ಪ್ರತಿಯೊಂದು ವಸ್ತುವನ್ನು ಮರುಬಳಕೆ ಮಾಡಲು ಕಲಿತಾಗ ಪರಿಸರ ರಕ್ಷಣೆ ಜೊತೆ ಹಣ ಉಳಿಸಬಹುದು. ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡ್ತಿದೆ. ಹಾಗಾಗಿ ಜನರು ಪೇಪರ್ ಬ್ಯಾಗ್ ಬಳಕೆ ಹೆಚ್ಚು ಮಾಡಿದ್ದಾರೆ. ಇದನ್ನು ಕೂಡ ಒಂದು ಬಾರಿ ಬಳಸಿ ಕಸಕ್ಕೆ ಹಾಕೋ ಬದಲು ಮರುಬಳಕೆ ಮಾಡಿದ್ರೆ ಅನೇಕ ಲಾಭವಿದೆ.
ಪ್ಲಾಸ್ಟಿಕ್ ಬ್ಯಾನ್ ಆಗ್ತಿದ್ದಂತೆ ಪೇಪರ್ ಬ್ಯಾಗ್ ಗೆ ಬೇಡಿಕೆ ಹೆಚ್ಚಾಗಿದೆ. ಜನರು ಪೇಪರ್ ಬ್ಯಾಗ್ ನಲ್ಲಿ ಹಣ್ಣು, ತರಕಾರಿ ಸೇರಿದಂತೆ ಮನೆ ಸಾಮಾನುಗಳನ್ನು ತರ್ತಿದ್ದಾರೆ. ಆನ್ಲೈನ್ ಕಂಪನಿಗಳು ಕೂಡ ಪ್ಲಾಸ್ಟಿಕ್ ಕವರ್ ಬದಲು ಪೇಪರ್ ಬ್ಯಾಗ್ ನಲ್ಲಿ ಪಾರ್ಸಲ್ ಕಳಸ್ತಿವೆ. ತರಕಾರಿ ತಂದ ಪೇಪರ್ ಬ್ಯಾಗನ್ನು ನಾವು ಹಾಗೆ ಎಸೆಯುತ್ತೇವೆ. ಪೇಪರ್ ಬ್ಯಾಗ್ ಮರುಬಳಕೆ ವಸ್ತು. ಕಾಗದದ ಬ್ಯಾಗನ್ನು ನೀವು ಅನೇಕ ರೀತಿಯಲ್ಲಿ ಬಳಸಬಹುದು. ಇಂದು ನಾವು ಪೇಪರ್ ಬ್ಯಾಗನ್ನು ನೀವು ಹೇಗೆ ಮರುಬಳಕೆ ಮಾಡಬಹುದು ಎಂಬುದನ್ನು ನಿಮಗೆ ಹೇಳ್ತೇವೆ.
ಪೇಪರ್ ಬ್ಯಾಗ (Paper Bag )ನ್ನು ಹೀಗೆ ಮರುಬಳಕೆ (Recycling) ಮಾಡಿ : ಪೇಪರ್ ಬ್ಯಾಗನ್ನು ನೀವು ಸ್ವಚ್ಛಗೊಳಿಸಲು ಬಳಕೆ ಮಾಡಬಹುದು. ನಾವು ತರಕಾರಿ (Vegetable) ತಂದ ಪೇಪರ್ ಬ್ಯಾಗನ್ನು ಎಸೆಯಬಾರದು. ಅದನ್ನು ಮನೆಯ ಗಾಜು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಬಹುದು. ಗಾಜುಗಳನ್ನು ಸ್ವಚ್ಛಗೊಳಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಮೊದಲು ಕ್ಲೀನಿಂಗ್ ಸ್ಪ್ರೇಯನ್ನು ಗಾಜಿನ ಮೇಲೆ ಸಿಂಪಡಿಸಿ. ನಂತರ ಪೇಪರ್ ಬ್ಯಾಗ್ ನಿಂದ ಗ್ಲಾಸನ್ನು ಉಜ್ಜಿ. ಇದ್ರಿಂದ ಗ್ಲಾಸ್ ಅಥವಾ ಕಿಟಕಿ ಹೊಳಪು ಹೆಚ್ಚಾಗುತ್ತದೆ. ಗಾಜಿನ ಮೇಲೆ ಯಾವುದೇ ಗೀರು ಬೀಳುವುದಿಲ್ಲ.
ಬಾಳೆ ಕಾಯಿ ಬೇಗ ಹಣ್ಣಾಗ್ಬೇಕೆಂದ್ರೆ ಪೇಪರ್ ಬ್ಯಾಗ್ ಬಳಸಿ : ಯಸ್, ಯಾವುದೇ ಕಾಯಿ ಬೇಗ ಹಣ್ಣಾಗಬೇಕು ಎಂದಾದ್ರೆ ನೀವು ಪೇಪರ್ ಬ್ಯಾಗ್ ಬಳಕೆ ಮಾಡಬಹುದು. ಪೇಪರ್ ಬ್ಯಾಗ್ ನಲ್ಲಿ ಕಾಯಿಯನ್ನು ಹಾಕಿಟ್ಟರೆ ಅದು ಬೇಗ ಹಣ್ಣಾಗುತ್ತದೆ. ಬಾಳೆಹಣ್ಣು ಮಾತ್ರವಲ್ಲ ಪೇರಳೆ ಹಣ್ಣು, ಆವಕಾಡೊ ಇತ್ಯಾದಿ ಹಣ್ಣುಗಳನ್ನು ನೀವು ಇದ್ರಲ್ಲಿ ಇಡಬಹುದು. ಪೇಪರ್ ಬ್ಯಾಗ್ ನಲ್ಲಿ ಹಾಕಿ ಬಾಯಿ ಮುಚ್ಚಬೇಕ. ಒಂದು ಅಥವಾ ಎರಡು ದಿನ ಹಾಗೆ ಬಿಟ್ಟರೆ ಬ್ಯಾಗ್ ನಲ್ಲಿರುವ ಕಾಯಿ ಹಣ್ಣಾಗುತ್ತದೆ.
ದುಬಾರಿ ಸೀರೆಯ ಬ್ಲೌಸ್ ಹಾಳಾಗ್ಬಾರ್ದು ಅಂದ್ರೆ ಸ್ವೆಟ್ ಪ್ಯಾಡ್ ಬಳಸಿ
ಕರಕುಶಲ ವಸ್ತು ತಯಾರಿಸಲು ಬಳಸಿ : ಪೇಪರ್ ಬ್ಯಾಗ್ ವೇಸ್ಟ್ ಮಾಡ್ಬೇಡಿ. ಮನೆಗೆ ತಂದ ಪೇಪರ್ ಬ್ಯಾಗನ್ನು ಸರಿಯಾಗಿ ಕತ್ತರಿಸಿ ನೀವು ಕ್ರಾಪ್ಟ್ ಮಾಡಬಹುದು. ಬೇರೆ ಬೇರೆ ಆಕಾರದಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸಬಹುದು. ಪೇಪರ್ ಬ್ಯಾಗ್ ಖಾಲಿಯಿದ್ದರೆ ನೀವು ಡ್ರಾಯಿಂಗ್ ಬಿಡಿಸಬಹುದು. ಪೇಂಟಿಂಗ್ ಗೆ ಇದನ್ನು ಬಳಕೆ ಮಾಡಬಹುದು. ನೀವು ಇದನ್ನು ಮಕ್ಕಳಿಗೆ ನೀಡಬಹುದು. ಇದನ್ನು ಮಕ್ಕಳಿಗೆ ರಫ್ ಕಾಗದದಂತೆ ನೀಡಬಹುದು.
ಗೊಬ್ಬರವಾಗಿ ಪೇಪರ್ ಬ್ಯಾಗ್ : ಪೇಪರ್ ಬ್ಯಾಗನ್ನು ನೀವು ಗೊಬ್ಬರ ತಯಾರಿಸಲು ಬಳಸಬಹುದು. ಮೊದಲು ನೀವು ಪೇಪರ್ ಬ್ಯಾಗ್ ಗೆ ತರಕಾರಿ ಹಾಗೂ ಹಣ್ಣಿನ ಸಿಪ್ಪೆಗಳನ್ನು ಹಾಕಿಡಿ. ನಂತ್ರ ಇವುಗಳನ್ನು ಮಣ್ಣಿನ ಜೊತೆ ಸೇರಿಸಿ. ಮಣ್ಣಿನ ಜೊತೆ ಮಿಕ್ಸ್ ಮಾಡುವ ವೇಳೆ ನೀವು ಪೇಪರ್ ಬ್ಯಾಗನ್ನು ಸಣ್ಣದಾಗಿ ಕತ್ತರಿಸಿ ಹಾಕಿ. ಶೀಘ್ರದಲ್ಲೇ ಇದು ಮಣ್ಣಿನಲ್ಲಿ ಕರಗಿ ಉತ್ತಮ ಗೊಬ್ಬರ ನಿಮಗೆ ಸಿಗುತ್ತದೆ.
ಗಿಫ್ಟ್ ಪ್ಯಾಕ್ ಆಗಿ ಪೇಪರ್ ಬ್ಯಾಗ್ : ಮನೆಗೆ ತಂದ ಪೇಪರ್ ಬ್ಯಾಗನ್ನು ನೀವು ಮರುಬಳಸಲು ಬಯಸಿದ್ರೆ ಅದನ್ನು ಗಿಫ್ಟ್ ಪ್ಯಾಕ್ ರೂಪದಲ್ಲಿ ಬಳಸಬಹುದು. ಸಣ್ಣ ಉಡುಗೊರೆಗಳನ್ನು ಪ್ಯಾಕ್ ಮಾಡಲು ಪೇಪರ್ ಬ್ಯಾಗ್ ಬಳಸುವುದು ಒಳ್ಳೆಯದು. ಪೇಪರ್ ಬ್ಯಾಗನ್ನು ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿ ಅದರೊಳಗೆ ಗಿಫ್ಟ್ ಹಾಕಿ ನಂತ್ರ ಪ್ಯಾಕ್ ಮಾಡಿ ನೀವು ನೀಡಬಹುದು.
Kitchen Hacks: ಕತ್ತರಿಸಿದ ಈರುಳ್ಳಿ ವಾಸನೆ ಬರುತ್ತೆ ಅಲ್ವಾ? ಏನು ಮಾಡಬೇಕು ಅದಕ್ಕೆ?
ಕಸ ತುಂಬಲು ಬಳಕೆ ಮಾಡಿ : ಅನೇಕರು ಪ್ಲಾಸ್ಟಿಕ್ ಕವರನ್ನು ಕಸ ತುಂಬಲು ಬಳಸ್ತಾರೆ. ಇದು ಒಳ್ಳೆಯದಲ್ಲ. ಹಾಗಾಗಿ ನೀವು ಪೇಪರ್ ಬ್ಯಾಗನ್ನು ಮನೆಯಲ್ಲಿರುವ ಹಸಿ ಅಥವಾ ಒಣ ಕಸ ತುಂಬಲು ಬಳಕೆ ಮಾಡಬಹುದು.