ಸಿಂಪಲ್ ಆಗಿರೋದೆ ಇಷ್ಟ, ನಾನು Low maintenance wife ಎಂದ ಸುಧಾಮೂರ್ತಿ
ಸುಧಾಮೂರ್ತಿಯವರ ಸರಳ ಜೀವನಶೈಲಿಯ ಬಗ್ಗೆ ಹಲವರಗೆ ತಿಳಿದಿದೆ. ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಸುಧಾಮೂರ್ತಿಯವರು ನಾನು ಲೋ ಮೈಂಟೆನೆನ್ಸ್ ವೈಫ್ ಎಂದು ಸಹ ಹೇಳಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಯಾವಾಗಲೂ ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಸಂದರ್ಶನಗಳಲ್ಲಿ ತುಂಬಾ ಪ್ರಾಮಾಣಿಕವಾಗಿರುತ್ತಾರೆ. ಕೆಲವು ವರ್ಷಗಳ ಹಿಂದೆ ಅವರು ಅಮಿತಾಬ್ ಬಚ್ಚನ್ ಹೋಸ್ಟ್ ಮಾಡಿದ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಹಲವಾರು ಮಾಹಿತಿಗಳನ್ನು ಬಹಿರಂಗಪಡಿಸಿದರು. ಪತ್ರದಲ್ಲಿ ಜೆಆರ್‌ಡಿ ಟಾಟಾ ಅವರಿಗೆ ನೀಡಿದ ದೂರು, ಇನ್ಫೋಸಿಸ್ ಆರಂಭಿಸಲು ಪತಿಗೆ 10,000 ರೂ. ಕೊಟ್ಟಿದ್ದರ ಬಗ್ಗೆ ತಿಳಿಸಿದ್ದರು.
ಇಂಜಿನಿಯರಿಂಗ್ ಕಾಲೇಜಿಗೆ ಸೇರುವಾಗ ಪ್ರಿನ್ಸಿಪಾಲ್‌ರಿಂದ ಕಂಡೀಷನ್
1968 ರಲ್ಲಿ ಇಂಜಿನಿಯರಿಂಗ್ ಮಾಡುವ ತಮ್ಮ ನಿರ್ಧಾರವನ್ನು ಕುಟುಂಬವು ಸ್ವಾಗತಿಸಲಿಲ್ಲ ಎಂದು ಸುಧಾ ಮೂರ್ತಿ ಕೆಬಿಸಿಯಲ್ಲಿ ಬಹಿರಂಗಪಡಿಸಿದ್ದರು. ಮುಖ್ಯವಾಗಿ ಗಂಡುಮಕ್ಕಳೇ ಹೆಚ್ಚಾಗಿ ಮಾಡುವ ಈ ಕೋರ್ಸ್ ಮಾಡಿದರೆ ತಮ್ಮ ಸಮುದಾಯದಲ್ಲಿ ಯಾರೂ ಅವಳನ್ನು ಮದುವೆ (Marriage)ಯಾಗುವುದಿಲ್ಲ ಎಂದು ಪೋಷಕರು (Parents) ಭಾವಿಸಿದ್ದರು. ಪ್ರವೇಶದಲ್ಲಿ ಉತ್ತಮ ಅಂಕ ಗಳಿಸಿದ್ದರಿಂದ ಕಾಲೇಜಿನ ಪ್ರಿನ್ಸಿಪಾಲ್ ತನ್ನ ಪ್ರವೇಶವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಧಾ ಹೇಳಿದರು. ಆದರೆ ತರಗತಿಯಲ್ಲಿ 599 ಹುಡುಗರಿದ್ದರು. ಹೀಗಾಗಿ ಪ್ರಿನ್ಸಿಪಾಲ್ ಆಕೆಗೆ ಸೀರೆ ಉಟ್ಟು ಬರುವಂತೆ ಸೂಚಿಸಿದ್ದರು. ಮಾತ್ರವಲ್ಲ, ಕಾಲೇಜು ಕ್ಯಾಂಟೀನ್‌ಗೆ ಹೋಗದಂತೆ ಅಥವಾ ಹುಡುಗರೊಂದಿಗೆ ಮಾತನಾಡದಂತೆ ಸೂಚನೆ ನೀಡಿದ್ದರು.
ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿಗೆ ಅಡುಗೆ ಮಾಡೋಕೆ ಬರಲ್ವಂತೆ!
ಸುಧಾ ಮೂರ್ತಿ ಅವರು ಕಾಲೇಜಿನಲ್ಲಿ ತಮ್ಮ ಮುಖ್ಯ ಸಮಸ್ಯೆ ಶೌಚಾಲಯಗಳು (Toilet) ಪ್ರವೇಶಿಸಲು ಸಾಧ್ಯವಾಗದಿರುವುದು ಎಂದು ನೇರವಾಗಿ ಹಂಚಿಕೊಂಡರು. ಆದ್ದರಿಂದ, ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ನಂತರ, ಅವರು 16,000 ಶೌಚಾಲಯಗಳನ್ನು ನಿರ್ಮಿಸಿದರು.
ತಾಯಿಯ ಸಲಹೆಯಂತೆ, ಪತಿಗೆ (Husband) ಹೇಳದೆ ಹಣ ಉಳಿಸುತ್ತಿದ್ದೆ ಎಂದು ಸುಧಾ ಮೂರ್ತಿ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡರು. ಹೀಗಾಗಿಯೇ ಈ ರೀತಿ ಸ್ಪಲ್ಪ ಸ್ಪಲ್ಪವೇ ಉಳಿತಾಯ (Savings) ಮಾಡಿದ ಹಣವನ್ನು ಪತಿ ಕಂಪನಿ ಆರಂಭಿಸಲು ನಿರ್ಧರಿಸಿದಾಗ 10,000 ರೂ. ಕೊಟ್ಟಿರುವುದಾಗಿ ತಿಳಿಸಿದರು. ಬಿಗ್ ಬಿ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಸುಧಾಮೂರ್ತಿ, ತಮ್ಮನ್ನು 'ಕಡಿಮೆ ನಿರ್ವಹಣೆಯ ಹೆಂಡತಿ' ಎಂದು ಕರೆದರು.
ಟಾಟಾ ಕಂಪೆನಿಗೆ ದೂರು ಸಲ್ಲಿಸಿದ್ದ ಸುಧಾಮೂರ್ತಿ
ಸುಧಾ ಮೂರ್ತಿಯವರು 1976ರಲ್ಲಿ ಎಂ.ಟೆಕ್ ಕೊನೆಯ ವರ್ಷದಲ್ಲಿದ್ದಾಗ ಅಮೆರಿಕಕ್ಕೆ ಹೋಗಬೇಕೆಂದಿದ್ದರೂ, ಟಾಟಾ ಟೆಲ್ಕೊದಲ್ಲಿ ಮಹಿಳೆಯರಿಗೆ ಅರ್ಜಿ ಹಾಕಲು ಅವಕಾಶವಿರಲಿಲ್ಲ. ಹೀಗಾಗಿ ಅವರು ಮುಂಬೈನ ಜೆಆರ್‌ಡಿ ಟಾಟಾ ಟೆಲ್ಕೊಗೆ ಪೋಸ್ಟ್‌ಕಾರ್ಡ್ ಬರೆದು ಅದರ ಬಗ್ಗೆ ದೂರು (Complaint) ನೀಡಿದ್ದರು. ಉತ್ತರ ಸಿಗುತ್ತದೆ ಮತ್ತು ಸಂದರ್ಶನಕ್ಕೆ ಕರೆ ಬರುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಆದರೆ ಅನಿರೀಕ್ಷಿತವೆಂಬಂತೆ ಅವರಿಗೆ ಸಂದರ್ಶನಕ್ಕೆ (Interview) ಕರೆ ಬಂತು. ಕೆಲಸವೂ ಸಿಕ್ಕಿತು.
ರೇಷ್ಮೆ ಸೀರೆ ಹೇಗೆ ತಯಾರಾಗುತ್ತೆ ಗೊತ್ತಿದ್ಯಾ? ಆಹಾರದ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿ ಮತ್ತೆ ಟ್ರೋಲ್!
ತಂದೆಯವರ ಅಮೂಲ್ಯ ಸಲಹೆ
ಕೆಲಸದ ಆಫರ್ ಇದ್ದಾಗ, ಸುಧಾ ಮೂರ್ತಿ ವಿದ್ಯಾರ್ಥಿವೇತನವನ್ನು ತೆಗೆದುಕೊಳ್ಳಲು ಬಯಸಿದ್ದರು. ಆದರೆ, ದೇಶದಲ್ಲಿ ಮಹಿಳೆಯರ ಸಮಾನತೆಗಾಗಿ ಹೋರಾಡಲು ಬಯಸಿದರೆ ಕೆಲಸವನ್ನು ಆರಿಸಿಕೊಳ್ಳಿ ಎಂದು ಆಕೆಯ ತಂದೆ ಹೇಳಿದ್ದರು. ಸುಧಾ ಮೂರ್ತಿ ಅವರು ಟೆಲ್ಕೊದಲ್ಲಿ ನೇಮಕಗೊಂಡ ಮೊದಲ ಮಹಿಳೆ (Woman)ಯಾಗಿದ್ದಾರೆ.
ಸುಧಾ ಮೂರ್ತಿಯವರ ಸಾಮಾಜಿಕ ಕಾರ್ಯ
ತಾನು ಶ್ರೀಮಂತಳಾದಾಗ ಸಮಾಜಕ್ಕೆ ಮರಳಿ ಕೊಡಬೇಕು ಎಂದು ಹೇಳಿದ ಜೆಆರ್‌ಡಿ ಟಾಟಾ ಅವರ ಸಲಹೆಯನ್ನು ಅನುಸರಿಸಿ, ಅವರು ಹಳ್ಳಿಗಳಲ್ಲಿನ ದೇವದಾಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಮಾತ್ರವಲ್ಲ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಹಾಯ ಮಾಡಿದರು. ಸುಧಾಮೂರ್ತಿ ಹಳ್ಳಿಯ ಹುಡುಗಿಯರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ತಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತಾರೆ.