ಲೈಂಗಿಕ ಶಿಕ್ಷಣ ಅತ್ಯಗತ್ಯ. ಸೆಕ್ಸ್ ಬಗ್ಗೆ ಎಷ್ಟೇ ತಿಳಿದಿದ್ದರೂ ಅನೇಕ ಬಾರಿ ತಪ್ಪುಗಳಾಗುತ್ತವೆ. ನವವಿವಾಹಿತರು ಅದ್ರ ಬಗ್ಗೆ ಸರಿಯಾದ ಮಾಹಿತಿ ಪಡೆದಿರಬೇಕು. ಅಗತ್ಯವೆನಿಸಿದ್ರೆ ವೈದ್ಯರನ್ನು ಭೇಟಿಯಾಗ್ಬೇಕು. ಇಲ್ಲವೆಂದ್ರೆ ಸಮಸ್ಯೆ ದೊಡ್ಡದಾಗುತ್ತದೆ.
ಲೈಂಗಿಕ ಜೀವನದ ಬಗ್ಗೆ ಜನರಿಗೆ ಈಗ್ಲೂ ಸರಿಯಾದ ಮಾಹಿತಿಯಿಲ್ಲ. ಸಾರ್ವಜನಿಕವಾಗಿ ಇದ್ರ ಬಗ್ಗೆ ಮಾತನಾಡಲು ಮುಜುಗರಪಟ್ಟುಕೊಳ್ತಾರೆ. ಇದ್ರಿಂದಾಗಿ ಪುರುಷ ಮತ್ತು ಮಹಿಳೆ ಇಬ್ಬರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಿನಿಮಾಗಳಲ್ಲಿ ನೋಡಿದ್ದು ನಿಜ ಎಂದುಕೊಳ್ಳುವ ಜನರು ಅದರ ಪ್ರಯೋಗಕ್ಕೆ ಮುಂದಾಗ್ತಾರೆ. ಆದ್ರೆ ಇದರಿಂದ ಯಡವಟ್ಟುಗಳೇ ಹೆಚ್ಚಾಗ್ತವೆ. ಮದುವೆಯ ಮೊದಲ ರಾತ್ರಿ ಕನ್ಯತ್ವ ಪೊರೆ ಹರಿಯಬೇಕು, ಹಾಸಿಗೆ ಮೇಲೆ ರಕ್ತ (Blood) ದ ಕಲೆ ಬೀಳ್ಬೇಕು ಎನ್ನುವ ಅನಿಷ್ಠ ಪದ್ಧತಿ ಈಗ್ಲೂ ಅನೇಕ ಕಡೆ ಜಾರಿಯಲ್ಲಿದೆ. ಅದೇನೇ ಇರಲಿ, ಮೊದಲ ರಾತ್ರಿಯ ನಂತ್ರ ಅನೇಕ ಮಹಿಳೆಯರು ಅತಿ ಹೆಚ್ಚು ಬ್ಲೀಡಿಂಗ್ ಸಮಸ್ಯೆ ಎದುರಿಸುತ್ತಾರೆ. ಕೆಲ ಮಹಿಳೆಯರಿಗೆ ರಕ್ತ ನೀಡುವ ಅವಶ್ಯಕತೆ ಕೂಡ ಬರುತ್ತದೆ. ಸಂಭೋಗದ ನಂತ್ರ ಆಗುವ ರಕ್ತ ಸ್ರಾವವನ್ನು ಪೋಸ್ಟ್ ಕೊಯಿಟಲ್ ರಕ್ತಸ್ರಾವ (Coital bleeding) ಎನ್ನಲಾಗುತ್ತದೆ. ಇಂದು ಇದ್ರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಕೊಯಿಟಲ್ ನಂತರದ ರಕ್ತಸ್ರಾವವು ಅನೇಕ ಕಾರಣಗಳಿಂದಾಗಿರಬಹುದು. ಅತ್ಯಂತ ಸಾಮಾನ್ಯವಾದದ್ದು ಕನ್ಯಾಪೊರೆ ಹರಿದಾಗ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ತಸ್ರಾವವಾಗುತ್ತದೆ. ಇದಲ್ಲದೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದಾಗ ಯೋನಿಯಲ್ಲಿ ಗಾಯವಾದ್ರೆ ರಕ್ತಸ್ರಾವವಾಗುತ್ತದೆ. ಸಮ್ಮತಿಯಿಲ್ಲದೆ ಲೈಂಗಿಕ ಸಂಭೋಗದಿಂದಲೂ ಪೋಸ್ಟ್ ಕೊಯಿಟಲ್ ರಕ್ತಸ್ರಾವವು ಸಂಭವಿಸಬಹುದು. ರಕ್ತಸ್ರಾವದ ಸಮಸ್ಯೆ ಹಿಡಿದು ಬರುವವರಲ್ಲಿ ಬಹುತೇಕರು ಹೊಸದಾಗಿ ಮದುವೆಯಾದವರು ಎನ್ನುತ್ತಾರೆ ವೈದ್ಯರು.
ಹನಿಮೂನ್ ನಂತ್ರ ಆಸ್ಪತ್ರೆಗೆ ಬರ್ತಾರೆ ಮಹಿಳೆಯರು : ವೈದ್ಯರ ಪ್ರಕಾರ, ಹನಿಮೂನ್ ನಂತ್ರ ರಕ್ತಸ್ರಾವದ ಸಮಸ್ಯೆ ಹಿಡಿದು ಬರುವವರು ಹೆಚ್ಚು. ಇದಕ್ಕೆ ಮುಖ್ಯ ಕಾರಣ ವಜೈನಾ ಟಿಯರ್ಸ್ ಅಥವಾ ಯೋನಿಯಲ್ಲಾಗುವ ಗಾಯ. ಸಾಮಾನ್ಯವಾಗಿ ಸೆಕ್ಸ್ ವೇಳೆ ರಕ್ತಸ್ರಾವವಾಗುವುದಿಲ್ಲ. ಆದ್ರೆ ಲೂಬ್ರಿಕಂಟ್ ಅಥವಾ ನೈಸರ್ಗಿಕ ಸ್ರವಿಸುವಿಕೆ ಆಗದೆ ಹೋದಾಗ, ಯೋನಿ ಗಾಯವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವೈದ್ಯರು. ಬಹುತೇಕ ಮಹಿಳೆಯರು ಹನಿಮೂನ್ ವೇಳೆ ರಕ್ತಸ್ರಾವಕ್ಕೊಳಗಾಗ್ತಾರೆ. ಇದ್ರಿಂದ ರಕ್ತದೊತ್ತಡ ಮತ್ತು ನಾಡಿಮಿಡಿತ ಹೆಚ್ಚಾಗುವ ಸಮಸ್ಯೆ ಕಾಡುತ್ತದೆ. ಸಂಗಾತಿ ಜೊತೆ ಆರಾಮವಾಗಿ ಸಂಭೋಗ ನಡೆಸಲು ತುಂಬಾ ಸಮಯಬೇಕೆಂದು ಅನೇಕ ಮಹಿಳೆಯರು ಹೇಳ್ತಾರೆ.
MARRIAGE DISPUTE : ಮೊದಲ ರಾತ್ರಿ ಪತಿಯ ಮಾತಿಗೆ ಪತ್ನಿ ಶಾಕ್
ಲೈಂಗಿಕ ಶಿಕ್ಷಣದ ಕೊರತೆ : ಕೆಲವರು ವರ್ಷಗಟ್ಟಲೆ ಈ ಸಮಸ್ಯೆ ಎದುರಿಸುತ್ತಾರೆ. ಸಂಭೋಗ ನಡೆಸುವ ವೇಳೆ ಸ್ವಲ್ಪ ರಕ್ತಸ್ರಾವವಾಗ್ತಿರುತ್ತದೆ. ಆದ್ರೆ ನಾಚಿಕೆಯ ಕಾರಣಕ್ಕೆ ಹಾಗೂ ಲೈಂಗಿಕ ಶಿಕ್ಷಣದ ಕೊರತೆಯಿಂದ ಅವರು ವೈದ್ಯರ ಬಳಿ ಬರುವುದಿಲ್ಲ. ಪರಿಸ್ಥಿತಿ ಕೈ ಮೀರಿದೆ ಎನ್ನುವ ಸಂದರ್ಭದಲ್ಲಿ ಆಸ್ಪತ್ರೆಗೆ ದೌಡಾಯಿಸ್ತಾರೆ. ಲೈಂಗಿಕ ಶಿಕ್ಷಣವು ಸಾಮಾಜಿಕ ಸಮಸ್ಯೆ ಮಾತ್ರವಲ್ಲ, ಆರೋಗ್ಯ ಸಮಸ್ಯೆಯೂ ಆಗಿದೆ. ಇಂಟರ್ಕೋರ್ಸ್ ಬಗ್ಗೆ ಮಹಿಳೆಯರಲ್ಲಿರುವ ಮಾಹಿತಿ ಕೊರತೆ ಅವರನ್ನು ಅಪಾಯಕ್ಕೆ ತಳ್ಳುತ್ತಿದೆ.
ಮಗುವಿಗೆ ಜನ್ಮ ನೀಡಿ 11 ಲಕ್ಷ ರೂ. ಗಳಿಸಿ, ಚೀನಾ ಕಂಪೆನಿಯ ಹೊಸ ಆಫರ್ !
ಸೆಕ್ಸ್ ವೇಳೆ ಆಗಲ್ಲ ನೋವು : ಸಂಭೋಗದ ಬಗ್ಗೆ ಮಹಿಳೆಯರು ಹಾಗೂ ಪುರುಷರು ತಮ್ಮದೆ ನಂಬಿಕೆ ಹೊಂದಿದ್ದಾರೆ. ಸೆಕ್ಸ್ ವಿಡಿಯೋಗಳನ್ನು ವೀಕ್ಷಿಸುವ ಜನರು ಅದನ್ನು ಪ್ರಯೋಗಿಸಲು ಮುಂದಾಗ್ತಾರೆ. ಸಂಗಾತಿಗೆ ಇದ್ರಿಂದ ಏನು ಸಮಸ್ಯೆಯಾಗಬಹುದು ಎಂಬುದನ್ನು ಆಲೋಚಿಸುವುದಿಲ್ಲ. ಹಾಗೆಯೇ ತನ್ನ ಸಮಸ್ಯೆಯನ್ನು ಮಹಿಳೆ ಎಂದಿಗೂ ಸಂಗಾತಿ ಮುಂದೆ ಹೇಳಲು ಹೋಗುವುದಿಲ್ಲ. ಸಂಭೋಗದ ವೇಳೆ ನೋವು ಸಾಮಾನ್ಯ ಎಂದು ಆಕೆ ಭಾವಿಸಿರುತ್ತಾಳೆ. ಆದ್ರೆ ಸೆಕ್ಸ್ ವೇಳೆ ಯೋನಿಯಲ್ಲಿ ನೋವುಂಟಾಗಬಾರದು. ನೋವಾದ್ರೆ ಸಮಸ್ಯೆಯಿದೆ ಎಂದರ್ಥ. ಇಂಟರ್ಕೋರ್ಸ್ ಮಾಡುವ ವಿಧಾನ ಅಥವಾ ಬೇರೆ ಇನ್ಯಾವುದೋ ಸಮಸ್ಯೆಯಿಂದ ನೋವಾಗ್ತಿರುತ್ತದೆ. ಹಾಗೆ ಸೆಕ್ಸ್ ವೇಳೆ ಸಂಗಾತಿ ಒಪ್ಪಿಗೆ ಕೂಡ ಮಹತ್ವವಾಗುತ್ತದೆ. ಒತ್ತಾಯಪೂರ್ವಕ ಸೆಕ್ಸ್ ಅಥವಾ ಲೈಂಗಿಕತೆ ವೇಳೆ ದೌರ್ಜನ್ಯ ಕೂಡ ಈ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ನೆನಪಿರಲಿ.