ಮುಟ್ಟಿನ ವೇಳೆ ಹೊಟ್ಟೆನೋವು, ತಲೆನೋವು, ಮೂಡ್‌ಸ್ವಿಂಗ್ಸ್‌ನಿಂದ ಹೆಣ್ಣುಮಕ್ಕಳು ಅನುಭವಿಸುವ ಕಷ್ಟಿಷ್ಟಲ್ಲ. ಇದೆಲ್ಲದರ ಮಧ್ಯೇನೆ ಕಾಲೇಜು, ಆಫೀಸು, ಮನೆಗೆಲಸಗಳನ್ನು ಮಾಡಬೇಕಾಗುತ್ತದೆ. ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳ ಈ ಕಷ್ಟವನ್ನು ಅರಿತುಕೊಂಡಿರುವ ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಿದೆ. ಈ ಮೂಲಕ ಇಂಥ ಕ್ರಮ ಕೈಗೊಂಡ ದೇಶದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊಚ್ಚಿ: ಋತುಚಕ್ರದ ವೇಳೆ ಮಹಿಳೆಯರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಮುಟ್ಟಿನ ವೇಳೆ ಕೆಲವು ಹೆಣ್ಣು ಮಕ್ಕಳು ಪಡುವ ನೋವು ಹೇಳತೀರದು. ಗರ್ಭಾಶಯದಲ್ಲಿನ ಸಂಕೋಚನದ ಕಾರಣದಿಂದ ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಬೆನ್ನು ನೋವು, ಕಾಲು ನೋವಿನ ಜೊತೆ ತಲೆನೋವು, ವಾಂತಿ, ವಾಕರಿಕೆಯೂ ಬರುತ್ತದೆ. ಇದು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಕಿರಿಕಿರಿ ಉಂಟುಮಾಡುತ್ತದೆ. ಈ ಸಮಯದಲ್ಲಿ ಅವರಿಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ಇಂಥಾ ಸಂದರ್ಭದಲ್ಲೂ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಲೇಜು, ಆಫೀಸ್‌ಗೆ ಹೋಗಬೇಕಾಗುತ್ತದೆ. ಮನೆಗೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಮಹಿಳೆಯರ ಇಂಥಾ ಸಮಸ್ಯೆಯನ್ನು ಮನಗಂಡ ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು (CUSAT) ತನ್ನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಲು ಮುಂದಾಗಿದೆ.
ದೇಶದ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿದ ಕೇರಳದ ಕೊಚ್ಚಿ ವಿವಿ
ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ಕೇರಳದ ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಸಿಯುಎಸ್‌ಎಟಿ) ನಿರ್ಧರಿಸಿದೆ. ಈ ಮೂಲಕ ಇಂಥ ಕ್ರಮ ಕೈಗೊಂಡ ದೇಶದ ಮೊದಲ ವಿವಿ ಎನ್ನಿಸಿಕೊಂಡಿದೆಭಾರತೀಯ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸೇರಿದಂತೆ ವಿದ್ಯಾರ್ಥಿಗಳ ಒಕ್ಕೂಟದ ಒತ್ತಾಯದ ಮೇಲೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೊಚ್ಚಿ ವಿವಿ ತಿಳಿಸಿದೆ. ಕಡಿಮೆ ಹಾಜರಾತಿ (Atttendence) ಹೊಂದಿರುವ ಸಂದರ್ಭದಲ್ಲಿ ಒಂದು ಸೆಮಿಸ್ಟರ್‌ನ ಶೇ.2ರಷ್ಟುರಜೆಯನ್ನು ವಿದ್ಯಾರ್ಥಿನಿಯರು ಮುಟ್ಟಿನ ರಜೆಯೆಂದು (Periods leave) ಬದಲಾಯಿಸಿಕೊಳ್ಳಬಹುದು ಎಂದು ಅದು ತಿಳಿಸಿದೆ. . ಮಹಿಳಾ ಸ್ನೇಹಿ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. . ಮಹಿಳಾ ಸ್ನೇಹಿ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Womens Health: ಚಳಿಗಾಲದಲ್ಲಿ ಪೀರಿಯೆಡ್ಸ್ ಲೇಟ್, ಯಾಕಿಷ್ಟು ಯಾತನೆ?
60 ದಿನದ ಹೆರಿಗೆ ರಜೆ ಹೆರಿಗೆ ರಜೆ ಘೋಷಿಸಿದ್ದ ಮಹಾತ್ಮ ಗಾಂಧಿ ಮಹಾತ್ಮ ಗಾಂಧಿ ವಿವಿ
ಶೇ.75ರಷ್ಟಿರುವ ಕಡ್ಡಾಯ ಹಾಜರಾತಿ ಹೊಂದಿದವರು ಮಾತ್ರ ಪರೀಕ್ಷೆಗೆ (Exam) ಅರ್ಹರು ಆದರೆ ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿನಿಯರು ರಜೆಯ ಶೇ.2ರಷ್ಟನ್ನು ಮುಟ್ಟಿನ ರಜೆಯೆಂದು ಘೋಷಿಸಿಕೊಳ್ಳಬಹುದಾಗಿದೆ. ಆದರೆ ಉಪಕುಲಪತಿಗಳಿಗೆ ಮುಟ್ಟಿನ ರಜೆ ಘೋಷಿಸಿಕೊಂಡಿರುವುದಾಗಿ ವಿದ್ಯಾರ್ಥಿನಿಯರು ಪತ್ರ ಬರೆಯಬೇಕು ಎಂದು ತಿಳಿಸಿದೆ. ಪಿಎಚ್‌ಡಿ ಸೇರಿದಂತೆ ವಿವಿಧ ವಲಯದ ಕಾಲೇಜಿನ ಸುಮಾರು 4,000 ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯಿಂದ ಅನುಕೂಲವಾಗಲಿದೆ. ಈಗಾಗಲೇ ಬಿಹಾರದಲ್ಲಿ ಮಹಿಳಾ ನೌಕರರಿಗೆ 1992ರಿಂದಲೇ ಮುಟ್ಟಿನ ರಜೆ ಇದೆ. ಕಳೆದ ತಿಂಗಳು ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರಿಗೆ 60 ದಿನದ ಹೆರಿಗೆ ರಜೆ (Maternity leave) ಘೋಷಿಸಿತ್ತು.
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಕುಸಾಟ್) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಯ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವಿಶ್ವವಿದ್ಯಾನಿಲಯವು ಕೊನೆಗೂ ವಿದ್ಯಾರ್ಥಿನಿಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ. ಇದರಿಂದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
Menstrual Leave: ಸ್ವಿಗ್ಗಿ, ಜೊಮಾಟೊ ನಂತ್ರ ಮುಟ್ಟಿನ ನೋವು ಅರ್ಥವಾಗಿದೆ ಈ ಕಂಪನಿಗೆ
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 4000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ದಿನಗಳಲ್ಲಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡುವಂತೆ ವಿವಿಧ ವಿದ್ಯಾರ್ಥಿ ಸಂಘಗಳು ಬಹುಕಾಲದಿಂದ ಒತ್ತಾಯಿಸುತ್ತಾ ಬಂದಿದ್ದವು.
"ಇದು ಪ್ರತಿ ವಿದ್ಯಾರ್ಥಿನಿಗೆ ವಿಭಿನ್ನವಾಗಿರುತ್ತದೆ. ಪ್ರತಿ ವಿದ್ಯಾರ್ಥಿನಿಯು ತಮ್ಮ ಒಟ್ಟು ಹಾಜರಾತಿಯಲ್ಲಿ ಎರಡು ಪ್ರತಿಶತವನ್ನು ಮುಟ್ಟಿನ ರಜೆಯೆಂದು ತೆಗೆದುಕೊಳ್ಳಬಹುದು. ಅದಕ್ಕಾಗಿಯೇ ಆದೇಶದಲ್ಲಿ ನಿಖರವಾದ ರಜೆಯ ಸಂಖ್ಯೆಯನ್ನು ನಮೂದಿಸಲಾಗಿಲ್ಲ," ಎಂದು ವಿವಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದೇಶದ ಪ್ರಕಾರ, ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ಎಲ್ಲಾ ಸ್ಟ್ರೀಮ್‌ಗಳ ವಿದ್ಯಾರ್ಥಿನಿಯರಿಗೆ ಹೊಸ ಯೋಜನೆ ಅನ್ವಯಿಸುತ್ತದೆ ಮತ್ತು ತಕ್ಷಣದಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ.