ಪುರುಷ ಪ್ರಧಾನ ದೇಶವಾದ ಭಾರತದಲ್ಲಿ ಸಾಧನೆ ಮಾಡೋದು ಮಹಿಳೆಯರಿಗೆ ಕಷ್ಟದ ಕೆಲಸ. ಹಿಂದೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಗುರಿಮುಟ್ಟಿದ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಮೊದಲ ಬಾರಿ ನ್ಯಾಯ ಸ್ಥಾನದಲ್ಲಿ ಕುಳಿತು ದಿಟ್ಟ ತೀರ್ಪು ನೀಡಿದ ಮಹಿಳೆಯ ಬಗ್ಗೆ ಮಾಹಿತಿ ಇಲ್ಲಿದೆ.
ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಈ ಮೂರೂ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿ ಹೆಚ್ಚಿದೆ. ಇಂದು ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಹುದ್ದೆಯನ್ನು ಮಹಿಳೆಯೊಬ್ಬರು ಅಲಂಕರಿಸಿದ್ದಾರೆ. ಘನತೆವೆತ್ತ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆ ಸಂಭಾಳಿಸ್ತಿದ್ದಾರೆ. ಇದೇ ಸಮಯದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಮಹಿಳೆಯರ ಸ್ಥಾನ ಬಲಗೊಳ್ಳುತ್ತಿದೆ. ಇನ್ನು ನ್ಯಾಯಾಂಗ ಕ್ಷೇತ್ರದಲ್ಲೂ ಮಹಿಳೆಯರು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇಂದು ದೇಶವು ಅನೇಕ ಮಹಿಳಾ ನ್ಯಾಯಾಧೀಶರು ಮತ್ತು ವಕೀಲರನ್ನು ಭಾರತ ಹೊಂದಿದೆ. ಮಹಿಳೆಯರಿಗೆ ವಕೀಲ (Lawyer) ವೃತ್ತಿಯ ಹಾದಿಯನ್ನು ತೆರೆಯುವ ಅತ್ಯಂತ ಮಹತ್ವದ ಕೆಲಸ ಮಾಡಿದ್ದು ಲೀಲಾ ಸೇಠ್ (Leela Seth). ಭಾರತದ ಹೈಕೋರ್ಟ್ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದ ಲೀಲಾ ಸೇಠ್ ಅನೇಕ ಮಹಿಳಾ ವಕೀಲರು, ನ್ಯಾಯಾಧೀಶ (Judge) ರಿಗೆ ಸ್ಫೂರ್ತಿಯಾಗಿದ್ದಾರೆ.
ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದ ಲೀಲಾ ಸೇಠ್ ಅವರನ್ನು ಮದರ್ ಆಫ್ ಲಾ ಎಂದೇ ಕರೆಯಲಾಗುತ್ತದೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವ ಅವರ ಪ್ರಯಾಣ ಸುಲಭವಾಗಿರಲಿಲ್ಲ.
ಲೀಲಾ ಸೇಠ್ ಅವರ ಜೀವನಚರಿತ್ರೆ : ಲೀಲಾ ಸೇಠ್ ಅವರು ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಅಕ್ಟೋಬರ್ 20, 1930 ರಂದು ಜನಿಸಿದರು. 11 ನೇ ವಯಸ್ಸಿನಲ್ಲಿ ಲೀಲಾ ತಮ್ಮ ತಂದೆಯ ನೆರಳನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸುವ ಜವಾಬ್ದಾರಿ ಹೊತ್ತರಲ್ಲದೆ ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾದ್ರು.
AGE IS JUST A NUMBER: 50ಕ್ಕೆ ಉದ್ಯಮ ಆರಂಭಿಸಿದ ನಾರಿ ಈಗ ಕೋಟಿಗೆ ಒಡತಿ
ಲೀಲಾ ಸೇಠ್ ಅವರ ಶಿಕ್ಷಣ : ಲೀಲಾ ಸೇಠ್ ಅವರು ಬಾಲ್ಯದಿಂದಲೂ ಅಧ್ಯಯನದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಲೀಲಾ ಸೇಠ್ ಅವರು ಡಾರ್ಜಿಲಿಂಗ್‌ನ ಶಾಲೆಯಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಕೆಲಸದ ಸಂದರ್ಭದಲ್ಲಿ ಪ್ರೇಮ್ ಸೇಠ್ ಅವರನ್ನು ಭೇಟಿಯಾಗಿದ್ದ ಲೀಲಾ, ಅವರನ್ನೇ ಮದುವೆಯಾದ್ರು. ಮದುವೆಯ ನಂತರ ಅವರು ತಮ್ಮ ಪತಿಯೊಂದಿಗೆ ಲಂಡನ್‌ಗೆ ತೆರಳಿದರು. ಲಂಡನ್ ನಲ್ಲಿ ಮತ್ತೆ ವಿದ್ಯಾಭ್ಯಾಸ ಮುಂದುವರೆಸಿದ ಲೀಲಾ, ಅಲ್ಲಿ ಅವರು ಪದವಿ ಮತ್ತು ನಂತರ ಕಾನೂನು ಶಿಕ್ಷಣ ಪೂರ್ಣಗೊಳಿಸಿದರು. ತಮ್ಮ 27ನೇ ವಯಸ್ಸಿನಲ್ಲಿ ತಾಯಿಯಾದ ಲೀಲಾ, ಆ ಜವಾಬ್ದಾರಿ ಜೊತೆಯಲ್ಲೇ ಲಂಡನ್ ಬಾರ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದರು.
ಲೀಲಾ ಸೇಠ್ ಅವರ ವೃತ್ತಿಜೀವನ : ಲೀಲಾ ಸೇಠ್ ತಮ್ಮ ವೃತ್ತಿಜೀವನವನ್ನು ಸ್ಟೆನೋಗ್ರಾಫರ್ ಆಗಿ ಪ್ರಾರಂಭಿಸಿದ್ದರು. ಲಂಡನ್‌ನಿಂದ ಓದು ಮುಗಿಸಿ ತವರಿಗೆ ವಾಪಸ್ ಆದ ಲೀಲಾ ಸೇಠ್ ಭಾರತಕ್ಕೆ ಬಂದ ಆರಂಭದಲ್ಲಿ ಕೋಲ್ಕತ್ತಾದಲ್ಲಿ ಲಾ ಪ್ರಾಕ್ಟೀಸ್ ಮಾಡಿದರು. ಆ ನಂತರ ಪಾಟ್ನಾದಲ್ಲಿ ನಂತ್ರ ದೆಹಲಿಯಲ್ಲಿ ಲಾ ಪ್ರಾಕ್ಟೀಸ್ ಮುಂದುವರೆಸಿದ್ದರು.
ಸಿಂಪಲ್ ಆಗಿರೋದೆ ಇಷ್ಟ, ನಾನು Low maintenance wife ಎಂದ ಸುಧಾಮೂರ್ತಿ
ಮೊದಲ ಮಹಿಳಾ ನ್ಯಾಯಾಧೀಶೆಯಾದ ಲೀಲಾ ಸೇಠ್ : 1978 ರಲ್ಲಿ ಲೀಲಾ ಸೇಠ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮೊದಲ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡರು. ಆಗಸ್ಟ್ 5, 1991ರಂದು ದೆಹಲಿ ಹೈಕೋರ್ಟ್ ನ ಮೊದಲ ಮುಖ್ಯ ನ್ಯಾಯಾಧೀಶೆಯಾಗಿ ನೇಮಕಗೊಂಡರು. ನಂತರ ಹಿಮಾಚಲ ಪ್ರದೇಶ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಕೀರ್ತಿಗೆ ಲೀಲಾ ಸೇಠ್ ಪಾತ್ರರಾದರು. ನಿರ್ಭಯಾ ಸಾಮೂಹಿಕ ಅತ್ಯಾಚಾರದ ನಂತರ ರಚಿಸಲಾದ ನ್ಯಾಯಮೂರ್ತಿ ವರ್ಮಾ ಸಮಿತಿಯ ಭಾಗವಾಗಿ ಲೀಲಾ ಸೇಠ್ ಕೂಡ ಇದ್ದರು. ಅವರನ್ನು ದೇಶದ ಮದರ್ ಆಫ್ ಲಾ ಎಂದು ಪರಿಗಣಿಸಲಾಗಿದೆ. ಮೇ. 5, 2017ರಂದು ನಮ್ಮ 83 ನೇ ವಯಸ್ಸಿನಲ್ಲಿ ಲೀಲಾ ಸೇಠ್ ಅವರು ಜಗತ್ತಿಗೆ ವಿದಾಯ ಹೇಳಿದರು.