ಹೆಂಡತಿಯಿಂದ ಮನೆಗೆಲಸ ಮಾಡಿಸೋದು ಕ್ರೌರ್ಯ ಅಲ್ಲ: ಬಾಂಬೆ ಹೈಕೋರ್ಟ್

Published : Oct 28, 2022, 11:02 AM IST
ಹೆಂಡತಿಯಿಂದ ಮನೆಗೆಲಸ ಮಾಡಿಸೋದು ಕ್ರೌರ್ಯ ಅಲ್ಲ: ಬಾಂಬೆ ಹೈಕೋರ್ಟ್

ಸಾರಾಂಶ

ಮದುವೆ ಎಂದ ಮೇಲೆ ಹೆಣ್ಣು ಮಾತ್ರವಲ್ಲ ಎಲ್ಲರೂ ಕೆಲವೊಂದು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತೆ. ಆ ಕರ್ತವ್ಯಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಹೆಂಡತಿಯಿಂದ ಮನೆಗೆಲಸ ಮಾಡಿಸೋದು ಕ್ರೌರ್ಯ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ/ 

ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಮದುವೆಯಾಗಿ ಹೆಣ್ಣು ಮಗಳೊಬ್ಬಳು ತನ್ನ ಮನೆಯಿಂದ ಗಂಡನ ಮನೆಗೆ ಬರುತ್ತಾಳೆ. ಆ ಮನೆಯ ಭಾಗವಾಗುತ್ತಾಳೆ. ಕ್ರಮೇಣ ಮನೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ. ಆದರೆ ಎಷ್ಟೋ ಹೆಣ್ಣುಮಕ್ಕಳ ಪಾಲಿಗೆ ಮದುವೆ ಅನ್ನೋದು ಕುಣಿಕೆಯಂತಾದ ಘಟನೆಗಳೂ ಇವೆ. ವಿದ್ಯಾಭ್ಯಾಸ, ಉದ್ಯೋಗವನ್ನು ಬಿಟ್ಟು ಮದುವೆಯಾದವರು ಭವಿಷ್ಯದಲ್ಲಿ ಏನೂ ಮಾಡಲು ಸಾಧ್ಯವಾಗದೆ ಸುಮ್ಮನಿದ್ದು ಬಿಡುತ್ತಾರೆ. ಅಡುಗೆ, ಮನೆ ಕ್ಲೀನಿಂಗ್‌ನಲ್ಲಿಯೇ ಸಮಯ ಕಳೆದುಬಿಡುತ್ತಾರೆ. ಇನ್ನೂ ಕೆಲವೆಡೆ ಮನೆ ಕೆಲಸದಾಕೆ ಬೇಕು ಕಾರಣಕ್ಕೆ ಮದುವೆಯಾಗುವವರೂ ಇದ್ದಾರೆ. ವೈಫ್ ಅನ್ನೋದಕ್ಕಿಂತ ಹೆಚ್ಚಾಗಿ ಆಕೆ ಮೈಡ್ ಆಗಿರುತ್ತಾಳೆ. ಇಂಥಾ ಕೆಲವೊಂದು ಪ್ರಕರಣಗಳಿಂದಲೇ ವಿವಾಹಿತ ಮಹಿಳೆ ಮನೆಗೆಲಸ ಮಾಡೋದೆ ತಪ್ಪು ಅನ್ನೋ ಅಭಿಪ್ರಾಯ ಬರುತ್ತಿದೆ.

ವಿವಾಹಿತ ಮಹಿಳೆ ಮನೆಗೆಲಸ ಮಾಡುವಂತೆ ಕೇಳಿಕೊಂಡದ್ದು ದೌರ್ಜನ್ಯವಲ್ಲ
ಹೀಗಿರುವಾಗ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ವಿವಾಹಿತ ಮಹಿಳೆ (Married woman)ಯನ್ನು ಮನೆಗೆಲಸ ಮಾಡಲು ಕೇಳಿದರೆ ಅದಗೆ ಕ್ರೌರ್ಯವಾಗುವುದಿಲ್ಲ ಎಂದು ಹೇಳಿದೆ. ಈ ಸಂಬಂಧ ದಾಖಲಾಗಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸಿದೆ.

ಮಹಿಳೆಯರು ಗೂಗಲ್‌ನಲ್ಲಿ ಗಪ್‌ಚುಪ್ ಆಗಿ ಹುಡುಗರ ಬಗ್ಗೆ ಇಂಥದ್ದನ್ನೆಲ್ಲಾ ಸರ್ಚ್ ಮಾಡ್ತಾರಂತೆ !

'ಮದುವೆಯಾದ ಹೆಂಗಸನ್ನು ಕುಟುಂಬದ (Family) ಉದ್ದೇಶಕ್ಕಾಗಿ  ಮನೆಕೆಲಸ ಮಾಡಬೇಕೆಂದು ಕೇಳಿದರೆ, ಅದು ಸೇವಕಿಯಂತೆ (Maid) ಎಂದು ಹೇಳಲಾಗುವುದಿಲ್ಲ. ಆಕೆಗೆ ತನ್ನ ಮನೆಯ ಚಟುವಟಿಕೆಗಳನ್ನು ಮಾಡಲು ಇಷ್ಟವಿಲ್ಲದಿದ್ದರೆ, ಮದುವೆಗೆ ಮುಂಚೆಯೇ ಅವಳು ಅದನ್ನು ಹೇಳಬೇಕಾಗಿತ್ತು, ಇದರಿಂದ ವರನು ಮದುವೆಯ ಬಗ್ಗೆ ಮರು ಯೋಚಿಸಬಹುದು ಅಥವಾ ಮದುವೆಯ (Marriage) ನಂತರ ಆಗಿದ್ದರೆ, ಅಂತಹ ಸಮಸ್ಯೆಯನ್ನು ಪರಿಹರಿಸಬೇಕು' ಎಂದು ನ್ಯಾಯಮೂರ್ತಿ ವಿಭಾ ವಿ. ಅವರ ಪೀಠವು ಹೇಳಿದೆ. 

ಪತಿ, ಅತ್ತೆ ಸೇವಕಿಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಮಹಿಳೆ
ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆ, 2019ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದು, ಸುಮಾರು ಒಂದು ತಿಂಗಳಿನಿಂದ, ತನ್ನ ಪತಿ ಮತ್ತು ಅತ್ತೆಯವರನ್ನು ಸೇವಕಿಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಾರು ಖರೀದಿಸಲು ಆಕೆಯಿಂದ 4 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ತಂದೆಯ ಬಳಿ ಹಣವಿಲ್ಲ ಎಂದು ಹೇಳಿದಾಗ ಪತಿ ತನಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ (Physical abuse) ನೀಡಿದ್ದಾನೆ ಎಂದು ಹೇಳಿಕೊಂಡಿದ್ದರು. ಇದಾದ ನಂತರ 4 ಲಕ್ಷ ರೂಪಾಯಿ ತಂದರೆ ಮಾತ್ರ ಪತಿ ಮತ್ತು ಅತ್ತೆಯೊಂದಿಗೆ ಇರಲು ಅವಕಾಶ ನೀಡುವುದಾಗಿ ತಂದೆಗೆ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಜೂನ್ 27, 2020 ರಂದು ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ, ನಂತರ ನಾಂದೇಡ್ ಪೊಲೀಸರಿಗೆ ದೂರು ನೀಡಲಾಯಿತು. ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಆರೋಪಗಳನ್ನು ಸೇರಿಸಲಾಗಿದೆ.

Real Story: ಗಂಡನಿಗೆ ಅಡುಗೆ ಮಾಡಿ ಬಡಿಸ್ತಿಲ್ಲ, ಹಾಗಾದ್ರೆ ಆ ಹೆಣ್ಣು ಕೆಟ್ಟವಳಾ?

ಎಫ್‌ಐಆರ್ ರದ್ದುಗೊಳಿಸುವಂತೆ ಪತಿ ತನ್ನ ತಾಯಿ ಮತ್ತು ಅಕ್ಕನೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಹಿಳೆಯು ತನ್ನ ಮಾಜಿ ಪತಿ ಮತ್ತು ಅತ್ತೆಯ ವಿರುದ್ಧ ಇದೇ ರೀತಿಯ ದೂರುಗಳನ್ನು (Complaints) ನೀಡಿದ್ದಾಳೆ ಮತ್ತು ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ ಎಂದು ಅವರು ಹೇಳಿದ್ದಾರೆ. ಹೀಗಿದ್ದೂ, ಹಿಂದಿನ ದೂರುಗಳು ಅಥವಾ ಮೊಕದ್ದಮೆಗಳು ಅವಳು ಅಂತಹ ಆರೋಪಗಳನ್ನು ಮಾಡುವ ಅಭ್ಯಾಸವನ್ನು (Habit) ಹೊಂದಿದ್ದಳು ಎಂದರ್ಥವಲ್ಲ ಎಂದು ಪೀಠವು ಗಮನಿಸಿತು. ಅಂತಹ ಆರೋಪಗಳನ್ನು ಪತಿ ಸಾಬೀತುಪಡಿಸಬೇಕು ಎಂದು ಅದು ಹೇಳಿದೆ.

ಮಹಿಳೆಯ ಆರೋಪಗಳನ್ನು ತಿರಸ್ಕರಿಸಿದ ಕೋರ್ಟ್
ಪೀಠವು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಮಹಿಳೆಯ ಆರೋಪಗಳನ್ನು ತಿರಸ್ಕರಿಸಿತು. ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಎಂಬ ಪದದ ಬಳಕೆಯು ಐಪಿಸಿಯ ಸೆಕ್ಷನ್ 498 ಎ ಅಂಶಗಳನ್ನು ಬಲಪಡಿಸಲು ಸಾಕಾಗುವುದಿಲ್ಲ. ಆ ಕೃತ್ಯಗಳನ್ನು ವಿವರಿಸದ ಹೊರತು, ಆ ಕೃತ್ಯಗಳು ಕಿರುಕುಳ ನೀಡುತ್ತವೆಯೇ ಅಥವಾ ವ್ಯಕ್ತಿಯನ್ನು ಕ್ರೌರ್ಯಕ್ಕೆ ಒಳಪಡಿಸುತ್ತವೆಯೇ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಐಪಿಸಿಯ ಸೆಕ್ಷನ್ 498 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ಅಂಶಗಳನ್ನು ಆಕರ್ಷಿಸಲು ಈ ಪ್ರಾಥಮಿಕ ಹಂತದಿಂದಲೂ ಮಾಡಲಾದ ಆರೋಪಗಳು ಮತ್ತು ಸಾಕ್ಷ್ಯಗಳ ಸಂಗ್ರಹವು ಸಾಕಾಗುವುದಿಲ್ಲ ಎಂದು ತಿಳಿಸಲಾಗಿದೆ. 

ಇತರ ಅಪರಾಧಗಳಿಗೆ ಸಂಬಂಧಿಸಿದಂತೆ 'ಅರ್ಜಿದಾರರನ್ನು (ಪತಿ) ವಿಚಾರಣೆಯನ್ನು ಎದುರಿಸುವಂತೆ ಕೇಳುವುದು ನಿಷ್ಪ್ರಯೋಜಕವಾಗಿದೆ'  ಎಂದು ಪೀಠವು ಅಭಿಪ್ರಾಯಪಟ್ಟಿದೆ ಮತ್ತು ಹೀಗಾಗಿ ಎಫ್‌ಐಆರ್ ಅನ್ನು ರದ್ದುಗೊಳಿಸಿತು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದೂಡಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?