ಎಲ್ಲರೂ ಹೆಚ್ಚಿಗೆ ತಿನ್ನೋ ಹಣ್ಣು, ಬೇಗ ಹಾಳಾಗಬಾರದು ಅಂದ್ರೆ ಹೀಗ್ ಮಾಡಿ

By Suvarna News  |  First Published Oct 27, 2022, 1:26 PM IST

ಮಾರುಕಟ್ಟೆಯಲ್ಲಿ ಹುಡುಕಿ, ಹುಡುಕಿ ಚೆನ್ನಾಗಿರೋ ಬಾಳೆ ಹಣ್ಣು ತಿಂದಿರ್ತೇವೆ. ಆದ್ರೆ ಎರಡೇ ದಿನಕ್ಕೆ ಹಣ್ಣು ಕೊಳೆಯೋಕೆ ಶುರುವಾಗುತ್ತೆ. ಯೋಗ್ಯವಲ್ಲದ ಹಣ್ಣನ್ನು ಕಸಕ್ಕೆ ಹಾಕೋ ಜೊತೆಗೆ ಹಣ ಪೋಲಾಗುತ್ತೆ. ಅದ್ರ ಬದಲು ಕೆಲ ದಿನ ಬಾಳೆ ಹಣ್ಣು ಚೆನ್ನಾಗಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ತಿಳಿದುಕೊಳ್ಳಿ.
 


ಎಲ್ಲ ಋತುವಿನಲ್ಲೂ ಸುಲಭವಾಗಿ ಸಿಗುವ ಹಣ್ಣು ಅಂದ್ರೆ ಅದು ಬಾಳೆ ಹಣ್ಣು. ಈ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಕಾರಣಕ್ಕೆ ಅನೇಕರು ಪ್ರತಿ ದಿನ ಬಾಳೆ ಹಣ್ಣು ಸೇವನೆ ಮಾಡ್ತಾರೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ತಿನ್ನಬಹುದಾದ ಹಣ್ಣು ಅಂದ್ರೆ ಅದು ಬಾಳೆ ಹಣ್ಣು. ಹಬ್ಬದ ಸಂದರ್ಭದಲ್ಲಿ ಬಾಳೆ ಹಣ್ಣಿಗೆ ಬೇಡಿಕೆ ಜಾಸ್ತಿ. ದೇವರಿಗೆ ನೈವೇದ್ಯ ಮಾಡಲು ಬಹುತೇಕರು ಬಾಳೆ ಹಣ್ಣನ್ನು ಆಯ್ಕೆ ಮಾಡಿಕೊಳ್ತಾರೆ. ಬಾಳೆ ಹಣ್ಣನ್ನು ನಾವು ಕೆಜಿಗಟ್ಟಲೆ ಖರೀದಿಸಿದಾಗ , ದೀರ್ಘಕಾಲ ಹಾಳಾಗದಂತೆ ಇಡುವುದು ಸವಾಲೇ ಸರಿ. ಯಾಕೆಂದ್ರೆ ಬಾಳೆ ಹಣ್ಣು ನಾಲ್ಕು ದಿನ ಸರಿಯಾಗಿದ್ದರೆ ಹೆಚ್ಚು. ಮಾರುಕಟ್ಟೆಯಿಂದ ತಂದ ಬಲಿತ ಬಾಳೆ ಹಣ್ಣುಗಳು ಎರಡೇ ದಿನದಲ್ಲಿ ಕಪ್ಪಗಾಗಿ, ಕೊಳೆಯಲು ಶುರುವಾಗುತ್ತದೆ. 

ಉಳಿದ ಹಣ್ಣು (Fruit) ಗಳನ್ನು ನಾವು ಫ್ರಿಜ್ (Fridge) ನಲ್ಲಿ ಇಡ್ತೇವೆ. ಆದ್ರೆ ಬಾಳೆ ಹಣ್ಣನ್ನು ಫ್ರಿಜ್‌ನಲ್ಲಿ ಸಂಗ್ರಹಿಸೋದು ಕಷ್ಟ ಬಿಡಿ ತೆರೆದ ಸ್ಥಳದಲ್ಲಿಟ್ಟರೂ  ಹಾಳಾಗುತ್ತೆ. ಜೊತೆಗೆ ಸಣ್ಣ ಕೀಟಾಣುಗಳು ಹಾರಾಡಲು ಶುರು ಮಾಡುತ್ತವೆ. ಬಾಳೆ ಹಣ್ಣು (Banana Fruit ) ಒಂದು ವಾರ ತಿನ್ನಲು ಯೋಗ್ಯವಾಗಿರಬೇಕು, ಕೊಳೆಯುವ ಪ್ರಕ್ರಿಯೆಯನ್ನು ನಿಧಾನ ಮಾಡಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.             

Tap to resize

Latest Videos

ಸೂಕ್ತ ಸ್ಥಳದಲ್ಲಿಡಿ: ಮಾರುಕಟ್ಟೆಯಿಂದ ತಂದ ಬಾಳೆ ಹಣ್ಣನ್ನು ನಾವು ನೇರವಾಗಿ ಅಡುಗೆ ಮನೆಗೇ ಬರುತ್ತೆ. ಫ್ರಿಜ್ ಮೇಲೆ ಇಡೋದು ಕಾಮನ್.  ಆ ಸ್ಥಳ ಬಿಸಿ ಇರುವ ಕಾರಣ ಬಾಳೆ ಹಣ್ಣು ಬೇಗ ಕೊಳೆಯಲು ಶುರುವಾಗುತ್ತದೆ. ಇನ್ನು ಕಿಚನ್ ನಲ್ಲಿ ಟ್ರೇನಲ್ಲಿ ಬಾಳೆ ಹಣ್ಣಿಟ್ಟರೆ ಅದು ಸ್ವಲ್ಪ ನಿಧಾನವಾಗಿ ಕೆಡುತ್ತದೆಯಾದ್ರೂ ನಾಲ್ಕೈದು ದಿನಕ್ಕಿಂತ ಹೆಚ್ಚು ಬಾಳಿಕೆ ಬರೋದಿಲ್ಲ. ನೀವು ಬಾಳೆ ಹಣ್ಣನ್ನು ಪೇಪರ್ ಬ್ಯಾಗ್ ನಲ್ಲಿ ಇಟ್ಟರೆ ಒಳ್ಳೆಯದು. ಪೇಪರ್ ಬ್ಯಾಗ್ ನಲ್ಲಿಟ್ಟ ಬಾಳೆ ಹಣ್ಣು ಬೇಗ ಮಾಗುವುದಿಲ್ಲ.  

ಇತರ ಹಣ್ಣಿನ ಜೊತೆ ಬಾಳೆ ಹಣ್ಣು ಇಡಬೇಡಿ : ಬಾಳೆ ಹಣ್ಣುಗಳು ಇತರ ಹಣ್ಣುಗಳೊಂದಿಗೆ ಚೆನ್ನಾಗಿ ಬೆರೆಯುವುದಿಲ್ಲ. ಹಾಗಾಗಿ ಬಾಳೆ ಹಣ್ಣನ್ನು ಬೇರೆ ಹಣ್ಣಿನ ಜೊತೆ ಇಡಬೇಡಿ. ಹೀಗೆ ಇಟ್ಟರೆ ಬಾಳೆ ಹಣ್ಣು ಬೇಗ ಹಾಳಾಗುವ ಜೊತೆಗೆ ಬೇರೆ ಹಣ್ಣುಗಳು ಕೊಳೆಯಲು ಕಾರಣವಾಗುತ್ತದೆ.   

Kitchen Hacks: ಈ ಟ್ರಿಕ್ಸ್ ಟ್ರೈ ಮಾಡಿ ಹಸಿರು ಟೋಮ್ಯಾಟೋವನ್ನು ಹಣ್ಣಾಗಿಸಿ

ಈ ವಿಧಾನ ಬೆಸ್ಟ್ : ಬಾಳೆ ಹಣ್ಣು ಬೇಗ ಹಾಳಾಗಬಾರದು ಅಂದ್ರೆ ಬಾಳೆಗೊನೆಯನ್ನು ನೀವು ನೇತು ಹಾಕಬೇಕು. ಕೆಳಗೆ ಇಟ್ಟಾಗ ಬಾಳೆ ಹಣ್ಣು ಬೇಗ ಹಾಳಾಗುತ್ತದೆ. ಅದೇ ನೇತು ಹಾಕಿದಾಗ ಅದು ಮಾಗಿ, ಕೊಳೆಯಲು ಸಮಯ ತೆಗೆದುಕೊಳ್ಳುತ್ತದೆ.
 
ಬಾಳೆ ಹಣ್ಣಿನ ಕಾಂಡವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿಡಿ : ಬಾಳೆ ಹಣ್ಣು ಕೊಳೆಯದಂತೆ ಮಾಡಬೇಕು ಅಂದ್ರೆ ನೀವು ಬಾಳೆ ಹಣ್ಣಿನ ಚೊಟ್ಟನ್ನು  ಪ್ಲಾಸ್ಟಿಕ್‌ನಿಂದ ಕಟ್ಟಬೇಕು. ಬಾಳೆಹಣ್ಣನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಂದ ಸುತ್ತಿಡಬೇಡಿ.  ನೀವು ಚೊಟ್ಟನ್ನು ಸುತ್ತಿಟ್ಟಾಗ  ಕಡಿಮೆ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ. ಇದರಿಂದಾಗಿ ಬಾಳೆಹಣ್ಣು ಬೇಗನೆ ಹಣ್ಣಾಗುವುದಿಲ್ಲ.   

ಸ್ವಲ್ಪ ಸಮಯ ಫ್ರಿಜ್‌ನಲ್ಲಿಡಿ :  ಬಾಳೆ ಹಣ್ಣು ಬೇಗ ಹಣ್ಣಾಗ್ತಿದೆ ಎನ್ನಿಸಿದ್ರೆ ಅದು ಕೆಡದಂತೆ ನೀವು ಎರಡು ದಿನ ಫ್ರಿಜ್ ನಲ್ಲಿ ಇಡಬಹುದು. ಆದ್ರೆ ಎರಡಕ್ಕಿಂತ ಹೆಚ್ಚು ಕಾಲ ಫ್ರಿಜ್ ನಲ್ಲಿ ಇಡಬಾರದು. ಬಾಳೆ ಹಣ್ಣನ್ನು ತಣ್ಣಗಿರುವಾಗ ಸೇವನೆ ಮಾಡುವುದು ಒಳ್ಳೆಯದಲ್ಲ. ಬಾಳೆಹಣ್ಣನ್ನು ಫ್ರಿಡ್ಜ್ ನಿಂದ ತೆಗೆದ ತಕ್ಷಣ ತಿನ್ನಬೇಡಿ.  

Kitchen Hacks: ಕತ್ತರಿಸಿದ ಈರುಳ್ಳಿ ವಾಸನೆ ಬರುತ್ತೆ ಅಲ್ವಾ? ಏನು ಮಾಡಬೇಕು ಅದಕ್ಕೆ?

ಕೊಳೆಯುತ್ತಿರುವ ಬಾಳೆ ಹಣ್ಣನ್ನು ನೀವು ಕತ್ತರಿಸಿ, ಮಿಕ್ಸಿ ಮಾಡಿ, ಏರ್ ಟೈಟ್ ಬಾಕ್ಸ್ ನಲ್ಲಿ ತುಂಬಿ ಫ್ರೀಜರ್ ನಲ್ಲಿ ಇಡಬಹುದು. ಈ ಮಿಶ್ರಣವನ್ನು ನೀವು ದೋಸೆ, ಬನ್ಸ್ ತಯಾರಿಕೆಗೆ ಬಳಸಬಹುದು. 
 

click me!