ಕೆಲಸ ಸಿಗಲಿಲ್ಲವೆಂದು ಹಿಂದಿರುಗಿದ ಪೋಷಕರಿಗೆ ಸಿಕ್ತು ಗುಡ್ ನ್ಯೂಸ್; ದಿನಗೂಲಿ ಕಾರ್ಮಿಕರ ಪುತ್ರಿ ರಾಜ್ಯಕ್ಕೆ ಟಾಪರ್

Published : Jun 01, 2025, 07:19 PM IST
rekha

ಸಾರಾಂಶ

ದಿನಗೂಲಿ ಕಾರ್ಮಿಕರ ಪುತ್ರಿ ರೇಖಾ ತಿರ್ಕಿ ವಾಣಿಜ್ಯ ವಿಷಯದಲ್ಲಿ 468 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಸ್ವಯಂ ಅಧ್ಯಯನವೇ ಯಶಸ್ಸಿನ ಗುಟ್ಟು ಎನ್ನುವ ರೇಖಾ, ದೊಡ್ಡ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ.

ದಿನಗೂಲಿ ಕಾರ್ಮಿಕರ ಪುತ್ರಿ ರೇಖಾ ತಿರ್ಕಿ ವಾಣಿಜ್ಯ ವಿಷಯದಲ್ಲಿ 468 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ . "ಕಾಲೇಜಿನಲ್ಲಿ ನಿಯಮಿತವಾಗಿ ಅಧ್ಯಯನ ಮಾಡುವುದು ಮತ್ತು ಸ್ವಯಂ ಅಧ್ಯಯನ ತಮ್ಮ ಯಶಸ್ಸಿನ ರಹಸ್ಯ" ಎಂದು ಹೇಳಿರುವ ರೇಖಾ, ಬೆಳಗ್ಗೆ ಮನೆಕೆಲಸಗಳನ್ನು ಮಾಡುತ್ತಲೇ ಓದಲು ಕುಳಿತುಕೊಳ್ಳುತ್ತಿದ್ದರು. ಆ ನಂತರ ಸಣ್ಣ ವಿರಾಮ ತೆಗೆದುಕೊಂಡು ಬೆಳಗ್ಗೆಯಿಂದ ಸಂಜೆಯವರೆಗೆ ಅಧ್ಯಯನ ಮಾಡುತ್ತಿದ್ದರು. ಪ್ರಸ್ತುತ ಅವರು ಶೇ 93.3 ಅಂಕಗಳನ್ನು ಗಳಿಸುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ದಿನಗೂಲಿ ಕಾರ್ಮಿಕರ ಮಗಳು ರಾಜ್ಯಕ್ಕೆ ಟಾಪರ್
ರೇಖಾ ಅವರ ಪೋಷಕರು ದಿನಗೂಲಿ ಕಾರ್ಮಿಕರು. ಶನಿವಾರ ಬೆಳಗ್ಗೆಯೂ ಇಬ್ಬರೂ ಕೆಲಸ ಹುಡುಕಿಕೊಂಡು ತಮ್ಮ ಬಾಡಿಗೆ ಮನೆಯಿಂದ ಹೊರಟರು. ಆದರೆ ಹಲವು ದಿನಗಳಂತೆ ಇಂದೂ ಅವರಿಗೆ ಕೆಲಸ ಸಿಗಲಿಲ್ಲ. ಆದರೆ ಮನೆಗೆ ಹಿಂದಿರುಗಿದಾಗ, ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ ಬೋರ್ಡ್) ನಡೆಸಿದ 12 ನೇ ವಾಣಿಜ್ಯ ವಿಭಾಗದಲ್ಲಿ ತಮ್ಮ ಮಗಳು ಸ್ಟೇಟ್ ಟಾಪರ್ ಆಗಿದ್ದಾಳೆಂದು ಅವರಿಗೆ ತಿಳಿಯಿತು.

ದೊಡ್ಡ ಅಧಿಕಾರಿಯಾಗಬೇಕೆಂಬ ಆಸೆ
ರೇಖಾ ಅವರ ತಾಯಿ ತನ್ನ ಮಗಳ ಯಶಸ್ಸಿಗೆ ಅವಳ ಕಠಿಣ ಪರಿಶ್ರಮವೇ ಕಾರಣ ಎಂದು ಹೇಳಿದ್ದಾರೆ. "ಮಗಳು ತನ್ನ ಕಠಿಣ ಪರಿಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾಳೆ. ಓದಿಗೆ ಯಾವಾಗಲೂ ಸಪೋರ್ಟ್ ಮಾಡುತ್ತಿದ್ದ ನಾವು ತಮ್ಮ ಮಗಳನ್ನು ಅವಳ ಪಾಡಿಗೆ ಓದಲು ಬಿಡುತ್ತಿದ್ದೆವು" ಎಂದು ಹೇಳಿದ್ದಾರೆ. ತಮ್ಮ ಮಗಳು ದೊಡ್ಡ ಅಧಿಕಾರಿಯಾಗಬೇಕೆಂದು ರೇಖಾ ಪೋಷಕರ ಕನಸು. ಏಕೆಂದರೆ ಇದರಿಂದ ಅವರು ಒಳ್ಳೆಯ ಮನೆ ಕಟ್ಟಿಕೊಂಡು ಚೆನ್ನಾಗಿ ಬದುಕಬಹುದೆಂದು ಎಂದು ತಿಳಿಸಿದ್ದಾರೆ.

ನಗರದ ಶಾಲೆಗೆ ಕರೆದುಕೊಂಡು ಹೋಗುವುದು ಕಷ್ಟವಾಗುತ್ತಿತ್ತು ಎಂದು ಹೇಳಿರುವ ರೇಖಾ ತಾಯಿ, ಕೂಲಿಗೆ ಕೆಲಸಕ್ಕೆ ಹೋಗುವುದು ಕಷ್ಟಕರವಾಗಿತ್ತು. ಹಾಗಾಗಿ ರಾಂಚಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನೆರೆಹೊರೆಯಲ್ಲಿ ವಾಸಿಸುವ ಯುವತಿಯೊಬ್ಬಳಿಗೆ ತನ್ನ ಮಗ ಮತ್ತು ಮಗಳಿಗೆ ಶಿಕ್ಷಣ ನೀಡುವಂತೆ ವಿನಂತಿಸಿಕೊಂಡೆವು. ಸಂಜೆ, ಅವರು ತಮ್ಮ ಮಗಳಿಗೆ ಒಂದು ಗಂಟೆ ಪಾಠ ಮಾಡುತ್ತಿದ್ದರು ಮತ್ತು ಪ್ರತಿಯಾಗಿ, ಅವರು ಬೋಧನಾ ಶುಲ್ಕವಾಗಿ 50 ರೂ.ಗಳನ್ನು ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.

ರೇಖಾಳ ತಂದೆ ಹೇಳುವಂತೆ ಹಣ ಬರುವುದು ದುಡಿಮೆಯಿಂದ. ನಾವು ಅದರಿಂದಲೇ ನಮ್ಮ ಕುಟುಂಬವನ್ನು ನಡೆಸುತ್ತೇವೆ. ಇದಲ್ಲದೆ, ಶಿಕ್ಷಣದ ವೆಚ್ಚವನ್ನು ಸಹ ಬರುವ ಸಂಬಳದ ಮೂಲಕ ಪೂರೈಸಲಾಗುತ್ತದೆ. ತನ್ನ ಮಗಳು ದೊಡ್ಡ ಅಧಿಕಾರಿಯಾಗಬೇಕೆಂದು ಆಸೆ. ಮಗ ಮತ್ತು ಮಗಳು ಇಬ್ಬರೂ ಓದುವುದು ಮುಖ್ಯ ಎಂದು ಹೇಳಿದ್ದಾರೆ. ಮಗಳು ಬೇರೆ ಮನೆಗೆ ಹೋಗುತ್ತಾಳೆಂದು ಯೋಚಿಸುತ್ತಾ ಅಧ್ಯಯನ ಮಾಡದಿರುವುದು ತಪ್ಪು. ಮಗಳು ಕೂಡ ತನ್ನ ಹೆತ್ತವರನ್ನು ನೋಡಿಕೊಳ್ಳುತ್ತಾಳೆ ಎಂದಿದ್ದಾರೆ. ಇಂದಿನ ಕಾಲದಲ್ಲಿ ಶಿಕ್ಷಣ ಬಹಳ ಮುಖ್ಯ ಎಂದು ರೇಖಾ ತಾಯಿ ಕೂಡ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಓದಿ ಸಮಾಜಕ್ಕೆ ಮತ್ತು ತಮ್ಮ ಹೆತ್ತವರಿಗೆ ಕೀರ್ತಿ ತರಬೇಕು. ಮಗಳು ಕೂಡ ಸ್ವಯಂ ಅಧ್ಯಯನದಿಂದ ಯಶಸ್ಸು ಪಡೆದಳು ಎಂದರು.

"ಈ ಯಶಸ್ಸಿನಲ್ಲಿ ತನ್ನ ಪೋಷಕರು ಮತ್ತು ಶಿಕ್ಷಕರ ಸಂಪೂರ್ಣ ಬೆಂಬಲ ಸಿಕ್ಕಿದೆ. ಈ ಹಿಂದೆ ಹಲವು ಬಾರಿ ತನ್ನ ಪೋಷಕರಿಂದ ಶಿಕ್ಷಣಕ್ಕಾಗಿ ಹಣ ಕೇಳುವಾಗ ಬೇಸರವಾಗುತ್ತಿತ್ತು. ಸಚಿವೆ ಶಿಲ್ಪಿ ನೇಹಾ ಟಿರ್ಕಿ 1 ಲಕ್ಷ ರೂ. ದೇಣಿಗೆ ನೀಡಿರುವುದರಿಂದ ನನಗೆ ತುಂಬಾ ಸಹಾಯಕವಾಗಿದೆ. ಭವಿಷ್ಯದಲ್ಲಿ ಅಕೌಂಟ್ಸ್ ಆನರ್ಸ್ ಶಿಕ್ಷಣವನ್ನು ಮುಂದುವರಿಸಲು ಬಯಸುತ್ತೇನೆ" ಎಂದು ರೇಖಾ ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!