ಫಳ ಫಳ ಹೊಳೆವ ಮುಖಕ್ಕೆ ಕ್ಯಾರೆಟ್​ ಆಯಿಲ್: ಮನೆಯಲ್ಲಿಯೇ ರೆಡಿ ಮಾಡುವ ವಿಧಾನ ತಿಳಿಸಿದ ನಟಿ ಖುಷ್ಬೂ

Published : Mar 05, 2025, 11:14 AM ISTUpdated : Mar 05, 2025, 11:51 AM IST
ಫಳ ಫಳ ಹೊಳೆವ ಮುಖಕ್ಕೆ ಕ್ಯಾರೆಟ್​ ಆಯಿಲ್: ಮನೆಯಲ್ಲಿಯೇ ರೆಡಿ ಮಾಡುವ ವಿಧಾನ ತಿಳಿಸಿದ ನಟಿ ಖುಷ್ಬೂ

ಸಾರಾಂಶ

ಖುಷ್ಬೂ ಸುಂದರ್ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 80-90ರ ದಶಕದಲ್ಲಿ ಟಾಪ್ ನಟಿಯಾಗಿದ್ದರು. ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ 55 ವರ್ಷ ವಯಸ್ಸಿನ ಖುಷ್ಬೂ ತಮ್ಮ ಹೊಳೆಯುವ ತ್ವಚೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಕ್ಯಾರೆಟ್ ಎಣ್ಣೆ ಮಸಾಜ್ ಮಾಡುವ ವಿಧಾನವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಾರಿ ಪೂಜೆ ಸ್ವೀಕರಿಸಿದ್ದರು.

ಸದ್ಯ ನಟಿ ಖುಷ್ಬೂ ಸುಂದರ್​ ನಟನೆಯಿಂದ ದೂರ ಉಳಿದು ರಾಜಕೀಯದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಅಷ್ಟಕ್ಕೂ ಖುಷ್ಬೂ 80-90ರ ದಶಕದ ಟಾಪ್ ಒನ್​ ನಟಿಯಾಗಿ ಮಿಂಚಿದವರು. ತಮ್ಮ ಸೌಂದರ್ಯದಿಂದಲೇ ಪಡ್ಡೆ ಹುಡುಗರ ಹೃದಯ ಕದ್ದವರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಖುಷ್ಬೂ ಸುಂದರ್. ಕನ್ನಡಿಗರು ಇವರನ್ನು ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವುದು  ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಜೊತೆ ನಟಿಸಿದ ಸಿನಿಮಾಗಳ ಮೂಲಕ. ಈ ಜೋಡಿಯ ರಣಧೀರ, ಅಂಜದ ಗಂಡು ಮತ್ತು ಯುಗ ಪುರುಷ ಚಿತ್ರಗಳಲ್ಲಿ ರವಿಚಂದ್ರನ್-ಖುಷ್ಬೂ ಜೋಡಿ ಕೆಲಸ ಮಾಡಿತ್ತು. ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ದಿಗ್ಗಜರೊಂದಿಗೆ ನಟಿಸಿರೋ ನಟಿ, ಇದೀಗ   ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಖುಷ್ಬೂ ತುಂಬಾನೇ ಆಕ್ಟೀವ್ ಆಗಿದ್ದಾರೆ. ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.   ತಮಿಳುನಾಡಿನಲ್ಲಿ ಇವರ ಫ್ಯಾನ್ಸ್​ ಇವರ ಬೃಹದಾಕಾರದ ಪ್ರತಿಮೆಯನ್ನೂ ಸ್ಥಾಪಿಸಿದ್ದಾರೆ. 

ಅದಿತಿ ಸೌಂದರ್ಯದ ಗುಟ್ಟು ಮನೆಯಲ್ಲೇ ಮಾಡುವ ಫೇಸ್​ ಪ್ಯಾಕ್​, ಬಾಡಿ ಮಸಾಜ್​! ನಟಿ ತಿಳಿಸಿರೋ ಟಿಪ್ಸ್​ ಕೇಳಿ

ಇಂತಿಪ್ಪ ನಟಿ ಇದೀಗ ತಮ್ಮ ಫಳ ಫಳ ಹೊಳೆಯುವ ತ್ವಚೆಯ ರಹಸ್ಯವನ್ನು ತೆರೆದಿಟ್ಟಿದ್ದಾರೆ. ವಿಡಿಯೋ ಮೂಲಕ ತಾವು ಹೇಗೆ ಮಸಾಜ್​ ಮಾಡಿಕೊಳ್ಳುತ್ತೇವೆ ಎನ್ನುವುದನ್ನು ಹೇಳಿದ್ದಾರೆ. ಕ್ಯಾರೆಟ್​ ಆಯಿಲ್​  ಮಸಾಜ್​ ಕುರಿತು ನಟಿ ವಿವರಿಸಿದ್ದಾರೆ. ನಟಿಗೆ ಈಗ 55 ವರ್ಷ ವಯಸ್ಸು. ಈಗಲೂ ಹೊಳೆಯುವ ತ್ವಚೆ ಹೊಂದಿರುವ ನಟಿ ಅದರ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಮನೆಯಲ್ಲಿಯೇ ಈ ಎಣ್ಣೆಯನ್ನು ಮಾಡಿಕೊಳ್ಳಬಹುದು ಎಂದು ನಟಿ ಹೇಳಿದ್ದಾರೆ. 

ಬಾದಾಮಿ, ಆಲಿವ್​ ಮತ್ತು ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಅವುಗಳನ್ನು ಮಿಕ್ಸ್​ ಮಾಡಿ ಅದಕ್ಕೆ ಮೆಡಿಕಲ್​ ಷಾಪ್​ನಲ್ಲಿ ಸಿಗುವ  ವಿಟಾಮಿನ್​-ಎ ಮಾತ್ರೆ ಸೇರಿಸಿ ಇಟ್ಟುಕೊಳ್ಳಬೇಕು. ಒಂದೆರಡು ಕ್ಯಾರೆಟ್​ ಅನ್ನು ತೊಳೆದು ಅದನ್ನು ತುರಿದು ಅದನ್ನು ಚಿಕ್ಕ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಕನಿಷ್ಠ ಎರಡು ಗಂಟೆ ಅದನ್ನು ಬೇಯಿಸಬೇಕು. ಅದನ್ನು ತಣ್ಣಗೆ ಮಾಡಲು ಬಿಡಬೇಕು. ಅದನ್ನು ಮಸಲಿನ್​ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ಅದನ್ನು ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಬೇಕು. ಅದಕ್ಕೆ ಮೇಲೆ ಹೇಳಿದ ಎಣ್ಣೆಗಳ ಮಿಕ್ಸ್​ ಅನ್ನು ಸೇರಿಸಿ ಮಸಾಜ್​ ಮಾಡಿಕೊಳ್ಳಬೇಕು ಎಂದು ನಟಿ ಹೇಳಿದ್ದಾರೆ. ಮಸಾಜ್​ ಅನ್ನು ಯಾವ ರೀತಿ ಮಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ಈ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. 

ಕೆಲ ತಿಂಗಳ ಹಿಂದೆ, ಕೇರಳದಲ್ಲಿ ನಟಿಗೆ ನಾರಿ ಪೂಜೆ ಮಾಡಲಾಗಿದ್ದು, ಇವರ ಕಾಲನ್ನು ತೊಳೆದು ಪೂಜೆ ಸಲ್ಲಿಸಲಾಗಿತ್ತು. ಈ ಕುರಿತು  ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಶೇರ್​  ಮಾಡಿಕೊಂಡಿದ್ದ ನಟಿ, ದೇವರಿಂದ ಆಶೀರ್ವಾದ ಸಿಕ್ಕಿದೆ. ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ಕರೆದಿದ್ದು ನನ್ನ ಅದೃಷ್ಟ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿಗೆ ಕರೆಯಲಾಗುತ್ತೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿದ್ದಕ್ಕೆ ಧನ್ಯವಾದ ಎಂದಿದ್ದರು. ಈ ಆಚರಣೆಯಿಂದ ಇನ್ನೂ ಅನೇಕ ಒಳ್ಳೆಯ ವಿಷಯ ನಮ್ಮದಾಗುತ್ತದೆ. ನನ್ನ ಪ್ರೀತಿಪಾತ್ರರು ಮತ್ತು ಜಗತ್ತು ಸಂತೋಷ ಮತ್ತು ಶಾಂತಿಯುತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟಿ ಖುಷ್ಬೂ ಬರೆದುಕೊಂಡಿದ್ದರು. 

ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್​ ಹೇಗೆ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!