗೆ ಮಲಿಶಾ ಬಿದ್ದಿದ್ದರು. ನಂತ್ರ ಮಲಿಶಾ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆಯಲಾಯ್ತು. 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಮಲಿಶಾ.
ಮಲಿಶಾ ಭೇಟಿಯಾಗಿದ್ದು ಒಂದು ರೀತಿಯ ಫಿಲ್ಮಂ ದೃಶ್ಯದಂತೆ ಇತ್ತು ಎನ್ನುತ್ತಾರೆ ರಾಬರ್ಟ್. ಸ್ಲಂ ಜನರ ಮಧ್ಯೆ ನಿಂತಿದ್ದ ಮಲಿಶಾ ಎಲ್ಲರನ್ನು ಆಕರ್ಷಿಸುತ್ತಿದ್ದರಂತೆ. ಸ್ವಲ್ಪ ಕಪ್ಪಾಗಿರುವ ಜನರಿಗೆ ಭಾರತದಲ್ಲಿ ಮಾನ್ಯತೆ ಕಡಿಮೆ. ಹಾಗಾಗಿಯೇ ಆಕೆಗೆ ಹೆಚ್ಚು ಮಾಡಲಿಂಗ್ ಆಫರ್ ಸಿಗ್ತಿರಲಿಲ್ಲ ಎನ್ನುತ್ತಾರೆ ರಾಬರ್ಟ್.
ಹೆಸರು ಮಾಡಿದ ಮಲಿಶಾ : ಸದಾ ಸಂತೋಷದಿಂದಿರುವ ಹುಡುಗಿ ಮಲಿಶಾ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕ್ತಿರುತ್ತಾರೆ. 2020 ರಲ್ಲಿ, ಮಲಿಶಾ ಫಲ್ಗುಣಿ ಶೇನ್ ಮತ್ತು ಪೀಕಾಕ್ ಮ್ಯಾಗಜೀನ್‌ನ ಕವರ್ ಗರ್ಲ್ ಆದರು. ಇದು ಅವರ ದೊಡ್ಡ ಸಾಧನೆಯಾಗಿದೆ. ಕ್ರಮೇಣ ಮಲಿಶಾಗೆ ಸಾಕಷ್ಟು ಆಫರ್‌ಗಳೂ ಬರಲು ಶುರುವಾದ್ವು. ಈಗ ಮಾಡಲಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಮಲಿಶಾ.
ಸ್ನೇಹಿತರು ಮತ್ತ ತಮ್ಮನ ಜೊತೆ ಸಮಯ ಕಳೆಯಲು ಇಷ್ಟಪಡುವ ಮಲಿಶಾ, ವಿಮಾನದಲ್ಲಿ ಪ್ರಯಾಣ ಬೆಳೆಸುವ ಕನಸು ಹೊಂದಿದ್ದಾರೆ. Live Your Fairy Tale ಹೆಸರಿನ ಸಾಕ್ಷ್ಯ ಚಿತ್ರ ಮಲಿಶಾ ಜೀವನವನ್ನು ಆಧಾರಿಸಿದೆ.
ಬಿಡುವಿನ ಸಮಯದಲ್ಲಿ ಜೀವನದಲ್ಲಿ ಹೇಗೆ ಯಶಸ್ವಿಯಾಗ್ಬೇಕು ಎನ್ನುವ ಬಗ್ಗೆ ಆಲೋಚನೆ ಮಾಡುವ ಮಲಿಶಾ, ನನ್ನ ಜೀವನದ ಸಂತೋಷಕ್ಕೆ ಅನೇಕ ಬಾಗಿಲು ತೆರೆದಿದೆ. ಇದು ನನಗೆ ಖುಷಿ ನೀಡಿದೆ ಎನ್ನುತ್ತಾರೆ. ಜೀವನ ಇಷ್ಟೊಂದು ತಿರುವು ಪಡೆಯುತ್ತದೆ ಎಂದು ಮಲಿಶಾ ಎಂದೂ ಕಲ್ಪಿಸಿಕೊಂಡಿರಲಿಲ್ಲವಂತೆ.
ಪುರುಷರು ಯಾಕೆ ಹಿರಿಯ ಮಹಿಳೆಯತ್ತ ಆಕರ್ಷಿತರಾಗ್ತಾರೆ ?
ಬಾತ್ ರೂಮ್ ಇರುವ ಸುಂದರ ಮನೆಯನ್ನು ಕುಟುಂಬಕ್ಕಾಗಿ ಖರೀದಿ ಮಾಡುವ ಆಸೆಯನ್ನು ಮಲಿಶಾ ಹೊಂದಿದ್ದಾರೆ. ಸ್ಲಂನಲ್ಲಿದ್ದೂ ದೊಡ್ಡ ಕನಸು ಕಂಡು ಅದನ್ನು ನನಸಾಗಿಸಿಕೊಳ್ಳಬಹುದು, ಮನಸ್ಸಿದ್ರೆ ಸಂತೋಷ ಎಲ್ಲಿ ಬೇಕಾದ್ರೂ ಸಿಗುತ್ತೆ ಎನ್ನುವುದಕ್ಕೆ ಮಲಿಶಾ ಉತ್ತಮ ನಿದರ್ಶನ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.