ನಾರಿ ಕುಲಕ್ಕೇ ಅವಮಾನ ಇಂಥ ಮಹಿಳೆಯರು, ವ್ಯಕ್ತಿ ಕಾಲರ್ ಹಿಡಿದು ಕಿರುಚಿದ್ದೇಕೆ?

Published : Sep 24, 2023, 02:04 PM IST
ನಾರಿ ಕುಲಕ್ಕೇ ಅವಮಾನ ಇಂಥ ಮಹಿಳೆಯರು, ವ್ಯಕ್ತಿ ಕಾಲರ್ ಹಿಡಿದು ಕಿರುಚಿದ್ದೇಕೆ?

ಸಾರಾಂಶ

ಇಲ್ಲೊಂದು ಕಡೆ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಪುರುಷನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾಳೆ. ಆತನ ಕೂದಲನ್ನು ಎಳೆದು ಕೆನ್ನೆಗೆ ಬಾರಿಸಿದ್ದು, ಮಹಿಳೆಯ ಈ ದುಂಡಾವರ್ತನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ಇತ್ತೀಚೆಗೆ ಮಹಿಳೆಯರು ಕೂಡ ಬೀದಿಗಿಳಿದು ರೌಡಿಗಳಂತೆ ಕಾದಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಪುರುಷನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾಳೆ. ಆತನ ಕೂದಲನ್ನು ಎಳೆದು ಕೆನ್ನೆಗೆ ಬಾರಿಸಿದ್ದು, ಮಹಿಳೆಯ ಈ ದುಂಡಾವರ್ತನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ರಾಷ್ಟ್ರ ರಾಜಧಾನಿಗೆ ಸಮೀಪದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. 

ಹಲ್ಲೆ ಏಕೆ?
ಈ ಮಹಿಳೆ ತನ್ನ ನಾಯಿ ನಾಪತ್ತೆಯಾಗಿದೆ ಎಂದು ಅಪಾರ್ಟ್‌ಮೆಂಟ್‌ ಸಮೀಪ ಪೋಸ್ಟರ್‌ ಅಂಟಿಸಿದ್ದಳು, ಇದನ್ನು ಈ ಹಲ್ಲೆಗೊಳಗಾದ ವ್ಯಕ್ತಿ ಹರಿದು ಹಾಕಿದ್ದಾರೆ ಎಂದು ಮಹಿಳೆ ಆತನ ಮೇಲೆ ಹಲ್ಲೆ ನಡೆಸಿದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೋಯ್ಡಾದ  ಏಮ್ಸ್ ಗಾಲ್ಫ್‌ ಅವೆನ್ಯೂ ಸೊಸೈಟಿ (Aims Golf Avenue Society) ಅಪಾರ್ಟ್‌ಮೆಂಟ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.

2024ರಲ್ಲಿ ಬಿಜೆಪಿ ವಿರುದ್ಧ ಮತ ಹಾಕಿ... ಹೀಗೆ ಹೇಳಿದ್ರ ಆಮೀರ್ ಖಾನ್: ವೀಡಿಯೋದ ಅಸಲಿಯತ್ತೇನು?

ವೀಡಿಯೋದಲ್ಲಿರೋದೇನು?
ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆ ಮೊದಲಿಗೆ ವ್ಯಕ್ತಿಯ ಕಾಲರ್‌ಗೆ ಕೈ ಹಾಕಿ ಅಪಾರ್ಟ್‌ಮೆಂಟ್‌ನ ಒನರ್ ಅಸೋಸಿಯೇಷನ್‌ ಸುಪ್ರೀಂಕೋರ್ಟ್‌ಗಿಂತಲೂ (Supreme court) ದೊಡ್ಡವೇ ಎಂದು ಪ್ರಶ್ನಿಸಿದ್ದಾಳೆ. ನಂತರ  ವ್ಯಕ್ತಿಯ ಕೂದಲನ್ನು ಹಿಡಿದು ಎಳೆದಾಡಿದ್ದು ನಂತರ ಆತನ ಕೆನ್ನೆಗೆ ಬಾರಿಸಿದ್ದಾಳೆ. ಈ ವೇಳೆ ಸುಮ್ಮನಿರುವಂತೆ ಮಹಿಳೆಗೆ ಅಲ್ಲಿರುವ ಇತರರು ಹೇಳಿದರೂ ಆಕೆ ಕಿತ್ತಾಟ ಮುಂದುವರಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆದ ನಂತರ ನೋಯ್ಡಾ ಸೆಕ್ಟರ್‌ 113 (Noida sector 113) ಅಲ್ಲಿ ಇರುವ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಏಮ್ಸ್ ಗಾಲ್ಫ್ ಅವೆನ್ಯೂ ಸೊಸೈಟಿಯ ಅಧ್ಯಕ್ಷ ಹಾಗೂ ಅಲ್ಲಿನ ನಿವಾಸಿಗಳ ಮಧ್ಯೆ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯಿಸಿದ್ದಾರೆ. 

ವೈರಲ್ ಆದ ವೀಡಿಯೋಗೆ ಗೌತಮ್ ಬುದ್ಧ ನಗರ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಪ್ರತಿಕ್ರಿಯಿಸಿದ್ದು, ಕಾಣೆಯಾದ ನಾಯಿಯ ಪೋಸ್ಟರ್‌ನ್ನು ಕಿತ್ತು ಹಾಕಿದ್ದಕ್ಕೆ ಏಮ್ಸ್ ಗಾಲ್ಫ್ ಅವೆನ್ಯೂ ಸೊಸೈಟಿಯ ಮಹಿಳೆಯ ಹಾಗೂ ಅಲ್ಲಿನ ಆಡಳಿತ ಮಂಡಳಿ ಮಧ್ಯೆ ಗಲಾಟೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ. 

ಅನಂತ್ ಅಂಬಾನಿ ಫಿಟ್ನೆಸ್ ಟ್ರೈನರ್: ಒಂದು ಸೆಷನ್‌ಗೆ ಇವರು ಮಾಡೋ ಚಾರ್ಜ್‌ ಎಷ್ಟು ಗೊತ್ತಾ..?

ನೆಟ್ಟಿಗರು ಏನಂದರು?

ಆದರೆ ಮಹಿಳೆಯ ದುಂಡಾವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಮಹಿಳೆಯನ್ನು ಕಂಬಿ ಹಿಂದೆ ಕಳುಹಿಸಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈಕೆಯ ಜೊತೆ ಆಕೆಯನ್ನು ಬೆಂಬಲಿಸಿ ಹಲ್ಲೆಗೆ ನೆರವಾದವನನ್ನು ಕಂಬಿ ಹಿಂದೆ ಕಳುಹಿಸಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಒಬ್ಬರು ಈ ಮಹಿಳೆ ನಾರಿ ಕುಲಕ್ಕೆ ಅವಮಾನ? ಈಕೆ ತನ್ನ ಲಿಂಗವನ್ನೇ ಮರೆತಿದ್ದಾಳೆ. ಈಕೆ ತನ್ನ ಎಲ್ಲ ಮಿತಿಗಳನ್ನು ಮೀರಿದ್ದಾಳೆ. ಈಕೆ ಮೊದಲು ಮನುಷ್ಯಳಾಗಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!