ಮೈ ತುಂಬಾ ಬಟ್ಟೆ ಇದ್ರೂ ರವಿಕೆಯತ್ತ ಇಣುಕಿ ನೋಡಿದ ವ್ಯಕ್ತಿ, ಕೇರಳದ ಕಂಟೆಂಟ್ ಕ್ರಿಯೇಟರ್‌ ವಿಡಿಯೋ ವೈರಲ್

Published : Sep 04, 2025, 07:23 PM IST
Kerala influencer video

ಸಾರಾಂಶ

ಮಹಿಳೆ ಕೇರಳದ ಸಾಂಪ್ರದಾಯಿಕ ಸೀರೆಯನ್ನು ಧರಿಸಿದ್ದಾರೆ. ಮಧ್ಯವಯಸ್ಕ ವ್ಯಕ್ತಿಯೊಬ್ಬರು ಅವರ ಪಕ್ಕದಲ್ಲಿ ಕುಳಿತಿದ್ದಾರೆ. ಇಲ್ಲಿಂದ ಆರಂಭವಾಗುತ್ತೆ ನೋಡಿ ಅವರಿಗೆ ಕೆಟ್ಟ ಅನುಭವ...

ತಮ್ಮ ಕೆಟ್ಟ ಕೆಲಸವನ್ನ ಸಮರ್ಥಿಸಿಕೊಳ್ಳಲು ಮಹಿಳೆಯರ ಉಡುಪುಗಳ ಬಗ್ಗೆಯೇ ದೂಷಿಸುವ ಅನೇಕ ಜನರಿದ್ದಾರೆ. "ಅವರು ಹುಡುಗರನ್ನು ಆಕರ್ಷಿಸಿದ ಬಟ್ಟೆಗಳನ್ನು ಧರಿಸಿರಬೇಕು" ಎಂದು ಹೇಳುತ್ತಾರೆ. ಅಂತಹ ಸಂಕುಚಿತ ಮನಸ್ಸಿನ ಜನರಿಗೆ ತಪ್ಪು ಉಡುಪಿನದ್ದಲ್ಲ, ನಿಮ್ಮ ಆಲೋಚನೆ ಕೊಳಕಾಗಿರಬಾರದು ಎಂದರೆ ಅರ್ಥವಾಗುವುದಿಲ್ಲ.

ಇಷ್ಟೆಲ್ಲಾ ಯಾಕೆ ಹೇಳಬೇಕಾಯ್ತು ಅಂದ್ರೆ ಕೇರಳದ ಕಂಟೆಂಟ್ ಕ್ರಿಯೇಟರ್‌ (Kerala-Based Content Creator) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತನಗಾದ ಕಿರುಕುಳದ ಘಟನೆಯ ವಿಡಿಯೋ (Bus Harassment Experience) ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಜನದಟ್ಟಣೆ ಇರುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಜೊತೆಗೆ ಕೇರಳದ ಸಾಂಪ್ರದಾಯಿಕ ಸೀರೆಯನ್ನು ಧರಿಸಿದ್ದಾರೆ ಮತ್ತು ಮಧ್ಯವಯಸ್ಕ ವ್ಯಕ್ತಿಯೊಬ್ಬರು ಅವರ ಪಕ್ಕದಲ್ಲಿ ಕುಳಿತಿದ್ದಾರೆ. ಇಲ್ಲಿಂದ ಆರಂಭವಾಗುತ್ತೆ ನೋಡಿ ಅವರಿಗೆ ಕೆಟ್ಟ ಅನುಭವ...

ವಿಡಿಯೋ ಮಾಡಿದ್ದು ಇದೇ ಉದ್ದೇಶಕ್ಕೆ!
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಮಹಿಳೆ ತನ್ನ ಫೋನ್‌ನ ಸೆಲ್ಫಿ ಕ್ಯಾಮೆರಾದೊಂದಿಗೆ ವಿಡಿಯೋ ಮಾಡುತ್ತಿರುವುದನ್ನು ಮತ್ತು ಅವಳ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಪದೇ ಪದೇ ಕೆಟ್ಟ ಉದ್ದೇಶದಿಂದ ಆ ಮಹಿಳೆಯನ್ನು ನೋಡುತ್ತಿರುವುದನ್ನು ಕಾಣಬಹುದು. ಇದೆಲ್ಲವೂ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ ಮಹಿಳೆ ಅವನ ಕಡೆಗೆ ನೋಡಿದಾಗ ಆ ಪುರುಷನು ಏನೂ ಆಗಿಲ್ಲ ಎಂಬಂತೆ ಸ್ವಲ್ಪ ಸಮಯದವರೆಗೆ ಇನ್ನೊಂದು ದಿಕ್ಕಿನಲ್ಲಿ ನೋಡಲು ಪ್ರಾರಂಭಿಸುತ್ತಾನೆ.

ಆದರೆ ಸ್ವಲ್ಪ ಸಮಯದ ನಂತರ ಅವನು ಮತ್ತೆ ಅದೇ ರೀತಿ ನೋಡಲಾರಂಭಿಸುತ್ತಾನೆ. ಅವನ ನಡವಳಿಕೆ ನೋಡಿದರೆ ಎಂಥವರಿಗೂ ನಾಚಿಕೆಯಾಗುತ್ತದೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ ಕಂಟೆಂಟ್ ಕ್ರಿಯೇಟರ್‌, 'ನೀವು ನನ್ನನ್ನು ತಪ್ಪು ದೃಷ್ಟಿಯಿಂದ ನೋಡಿದರೆ ನಿಮ್ಮ ಕಣ್ಣುಗಳು ಹೊರಬರುತ್ತವೆ. ನಾನು ಇದನ್ನು ಸಿಂಹಿಣಿಯಂತೆ ಹೇಳಿ ಬಸ್ಸಿನಿಂದ ಇಳಿದೆ. ಹೆಮ್ಮೆಯಿಂದ ಓಣಂ ಆಚರಿಸಿದೆ' ಎಂದು ಬರೆದಿದ್ದಾರೆ. ಆಕೆಯ ಪ್ರತಿಕ್ರಿಯೆಯ ನಂತರ, ಆ ವ್ಯಕ್ತಿ ಬೇಗನೆ ಬಸ್ಸಿನಿಂದ ಇಳಿದು ಸ್ಥಳದಿಂದ ಪರಾರಿಯಾದಾನಂತೆ.

"ನಾನು ಈ ರೀಲ್ಸ್‌ ಪೋಸ್ಟ್ ಮಾಡಲು ಕಾರಣವೆಂದರೆ ಕೆಲವರು ಡ್ರೆಸ್ಸಿಂಗ್ ಸಮಸ್ಯೆ ಎಂದು ಹೇಳುತ್ತಾರೆ. ಈ ವಿಡಿಯೋದಲ್ಲಿ ನಾನು ಮೈ ಪೂರ್ತಿ ಬಟ್ಟೆ ಹಾಕಿದ್ದೇನೆ. ಸಾಂಪ್ರದಾಯಿಕ ಹುಡುಗಿಯಂತೆ ಸಾಧಾರಣವಾಗಿ ಧರಿಸಿದ್ದೇನೆ. (Dressed in a traditional Kerala saree)ಹಾಗಾದರೆ ಈಗ ಹೇಳಿ, ನಾನು ಹೇಗೆ ಉಡುಗೆ ತೊಡುತ್ತೇನೆ ಎಂಬುದರ ಬಗ್ಗೆ? ಅದು ನೀವು ಹೇಗೆ ಕಾಣಲು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಬಗ್ಗೆ" ಎಂದು ಬರೆಯಲಾಗಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ…

ಕೋಟಿಗಟ್ಟಲೇ ವೀಕ್ಷಣೆ ಪಡೆದ ವಿಡಿಯೋ
ಈ ವೈರಲ್ ವಿಡಿಯೋವನ್ನು @angel__baby0 ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಕೇವಲ ಒಂದು ದಿನದಲ್ಲಿ ಈ ವಿಡಿಯೋವನ್ನು 3 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕೇವಲ ಒಂದು ದಿನದಲ್ಲಿ ಈ ವಿಡಿಯೋ 333,394 ಲೈಕ್‌ಗಳನ್ನು ಪಡೆದುಕೊಂಡಿದೆ.

ನೆಟ್ಟಿಗರು ಹೇಳಿದ್ದೇನು?
ಅನೇಕ ಜನರು ವಿಡಿಯೋ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದು, ಮಹಿಳೆಯ ಫಾಲೋವರ್ಸ್ 'ಮಧ್ಯದಲ್ಲಿ ನೇರವಾಗಿ ಹೊಡೆದು ಮುಗಿಸಿ' ಎಂದು ಬರೆದಿದ್ದಾರೆ. ಮತ್ತೆ ಕೆಲವರು 'ಒಬ್ಬ ಮಹಿಳೆಯಾಗಿ ಸಾಮಾನ್ಯ ದಿನ...ನೀವು ಸಂಪೂರ್ಣವಾಗಿ ಬಟ್ಟೆ ಧರಿಸಿದ್ದರೂ ಸಹ' ಎಂದಿದ್ದಾರೆ. 'ಓ ದೇವರೇ... ಇದು ತುಂಬಾ ಅನಾನುಕೂಲಕರವಾಗಿದೆ... ನೀವು ಸೀರೆ ಕುಪ್ಪಸವನ್ನು ಏಕೆ ಧರಿಸಿದ್ದೀರಿ? ಬದಲಿಗೆ ಸ್ಟ್ರೈಟ್‌ಜಾಕೆಟ್ ಧರಿಸಿ. ಕ್ಷಮಿಸಿ, ನೀವು ಒಬ್ಬ ಮಹಿಳೆ, ಪುರುಷರು ಇನ್ನೂ ನಿಮ್ಮನ್ನು ಕಿರುಕುಳ ಮಾಡುತ್ತಾರೆ' ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನ ನಾವು ನೋಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!