ಮಕ್ಕಳನ್ನು ಪಡೆಯಬೇಕೆಂಬುದು ಎಲ್ಲ ಮಹಿಳೆಯರ ಬಯಕೆ. ಆದ್ರೆ ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ಮಕ್ಕಳನ್ನು ಪಡೆಯಲು ಸಾಧ್ಯವಾಗೋದಿಲ್ಲ. ಐವಿಎಫ್ ಪ್ರಯತ್ನ ಕೂಡ ವೈಫಲ್ಯವಾಗುತ್ತದೆ. ಇದಕ್ಕೆ ಅನೇಕ ಕಾರಣವನ್ನು ವೈದ್ಯರು ಹೇಳ್ತಾರೆ.
ಇತ್ತೀಚಿನ ದಿನಗಳಲ್ಲಿ ಐವಿಎಫ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಅನೇಕ ಮಹಿಳೆಯರು ಮುಂದಾಗ್ತಿದ್ದಾರೆ. ಐವಿಎಫ್ ಎನ್ನುವುದು ಮಹಿಳೆಯ ಗರ್ಭಾಶಯದಲ್ಲಿ ಭ್ರೂಣಗಳನ್ನು ಇರಿಸುವ ಪ್ರಕ್ರಿಯೆಯಾಗಿದೆ. ಐವಿಎಫ್ (IVF) ಪ್ರಕ್ರಿಯೆಯಲ್ಲಿ ವೈದ್ಯ (Doctor) ರು ಮೊದಲು ಮಹಿಳೆಯ ಎಗ್ ಹಾಗೂ ಪುರುಷನ ವೀರ್ಯ ಸಂಗ್ರಹಿಸುತ್ತಾರೆ. ಪ್ರಯೋಗಾಲಯದಲ್ಲಿ ಎಗ್ ಮತ್ತು ವೀರ್ಯವನ್ನು ಸೇರಿಸಿ ಭ್ರೂಣ ತಯಾರಿಸಲಾಗುತ್ತದೆ. ನಂತರ ಈ ಭ್ರೂಣವನ್ನು ಮಹಿಳೆಯ ಗರ್ಭಾಶಯ (Uterus) ಕ್ಕೆ ಸೇರಿಸಲಾಗುತ್ತದೆ. ಈ ಐವಿಎಫ್ ಪ್ರಕ್ರಿಯೆ ಯಶಸ್ವಿಯಾದರೆ ಮಹಿಳೆ ಗರ್ಭಿಣಿ (Pregnant) ಯಾಗುತ್ತಾಳೆ. ಆದರೆ ಕೆಲವು ಸಂದರ್ಭಗಳಲ್ಲಿ ಐವಿಫ್ ವಿಫಲಗೊಳ್ಳುತ್ತದೆ. ಭ್ರೂಣ ಗರ್ಭಾಶಯದಲ್ಲಿ ಸರಿಯಾಗಿ ಸೇರದೆ ಹೋದಲ್ಲಿ ಅದನ್ನು ವಿಫಲ ಐವಿಎಫ್ ಎಂದು ಕರೆಯಲಾಗುತ್ತದೆ. ಐವಿಎಫ್ ವಿಫಲವಾಗಲು ಅನೇಕ ಕಾರಣವಿದೆ. ನಾವಿಂದು ಅದಕ್ಕೆ ಕಾರಣವೇನು ಎಂಬುದನ್ನು ನಿಮಗೆ ಹೇಳ್ತೆವೆ.
ಭ್ರೂಣದ ಗುಣಮಟ್ಟ : ಐವಿಎಫ್ ವಿಫಲವಾಗಲು ಮುಖ್ಯ ಕಾರಣ ಇದಾಗಿದೆ. ಗುಣಮಟ್ಟದ ಭ್ರೂಣದಿಂದ ಮಾತ್ರ ಮಹಿಳೆ ಗರ್ಭ ಧರಿಸಲು ಸಾಧ್ಯ. ಭ್ರೂಣದ ಗುಣಮಟ್ಟ ಕಳಪೆಯಾಗಿದ್ದರೆ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಐವಿಎಫ್ ಕೆಲ ಸಮಯ ಸಫಲವಾದಂತೆ ಕಂಡ್ರೂ ನಂತ್ರ ಗರ್ಭಪಾತಕ್ಕೊಳಗಾಗುವ ಸ್ಥಿತಿ ನಿರ್ಮಾಣವಾಗುತ್ತದೆ.
LEMON LEAVES BENEFITS: ನಿಂಬೆ ಹಣ್ಣಿನಲ್ಲಿ ಮಾತ್ರವಲ್ಲ ಎಲೆಯಲ್ಲೂ ಇದೆ ಔಷಧಿ ಗುಣ
ಐವಿಎಫ್ ವಿಫಲತೆಗೆ ಸ್ಥೂಲಕಾಯ ಕಾರಣ: ಬೊಜ್ಜು ಮಹಿಳೆಯರ ಬಂಜೆತನಕ್ಕೆ ಮುಖ್ಯ ಕಾರಣ. ಐವಿಎಫ್ ವಿಫಲವಾಗಲೂ ಈ ಸ್ಥೂಲಕಾಯ ಕಾರಣವಾಗುತ್ತದೆ. ಅಧಿಕ ತೂಕ ಹೊಂದಿರುವ ಮಹಿಳೆಯಲ್ಲಿ ಭ್ರೂಣದ ಬೆಳವಣಿಗೆಯ ಸಾಧ್ಯತೆ ಕಡಿಮೆ. ಹಾಗಾಗಿಯೇ ಅಧಿಕ ತೂಕ ಹೊಂದಿರುವವರಿಗೆ ಐವಿಎಫ್ ಮೊದಲು ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಹಾಗಂತ ತೂಕ ವಿಪರೀತ ಕಡಿಮೆಯಿದ್ರೂ ಐವಿಎಫ್ ವಿಫಲವಾಗುತ್ತದೆ.
ಅಂಡಾಶಯದಲ್ಲಿ ಸಮಸ್ಯೆ : ಉತ್ತಮ ಗುಣಮಟ್ಟದ ಭ್ರೂಣಕ್ಕೆ ಉತ್ತಮ ಗುಣಮಟ್ಟದ ಎಗ್ ಅಗತ್ಯವಾಗಿರುತ್ತದೆ. ಕೆಲ ಮಹಿಳೆಯರ ಎಗ್, ಕಳಪೆಯಾಗಿರುತ್ತದೆ. ಕಳಪೆ ಎಗ್, ಐವಿಎಫ್ ವಿಫಲತೆಗೆ ಕಾರಣವಾಗುತ್ತದೆ. ಕಡಿಮೆ ಗುಣಮಟ್ಟದ ಎಗ್ ಗೆ ಕಳಪೆ ಅಂಡಾಶಯದ ಪ್ರತಿಕ್ರಿಯೆ ಕಾರಣವಾಗಿರುತ್ತದೆ.
ವಯಸ್ಸಿನ ಸಮಸ್ಯೆ : ಐವಿಎಫ್ ಯಶಸ್ವಿಯಾಗಲು ವಯಸ್ಸು ಕೂಡ ಕಾರಣವಾಗುತ್ತದೆ. ವಯಸ್ಸು ಹೆಚ್ಚಾದಂತೆ ಅಂಡಾಣು ಮತ್ತು ವೀರ್ಯದ ಗುಣಮಟ್ಟ ಕಡಿಮೆಯಾಗತೊಡಗುತ್ತದೆ. ಪುರುಷರಲ್ಲಿ 45 ವರ್ಷ ವಯಸ್ಸಿನ ನಂತರ ವೀರ್ಯದ ಗುಣಮಟ್ಟ ಕಡಿಮೆಯಾಗಬಹುದು. ಆದರೆ ಮಹಿಳೆಯರಲ್ಲಿ 35 ವರ್ಷದ ನಂತರ ಎಗ್ ಗುಣಮಟ್ಟ ಹದಗೆಡುತ್ತದೆ. ವಂಶಾಭಿವೃದ್ಧಿ ಪ್ಲಾನ್ ಇದ್ದರೆ ಆದಷ್ಟು ಬೇಗ ಮಕ್ಕಳನ್ನು ಪಡೆಯುವುದು ಒಳ್ಳೆಯದು. ವಯಸ್ಸಾದ್ಮೇಲೆ ಐವಿಎಫ್ ಗೆ ಮುಂದಾದ್ರೆ ಐವಿಎಫ್ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಗರ್ಭಾಶಯದಲ್ಲಿ ಸಮಸ್ಯೆ : ಮಹಿಳೆ ಆರೋಗ್ಯ ಕೂಡ ಇಲ್ಲಿ ಮುಖ್ಯವಾಗುತ್ತದೆ. ಗರ್ಭಾಶಯದಲ್ಲಿ ಯಾವುದೇ ಸಮಸ್ಯೆ ಹೊಂದಿದ್ದರೂ ಐವಿಎಫ್ ವೈಫಲ್ಯದ ಸಾಧ್ಯತೆ ಹೆಚ್ಚಾಗುತ್ತದೆ. ಗರ್ಭಾಶಯದಲ್ಲಿ ಸಮಸ್ಯೆ ಇದ್ದಲ್ಲಿ ಭ್ರೂಣ ಅಳವಡಿಕೆಗೆ ಅಡ್ಡಿಯಾಗಬಹುದು. ಗರ್ಭಾಶಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಹೊಂದಿದ್ದರೂ ಮಹಿಳೆ ಐವಿಎಫ್ ಮಾಡುವ ಮೊದಲು ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಬದಲಾದ ಜೀವನಶೈಲಿ: ಐವಿಎಫ್ ವಿಫಲತೆಗೆ ನಮ್ಮ ಜೀವನ ಶೈಲಿ ಕೂಡ ಕಾರಣವಾಗುತ್ತದೆ. ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರದಂತಹ ಅಭ್ಯಾಸಗಳು ಐವಿಎಫ್ ವಿಫಲತೆಗೆ ಕಾರಣವಾಗಬಹುದು. ಹಾಗಾಗಿ ಐವಿಎಫ್ ಗೆ ಮುನ್ನ ನಮ್ಮ ಜೀವನ ಶೈಲಿಯಲ್ಲಿ ಸುಧಾರಣೆ ತರಬೇಕು. ನಿತ್ಯ ವ್ಯಾಯಾಮ, ಯೋಗಗಳನ್ನು ಅಭ್ಯಾಸ ಮಾಡುವ ಜೊತೆಗೆ ಧೂಮಪಾನದಂತಹ ಅನಾರೋಗ್ಯಕರ ಚಟದಿಂದ ದೂರವಿರಬೇಕು.
ಸೌಂದರ್ಯ ಹೆಚ್ಚಿಸೋದ್ರಿಂದ ಆರೋಗ್ಯ ವೃದ್ಧಿವರೆಗೂ ಕಿತ್ತಳೆ ಹೂವಿಂದ ಎಷ್ಟೆಲ್ಲಾ ಪ್ರಯೋಜವಿದೆ ಗೊತ್ತಾ?
ಐವಿಎಫ್ ವಿಫಲತೆಗೆ ಕಾರಣವಾಗಬಹುದು ಹಾರ್ಮೋನ್ ಅಸಮತೋಲನ : ಮಹಿಳೆಯರ ಹಾರ್ಮೋನಿನಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣಬಹುದು. ಹಾರ್ಮೋನ್ ಬದಲಾವಣೆಯಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಅದ್ರಲ್ಲಿ ಗರ್ಭಧಾರಣೆ ಕೂಡ ಸೇರಿದೆ. ಹಾರ್ಮೋನುಗಳು ಅಸಮತೋಲನಗೊಂಡಾಗ ಐವಿಎಫ್ ಪ್ರಕ್ರಿಯೆಯು ವಿಫಲವಾಗುತ್ತದೆ.