Avoid Aging: ವ್ಯಾಯಾಮ ಬೇಕು ಏಕೆ, ಆದರೆ ಅತಿಯಾಗಿ ಮಾಡೋದು ಬೇಡ ಬಿಡಿ

By Suvarna NewsFirst Published Dec 3, 2021, 6:47 PM IST
Highlights

ಆರೋಗ್ಯಕರ ಹವ್ಯಾಸಗಳನ್ನಿಟ್ಟುಕೊಳ್ಳುವ ಮೂಲಕ ಯೌವನಕ್ಕೆ ಮುಪ್ಪು ಬಾರದಂತೆ ನೋಡಿಕೊಳ್ಳಬಹುದು. ವಯಸ್ಸಾದರೂ ಲವಲವಿಕೆಯಿಂದ ಕೂಡಿರಬಹುದು. ಅಷ್ಟೇ ಖುಷಿಯಾಗಿಯೂ ಇರಬಹುದು. ಆದರೆ, ಹಾಗಿರಲು ಯೌವನದಿಂದಲೂ ಉತ್ತಮ ಹವ್ಯಾಸಗಳನ್ನು ಅನುಸರಿಸಬೇಕಷ್ಟೇ. ಕಡಿಮೆ ಆಹಾರ ಸೇವನೆ ಈ ಗುಟ್ಟುಗಳಲ್ಲಿ ಒಂದು.

ಭೂಮಿ ಮೇಲಿರುವ ಜೀವಿಗಳ ಬದುಕಿಗೆ ಒಂದು ನಿಯಮವಿದೆ. ಹುಟ್ಟು (Birth), ಬಾಲ್ಯ (Childhood), ಯೌವನ (Youth), ಮಧ್ಯವಯಸ್ಸು (Middle Age), ಮುಪ್ಪು (Old Age), ಸಾವು (Death) ಹೀಗೆ ಒಂದು ರೇಖೆಯಲ್ಲಿ ಜೀವನ ಚಲಿಸುತ್ತದೆ. ವಯಸ್ಸಾಗುವುದು ಅತ್ಯಂತ ಸಹಜ ಕ್ರಿಯೆ. ಆದರೂ ಕೆಲವರು ವಯಸ್ಸಾದರೂ ಚುರುಕಾಗಿರುವುದಷ್ಟೇ ಅಲ್ಲ, ತಮ್ಮ ವಯಸ್ಸಿಗಿಂತ ಕಿರಿಯರಂತೆ ಕಾಣಿಸುತ್ತಾರೆ. ಅಂಥವರನ್ನು ನೋಡಿದರೆ ಅವರಿಗೆ ಅಷ್ಟು ವಯಸ್ಸಾಗಿದೆ ಎಂದು ಹೇಳುವುದೇ ಕಷ್ಟವಾಗುತ್ತದೆ, ಯಾರಾದರೂ ಅವರ ವಯಸ್ಸನ್ನು ಕೇಳಿದರೆ ಅಚ್ಚರಿ ಪಡಬೇಕು, ಹಾಗಿರುತ್ತಾರೆ. ಸಹಜವಾಗಿ, ಎಲ್ಲರಿಗೂ ಅವರಂತೆಯೇ ಇರುವ ಆಸೆಯಾಗುತ್ತದೆ. ವಯಸ್ಸಾದರೂ ಚಿಕ್ಕವರಂತೆ ಕಾಣಿಸಬೇಕು ಎಂದಾದರೆ, ಯೌವನದಿಂದಲೇ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಇನ್ನು, ಕೆಲವರ ವಂಶವಾಹಿಯೇ ಹಾಗಿರುತ್ತದೆ ಎನ್ನುವುದೂ ಸತ್ಯ. ಅದು ನಮ್ಮ ಕೈಯಳತೆಗೆ ನಿಲುಕದ ಅಂಶ. ಆದರೆ, ನಮ್ಮ ಕೈಲಾಗುವ ಇತರ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ. 

ವ್ಯಾಯಾಮ (Yoga)
ಅತಿಯಾಗಿ ವ್ಯಾಯಾಮ ಮಾಡಿ ದೇಹ ದಂಡಿಸುವುದು ತರವಲ್ಲ. ಆದರೆ, ದೇಹಕ್ಕೆ ಅತಿಯಾದ ವಿಶ್ರಾಂತಿಯಿಂದ ಅಧಿಕ ಹಾನಿಯಾಗುತ್ತದೆ. ವ್ಯಾಯಾಮ ಮಾಡದಿರುವುದರಿಂದ ವಯಸ್ಸಾಗುವ ಪ್ರಕ್ರಿಯೆ ಬಹುಬೇಗ ಆರಂಭವಾಗುತ್ತದೆ. ದಿನಕ್ಕೆ 30 ನಿಮಿಷಗಳ ಕಾಲವಾದರೂ ದೇಹಕ್ಕೆ ಚಟುವಟಿಕೆ ಬೇಕು. ಇದರಿಂದ ಮಾಂಸಖಂಡಗಳು ಹಾಗೂ ಜೀವಕೋಶಗಳಿಗೆ ಹೊಸ ಚೈತನ್ಯ ಲಭ್ಯವಾಗುತ್ತದೆ. ಕುಳಿತುಕೊಂಡು ಕೆಲಸ ಮಾಡುವವರೂ ಸಹ ಗಂಟೆಗೆ ಒಮ್ಮೆ ಎದ್ದು ಓಡಾಡಬೇಕು. ಕನಿಷ್ಠವೆಂದರೂ ದಿನಕ್ಕೆ 10 ನಿಮಿಷಗಳ ಕಾಲವಾದರೂ ವಾಕ್ ಮಾಡಬೇಕು. 

ಆಹಾರದ ಬಗ್ಗೆ ಕಾಳಜಿ ಇರಲಿ (Food)
ದೇಹಕ್ಕೆ ಅಪೌಷ್ಟಿಕತೆ ಕಾಡದಂತೆ ನೋಡಿಕೊಂಡು ಕ್ಯಾಲರಿ ಕಡಿಮೆಯುಳ್ಳ ಆಹಾರ ಸೇವನೆ ಮಾಡಬೇಕು. ಸಾಧ್ಯವಾದಷ್ಟು ಹಸಿರು ಸೊಪ್ಪು-ತರಕಾರಿ-ಹಣ್ಣುಗಳನ್ನು ಸೇವಿಸಬೇಕು. ಮಾಂಸಾಹಾರಿಗಳು ರೆಡ್ ಮೀಟ್ ದೂರವಿಡಿ.  ತರಕಾರಿಗಳು ಸಾಮಾನ್ಯವಾಗಿ ಕಡಿಮೆ ಕ್ಯಾಲರಿ ಹೊಂದಿರುತ್ತವೆ. ಹಾಗೂ ಇವುಗಳನ್ನು ಸೇವಿಸುವುದು ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳಿಗೆ ಉತ್ತಮ. ಈ ಸೂಕ್ಷ್ಮಾಣುಜೀವಿಗಳಿಗೂ ವಯಸ್ಸಾಗುವ ಪ್ರಕ್ರಿಯೆಗೂ ನೇರವಾದ ಸಂಬಂಧವಿದೆ. ಅಲ್ಲದೆ, ಕಡಿಮೆ ಆಹಾರ ಸೇವನೆ ಮಾಡುವುದರಿಂದ ಕೆಲವು ಅಂಗಾಂಗಗಳು ಹೆಚು ಕಾಲ ಬಾಳಿಕೆ ಬರುತ್ತವೆ! ಇಡೀ ಜೀವನದಲ್ಲಿ ಕ್ಯಾಲರಿ ಕಡಿಮೆ ಇರುವ ಆಹಾರ ಸೇವಿಸಿದರೆ ಹೆಚ್ಚುವರಿಯಾಗಿ ಐದು ವರ್ಷಗಳ ಕಾಲ ಆರೋಗ್ಯಪೂರ್ಣವಾಗಿ ಬದುಕಬಹುದು.

ಮದ್ಯ ವಯಸ್ಸಿನಲ್ಲಿಯೂ ಎಂಗ್ ಆಗಿ ಕಾಣೋದು ಹೇಗೆ?

ಹೆಚ್ಚುವರಿ ಎನರ್ಜಿ ಬೇಡ! 
ಕೆಲವರು ಆರೋಗ್ಯವಂತರಾಗಿರಬೇಕೆಂದು ಯಾವ್ಯಾವುದೋ ಪಾನೀಯ, ಔಷಧಗಳ (Medicines) ಮೊರೆ ಹೋಗುತ್ತಾರೆ. ಆದರೆ, ಇವುಗಳ ಸೇವನೆಯಿಂದ ಹೊಟ್ಟೆಯ ಬ್ಯಾಕ್ಟೀರಿಯಾ ಪ್ರಪಂಚದ ಮೇಲೆ ಪರಿಣಾಮವುಂಟಾಗಿ ಜೀವಿತಾವಧಿ ಕಡಿಮೆಯಾಗುತ್ತದೆ. 
ಹೃದಯದ (Heart Care) ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಹೃದ್ರೋಗ ಬಾರದಂತೆ ಎಚ್ಚರಿಕೆ ವಹಿಸಬೇಕು. ನಿಯಮಿತವಾದ ತಪಾಸಣೆಯಿಂದ ಹೃದಯಾಘಾತದ ಸಂಭವವನ್ನು ತಡೆಯಬಹುದು. ವಾರಕ್ಕೊಮ್ಮೆ ಉಪವಾಸ ಮಾಡುವುದರಿಂದಲೂ ಅಂಗಾಂಗಗಳು ಹೆಚ್ಚು ಸಕ್ರಿಯವಾಗುತ್ತವೆ ಹಾಗೂ ಜೀವಿತಾವಧಿ ಹೆಚ್ಚುತ್ತದೆ.

ಸರಿಯಾದ ನಿದ್ರೆ ಬೇಕು (Sleep Well)
ಉತ್ತಮ ಆಹಾರದೊಂದಿಗೆ ಉತ್ತಮ ನಿದ್ರೆಯೊಂದಿದ್ದರೆ ಆರೋಗ್ಯಪೂರ್ಣ ಜೀವನಕ್ಕೆ ಇನ್ನೇನೂ ಬೇಡ. ಹೀಗಾಗಿ, ಎಂತಹುದ್ದೇ ಸಮಸ್ಯೆ ಎದುರಾದರೂ, ತಲೆ ಹೋಗುವಂತಹ ಸಂದರ್ಭದಲ್ಲೂ ನಿದ್ದೆ ಕಡಿಮ ಮಾಡಿಕೊಳ್ಳಬಾರದು. ಚೆನ್ನಾಗಿ ನಿದ್ರೆ ಮಾಡಿದರೆ ಸಮಸ್ಯೆಗಳ ಜಟಿಲತೆ ಬಿಡಿಸುವ ಕೌಶಲ ಸೇರಿದಂತೆ ಎಲ್ಲ ರೀತಿಯ ಕೌಶಲಗಳೂ ರೂಢಿಯಾಗುತ್ತವೆ. 

ಆ್ಯಂಟಿ ಏಜಿಂಗ್‌ಗೆ ರಾಗಿ ಬೆಸ್ಟ್

ಬಾಯಿಯ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು! (Oral Health)
ಬಾಯಿಗೂ, ಜೀವಿತಾವಧಿ ಹೆಚ್ಚಳಕ್ಕೂ ಅದೇನು ಸಂಬಂಧ ಎನ್ನಿಸಬಹುದು. ಬಾಯಿಯ ಆರೋಗ್ಯಕ್ಕೂ, ಕರುಳಿಗೂ ನೇರವಾದ ಸಂಬಂಧವಿದೆ. ಹೀಗಾಗಿ, ಅದು ಜೀವಿತಾವಧಿಯ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗೆಯೇ ವಯಸ್ಸಾದಂತೆ ಕಾಡುವ ಮರೆವು ಕಾಯಿಲೆ ಅಥವಾ ಡೆಮೆನ್ಷಿಯಾ ಇದರಿಂದಾಗಿ ದೂರವಾಗುತ್ತದೆ. 

click me!