Mothers Day 2022: ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಲು ಬಯಸಿದ್ದರೆ ಹೀಗೆ ಮಾಡಿ

By Suvarna News  |  First Published May 7, 2022, 9:16 AM IST

ಕಣ್ಣಿಗೆ ಕಾಣುವ ದೇವರು ಅಮ್ಮ (Mother). ತಾಯಿಯೇ ಮೊದಲ ಗುರು ಕೂಡ ಹೌದು. ಆಕೆಯಿಂದ ಕಲಿಯುವುದು ಸಾಕಷ್ಟಿದೆ. ಆಕೆಯ ಋಣ ತೀರಿಸಲು ಸಾಧ್ಯವಿಲ್ಲ. ಆದ್ರೆ ಆಕೆಗೆ ಗೌರವ (Respect) ನೀಡಿ, ಒಂದಿಷ್ಟು ಸಮಯವನ್ನು ಆಕೆಗೆ ಮೀಸಲಿಟ್ಟು, ಆಕೆ ಸದಾ ಖುಷಿಯಾಗಿರುವಂತೆ ನೋಡಿಕೊಳ್ಳುವುದು ನಮ್ಮಿಂದ ಸಾಧ್ಯ. 


ತನ್ನ ಜೀವನವನ್ನು ಮಕ್ಕಳಿಗೆ ಮುಡುಪಾಗಿಡುವವಳು ತಾಯಿ (Mother). ತಾಯಿ – ಮಗು (Child) ವಿನ ಸಂಬಂಧ ವಿಶೇಷವಾದದ್ದು. ಕಷ್ಟದ ಸಂದರ್ಭದಲ್ಲಿಯೂ ಮಕ್ಕಳ ಖುಷಿಗಾಗಿ ಬಂಡೆಯಂತೆ ನಿಲ್ಲುವ ಶಕ್ತಿ (Energy) ತಾಯಿಗಿದೆ. ಹೆರಿಗೆ (Delivery) ಮಹಿಳೆಗೆ ಇನ್ನೊಂದು ಜನ್ಮ. ತಾಯಿಯ ಆಶೀರ್ವಾದ ಸದಾ ಮಕ್ಕಳ ಮೇಲೆ ಇರಬೇಕು. ತಾಯಿಯ ಮಡಿಲಲ್ಲಿ ಮಲಗಿದ್ರೆ ಎಲ್ಲ ನೋವು ದೂರವಾಗುತ್ತದೆ. ಮತ್ತೆ ಹೋರಾಡುವ ಶಕ್ತಿ, ಉತ್ಸಾಹ, ಧೈರ್ಯ ಸಿಗುತ್ತದೆ. ಮಕ್ಕಳ ಆರೋಗ್ಯ ಹದಗೆಟ್ಟಾಗ ರಾತ್ರಿ ನಿದ್ರೆ ಬಿಡುವ ತಾಯಿ, ಮಕ್ಕಳ ಹಸಿವನ್ನು ನೀಗಿಸಲು ತನ್ನ ಹೊಟ್ಟೆ ಕಟ್ಟಿಕೊಳ್ಳುತ್ತಾಳೆ. 

ಅಮ್ಮ ಅಂದ್ರೆ ದೇವರು. ಪ್ರತಿಯೊಬ್ಬರ ಜೀವನದಲ್ಲೂ ಅಮ್ಮನಿಗೆ ವಿಶೇಷ ಸ್ಥಾನವಿದೆ, ಗೌರವವಿದೆ. ಅಮ್ಮನನ್ನು ಪ್ರೀತಿಸುವ ಮಕ್ಕಳಿಗೆ ಪ್ರತಿ ದಿನವೂ ಅಮ್ಮಂದಿರ ದಿನವೇ ಆಗಿರುತ್ತದೆ. ಆದ್ರೆ ಅಮ್ಮಂದಿರಿಗಾಗಿಯೇ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.  ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಮಾತೃತ್ವವನ್ನು ಗೌರವಿಸಲು ತಾಯಂದಿರ ದಿನವನ್ನು ಆಚರಿಸುತ್ತವೆ. 

Tap to resize

Latest Videos

Happy Mothers Day : ಈ ದಿನ ಹೆತ್ತ ತಾಯಿ ಮರೆಯಬೇಡಿ

ಭಾನುವಾರವೇ ಈ ದಿನ ಆಚರಣೆ ಹಿಂದೆ ಮಹತ್ವದ ಉದ್ದೇಶವಿದೆ. ಸದಾ ಕೆಲಸದಲ್ಲಿರುವ ಮಕ್ಕಳು ರಜಾ ದಿನವಾದ್ದರಿಂದ ಅದೊಂದು ದಿನವಾದ್ರೂ ಅಮ್ಮನ ಜೊತೆಗಿರಲಿ ಎಂಬುದು ಇದರ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ತಾಯಂದಿರ ದಿನವನ್ನು ಆಚರಿಸುವ ಟ್ರೆಂಡ್ ಹೆಚ್ಚಾಗಿದೆ. ಈ ವರ್ಷ ಮೇ 8 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ನೀವೂ ಕೂಡ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಲು ಬಯಸಿದ್ದರೆ ಕೆಲವೊಂದು ಟಿಪ್ಸ್ ಇಲ್ಲಿದೆ. 

ತಾಯಿಯ ನೆಚ್ಚಿನ ಆಹಾರ : ಸಾಮಾನ್ಯವಾಗಿ ಇಡೀ ದಿನ ಅಡುಗೆ ಮನೆಯಲ್ಲಿ ಕಳೆಯುವ ತಾಯಿಯನ್ನು ಈ ದಿನ ಅಡುಗೆ ಮನೆಯಿಂದ ದೂರವಿಡಿ. ಅವರಿಗೆ ವಿಶ್ರಾಂತಿ ನೀಡಿ. ಅವರನ್ನು ಅಚ್ಚರಿಗೊಳಿಸಲು, ನೀವೇ ಈ ದಿನ ಅಡುಗೆ ಮಾಡಿ. ತಾಯಿಗೆ ತಿಳಿಯದೆ ಆಕೆಯ ನೆಚ್ಚಿನ ಆಹಾರ ತಯಾರಿಸಿ.  ಬೆಳಿಗ್ಗೆ ಅಮ್ಮ ಏಳುವ ಮೊದಲೇ ನೀವು ಈ ಕೆಲಸ ಮಾಡಿದ್ರೆ ಆಕೆ ಅಚ್ಚರಿಗೊಳ್ಳುತ್ತಾಳೆ. ಆಕೆ ಮುಖದಲ್ಲಿ ಮೂಡುವ ನಗು, ಎಲ್ಲವನ್ನು ಮರೆಸುತ್ತದೆ. 

ಹಳೆಯ ನೆನಪುಗಳು : ತಾಯಿ ಜೊತೆ ಸಮಯ ಕಳೆಯುವುದು ಬಹಳ ಮುಖ್ಯ. ಈ ದಿನ ಒಂದಾದ್ರೂ ತಾಯಿಯ ಜೊತೆ ಕುಳಿತು ಮಾತನಾಡಿ. ಬಾಲ್ಯದಲ್ಲಿ ತಾಯಿ ಏನೆಲ್ಲ ಮಾಡಿದ್ದಳು ಎಂಬುದನ್ನು ಮೆಲುಕು ಹಾಕಿ. ತಾಯಿ ಬಾಲ್ಯ ಹೇಗಿತ್ತು ಎಂಬುದನ್ನು ಕೇಳಿ.  ಶಾಲೆಯ ಸಮಯದಲ್ಲಿ ಆತ್ಮೀಯ ಗೆಳೆಯ ಯಾರು ಎಂಬಿತ್ಯಾದಿ ಅವರ ಕೆಲವು ವೈಯಕ್ತಿಕ ವಿಷಯಗಳನ್ನು ತಿಳಿದುಕೊಳ್ಳಿ, ಅವರ ಬಗ್ಗೆ ಕೇಳಿ. ಇದಲ್ಲದೆ, ಲುಡೋ, ಚೆಸ್, ಇತ್ಯಾದಿಗಳಂತಹ ಒಳಾಂಗಣ ಆಟಗಳನ್ನು ತಾಯಿಯೊಂದಿಗೆ ಆಡಬಹುದು.

ತಾಯಿಯ ಎದೆ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿಸುವುದು ಹೇಗೆ?

ಪತ್ರ ಬರೆಯಿರಿ : ಇದು ಡಿಜಿಟಲ್ ಯುಗ ನಿಜ. ಫೇಸ್ಬುಕ್, ವಾಟ್ಸ್ ಅಪ್ ನಲ್ಲಿ ಸಂದೇಶ ಕಳುಹಿಸುತ್ತೇವೆ. ಆದ್ರೆ ಇದಕ್ಕಿಂತ  ನಿಮ್ಮ ಭಾವನೆಗಳನ್ನು ನಿಮ್ಮ ತಾಯಿಗೆ ಪೆನ್ನಿನ ಮೂಲಕ ಹೇಳಿ. ಕಾಗದದ ಮೇಲೆ ನಿಮ್ಮ ಮುದ್ದಾದ ಅಕ್ಷರಗಳನ್ನು ಪೋಣಿಸಿ ನಿಮ್ಮ ಭಾವನೆಯನ್ನು ತೆರೆದಿಡಿ. ನಿಮ್ಮ ಈ ಲೆಟರ್ ಅವರಿಗೆ ಇಷ್ಟವಾಗುತ್ತದೆ. ಪತ್ರ ಓದುವುದಕ್ಕೂ ಸಂದೇಶ ಓದುವುದಕ್ಕೂ ಬಹಳ ವ್ಯತ್ಯಾಸವಿದೆ. 

ಸಂಜೆ ಒಂದು ವಾಕ್ : ಈ ಬೇಸಿಗೆ ಕಾಲದಲ್ಲಿ ಮಧ್ಯಾಹ್ನ ಹೊರಗೆ ಹೋಗುವುದು ಸ್ವಲ್ಪ ಕಷ್ಟವಾಗಬಹುದು. ಹಾಗಾಗಿ  ಸಂಜೆ ನಿಮ್ಮ ತಾಯಿಯೊಂದಿಗೆ ಪಾರ್ಕ್ ಅಥವಾ ಮಾಲ್‌ಗೆ ವಾಕ್ ಮಾಡಲು ಹೋಗಿ. ಅವರ ಜೊತೆ ಶಾಪಿಂಗ್ ಮಾಡಿ. ಅವರಿಗೆ ಸರ್ಪ್ರೈಸ್ ನೀಡುವಂತೆ ಭೋಜನ ವ್ಯವಸ್ಥೆ ಕೂಡ ಮಾಡಬಹುದು.   

click me!