ಕನಸಿನ ಬೆನ್ನೇರಿ ಹಾರಿದ ಯುವತಿ: ಗಗನಸಖಿ ಕೆಲಸ ತೊರೆದ ಈಕೆ ಈಗ ಪೈಲಟ್

Published : Jun 10, 2025, 09:54 AM ISTUpdated : Jun 10, 2025, 09:58 AM IST
From Flight Attendant to Pilot

ಸಾರಾಂಶ

ಇಂಡಿಗೋದಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿದ ಯುವತಿಯೊಬ್ಬಳು ತನ್ನ ಪೈಲಟ್ ಆಗುವ ಕನಸಿನ ಬೆನ್ನೇರಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾಳೆ. ಅವಳ ಕತೆ ಇಲ್ಲಿದೆ.

ಗಗನಸಖಿ ಕೆಲಸವನ್ನು ಉತ್ತಮ ಸಂವಹನ ಸಾಮರ್ಥ್ಯ, ಒಳ್ಳೆಯ ಪರ್ಸನಾಲಿಟಿಯ ಜೊತೆಗೆ ಸೌಂದರ್ಯ, ಮಾನದಂಡಕ್ಕೆ ಬೇಕಾದಂತಹ ಎತ್ತರ, ನಯ ನಾಜೂಕು ಇವಿಷ್ಟು ಇದ್ದರೆ ಯಾರು ಬೇಕಾದರೂ ಮಾಡಬಹುದು. ಆದರೆ ಪೈಲಟ್ ಆಗುವುದು ಅಷ್ಟು ಸುಲಭದ ಕೆಲಸವಲ್ಲ, ಅದಕ್ಕೆ ಅಗತ್ಯ ಚಾಣಾಕ್ಷತನ ಬುದ್ಧಿವಂತಿಕೆ ಅರ್ಹ ತರಬೇತಿ ಹಾಗೂ ಶಿಕ್ಷಣ ಬಹಳ ಅಗತ್ಯ, ನೂರಾರು ಜನರನ್ನು ಆಗಸದಲ್ಲಿ ಹಾರಿಸಿ ಸುರಕ್ಷಿತವಾಗಿ ನೆಲಕ್ಕಿಳಿಸುವ ಈ ಕೆಲಸ ನಾವೆಣಿಸಿದಷ್ಟು ಸುಲಭವಲ್ಲ,ತೀಕ್ಷ್ಣವಾದ ತರಬೇತಿಗಳು ಅವುಗಳನ್ನು ಸುಲಭವಾಗಿಸುತ್ತವೆ. ಹೀಗಿರುವಾಗ ಗಗನಸಖಿಯಾಗಿ ಕೆಲಸಕ್ಕೆ ಸೇರಿದ ಯುವತಿಯೊಬ್ಬಳು ತನ್ನ ಪೈಲಟ್ ಆಗುವ ಕನಸಿನ ಬೆನ್ನೇರಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾಳೆ.

ಹೀಗೆ ತಮ್ಮ ಕನಸಿನ ಬೆನ್ನೇರಿ ಯಶಸ್ವಿಯಾದ ಯುವತಿಯ ಹೆಸರು ಖುಷ್ಭು ಪ್ರಧಾನ್, ಇಂಡಿಗೋದಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿದ್ದ, ಖುಷ್ಭು, ನಂತರ ಪೈಲಟ್ ಆಗುವ ಗುರಿ ಹೊತ್ತು, ಆ ಕೆಲಸಕ್ಕೆ ರಾಜೀನಾಮೆ ನೀಡಿ, ಪೈಲಟ್ ತರಬೇತಿಗೆ ಸೇರಿಕೊಂಡರು. ಈಗ ಅವರು ತಮ್ಮ ಗಗನಸಖಿಯಿಂದ ಪೈಲಟ್ ಆಗುವವರೆಗಿನನ ತಮ್ಮ ಪಯಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಖುಷ್ಬೂ ತಮ್ಮ ಏರ್ ಹೋಸ್ಟೆಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಅವರು ಪೈಲಟ್ ಸಮವಸ್ತ್ರಕ್ಕೆ ಬದಲಾಗುತ್ತಾರೆ. ಈ 18 ವರ್ಷದ ಹುಡುಗಿಗೆ ತಾನು ಮುಂದೊಂದು ದಿನ ಪೈಲಟ್ ಆಗುವೆ ಎಂಬುದು ತಿಳಿದಿರಲಿಲ್ಲ ಎಂದು ಅವರು ವೀಡಿಯೋದ ಮೇಲೆ ಬರೆದುಕೊಂಡಿದ್ದಾರೆ.

ವರ್ಷಗಳ ಕಾಯುವಿಕೆ, ಕಠಿಣ ಪರಿಶ್ರಮ, ತಾಳ್ಮೆ, ಸ್ಥಿರತೆ ಮತ್ತು ಕುಟುಂಬದ ಬೆಂಬಲ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಈ ಆಶೀರ್ವಾದಗಳೊಂದಿಗೆ, ನಾನು ಒಬ್ಬ ಮಹಾನ್ ಮತ್ತು ಹೆಮ್ಮೆಯ ಪೈಲಟ್ ಆಗುತ್ತೇನೆ ಎಂದು ನನಗೆ ಖಚಿತವಾಗಿದೆ. ನನ್ನ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ನನಗೆ ಖಚಿತವಾಗಿದೆ ಏಕೆಂದರೆ ನಾನು ಅದಕ್ಕಾಗಿ ಶ್ರಮಿಸಿದ್ದೇನೆ. ನಾನು ಬಹಳಷ್ಟು ಅನುಭವಿಸಿದ್ದೇನೆ, ಆದರೆ ಪ್ರತಿ ಬಾರಿಯೂ ನಾನು ಬಲಶಾಲಿಯಾಗಿ ಹೊರ ಬಂದಿದ್ದೇನೆ. ನನಗೆ ಬರೆಯಲು ಒಂದು ಕಥೆ ಇದೆ, ರಚಿಸಲು ಒಂದು ಪರಂಪರೆ ಇದೆ ಎಂದು ಅವರು ಬರೆದಿದ್ದಾರೆ. ಆದರೆ ಈ ಪ್ರಯಾಣವು ಕೇವಲ ನನ್ನದಲ್ಲ ಎಂದು ಅವರು ಹೇಳಿದ್ದಾರೆ. ಪೈಲಟ್ ಆಗುವುದು ಕೇವಲ ನನ್ನ ಕನಸು ಆಗಿರಲಿಲ್ಲ, ಅದು ನನ್ನ ಕುಟುಂಬದ ಕನಸು ಕೂಡ ಆಗಿತ್ತು. ಅವರು ಕೂಡ ಈ ಕನಸಿಗಾಗಿ ನನ್ನೊಂದಿಗೆ ಶ್ರಮಿಸಿದ್ದಾರೆ ಎಂದು ಖುಷ್ಬು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ವೀಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಖುಷ್ಬು ಅವರಿಗೆ ಶುಭ ಹಾರೈಸಿದ್ದಾರೆ. ಹಲವರು ತಮಗೂ ಇದೇ ರೀತಿಯ ಕನಸಿದ್ದು, ನೀವು ನಮಗೆ ಸ್ಪೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಈ ತರಬೇತಿಗೆ ಎಷ್ಟು ವೆಚ್ಚ ತಗಲುವುದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಖುಷ್ಬು, ನೀವು ಕೆಡೆಟ್‌ಗೆ ಹೋಗುತ್ತಿದ್ದರೆ 1.35 ಕೋಟಿ +. ಇದರಲ್ಲಿ ನಿಮ್ಮ ವಿಮಾನ ದರಗಳು, ವೈದ್ಯಕೀಯ ವೆಚ್ಚಗಳು, ಪರೀಕ್ಷಾ ಶುಲ್ಕಗಳು, ಅರ್ಜಿ ಶುಲ್ಕಗಳು, ನೆಲದ ಮೇಲಿನ ಕಾಲೇಜು, ಹಾಗೂ ಸಮಯದ ವೆಚ್ಚ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ನಿಮ್ಮ ವಾಸ್ತವ್ಯ, ವೈದ್ಯಕೀಯ ವಿಮೆಗಳು ಮತ್ತು ಇತ್ಯಾದಿ ಸೇರಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಕ್ಕಾಗಿ ಎಷ್ಟು ಹಣ ಉಳಿತಾಯ ಮಾಡಿದ್ದೀರಿ ಎಂದು ಒಬ್ಬರು ಕುತೂಹಲದಿಂದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುಷ್ಬು, ಕೋರ್ಸ್ ತುಂಬಾ ದುಬಾರಿಯಾಗಿರುವುದರಿಂದ ನಿಜಕ್ಕೂ ಸಾಕಷ್ಟು ಸಮಯ ಬೇಕಾಗುತ್ತದೆ, ಆದ್ದರಿಂದ ಒಬ್ಬರಿಂದ ಪೂರ್ಣ ಮೊತ್ತವನ್ನು ಅಥವಾ ಅದರಲ್ಲಿ ಅರ್ಧದಷ್ಟು ಕೂಡ ಉಳಿಸಲು ಸಾಧ್ಯವಿಲ್ಲ. ನಾನು ಉಳಿತಾಯ ಮಾಡುವುದರಲ್ಲಿ ನಿಪುಣಳಾಗಿದ್ದರೂ, ಇಡೀ ಕೋರ್ಸ್‌ಗೆ ಹಣ ಉಳಿಸಲು ನನಗೆ ಸಾಧ್ಯವಾಗಲಿಲ್ಲ! 6 ವರ್ಷಗಳ ಕಾಲ ಕೆಲಸ ಮಾಡಿದ ನಂತರವೂ ಆ ರೀತಿಯ ಮೊತ್ತವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾನು ನೆಲದ ಶಾಲೆಗೆ ಹಣ ಹೂಡಿದೆ, ನಂತರ ಒಂದು ಕಂತು ಪಾವತಿಸಿದೆ. ನನ್ನ ಪೋಷಕರು ಮತ್ತು ಪತಿ ತಮ್ಮ ಬಳಿ ಇದ್ದ ಸುಮಾರು ಒಂದು ಉಳಿತಾಯದಿಂದ ಉಳಿದಿದ್ದನ್ನು ಪಾವತಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!