
ಚೀನಾದಲ್ಲಿ ಒಂದು ಹೊಸಾ ಟ್ರೆಂಡ್. ಮಜಾ ಇದೆ ಇದು. ಇವರನ್ನು ‘ಪುರುಷ ಅಮ್ಮಂದಿರು’ ಎಂದು ಕರೆಯುತ್ತಾರಂತೆ. ಇವರನ್ನು ಐದು ನಿಮಿಷ ತಬ್ಬಿಕೊಳ್ಳಲು ಮಹಿಳೆಯರು 600 ರೂ. ಕೊಡುತ್ತಾರಂತೆ. ಈ ಪ್ರವೃತ್ತಿ ಬೆಳೆಯುತ್ತಿದೆ. ಈ ವಿಚಿತ್ರ ರೂಢಿಗೆ ಏನು ಕಾರಣ? ಕಾರಣ ಇಷ್ಟೆ. ಚೀನಾದ ಗಂಡಸರಂತೆ ಮಹಿಳೆಯರೂ ಇತ್ತೀಚೆಗೆ ಜೀವನ ಸಾಗಿಸಲು ಸಿಕ್ಕಾಪಟ್ಟೆ ದುಡಿಯಬೇಕಾಗಿ ಬಂದಿದೆ. ಜೀವನದ ಜಂಜಾಟ, ಕೆಲಸದ ಒತ್ತಡ, ಡೆಡ್‌ಲೈನ್‌ಗಳು, ಬಿಡುವಿಲ್ಲದೆ ಬದುಕುವವರು ಮಾನಸಿಕ ಸ್ಥೈರ್ಯವನ್ನೇ ಕಳೆದುಕೊಂಡಿರುತ್ತಾರೆ. ಇಂತಹವರಿಗೆ ತಾಳ್ಮೆ, ಸಹನೆ, ಪ್ರೀತಿಯಿಂದ ಸಾಂತ್ವನ ಹೇಳುವವರ ಅಗತ್ಯವಿದೆಯಂತೆ. ಹೀಗಾಗಿಯೇ ಚೀನಾದಲ್ಲಿ ಈ ‘man mum’ ಟ್ರೆಂಡ್ ಗಮನ ಸೆಳೆದಿದೆ.
‘ಪುರುಷ ಅಮ್ಮಂದಿರು’ ಎಂದರೆ ಸಾಂತ್ವನ ಹೇಳುವವರು, ಒತ್ತಡ ನಿವಾರಿಸುವವರು. ಅವರನ್ನು ಅಪ್ಪಿಕೊಳ್ಳಲು ಮಹಿಳೆಯರು ಹಣ ನೀಡುತ್ತಾರೆ. ಇದಕ್ಕಾಗಿ ಚಾಟ್ ಅಪ್ಲಿಕೇಶನ್‌ಗಳಿವೆ. ಮಾಲ್‌ಗಳು, ಸುರಂಗಮಾರ್ಗ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಪ್ಪುಗೆ ನೀಡಲು ‘ಪುರುಷ ಅಮ್ಮಂದಿರು’ ಇರುತ್ತಾರೆ. ಹೆಚ್ಚಿನ ಅಪ್ಪುಗೆಗಳು ಶಾಪಿಂಗ್ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆ. ಇದಕ್ಕೆ 20ರಿಂದ 50 ಯುವಾನ್ ( 250 ರೂ. ರಿಂದ 600 ರೂ.) ವರೆಗೆ ವೆಚ್ಚವಾಗುತ್ತದೆ.
ʼನಾನು ಒತ್ತಡದಲ್ಲಿದ್ದೇನೆ. ಒತ್ತಡ ನಿಭಾಯಿಸಲು ಪುರುಷ ಅಮ್ಮನೊಂದಿಗೆ ಅಪ್ಪುಗೆಗೆ ಹಣ ನೀಡಲು ಬಯಸಿದ್ದೇನೆʼ ಎಂದು ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಳು. ಮೂರು ಗಂಟೆಗಳ ಹೆಚ್ಚುವರಿ ಕೆಲಸದ ಒತ್ತಡದಲ್ಲಿದ್ದ ಒಬ್ಬ ಮಹಿಳೆ ಪುರುಷ ಅಮ್ಮನನ್ನು ಅಪ್ಪಿಕೊಂಡಳಂತೆ. ಈ ಅಪ್ಪುಗೆ ಆಕೆಗೆ ತಾಯಿಯನ್ನು ಅಪ್ಪಿಕೊಂಡ ಭಾವನೆ ನೀಡಿತು. ಆ ಮಹಿಳೆ ತನ್ನ ಬಾಸ್ ಹಿಂಸೆಯ ಬಗ್ಗೆ ಹೇಳಿಕೊಂಡಳು. ಆ ಪುರುಷ ಅಮ್ಮ ಈಕೆಯ ಬೆನ್ನು ತಟ್ಟಿ ಸಮಾಧಾನಪಡಿಸಿದನಂತೆ. ಹೀಗೆಲ್ಲ ಆನ್‌ಲೈನ್‌ನಲ್ಲಿ ಕತೆಗಳು.
ನಿಜಕ್ಕೂ ಅಪ್ಪುಗೆಯ ಬಗ್ಗೆ ವಿಜ್ಞಾನವೂ ಒಳ್ಳೆಯ ಮಾತು ಹೇಳುತ್ತದೆ. ಆಲಿಂಗನ ಅನ್ನೋದು ಆನಂದ, ಆಲಿಂಗನ ಎಂಬುದು ಭದ್ರತೆ. ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮ, ಸಂಗಾತಿಯ ಅಪ್ಪುಗೆಗೆ ವಿಶೇಷ ಅರ್ಥ, ಬಾಂಧವ್ಯ ಇದೆ. ಮೊದಲ ಮುತ್ತು, ಮೊದಲ ಅಪ್ಪುಗೆಗೆ ಚಡಪಡಿಸೋದು ಪ್ರೀತಿಸೋ ಪ್ರೇಮಿಗಳ ಲಕ್ಷಣ. ‘man mum’ ಅನ್ನೋದು ಹೊಸದಾಗಿದ್ರು, ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅಮ್ಮನ ಅಪ್ಪುಗೆಗಾಗಿ ಪ್ರೀತಿಯಿಂದ ತಬ್ಬಿಕೊಳ್ಳಲು ಬಯಸುವವರು ಇವರನ್ನು ತಬ್ಬಿಕೊಂಡು ಸಾಂತ್ವನ ಪಡೆಯುತ್ತಾರೆ.
ಚೀನಾದ ಯುವತಿಯರು 5 ನಿಮಿಷದ ‘man mum’ಗೆ ಒಪ್ಪಿಕೊಂಡು 20-50 ಯುವಾನ್ ಚಾರ್ಜ್ ಮಾಡುತ್ತಿದ್ದಾರೆ. 20-50 ಯುವಾನ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 250-600 ರೂಪಾಯಿಗಳು. ಇಷ್ಟು ದುಡ್ಡು ಕೊಟ್ಟರೂ ತಬ್ಬಿಕೊಳ್ಳಲು ಯುವತಿಯರು ಒಪ್ಪಿಕೊಳ್ಳೋದಿಲ್ಲ. 5 ನಿಮಿಷ ತಬ್ಬಿಕೊಳ್ಳುವ ಯುವಕರು ಕೆಲವೊಂದು ಗುಣ-ಲಕ್ಷಣ ಮತ್ತು ಷರತ್ತುಗಳನ್ನು ಪೂರೈಸಬೇಕು.
ತಾಯಿಗಾದ ಲೈಂಗಿಕ ಕಿರುಕುಳವೇ IPS ಆಗಲು ದಾರಿ ತೋರಿಸಿತು, ಕೋಚಿಂಗ್ ಇಲ್ಲದೆ UPSC ಪಾಸಾದ ಅಧಿಕಾರಿ ಇವರು
5 ನಿಮಿಷ ತಬ್ಬಿಕೊಳ್ಳಲು ಬಯಸುವ ಯುವಕರು, ಯುವತಿಯರು ಇಷ್ಟಪಡುವ ಸ್ವಭಾವ ಹೊಂದಿರಬೇಕು. ನೋಡಲು ಚೆನ್ನಾಗಿರಬೇಕು. ಗುಡ್ ಲುಕ್ಕಿಂಗ್, ಹ್ಯಾಂಡ್ಸಮ್, ಸೌಮ್ಯತೆ, ತಾಳ್ಮೆಯನ್ನು ಮೊದಲಿಗೆ ನಿರೀಕ್ಷೆ ಮಾಡಲಾಗುತ್ತದೆ. ಎಲ್ಲಾ ಓಕೆ ಆದ ಮೇಲೆ ಮಾಲ್‌ಗಳು, ಸಬ್‌ವೇ ಸ್ಟೇಷನ್ ಸೇರಿದಂತೆ ಸಾರ್ವಜನಿಕ ಜಾಗಗಳಲ್ಲಿ ಈ ರೀತಿ ತಬ್ಬಿಕೊಳ್ಳಲಾಗುತ್ತಿದೆ. ಸೋಷಿಯಲ್ ಮೀಡಿಯಾ ಚಾಟ್ ಆ್ಯಪ್‌ಗಳಲ್ಲಿ ಸ್ಥಳ ಹಾಗೂ ಸಮಯ ನಿಗದಿ ಮಾಡಿಕೊಳ್ಳಲಾಗುತ್ತದೆ. ಯುವತಿಯ ಷರತ್ತುಗಳು ಪೂರೈಸಿದ ಯುವಕರು 5 ನಿಮಿಷ ತಬ್ಬಿಕೊಳ್ಳುವ ಮುಖಾಂತರ ಚೀನಾದಲ್ಲಿ ಒತ್ತಡ ಹಾಗೂ ಹಲವಾರು ಮಾನಸಿಕ ಖಿನ್ನತೆಗಳಿಂದ ಹೊರ ಬರುತ್ತಿದ್ದಾರೆ ಎನ್ನಲಾಗಿದೆ.
ಚೌ ಲಿಂಗ್ ಎಂಬ ಯುವಕ ಹೀಗೆ ಚಾಟ್ ಆ್ಯಪ್‌ಗಳಲ್ಲಿ 34 ಯುವತಿಯರಿಗೆ ಇಂತಹ ಅವಕಾಶ ಕೊಟ್ಟು ಬರೋಬ್ಬರಿ 21,000 ರೂಪಾಯಿಗಳನ್ನು ಸಂಪಾದಿಸಿದ್ದಾನಂತೆ. ನನ್ನಿಂದ ಕೆಲವು ಮಹಿಳೆಯರು ನಿರಾಳರಾಗುವ ಅವಕಾಶ ಸಿಕ್ಕಿದೆ. ಆದರೆ ಇದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಳ್ಳುವ ಆಸೆ ನನಗಿಲ್ಲ ಎಂದಿದ್ದಾನೆ. ಕೆಲವರು 5 ನಿಮಿಷ ತಬ್ಬಿಕೊಂಡ ಬಳಿಕ ಗಿಫ್ಟ್‌ಗಳನ್ನು ಕೊಟ್ಟು ಹೋಗಿದ್ದಾರೆ.
Madhuri Dixit: ಮದುವೆಯಾದ್ರೂ ಒಂಟಿಯಾಗಿದ್ದೆ, ತುಂಬಾ ನೋವು ಅನುಭವಿಸಿದೆ: ಮಾಧುರಿ ದೀಕ್ಷಿತ್ ಕಣ್ಣೀರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.