Women Health: ಮುಟ್ಟಾದಾಗ ಬೇಗ ಬೆಳೆಯುತ್ತೆ ಓವೆರಿಯನ್ ಸಿಸ್ಟ್

By Suvarna News  |  First Published Jun 16, 2023, 4:08 PM IST

ಅಂಡಾಶಯದಲ್ಲಿ ಚೀಲ ಕಾಣಿಸಿಕೊಳ್ಳುವುದು ಹುಡುಗಿಯರಿಗೆ ಸಾಮಾನ್ಯ. ಇದು ಗಾತ್ರದಲ್ಲಿ ಚಿಕ್ಕದಿದ್ರೆ ಯಾವುದೇ ಸಮಸ್ಯೆಯಿಲ್ಲ. ಭಯಪಡುವ ಅಗತ್ಯವೂ ಇರೋದಿಲ್ಲ. ಆದ್ರೆ ಗಾತ್ರ ದೊಡ್ಡದಾಗ್ತಾ, ನೋವು ವಿಪರೀತವಾದ್ರೆ ಅಪಾಯ ಹೆಚ್ಚು. 


ಋತುಚಕ್ರ ಎನ್ನುವುದು ಆರೋಗ್ಯವಂತ ಸ್ತ್ರೀಯರ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಈ ಸಮಯದಲ್ಲಿ ಆಕೆಯಲ್ಲಿ ಅನೇಕ ರೀತಿಯ ಶಾರೀರಿಕ ಹಾಗೂ ಮಾನಸಿಕ ಭಾವನೆಗಳಾಗುತ್ತವೆ. ದೇಹದಲ್ಲಿರುವ ಹಾರ್ಮೋನುಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಶಾರೀರಿಕವಾಗಿ ಉಂಟಾಗುವ ಅನೇಕ ವ್ಯತ್ಯಾಸದಿಂದ ಆಕೆ ಹಲವು ರೀತಿಯ ನೋವು, ಕಿರಿಕಿರಿಯನ್ನು ಅನುಭವಿಸುತ್ತಾಳೆ. ಪಿರಿಯಡ್ಸ್ ಸಂದರ್ಭದಲ್ಲಿ ಆಕೆಯಲ್ಲಿ ಉಂಟಾಗುವ ಉಳಿದ ಬದಲಾವಣೆಗಳಂತೆಯೇ ಓವೆರಿಯನ್ ಸಿಸ್ಟ್ ನಲ್ಲಿ ಕೂಡ ಬದಲಾವಣೆ ಕಂಡುಬರುತ್ತದೆ.

ಓವರಿಯನ್ ಸಿಸ್ಟ್  (Ovarian Cyst ) ಅಥವಾ ಅಂಡಾಂಶಯದ ಚೀಲ/ಗಡ್ಡೆಯು ಹೆಣ್ಣಿನ ಸಂತಾನೋತ್ಪತ್ತಿ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಈ ಅಂಡಾಂಶಯದ ಸಿಸ್ಟ್ ಸಾಮಾನ್ಯವಾದ ಹೆಚ್ಚು ಹಾನಿಕರವಲ್ಲದ ಸ್ತ್ರೀ ರೋಗವಾಗಿದ್ದು, ಎಲ್ಲಾ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಅಂಡಾಂಶಯಗಳು ಸ್ತ್ರೀ ಲೈಂಗಿಕ ಹಾರ್ಮೋನು (Hormone) ಗಳಾದ ಈಸ್ಟ್ರೋಜೆನ್ (Estrogen) ಪ್ರೊಜೆಸ್ಟರಾನ್ ಮತ್ತು ಸಂಭವನೀಯ ಫಲೀಕರಣಕ್ಕಾಗಿ ಮೊಟ್ಟೆಗಳನ್ನು ಬಿಡುಗಡೆಮಾಡಲು ಕಾರಣವಾಗಿದೆ. ಪೀರಿಯೆಡ್ಸ್ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳಿಂದ ಅಂಡಾಂಶಯದ ಅಂಚುಗಳು ಬಲೂನಿನಂತೆ ಊದಿಕೊಳ್ಳುತ್ತವೆ ಅದನ್ನೇ ಸಿಸ್ಟ್ ಎನ್ನಲಾಗುತ್ತೆ. ಅದರೊಳಗೆ ದ್ರವಗಳು ತುಂಬಿರುತ್ತದೆ.

Tap to resize

Latest Videos

ಹೆರಿಗೆಯ ನಂತರ ಮಹಿಳೆಯರನ್ನು ಕಾಡುವ ಚಳಿ, ಪ್ರಸವದ ನಂತ್ರ ಎಲ್ಲರಿಗೂ ಹೀಗಾಗುತ್ತಾ?

ಓವರಿಯನ್ ಸಿಸ್ಟ್ ಕ್ಯಾನ್ಸರ್ (Cancer) ಕೂಡ ಆಗಿರಬಹುದು : ಅಂಡಾಂಶಯದ ಗಡ್ಡೆಯ ಗಾತ್ರ ಚಿಕ್ಕದಾಗಿದ್ದಾಗ ಅದು ಹಾನಿಕಾರಕವಲ್ಲ. ಚಿಕ್ಕ ಗಡ್ಡೆಗಳು ತಮ್ಮಷ್ಟಕ್ಕೇ ತಾವೇ ಕಣ್ಮರೆಯಾಗುತ್ತವೆ. ಅಂತಹ ಗಡ್ಡೆಗಳು ಬೆಳೆದು ದೊಡ್ಡ ಗಾತ್ರವಾದರೆ ಅದರಿಂದ ಶರೀರಕ್ಕೆ ಹಾನಿಕರವಾಗಿದೆ. ಏಕೆಂದರೆ ಇದರಿಂದ ಕ್ಯಾನ್ಸರ್ ಕೂಡ ಆಗಬಹುದು. ಪಿರಿಯಡ್ಸ್ ಆದ ಸಂದರ್ಭದಲ್ಲಿ ಅಂಡಾಂಶದ ಚೀಲವು ದೊಡ್ಡದಾಗಿ ಬೆಳೆಯುತ್ತದೆ. ನಿಮ್ಮ ಶರೀರದಲ್ಲಿ ಅಂಡೋತ್ಪತ್ತಿ ನಡೆದಾಗ ಕೋಶವು ತನ್ನದೇ ಆದ ಬೆಳವಣಿಗೆಯನ್ನು ಮುಂದುವರೆಸಿದರೆ, ಅದು ಎರಡು ಮೂರು ವಾರಗಳಲ್ಲಿ ಕಣ್ಮರೆಯಾಗುವ ಕ್ರಿಯಾತ್ಮಕ ಚೀಲವಾಗಿದೆ. ಹಾರ್ಮೋನುಗಳ ಬದಲಾವಣೆ, ಗರ್ಭಧಾರಣೆ ಮತ್ತು ಎಂಡೊಮೆಟ್ರಿಯೊಸಿಸ್ ಮುಂತಾದವು ಅಂಡಾಂಶಯದ ಚೀಲದ ಬೆಳವಣಿಗೆಗೆ ಕಾರಣವಾಗಿದೆ.

ಸಿಸ್ಟ್ (Cyst) ಕಾರಣದಿಂದಾಗಿ ಹೊಟ್ಟೆಯ ಕೆಳಭಾಗದಲ್ಲಿ ನೋವು : ಕೆಲವು ಗಡ್ಡೆಗಳು ಅಲ್ಸರ್ ತರಹ ಇರುತ್ತದೆ. ಈ ಗಡ್ಡೆಗಳಿಂದ ಪೀರಿಯಡ್ಸ್ ಸಮಯದಲ್ಲಿ ರಕ್ತದ ಹರಿವು ಹೆಚ್ಚುವುದು ಅಥವಾ ಕಡಿಮೆಯಾಗುವುದು ಮತ್ತು ಹೊಟ್ಟೆಯ ಕೆಳಭಾಗದಲ್ಲಿ ನೋವು ಮುಂತಾದವು ಸಿಸ್ಟ್ ನ ಲಕ್ಷಣವಾಗಿದೆ. ಇದು ಎಲ್ಲ ಸ್ತ್ರೀಯರಲ್ಲೂ ಒಂದೇ ರೀತಿಯಿರುವುದಿಲ್ಲ. ಪ್ರತಿಯೊಂದು ಹೆಣ್ಣಿನಲ್ಲೂ ಈ ಲಕ್ಷಣಗಳು ಭಿನ್ನವಾಗಿಯೇ ಇರುತ್ತದೆ. ಕೆಲವು ಮಹಿಳೆಯರಿಗೆ ಕಡಿಮೆ ನೋವು ಮತ್ತು ಕೆಲವರಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಒಮ್ಮೆ ಈ ಗಡ್ಡೆ ದೊಡ್ಡವಾದರೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಮಯದಲ್ಲಿ ಈ ನೋವು ಹೊಟ್ಟೆಯ ಕೆಳಭಾಗದಲ್ಲಿಯೇ ಕಾಣಿಸುತ್ತದೆ.

ಗರ್ಭಾವಸ್ಥೆಯಲ್ಲಿ ಹಸಿವು ಆಗೋಲ್ವಾ? ಏನು ಮಾಡಬಹುದು?

ಓವರಿಯನ್ ಸಿಸ್ಟ್ ನ ಪ್ರಕಾರಗಳು : 

ಕ್ರಿಯಾತ್ಮಕ ಸಿಸ್ಟ್: ಕೆಲವು ಮಹಿಳೆಯರು ಸಂತಾನೋತ್ಪತ್ತಿಯ ವಯಸ್ಸಿನಲ್ಲಿದ್ದಾಗ ಮತ್ತು ಅಂಡೋತ್ಪತ್ತಿಯಲ್ಲಿನ ದೋಷದಿಂದಾಗಿ ಅಂಡಾಂಶಯದ ಗಡ್ಡೆಯು ಸಂಭವಿಸುತ್ತದೆ.

ಸಿಸ್ಟೆಡೆನೋಮಾಸ್ : ಸಿಸ್ಟೆಡೆನೋಮಾಸ್ ಜೀವಕೋಶಗಳಿಂದ ಬೆಳೆಯುತ್ತದೆ. ಇವು ಅಂಡಾಂಶಯದ ಒಳಗೆ ಬೆಳೆಯುವುದಿಲ್ಲ ಹೊರಗಿನ ಕಾಂಡಕ್ಕೆ ಅಂಟಿಕೊಂಡು ಹೊರಭಾಗವನ್ನು ಆವರಿಸಿರುತ್ತವೆ. 

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) : ಪಿಸಿಓಎಸ್ ಸಾಮಾನ್ಯವಾದ ಎಂಡೋಕ್ರೈನ್ ಅಸ್ವಸ್ಥತೆಯಾಗಿದ್ದು ಮಹಿಳೆಯರ ಹಾರ್ಮೋನ್ ವ್ಯವಸ್ಥೆಯ ಮೇಲೆ ಹಾಗೂ ಅಂಡಾಂಶಗಳ ಕಾರ್ಯ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ತಲೆ ಕೂದಲು ಉದುರುವಿಕೆ,  ಮುಟ್ಟಿನ ಸಮಯದಲ್ಲಿ ಬದಲಾವಣೆ ಮಾತ್ರವಲ್ಲದೇ ಮಹಿಳೆಯರ ಬಂಜೆತನಕ್ಕೂ ಪ್ರಮುಖ ಕಾರಣವಾಗಿದೆ. ಪಿಸಿಓಎಸ್ ಉಂಟಾದ ಸಮಯದಲ್ಲಿ ದೇಹದಲ್ಲಿ ಆಂಡ್ರೋಜನ್ ಹಾರ್ಮೋನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ದೇಹದಲ್ಲಿ ಅಂಡೋತ್ಪತ್ತಿ ನಿಧಾನವಾಗುತ್ತದೆ. ಈ ಕಾರಣದಿಂದಲೇ ಪಿಸಿಓಎಸ್ ಹೊಂದಿರುವ ಮಹಿಳೆಯರು ಗರ್ಭವತಿಯಾಗುವುದು ಕಷ್ಟ.

ಎಂಡೊಮೆಟ್ರಿಯೊಸಿಸ್ : ಎಂಡೊಮೆಟ್ರಿಯೊಸಿಸ್ ನಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುತ್ತದೆ. ಇದರಿಂದ ಸೊಂಟದ ಭಾಗದಲ್ಲಿ ತೀವ್ರವಾದ ನೋವು ಕಾಣಸಿಕೊಳ್ಳುತ್ತದೆ. ಇದು ಸ್ತ್ರೀಯ ಮೊದಲ ಮುಟ್ಟಿನಿಂದ ಮೆನೊಪಾಸ್ ತನಕವೂ ಇರುತ್ತದೆ. ಈ ಖಾಯಿಲೆಯಿಂದ ಮಹಿಳೆ ಗರ್ಭವತಿಯಾಗಲು ಕಷ್ಟವಾಗಬಹುದು.
 

click me!