ಮದುವೆಯಾದವರಲ್ಲಿ ಹೊಸ ಹೊಸ ಹೊಂಗನಸು, ಆದರೂ ಹೆಚ್ಚುತ್ತಿದೆ ಆತ್ಮಹತ್ಯೆ

By Suvarna News  |  First Published Nov 23, 2022, 3:17 PM IST

ಮದುವೆ ಜೀವನದ ಹೊಸ ದಿಕ್ಕು. ಅಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅದಕ್ಕೆ ಮನಸ್ಸು, ದೇಹ ಎರಡೂ ಸಿದ್ಧವಿರಬೇಕು. ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಬಂಧನಕ್ಕೊಳಗಾಗುವ ಹುಡುಗಿಯರಿಗೆ ಎಲ್ಲವನ್ನೂ ಸಂಭಾಳಿಸುವುದು ಸವಾಲಾಗುತ್ತದೆ. 
 


ಇದು ಡಿಜಿಟಲ್ ಯುಗ. ನಾವೆಲ್ಲ ಮುಂದುವರೆದಿದ್ದೇವೆ. ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂಬ ಮಾತುಗಳನ್ನು ನಾವು ಕೇಳ್ತಿರ್ತೇವೆ. ಮಹಿಳೆಯರು ಸಾಧನೆ ಮಾಡ್ತಿದ್ದಾರೆ, ಎಲ್ಲ ಕ್ಷೇತ್ರಕ್ಕೆ ಕಾಲಿಡ್ತಿದ್ದಾರೆ. ಇದೆಲ್ಲವೂ ನೂರಕ್ಕೆ ನೂರು ಸತ್ಯವಾದ್ರೂ ಈಗ್ಲೂ ಅನೇಕ ಕಡೆ ಮಹಿಳೆಯರ ಸ್ಥಿತಿ ಬದಲಾಗಿಲ್ಲ. ಬಾಲ್ಯ ವಿವಾಹ ಪದ್ಧತಿ ಇಲ್ಲವೆಂದ್ರೂ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮದುವೆ ನಡೆಯುತ್ತಿದೆ. ಓದು ಮುಗಿಸಿ ಸಾಧನೆ ಮಾಡಬೇಕೆಂಬ ಆಸೆಯಲ್ಲಿರುವ ಅನೇಕ ಹುಡುಗಿಯರನ್ನು ಮದುವೆ ಹೆಸರಿನಲ್ಲಿ ಕಟ್ಟಿ ಹಾಕಲಾಗ್ತಿದೆ. ಚಿಕ್ಕ ವಯಸ್ಸಿನಲ್ಲೇ ವಿವಾಹ ಆಗ್ತಿರುವ ಹುಡುಗಿಯರು ಖಿನ್ನತೆಗೆ ಒಳಗಾಗ್ತಿದ್ದಾರೆ. ಇವರಲ್ಲಿ ಆತ್ಮಹತ್ಯೆಗೆ ಮಾಡಿಕೊಳ್ತಿರುವವರ ಸಂಖ್ಯೆ ಹೆಚ್ಚಿದೆ.  

ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ (Study) ವೊಂದರ ಪ್ರಕಾರ, ಅವಿವಾಹಿತ ಮಹಿಳೆಯರಿಗಿಂತ ಹೊಸದಾಗಿ ಮದುವೆ (Marriage) ಯಾದ ನವವಿವಾಹಿತೆಯರು ಚಿಕ್ಕ ವಯಸ್ಸಿನಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದಲ್ಲದೇ ಅಂತಹ ಮಹಿಳೆಯರು ಆತ್ಮಹತ್ಯೆಗೂ ಯತ್ನಿಸುತ್ತಾರೆ. ಮೆಲ್ಬೋರ್ನ್ ವಿಶ್ವವಿದ್ಯಾಲಯದ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಮಡ್ರಾಕ್ ಚಿಲ್ಡ್ರನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಸ್ಟ್ರೇಲಿಯಾ (Australia) ಮತ್ತು ಭಾರತ (India) ದ ಸಂಶೋಧಕರು ಈ ಅಧ್ಯಯನವನ್ನು ಮಾಡಿದ್ದಾರೆ.

Tap to resize

Latest Videos

ನವವಿವಾಹಿತ ಮಹಿಳೆಯರಿಗೆ ಹೆಚ್ಚು ಕಾಡ್ತಿದೆ ಮಾನಸಿಕ ಒತ್ತಡ (Stress) : ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ, ಚಿಕ್ಕ ವಯಸ್ಸಿನ ಮಹಿಳೆಯರಿಗೆ ಹೆಚ್ಚು ಒತ್ತಡ ಕಾಡ್ತಿದೆ ಎಂಬುದು ಈ ಅಧ್ಯಯನದಿಂದ ಬಹಿರಂಗವಾಗಿದೆ. ಸಂಶೋಧಕರು ಈ ಸಮೀಕ್ಷೆಯನ್ನು ಎರಡು ಬಾರಿ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಅವಿವಾಹಿತರಿಗಿಂತ ಖಿನ್ನತೆಗೆ ಒಳಗಾದವರ ಪಟ್ಟಿಯಲ್ಲಿ ನವ ವಿವಾಹಿತೆಯರಿದ್ದರು. ಹೊಸದಾಗಿ ಮದುವೆಯಾದ ಶೇಕಡಾ 16.3 ರಷ್ಟು ಮಹಿಳೆಯರಲ್ಲಿ ಖಿನ್ನತೆಯ ಲಕ್ಷಣ ಕಂಡುಬಂದಿದೆ. ಅವಿವಾಹಿತರಲ್ಲಿ ಈ ಸಂಖ್ಯೆ ಕೇವಲ ಶೇಕಡಾ 9.1 ರಷ್ಟಿತ್ತು.

ನವವಿವಾಹಿತೆಯಲ್ಲಿ (Newly Married) ಹೆಚ್ಚಾಗ್ತಿದೆ ಆತ್ಮಹತ್ಯೆ ಯೋಚನೆ : ಹೊಸದಾಗಿ ಮದುವೆಯಾದ ಮಹಿಳೆಯರಲ್ಲಿ ಆತ್ಮಹತ್ಯೆಯ ಆಲೋಚನೆಗಳು ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಅವಿವಾಹಿತ ಮಹಿಳೆಯರಲ್ಲಿ ಇದು ಶೇಕಡಾ 5.3ರಷ್ಟಿತ್ತು ಎಂದು ಅಧ್ಯಯನ ಹೇಳಿದೆ.  

ಚರ್ಮದ ತ್ವಚೆಗೆ ಜೇನುತುಪ್ಪದ ಮದ್ದು, ಹೇಗೆ ಹಚ್ಚಿದರಾಗುತ್ತೆ ಹೊಳೆಯುವ ತ್ವಚೆ?

ದೌರ್ಜನ್ಯಕ್ಕೆ (Abuse) ಹೆಚ್ಚು ಬಲಿಯಾಗ್ತಾರೆ ಮಹಿಳೆಯರು : ಮಹಿಳೆಯರ ಮೇಲೆ ಆಗ್ತಿರುವ ದೌರ್ಜನ್ಯ ನಿಂತಿಲ್ಲ. ಸಂಶೋಧನೆಯ ಪ್ರಕಾರ, ಸುಮಾರು ಶೇಕಡಾ 20ರಷ್ಟು ಮಹಿಳೆಯರು ಭಾವನಾತ್ಮಕ ನಿಂದನೆಗೆ ಬಲಿಯಾಗಿದ್ದಾರೆ. ಶೇಕಡಾ 24ರಷ್ಟು ಮಹಿಳೆಯರು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಶೇಕಡಾ 36.2ರಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿದ್ದಾರೆ. ನಿಂದನೆಯನ್ನು ಅನುಭವಿಸಿದ ಸುಮಾರು ಶೇಕಡಾ 58.5ರಷ್ಟು ಮಹಿಳೆಯರು ಖಿನ್ನತೆಯ ತೀವ್ರ ಲಕ್ಷಣಗಳನ್ನು ಹೊಂದಿದ್ದರು ಎಂದು ಅಧ್ಯಯನದ ವರದಿ ಹೇಳಿದೆ.

ಮುಖದಲ್ಲಿ ಕೂದಲಿದೆ ಅಂತ ಶೇವ್ ಮಾಡ್ಬೇಡಿ..ಇಲ್ಲೊಬ್ಬ ಮಹಿಳೆಗೆ ಗಡ್ಡವೇ ಬಂತು ನೋಡಿ

ಯುಪಿ - ಬಿಹಾರ ಮಹಿಳೆಯರ ಮೇಲೆ ನಡೆದಿದೆ ಸಮೀಕ್ಷೆ (Survey) : ಯುಪಿ ಮತ್ತು ಬಿಹಾರದ 7864 ಮಹಿಳೆಯರ ಮೇಲೆ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. ಯುಪಿ ಮತ್ತು ಬಿಹಾರದ ಮಹಿಳೆಯರ ಮೇಲೆ ಸಮೀಕ್ಷೆ ನಡೆಸಲು ಮುಖ್ಯ ಕಾರಣ, ಅಲ್ಲಿನ ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ನಡೆಯುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-20 ರ ಪ್ರಕಾರ, ಬಿಹಾರದಲ್ಲಿ ಸುಮಾರು ಶೇಕಡಾ 40.3ರಷ್ಟು ಹುಡುಗಿಯರು 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗಿದ್ದಾರೆ. ಮತ್ತೊಂದೆಡೆ ಯುಪಿಯಲ್ಲಿ ಶೇಕಡಾ 18.8ರಷ್ಟು ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದಾರೆ.  18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸಂಸಾರ ಶುರು ಮಾಡುವ ಹುಡುಗಿಯರು ಮಾನಸಿಕವಾಗಿ ಸದೃಢವಾಗಿರುವುದಿಲ್ಲ. ಓದುವ, ಆಟವಾಡುವ, ಭವಿಷ್ಯ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಮನೆ, ಗಂಡ, ಸಂಸಾರದ ಜವಾಬ್ದಾರಿ ಬಂದ್ರೆ ಅದು ಅವರಿಗೆ ಹೊಣೆಯಾಗುತ್ತದೆ. ಅದ್ರ ಜೊತೆ ಕೌಟುಂಬಿಕ ದೌರ್ಜನ್ಯ (Domestic Violence) ಅವರನ್ನು ಮತ್ತಷ್ಟು ಹೈರಾಣ ಮಾಡುತ್ತದೆ.  
 

click me!