Kitchen Hacks : ಬೇಳೆ ಬೇಯಿಸುವಾಗ ನೀರು ಕುಕ್ಕರ್‌ನಿಂದ ಹೊರಗೆ ಬರ್ತಿದೆಯಾ? ಚಿಂತೆ ಬಿಡ್ಬಿಡಿ

By Suvarna News  |  First Published May 18, 2022, 2:02 PM IST

ಅನೇಕ ಮಹಿಳೆ (Woman)ಯರಿಗೆ ಬೇಳೆ ಬೇಯಿಸೋದು ಟೆನ್ಷನ್ ವಿಚಾರ. ಯಾಕೆಂದ್ರೆ ಬೇಳೆ ಬೇಯಿಸುವಾಗ ನೀರು (Water) ಹೊರಗೆ ಬರುತ್ತದೆ. ಹಾಗೆ ಬೇಳೆ ಸರಿಯಾಗಿ ಬೇಯುವುದಿಲ್ಲ. ಇದ್ರಿಂದ ದಾಲ್ (Dal) ರುಚಿ ಹಾಳಾಗುತ್ತದೆ. ಬೇಳೆಯನ್ನು ಸರಿಯಾಗಿ ಬೇಯಿಸಲು ಕೆಲ ಟಿಪ್ಸ್ ಇಲ್ಲಿದೆ. 


ಭಾರತೀಯರು ಅಡುಗೆ (Cooking) ಯಲ್ಲಿ ಮುಂದಿದ್ದಾರೆ. ಪ್ರತಿ ದಿನ ಒಂದೊಂದು ಅಡುಗೆ ಮಾಡೋದ್ರಲ್ಲಿ ಭಾರತೀಯರು ಎತ್ತಿದ ಕೈ. ಕೆಲ ಆಹಾರ ಪದಾರ್ಥಗಳನ್ನು ಭಾರತೀಯರು ಪ್ರತಿ ದಿನ ಬಳಸ್ತಾರೆ. ಭಾರತದ ಎಲ್ಲರ ಮನೆಯಲ್ಲೂ ಪ್ರತಿ ದಿನ ಬಳಕೆಯಾಗುವ ಅನೇಕ ಅಡುಗೆ ಪದಾರ್ಥಗಳಿವೆ. ಅವರಲ್ಲಿ ಬೇಳೆ (Gram ) ಕೂಡ ಒಂದು. ಬೇಳೆಯನ್ನು ನಾನಾ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅನೇಕರ ಮನೆಯಲ್ಲಿ ಪ್ರತಿ ದಿನ ಬೇಳೆ ಸಾಂಬಾರ್ (Sambar) ಮಾಡಲಾಗುತ್ತದೆ. ಇನ್ನು ಕೆಲವರಿಗೆ ಪ್ರತಿ ದಿನ ದಾಲ್ ಬೇಕೆ ಬೇಕು. ದಾಲ್ ಇಲ್ಲದೆ ಆಹಾರ ಅಪೂರ್ಣವೆಂದು ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸುತ್ತಾರೆ. ಆದ್ರೆ ಕುಕ್ಕರ್‌ನಲ್ಲಿ ಬೇಳೆಕಾಳನ್ನು ಬೇಯಿಸುವುದು ಸುಲಭವಲ್ಲ ಎನ್ನುತ್ತಾರೆ ಮಹಿಳೆಯರು.

ಕುಕ್ಕರ್ ನಲ್ಲಿ ನೀರು ಹಾಕಿ ಬೇಳೆಯನ್ನು ಬೇಯಿಸಿದ್ರೆ ಕುಕ್ಕರ್ ಶಿಳ್ಳೆ ಹೊಡೆಯುತ್ತಿದ್ದಂತೆ ದಾಲ್ ನೀರು ಹೊರಗೆ ಬರುತ್ತದೆ. ಇಡೀ ಕುಕ್ಕರ್ ಮಾತ್ರವಲ್ಲ ಗ್ಯಾಸ್ ಒಲೆ ಕೂಡ ಕೊಳಕಾಗುತ್ತದೆ.  ಇದೊಂದೇ ಅಲ್ಲ ಒಳಗಿರುವ ಬೇಳೆ ಸರಿಯಾಗಿ ಬೆಂದಿರುವುದಿಲ್ಲ. ಬೇಳೆ ಬೇಯದ ಕಾರಣ ಮತ್ತೆ ಅದನ್ನು ಮ್ಯಾಶ್ ಮಾಡಬೇಕಾಗುತ್ತದೆ. ಬೇಳೆ ಕುಕ್ಕರ್ ನಲ್ಲಿ ಸರಿಯಾಗಿ ಬೇಯಬೇಕೆಂದ್ರೆ ಕೆಲವೊಂದು ಟಿಪ್ಸ್ ಬಳಸಬೇಕು. ಇಂದು ಕುಕ್ಕರ್ ನಲ್ಲಿ ಸುಲಭವಾಗಿ ಬೇಳೆ ಬೇಯಿಸಿ, ಸರಳವಾಗಿ ದಾಲ್ ಹೇಗೆ ಮಾಡ್ಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

Tap to resize

Latest Videos

ವಯಸ್ಸಾದಂತೆ ಮಹಿಳೆಯರು ಎದುರಿಸುವ ಗಂಭೀರ ಆರೋಗ್ಯ ಸಮಸ್ಯೆಗಳಿವು, ನೆಗ್ಲೆಕ್ಟ್‌ ಮಾಡ್ಬೇಡಿ

ಬೇಳೆಯನ್ನು ಕುಕ್ಕರ್ ನಲ್ಲಿ ಸರಿಯಾಗಿ ಬೇಯಿಸುವುದು ಹೇಗೆ ಗೊತ್ತಾ?
ತೊಗರಿ ಬೇಳೆಯಿರಲಿ, ಹೆಸರು ಬೇಳೆಯಿರಲಿ ಇಲ್ಲ ಕಡಲೆ ಬೇಳೆಯಿರಲಿ, ಯಾವುದೇ ಬೇಳೆ ಬೇಯಿಸುವ ಮೊದಲು 30 ನಿಮಿಷಗಳ ಕಾಲ ಬೇಳೆಯನ್ನು ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಬೇಳೆ ಸುಲಭವಾಗಿ ಕರಗುತ್ತದೆ. ಬೇಳೆ ಚೆನ್ನಾಗಿ ಬೇಯುತ್ತದೆ.  ನೀವು ಬೇಳೆ ಬೇಯಿಸುವಾಗ ಅರ್ಧ ಬೌಲ್ ನೀರು ಹಾಕುತ್ತಿದ್ದರೆ ಅದನ್ನು ತಪ್ಪಿಸಿ. ಅರ್ಧ ಲೋಟ ನೀರಿನ ಬದಲು ಒಂದು ಲೋಟ ನೀರು ತೆಗೆದುಕೊಳ್ಳಿ. ಬೇಳೆಯನ್ನು ನೀರಿಗೆ ಹಾಕಿ ಹಾಗೆ ಬೇಯಿಸಬಾರದು. ಬೇಳೆ ಜೊತೆ ಉಪ್ಪು ಮತ್ತು ಅರಿಶಿನ ಹಾಗೂ ಅರ್ಧ ಟೀ ಚಮಚ ಎಣ್ಣೆ ಅಥವಾ ತುಪ್ಪವನ್ನು ಹಾಕಬೇಕು. ಇದರಿಂದ ಬೇಳೆ ಬೇಗ ಬೇಯುತ್ತದೆ.ಏಕೆಂದರೆ ಕುಕ್ಕರ್ ನ ಮೇಲ್ಪದರಕ್ಕೆ ಎಣ್ಣೆ ಅಂಟಿಕೊಳ್ಳುವುದಿಲ್ಲ.  

ಕುಕ್ಕರ್ ನ ಸೀಸವನ್ನು ಸರಿಯಾಗಿ ಮುಚ್ಚಬೇಕು. ಹಾಗೆ ಕುಕ್ಕರ್ ನಲ್ಲಿ ಪ್ರೆಶರ್ ಬರ್ತಿದೆಯಾ ಎಂಬುದನ್ನು ನೋಡಿ. ಮೊದಲೇ ನೀವು ಬೇಳೆಯನ್ನು ನೆನೆಸಿದ್ದರೆ ಆಗ ತುಂಬಾ ಶಿಳ್ಳೆ ಹೊಡೆಸುವ ಅಗತ್ಯವಿಲ್ಲ. ಕುಕ್ಕರ್ ನಲ್ಲಿ ಮೂರು ಸೀಟಿಗೆ ಬೇಳೆ ಬೆಂದಿರುತ್ತದೆ. ಕುಕ್ಕರ್‌ನಿಂದ ಪ್ರೆಶರ್ ಸಂಪೂರ್ಣ ಹೋದ ಮೇಲೆ ಬೇಳೆಯನ್ನು ತೆಗೆಯಿರಿ.

ಇದಾದ ನಂತರ ಜೀರಿಗೆ ಪುಡಿಯನ್ನು ಬೇಳೆಗೆ ಹಾಕಿ. ಇದರ ನಂತ್ರ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಬಹುದು. ಈರುಳ್ಳಿ, ಟೊಮೊಟೊ ಹಾಕುವವರಿದ್ದರೆ, ಎಣ್ಣೆಯಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಟೊಮೊಟೊವನ್ನು ಹುರಿದು ನಂತ್ರ ಇದಕ್ಕೆ ಹಾಕಬಹುದು. ಒಂದೇ ವೇಳೆ ಬೇಳೆಯನ್ನು ಬೇರೆ ಆಹಾರಕ್ಕೆ ಬಳಸಿಕೊಳ್ಳುವುದಾಗಿದ್ದರೆ ಪ್ರೆಶರ್ ಸಂಪೂರ್ಣ ಹೊರ ಹೋದ ಮೇಲೆ ತೆಗೆಯಿರಿ. ಆತುರದಲ್ಲಿ ತೆಗೆದರೆ ಅದು ಸಂಪೂರ್ಣವಾಗಿ ಬೆಂದಿರುವುದಿಲ್ಲ. 

REUSE COOKING OIL: ಅಡುಗೆ ಎಣ್ಣೆ ಮರುಬಳಕೆ ಮಾಡಿದ್ರೆ ಏನಾಗುತ್ತೆ ಗೊತ್ತಾ?

ದಾಲ್ ತಯಾರಿಸುವಾಗ ಈ ವಿಷ್ಯವನ್ನು ನೆನಪಿನಲ್ಲಿಟ್ಟುಕೊಳ್ಳಿ : 
-ಕುಕ್ಕರ್‌ನಲ್ಲಿ ದಾಲ್ ಬೇಯಿಸುವಾಗ ಅತಿಯಾಗಿ ಬೇಳೆ ಹಾಗೂ ಒಪ್ಪನ್ನು ಹಾಕಬೇಡಿ. ಕುಕ್ಕರ್ ಸಾಮರ್ಥ್ಯಕ್ಕಿಂತ ಹೆಚ್ಚು ಬೇಳೆ ಹಾಗೂ ನೀರು ಹಾಕಿದ್ರೆ ಅದು ಹೊರಗೆ ಬರಲು ಶುರುವಾಗುತ್ತದೆ.   
-ಬೇಳೆಗಿಂತ ಹೆಚ್ಚು ನೀರನ್ನು ಕುಕ್ಕರ್ ಗೆ ಹಾಕಿದ್ರೆ ಆಗ ನೀರು ಕುಕ್ಕರ್ ನಿಂದ ಹೊರ ಬರಲು ಶುರುವಾಗುತ್ತದೆ.
-ಸಣ್ಣ ಕುಕ್ಕರ್‌ಗಳಿಗೆ ದೊಡ್ಡ ಗ್ಯಾಸ್ ಬರ್ನರ್ ಬಳಸುವುದ್ರಿಂದಲೂ ಸಮಸ್ಯೆಯಾಗುತ್ತದೆ.  ಬೇಳೆಯನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಬಾರದು.   

click me!