ಚಳಿಗಾಲದಲ್ಲಿ ಚರ್ಮ ಒಣಗುವ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಬಾಡಿ ಲೋಷನ್ ಹಚ್ಚುವುದು ತುಂಬಾ ಮುಖ್ಯ. ಆದರೆ ಚರ್ಮದ ಆರೈಕೆಗೆ ಹ್ಯಾಂಡ್ ಕ್ರೀಮ್ ಬಳಸವುದು ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಚಳಿಗಾಲ (Winter) ಶುರುವಾಯ್ತು ಅಂದ್ರೆ ಸಾಕು ಒಣಚರ್ಮದ (Dry skin) ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೈಯಲ್ಲಿ ಬಿರುಕು ಮತ್ತು ಒಣ ಚರ್ಮದ ತೊಂದರೆ ಉಂಟಾಗುತ್ತದೆ.. ದೈನಂದಿನ ಜೀವನದಲ್ಲಿ ಹ್ಯಾಂಡ್ ಕ್ರೀಮ್‌ಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮ ಕೈಗಳನ್ನು ನೋಡಿಕೊಳ್ಳಲು ಮತ್ತು ಅವುಗಳನ್ನು ನಿಯಮಿತವಾಗಿ ಆರ್ಧ್ರಕಗೊಳಿಸುವ ಸಮಯ ಇದು. ಶುದ್ಧೀಕರಣದಿಂದ ಟೋನಿಂಗ್‌ನಿಂದ ಹ್ಯಾಂಡ್ ಕ್ರೀಮ್ ಉಪಯೋಗಕ್ಕೆ ಬರುತ್ತದೆ. ಆದರೆ ನಮ್ಮ ಕೈಗಳನ್ನು ಗಮನಿಸದೆ ಬಿಟ್ಟರೆ ಅದು ಒಣಗಿ ನಿರ್ಜೀವವಾಗುತ್ತದೆ. ಹೀಗಾಗಿ ಹ್ಯಾಂಡ್ ಕ್ರೀಮ್‌ಗಳನ್ನು ಯಾಕೆ ಬಳಸಬೇಕೆಂದು ತಿಳಿಯಿರಿ. ಆ ಬಗ್ಗೆ ತಜ್ಞರು (Experts) ಮಾಹಿತಿ ನೀಡಿದ್ದಾರೆ.
ಚರ್ಮದ ಆರೈಕೆಗೆ ಹ್ಯಾಂಡ್ ಕ್ರೀಮ್‌ನ್ನು ಯಾಕೆ ಬಳಸಬೇಕು ?
undefined
1. ಕೈಗಳ ಚರ್ಮವು ತ್ವರಿತವಾಗಿ ಒಣಗುತ್ತದೆ
ಕೈಗಳ ಮೇಲ್ಭಾಗದಲ್ಲಿ ಕಡಿಮೆ ಸೆಬಾಸಿಯಸ್ ಗ್ರಂಥಿಗಳು ಇರುವುದರಿಂದ, ನಮ್ಮ ಕೈಯ ಚರ್ಮವು ಹೆಚ್ಚು ಬೇಗನೆ ಒಣಗುತ್ತದೆ. ಹೆಚ್ಚುವರಿಯಾಗಿ, ಅಪರಿಸರದ ಒತ್ತಡಗಳಾದ ಸೂರ್ಯ, ನೀರು (Water), ಶುಷ್ಕತೆ, ಮಾಲಿನ್ಯ, ಇತ್ಯಾದಿಗಳಿಗೆ ಕೈ ಹೆಚ್ಚು ಒಡ್ಡಿಕೊಳ್ಳುವುದು ಹಾನಿಕರಿಯಾಗಿರುತ್ತದೆ. ಈ ಅಂಶಗಳು ಚರ್ಮ ತೆಳುವಾಗುವುದು, ಸುಕ್ಕುಗಳು, ಚರ್ಮದಲ್ಲಿ ಕಲೆಗಳು ಮೊದಲಾದ ಸಮಸ್ಯೆ ಕಾರಣವಾಗುತ್ತದೆ.
ನಿಮ್ ಫೇಸ್‌ಕ್ರೀಮ್‌ನಲ್ಲಿ ಸ್ಟಿರಾಯ್ಡ್ ಅಂಶವಿದ್ಯಾ ? ಚರ್ಮದ ಸಮಸ್ಯೆ ಕಾಡುತ್ತೆ..ಎಚ್ಚರ !
2. ಒಣ ಮತ್ತು ಬಿರುಕು ಬಿಟ್ಟ ಚರ್ಮವನ್ನು ಸರಿಪಡಿಸುತ್ತದೆ
ದಿನನಿತ್ಯದ ಶುಚಿಗೊಳಿಸುವಿಕೆ ಮತ್ತು ತೊಳೆಯುವಿಕೆಯು ನಿಮ್ಮ ಕೈಗಳನ್ನು ಒಣಗಿಸಬಹುದು. ಮಾತ್ರವಲ್ಲ ತೇವಾಂಶದ ನಷ್ಟವು ಚರ್ಮ ಒಡೆಯುವಿಕೆಗೆ ಕಾರಣವಾಗುವುದರ ಜೊತೆಗೆ ದದ್ದುಗಳನ್ನು ಉಂಟುಮಾಡಬಹುದು. ನಮ್ಮಲ್ಲಿ ಹಲವರು ಬಾಡಿ ಲೋಷನ್ ಅಥವಾ ಮಾಯಿಶ್ಚರೈಸರ್‌ನಿಂದ ನಮ್ಮ ಕೈಗಳನ್ನು (Hands) ನಿಯಮಿತವಾಗಿ ತೇವಗೊಳಿಸುತ್ತಾರೆ. ಆದರೆ ಈ ಉತ್ಪನ್ನಗಳು (Products) ಸಾಕಾಗುವುದಿಲ್ಲ. ಹ್ಯಾಂಡ್ ಕ್ರೀಮ್‌ಗಳನ್ನು ಬಳಸುವುದು ಒಳ್ಳೆಯದು. ಇವುಗಳನ್ನು ಆರ್ಧ್ರಕ ಮಿಶ್ರಣದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಸಂಪೂರ್ಣ ಸ್ಥಿರತೆಯನ್ನು ಹೊಂದಿರುತ್ತದೆ.
3. ಹಾನಿಗೊಳಗಾದ ಚರ್ಮವನ್ನು ಸರಿಮಾಡುತ್ತದೆ
ಕೈಗಳನ್ನು ನಿರಂತರವಾಗಿ ತೊಳೆಯುವುದು ಮತ್ತು ಶುಚಿಗೊಳಿಸುವುದರಿಂದ ಕೈಯ ಚರ್ಮದಲ್ಲಿರುವ ನೈಸರ್ಗಿಕ ತೈಲ ಇಲ್ಲದಾಗಬಹುದು. ಹಾನಿಗೊಳಗಾದ ಚರ್ಮವನ್ನು ಸರಿಪಡಿಸಲು, ಕೋಕಮ್ ಬೆಣ್ಣೆ, ಜೇನುತುಪ್ಪ, ಅಲೋವೆರಾ, ತೆಂಗಿನ ಎಣ್ಣೆ, ಏಪ್ರಿಕಾಟ್ ಎಣ್ಣೆ ಮುಂತಾದ ಹೈಡ್ರೇಟಿಂಗ್ ಘಟಕಗಳೊಂದಿಗೆ ರಚಿಸಲಾದ ಕೈ ಕ್ರೀಮ್ (Hand cream) ಅನ್ನು ಆಯ್ಕೆ ಮಾಡಿಕೊಳ್ಳಿ.
'ಸ್ಕಿನ್ ಸೈಕ್ಲಿಂಗ್' ಎಂದರೇನು? ಟ್ರೆಂಡ್‌ನಲ್ಲಿರೋ ಈ ಬ್ಯೂಟಿ ಸೀಕ್ರೆಟ್ ಬಗ್ಗೆ ತಿಳಿಯಿರಿ
4. ಸೋಂಕುಗಳ ವಿರುದ್ಧ ಕಾಪಾಡುತ್ತದೆ
ಬಿರುಕು ಅಥವಾ ರಕ್ತಸ್ರಾವವಾಗಿರುವ ಕೈಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಹೆಚ್ಚಾಗಿ ಬೆಳೆಯುತ್ತವೆ. ಏಕೆಂದರೆ ಹಾನಿಗೊಳಗಾದ ಮತ್ತು ತೆರೆದ ಚರ್ಮವು ಹೆಚ್ಚು ಬ್ಯಾಕ್ಟೀರಿಯಾವನ್ನು ಸಂಗ್ರಹಿಸುತ್ತದೆ. ಹೀಗಾಗಿ, ಶುಷ್ಕತೆ ಅಥವಾ ಚರ್ಮದ ಬಿರುಕುಗಳನ್ನು ತಡೆಗಟ್ಟಲು, ನಾವು ನಿಯಮಿತವಾಗಿ ನಮ್ಮ ಕೈಗಳನ್ನು ತೇವಗೊಳಿಸಬೇಕು. ಇದಕ್ಕಾಗಿ ಹ್ಯಾಂಡ್ ಕ್ರೀಮ್ ಬಳಸುವುದು ಒಳ್ಳೆಯದು.
5. ಉಗುರುಗಳನ್ನು ಮರೆಯಬೇಡಿ
ಉಗುರುಗಳಿಗೆ (Nails) ಸ್ವಲ್ಪ ಹ್ಯಾಂಡ್ ಲೋಷನ್‌ನ್ನು ಅನ್ವಯಿಸಿ. ನಿಮ್ಮ ಬೆರಳ ತುದಿಗೆ ಲೋಷನ್‌ನ್ನು ಅನ್ವಯಿಸುವುದರಿಂದ ಇದು ನಿಮ್ಮ ಹೊರಪೊರೆಗಳು ಮತ್ತು ಉಗುರುಗಳನ್ನು ಪೋಷಿಸುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಇದರಿಂದ ಉಗುರು ಕೊಳಕು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರುತ್ತದೆ. ನಮ್ಮ ಕೈಗಳ ಚರ್ಮವು ನಮ್ಮ ಮುಖದ ಚರ್ಮದಂತೆಯೇ ದುರ್ಬಲವಾಗಿರುತ್ತದೆ. ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ (Healthy) ಉಳಿಯಲು ಸಮಾನ ಕಾಳಜಿ ಮತ್ತು ಪೋಷಣೆಯ ಅಗತ್ಯವಿರುತ್ತದೆ.
Beauty tips : ಸ್ಕಿನ್ ಕೇರ್ ರೂಟೀನಲ್ಲಿ ಗೋಡಂಬಿ ಸೇರಿಸಿ, ಮುಖದ ಹೊಳಪು ಹೆಚ್ಚಿಸಿ