ವಿಚ್ಛೇದನದ ನಂತ್ರ ರಿಲ್ಯಾಕ್ಸ್ , ಸಕ್ಸಸ್ ಆಯ್ತು ಡಿವೋರ್ಸ್ ಕ್ಯಾಂಪ್

Published : Jul 17, 2025, 12:26 PM ISTUpdated : Jul 17, 2025, 12:29 PM IST
 Divorce camp

ಸಾರಾಂಶ

ಕೇರಳದಲ್ಲಿ ಮೊದಲ ಡಿವೋರ್ಸ್ ಕ್ಯಾಂಪ್ ನಡೆದಿದೆ. ಇದ್ರಲ್ಲಿ ಪಾಲ್ಗೊಂಡ ಮಹಿಳೆಯರು ನೋವು ಮರೆತು ಲೈಫ್ ಎಂಜಾಯ್ ಮಾಡಿದ್ದಾರೆ. 

ಡಿವೋರ್ಸ್ (Divorce) ಜೀವನದ ಅಂತ್ಯ ಅಂತ ಭಾವಿಸೋರಿದ್ದಾರೆ. ಹಿಂಸಾತ್ಮಕ, ನೆಮ್ಮದಿ ಇಲ್ಲದ, ಪ್ರೀತಿರಹಿತ ಸಂಬಂಧದಲ್ಲಿ ಮುಂದುವರೆಯುವುದಕ್ಕಿಂತ ವಿಚ್ಛೇದನ ಉತ್ತಮ ಆಯ್ಕೆ. ಸಮಾಜಕ್ಕೆ ಹೆದರಿ ಅನೇಕ ಮಹಿಳೆಯರು ಈಗ್ಲೂ ಡಿವೋರ್ಸ್ ತೆಗೆದುಕೊಳ್ಳುವ ಧೈರ್ಯ ಮಾಡೋದಿಲ್ಲ. ಹಿಂದೆ ಭಾರತದಲ್ಲಿ ಡಿವೋರ್ಸ್ ದೊಡ್ಡ ಅಪರಾಧವಾಗಿತ್ತು. ವಿಚ್ಛೇದಿತ ಮಹಿಳೆಗೆ ಎಲ್ಲಿಯೂ ಗೌರವ ಸಿಗ್ತಿರಲಿಲ್ಲ. ಆದ್ರೀಗ ಜನರು ಬದಲಾಗ್ತಿದ್ದಾರೆ. ದಾಂಪತ್ಯಕ್ಕಿಂತ ನೆಮ್ಮದಿಯ ಸ್ವಾತಂತ್ರ್ಯ (Freedom) ಮುಖ್ಯ ಎಂಬುದನ್ನು ಅರಿಯುತ್ತಿದ್ದಾರೆ. ಯಾವುದೇ ಭಯವಿಲ್ಲದೆ ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ತಿದ್ದಾರೆ. ಡಿವೋರ್ಸ್ ನಂತ್ರ ಜೀವನ ಮುಗೀತು ಎನ್ನುವ ನೋವಿನಲ್ಲಿ ನಾಲ್ಕು ಗೋಡೆ ಮಧ್ಯೆ ಬಂಧಿಯಾಗದೆ ಬಂದಿದ್ದೆಲ್ಲವನ್ನು ಎದುರಿಸುತ್ತಿದ್ದಾರೆ. ಡಿವೋರ್ಸ್ ಸಿಗ್ತಿದ್ದಂತೆ ಪಾರ್ಟಿ ಮಾಡಿದ್ದ ಮಹಿಳೆಯರು ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ವು. ಈಗ ಡಿವೋರ್ಸ್ ಪಡೆದ ಮಹಿಳೆಯರ ಕ್ಯಾಂಪ್ ಒಂದು ಸುದ್ದಿಗೆ ಬಂದಿದೆ. ಕೇರಳದಲ್ಲಿ ಇದೇ ಮೊದಲ ಬಾರಿ ಡಿವೋರ್ಸ್ ಕ್ಯಾಂಪ್ ಆಯೋಜನೆ ಮಾಡಲಾಗಿತ್ತು.

ಕ್ಯಾಲಿಕಟ್ನ ಕಂಟೆಂಟ್ ಕ್ರಿಯೇಟರ್ ರಫಿಯಾ ಅಫಿ ಎಂಬುವವರು ಇತ್ತೀಚೆಗೆ ಕೇರಳದಲ್ಲಿ ಮೊದಲ ಡಿವೋರ್ಸ್ ಶಿಬಿರವನ್ನು ಆಯೋಜಿಸಿದ್ದರು. ಈ ಕ್ಯಾಂಪ್ ಮೂಲತಃ ವಿಚ್ಛೇದಿತ, ಪತಿಯಿಂದ ಬೇರ್ಪಟ್ಟ ಅಥವಾ ವಿಧವೆ ಮಹಿಳೆಯರ ಗುಂಪಿಗೆ ಒಂದು ಮೋಜಿನ ಪ್ರವಾಸವಾಗಿತ್ತು. ಹೊಸ ಮತ್ತು ಉತ್ತಮ ಜನರನ್ನು ಭೇಟಿ ಮಾಡುವುದು, ಅವರ ನಡುವೆ ಸಂಬಂಧ ಬೆಸೆಯುವುದು, ಸಂತೋಷವನ್ನು ಹಂಚುವುದು, ನೋವನ್ನು ಮರೆಯುವುದು ಈ ಕ್ಯಾಂಪ್ ಗುರಿಯಾಗಿತ್ತು. ರಾಜ್ಯಾದ್ಯಂತ ಹಲವಾರು ಮಹಿಳೆಯರು ಈ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದರು. ಹಾಡ್ತಾ, ಡಾನ್ಸ್ ಮಾಡ್ತಾ, ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡ್ತಾ ಶಿಬಿರವನ್ನು ಸಂಪೂರ್ಣ ಯಶಸ್ವಿಗೊಳಿಸಿದ್ರು ಮಹಿಳೆಯರು.

ಡಿವೋರ್ಸ್ ಕ್ಯಾಂಪ್ ವೀಡಿಯೊವನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿ ಅನೇಕ ಮಹಿಳೆಯರು ಎಂಜಾಯ್ ಮಾಡ್ತಿರೋದನ್ನು ನೀವು ನೋಡ್ಬಹುದು. ಮಾಹಿತಿ ಪ್ರಕಾರ, ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ತಮ್ಮ ನೋವಿನ ಕಥೆಯನ್ನು ಎಲ್ಲರ ಮುಂದೆ ಹಂಚಿಕೊಂಡ್ರು. ಬ್ರೇಕ್ ಫ್ರೀ ಸ್ಟೋರೀಸ್, ಹಿಟ್ ಆಯ್ತು. ಡಿವೋರ್ಸ್ ಕ್ಯಾಂಪ್ ಪೋಸ್ಟ್ ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಡಿವೋರ್ಸ್ ಕ್ಯಾಂಪನ್ನು ಬಹುತೇಕ ಎಲ್ಲರೂ ಹೊಗಳಿದ್ದಾರೆ. ಪಾಸಿಟಿವ್ ರಿಯಾಕ್ಷನ್ ನೀಡಿದ್ದಾರೆ. ನೆಟ್ಟಿಗರಿಗೆ ಈ ಡಿವೋರ್ಸ್ ಕ್ಯಾಂಪ್ ಇಷ್ಟವಾದಂತಿದೆ.

ನಾವು ಮಕ್ಕಳಂತೆ ನಕ್ಕಿದ್ದೇವೆ. ನಾವು ಯೋಧರಂತೆ ಅತ್ತಿದ್ದೇವೆ. ನಾವು ಪರ್ವತಗಳಲ್ಲಿ ಕಿರುಚಿದ್ದೇವೆ. ನಕ್ಷತ್ರಗಳ ಕೆಳಗೆ ಡಾನ್ಸ್ ಮಾಡಿದ್ದೇವೆ. ಬೇರೆ ಯಾರಿಗೂ ಅರ್ಥವಾಗದ ಕಥೆಗಳನ್ನು ಹಂಚಿಕೊಂಡಿದ್ದೇವೆ. ಅಪರಿಚಿತರು ಸಹೋದರಿಯರಾಗಿದ್ದಾರೆ ಅಂತ ಈ ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಈ ಮಹಿಳೆಯರು ಅದ್ಭುತ ಧೈರ್ಯವನ್ನು ತೋರಿಸಿದ್ದಾರೆ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಕೇರಳೀಯರಾಗಿ, ಇದು ತುಂಬಾ ಒಳ್ಳೆಯ ನಿರ್ಧಾರ. ಇಂಥ ವಿಚ್ಛೇದನ ಶಿಬಿರಗಳು ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡುತ್ತದೆ ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಿಜವಾಗಿಯೂ ಉತ್ತಮ ಕೆಲ್ಸ. ಮಹಿಳೆಯರು ಇತರ ಮಹಿಳೆಯರಿಗೆ ಸಹಾಯ ಮಾಡುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಇದು ನಿಜವಾಗಿಯೂ ಒಳ್ಳೆಯ ನಿರ್ಧಾರ ಎಂದು ಮತ್ತೊಬ್ಬರು ಬರೆದಿದ್ದಾರೆ. ಇವರ ಜೀವನ ಸುಂದರವಾಗಿ ಬದಲಾಗುತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!