ಮಕ್ಕಳ ಬಾಳಲ್ಲಿ ಶಿಕ್ಷಕರು ಮುಖ್ಯ ಪಾತ್ರವಹಿಸ್ತಾರೆ. ಶಾಲೆಗೆ ಶಿಕ್ಷಕರೇ ಬರದಿದ್ದಲ್ಲಿ ಮಕ್ಕಳ ಓದು ಅರ್ಧಕ್ಕೆ ನಿಲ್ಲುತ್ತೆ. ತನ್ನಿಂದ ಕರ್ತವ್ಯ ಚ್ಯುತಿಯಾಗ್ಬಾರದು ಎನ್ನುವ ಕಾರಣಕ್ಕೆ ಈ ಶಿಕ್ಷಕಿ ಮಾಡ್ತಿರುವ ಕೆಲಸ ಹುಬ್ಬೇರಿಸುವಂತೆ ಮಾಡಿದೆ.
ಛತ್ತೀಸ್‌ಗಢದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಬಲರಾಂಪುರ ಜಿಲ್ಲೆಯಲ್ಲೂ ವರುಣನ ಅಬ್ಬರ ಹೆಚ್ಚಾಗಿದೆ. ಮಳೆ ಮತ್ತು ಭೋರ್ಗರೆಯುತ್ತಿರುವ ನದಿಯ ನಡುವೆ ಶಿಕ್ಷಕಿಯೊಬ್ಬರ ವೀಡಿಯೊ ಎಲ್ಲರ ಗಮನ ಸೆಳೆದಿದೆ. ಈ ವೀಡಿಯೋ ನೋಡಿದ ಎಲ್ಲರೂ ಶಿಕ್ಷಕಿಗೆ ಸೆಲ್ಯೂಟ್ ಎಂದಿದ್ದಾರೆ. ಶಿಕ್ಷಕರಿಗೆ ಪೂಜ್ಯ ಸ್ಥಾನವಿದೆ. ಯೋಗ್ಯ ಶಿಕ್ಷಕನಿಲ್ಲದೆ ಹೋದ್ರೆ ಸಾವಿರಾರು ಮಕ್ಕಳ ಭವಿಷ್ಯ ಹಾಳಾಗುತ್ತದೆ. ಜೀವಕ್ಕಿಂತ ಕರ್ತವ್ಯ ಮುಖ್ಯ ಎಂದು ಕೆಲಸ ಮಾಡುವ ಕೆಲವರ ಪಟ್ಟಿಯಲ್ಲಿ ಶಿಕ್ಷಕಿ ಕರ್ಮಿಳಾ ಟೊಪ್ಪೊ ಸೇರಿದ್ದಾರೆ.
ಚತ್ತೀಸಗಢ (Chhattisgarh) ದ ಬಲರಾಮ್ ಜಿಲ್ಲೆಯ ಪ್ರಾನ್ಸ್ ನಿವಾಸಿ ಕರ್ಮಿಳಾ ಟೊಪ್ಪೊ ಸಮಾಜಕ್ಕೆ ಮಾದರಿಯಾದ ಶಿಕ್ಷಕಿ (Teacher). ಕಾರ್ಮಿಳಾ ಟೊಪ್ಪೊ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಕ್ಕಳಿಗೆ ಕಲಿಸಲು ಶಾಲೆಗೆ ಹೋಗುತ್ತಾರೆ. ಪ್ರತಿದಿನ ಕನಿಷ್ಠ ಮೂರು ಕಿ.ಮೀ ನಡೆದು ಹೋಗುವ ಅವರು ಮಧ್ಯೆ ಬರುವ ನದಿಯನ್ನು ದಾಟುತ್ತಾರೆ.
undefined
ಉದ್ಯೋಗ ಬಿಟ್ಟು 13 ವರ್ಷ ಗೃಹಿಣಿಯಾಗಿದ್ದ ಬಗ್ಗೆ ರೆಸ್ಯೂಮ್ ಬರೆದ ಮಹಿಳೆ, ವೈರಲ್ ಆಯ್ತು ಪೋಸ್ಟ್
ವಾದ್ರಾಫ್‌ನಗರ ಜಿಲ್ಲೆಯ ಧೌರ್‌ಪುರ ಪ್ರಾಥಮಿಕ ಶಾಲೆಯಲ್ಲಿ ಕಾರ್ಮಿಳಾ ಟೊಪ್ಪೊ ಶಿಕ್ಷಕಿಯಾಗಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸೌಲಭ್ಯಗಳು ತಲುಪದ ಪ್ರದೇಶಗಳಲ್ಲಿ ಧೌರ್‌ಪುರ ಕೂಡ ಸೇರಿದೆ. ಬೇಸಿಗೆಯಲ್ಲಿ ಧೌರ್ ಪುರ ತಲುಪುವುದು ಸುಲಭವಲ್ಲವಾದ್ರೂ ಮಳೆಗಾಲದಲ್ಲಿ ಧೌರ್ ಪುರವನ್ನು ತಲುಪುವುದು ತುಂಬಾ ಕಷ್ಟ. ಈಗ ಧಾರಾಕಾರ ಮಳೆಗೆ ನದಿ ತುಂಬಿ ಹರಿಯುತ್ತಿದೆ.
ಮಕ್ಕಳಿಗೆ ಶಿಕ್ಷಣ ಕಲಿಸಲು ಎರಡು ನದಿ ದಾಟುತ್ತಾರೆ ಶಿಕ್ಷಕಿ : ಧೌರ್ ಪುರ್ ಶಾಲೆಗೆ ಹೋಗ್ಬೇಕೆಂದ್ರೆ ಶಿಕ್ಷಕಿ ಕಾಡಿನ ಮೂಲಕ ಹೋಗ್ಬೇಕು. ಮಧ್ಯೆ ಎರಡು ನದಿಗಳನ್ನು ದಾಟಬೇಕು. ಮೋರನ್ ಮತ್ತು ಇರಿಯಾ ನದಿಗಳು ಇಲ್ಲಿ ಸಂಧಿಸುತ್ತವೆ. ಎರಡೂ ನದಿಗಳು ಇಲ್ಲಿ ಸಂಧಿಸುವುದರಿಂದ ಇಲ್ಲಿ ಅಪಾಯ ಹೆಚ್ಚು. ಆದರೆ ಕರ್ಮಿಳಾ ಟೊಪ್ಪೊ ಇದ್ಯಾವುದಕ್ಕೂ ಹೆದರದೆ ಮಕ್ಕಳಿಗೆ ಕಲಿಸಲು ಪ್ರತಿದಿನ ಈ ನದಿಯನ್ನು ದಾಟುತ್ತಾರೆ
ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಈ ಯಶಸ್ವಿ ಮಹಿಳಾ ಉದ್ಯಮಿ, ವಾರ್ಷಿಕ 148 ಕೋಟಿ ನೆಟ್‌ವರ್ತ್!
ಕರ್ಮಿಳಾ ಟೊಪ್ಪೊ ಪತಿ ಕೂಡ ಶಿಕ್ಷಕರು. ಆದರೆ ಪೋಸ್ಟಿಂಗ್ ಬೇರೆ ಕಡೆ ಇದೆ. ಕರ್ಮಿಳಾ ಟೊಪ್ಪೊ ಪ್ರತಿದಿನ ಬದ್ರಾಫ್ನಾರ್‌ನಿಂದ ಮಧ್ನಾ ಗ್ರಾಮಕ್ಕೆ ಸ್ಕೂಟಿ ಮೇಲೆ ಬರ್ತಾರೆ. ಅಲ್ಲಿ ವಾಹನ ನಿಲ್ಲಿಸಿ, ಸುಮಾರು 3 ಕಿ.ಮೀಟರ್ ನಡೆಯುತ್ತಾರೆ. ಒಂದು ಕೈನಲ್ಲಿ ಚಪ್ಪಲಿ ಹಿಡಿದು ಅವರು ನದಿ ದಾಟುತ್ತಾರೆ. ಸೊಂಟದವರೆಗೆ ನೀರು ಬಂದಾಗಲೂ ನದಿಯನ್ನು ದಾಟುವ ಅವರು, ಪ್ರವಾಹ ಹೆಚ್ಚಾದಾಗ ಶಾಲೆಗೆ ಹೋಗೋದು ಕಷ್ಟ ಎನ್ನುತ್ತಾರೆ.
ಶಾಲೆಗೆ ಹೋಗಲು ಬೇರೆ ಯಾವುದೇ ದಾರಿಯಿಲ್ಲ. ಮಕ್ಕಳ ಭವಿಷ್ಯ ಹಾಳಾಗೋದು ನನಗೆ ಇಷ್ಟವಿಲ್ಲ. ಹಾಗಾಗಿ ಕಷ್ಟವಾದ್ರೂ ನದಿದಾಟಿ ಹೋಗುತ್ತೇನೆ ಎನ್ನುತ್ತಾರೆ ಶಿಕ್ಷಕಿ. ಕರ್ಮಿಳಾ ಟೊಪ್ಪೊ ಹೋಗುವ ಶಾಲೆಯಲ್ಲಿ ಬುಡಕಟ್ಟು ಕುಟುಂಬಗಳ 10 ಮಕ್ಕಳು ಓದುತ್ತಿದ್ದಾರೆ. ಬಲರಾಂಪುರ ಕಲೆಕ್ಟರ್ ಕೂಡ ಶಿಕ್ಷಕಿ ಕರ್ಮಿಳಾ ಟೊಪ್ಪೊ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ಮಿಳಾ ಟೊಪ್ಪೊ ಅವರು ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಅಂತಹ ಕೆಲಸವನ್ನು ಇತರ ಶಿಕ್ಷಕರಿಂದಲೂ ನಾನು ನಿರೀಕ್ಷಿಸುತ್ತೇನೆ. ಇತರ ಶಿಕ್ಷಕರು ಕೂಡ ತಮ್ಮ ಕರ್ತವ್ಯದಲ್ಲಿ ನಿಷ್ಠರಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಬೇಕು ಎನ್ನುತ್ತಾರೆ ಕಲೆಕ್ಟರ್.
ಸಾಮಾಜಿಕ ಜಾಲತಾಣದಲ್ಲೂ ಕರ್ಮಿಳಾ ಟೊಪ್ಪೊ ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ. ಶಿಕ್ಷಕಿ ಕೆಲಸವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇಂಥ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರ ಶಾಲೆ ಅಕ್ಕಪಕ್ಕ ಉಳಿದುಕೊಳ್ಳಲು ಶಿಕ್ಷಕರಿಗೆ ವ್ಯವಸ್ಥೆ ಮಾಡ್ಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಮತ್ತೆ ಕೆಲವರು ಇಂಥ ಶಿಕ್ಷಕಿಯರ ಅವಶ್ಯಕತೆ ನಮ್ಮ ದೇಶಕ್ಕಿದೆ ಎಂದಿದ್ದಾರೆ.
छत्तीसगढ़: बलरामपुर में एक महिला शिक्षक प्रतिदिन नदी पार करके बच्चों को पढ़ाने धौरपुर के प्राथमिक स्कूल जाती हैं।
कर्मिला टोप्पो ने बताया, "यहां मेरे रास्ते में 2 नदी पड़ती हैं जिन्हें पार करके मैं आती हूं। इसके अलावा कोई रास्ता नहीं है। बच्चों के भविष्य के लिए मैं… pic.twitter.com/357Ain1wN1