Indoor Plants Care: ಚಳಿಗಾಲದಲ್ಲಿ ಒಣಗದಿರಲಿ ಒಳಾಂಗಣ ಸಸ್ಯ

By Suvarna NewsFirst Published Jan 28, 2022, 6:56 PM IST
Highlights

ನಗರ ಪ್ರದೇಶಗಳಲ್ಲಿ ಮನೆಯ ಒಳಗೆ ಹಸಿರು ವಾತಾವರಣ ಸೃಷ್ಟಿಸುವ ಆಸೆ ಉಂಟಾಗುವುದು ಸಹಜ. ಬಾಹ್ಯ ಕಲುಷಿತ ಗಾಳಿಯ ಬದಲು ಉತ್ತಮ ಆಕ್ಸಿಜನ್ ನೀಡುವ ಸಸ್ಯಗಳನ್ನು ಮನೆಯೊಳಗೇ ಬೆಳೆಯುವುದು ಬಹುತೇಕರ ಆಸೆ. ಆದರೆ, ಅವು ಚಳಿಗಾಲದಲ್ಲಿ ಸಮಸ್ಯೆ ತಂದೊಡ್ಡುತ್ತವೆ. ಹೀಗಾಗಿ, ವಿಶೇಷ ಆರೈಕೆ ಮಾಡಬೇಕು.
 

ಮನೆಯ ಒಳಾಂಗಣ (Indoor) ವನ್ನು ಸುಂದರವಾಗಿಟ್ಟುಕೊಳ್ಳಬೇಕು, ವಾತಾವರಣ ಫ್ರೆಶ್ (Fresh) ಎನಿಸಬೇಕು, ಮನೆಯೊಳಗೆ ಹಸಿರು (Green) ನಲಿಯಬೇಕು ಎನ್ನುವ ಆಸೆಯಿಂದ ಸಾಕಷ್ಟು ಜನ ಇನ್ ಡೋರ್ ಪ್ಲಾಂಟ್ (Plant) ಗಳನ್ನು ಬೆಳೆಸುತ್ತಾರೆ. ಮನೆಯ ಒಳಾವರಣದಲ್ಲಿ ಬೆಳೆಯುವಂತಹ ಹಲವಾರು ಸಸ್ಯಗಳಿದ್ದು, ಅವುಗಳನ್ನು ತಂದು ಆರೈಕೆ ಮಾಡುತ್ತಾರೆ. ಒಳಾಂಗಣ ಸಸ್ಯಗಳಲ್ಲಿ ಕೆಲವಂತೂ ಮೇಲ್ನೋಟಕ್ಕೆ ಕೇವಲ ಅಲಂಕಾರಿಕ ಸಸ್ಯಗಳೆಂಬಂತೆ ಭಾಸವಾದರೂ ಉತ್ತಮ ಮಟ್ಟದಲ್ಲಿ ಆಕ್ಸಿಜನ್ (Oxygen) ನೀಡುವ ಸಸ್ಯಗಳೂ ಇವೆ. ಆದರೆ, ಚಳಿಗಾಲ(Winter)ದಲ್ಲಿ ಅವು ಚೆನ್ನಾಗಿ ಬೆಳೆಯುವುದಿಲ್ಲ ಅಥವಾ ಸತ್ತೇ ಹೋಗುತ್ತವೆ. ಇದು ಅನೇಕರ ಅನುಭವಕ್ಕೂ ಬಂದಿರಬಹುದು. ಹೀಗಾಗಿ, ಚಳಿಗಾಲದಲ್ಲಿ ಇನ್ ಡೋರ್ ಪ್ಲಾಂಟ್ಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಒಳಾಂಗಣ ಸಸ್ಯಗಳನ್ನು ಆರೋಗ್ಯವಾಗಿಡಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ, ಮನೆಯ ಹೊರಗೆ ಬೆಳೆಯುವ ಸಸ್ಯಗಳ ಹಾಗೆ ಅವುಗಳಿಗೆ ಬೆಳಕು (Light), ಶಾಖ (Warmth), ಗಾಳಿ (Wind) ದೊರೆಯುವುದಿಲ್ಲ. ಹೀಗಾಗಿ, ವಿಶೇಷ ಗಮನ ಅಗತ್ಯ.

•    ಎಲ್ಲಿ ಬೆಳಕು, ಶಾಖ ಸಿಗುತ್ತದೆಯೋ ಅಲ್ಲಿಗೆ ರವಾನಿಸಿ
ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚು ಶಾಖ ಬೇಕಾಗುತ್ತದೆ. ಹೀಗಾಗಿ, ಮನೆಯ ಯಾವ ಭಾಗದಲ್ಲಿ ಹೆಚ್ಚು ಬೆಳಕು, ಶಾಖ ಸಿಗುತ್ತದೆಯೋ ಅಲ್ಲಿಗೆ ಒಳಾಂಗಣ ಸಸ್ಯಗಳನ್ನು ರವಾನಿಸಬೇಕು. ಗಿಡದಿಂದ ಗಿಡಕ್ಕೆ ವ್ಯತ್ಯಾಸವಿರುತ್ತದೆಯಾದರೂ ಸಾಮಾನ್ಯವಾಗಿ ಅವುಗಳಿಗೆ ಈ ಸಮಯದಲ್ಲಿ ಶಾಖ ಬೇಕಾಗುತ್ತದೆ. ಆದರೆ, ನೇರವಾಗಿ ಬಿಸಿಲಿ(Sunlight)ಗೆ ಇಟ್ಟರೆ ಅವು ಸತ್ತು (Dead) ಹೋಗುತ್ತವೆ. ಹೀಗಾಗಿ, ನೆರಳೂ ಇರಬೇಕು, ಶಾಖವೂ ದೊರೆಯಬೇಕು, ಅಂತಹ ಸ್ಥಳದಲ್ಲಿ ಅವುಗಳನ್ನು ಇರಿಸುವುದು ಕ್ಷೇಮ.

ಮನಿ ಪ್ಲಾಂಟ್ ನೆಡಲು ಇಲ್ಲಿವೆ ಟಿಪ್ಸ್

•    ನೀರಿನ (Water) ಪ್ರಮಾಣ ಕಡಿಮೆ ಮಾಡಿ
ಚಳಿಗಾಲದಲ್ಲಿ ಒಳಾಂಗಣ ಸಸ್ಯಗಳ ಬೆಳವಣಿಗೆ ತೀವ್ರವಾಗಿ ಕುಂಠಿತವಾಗುತ್ತದೆ. ಇದರರ್ಥ ಅವುಗಳಿಗೆ ಈ ಸಮಯದಲ್ಲಿ ಕಡಿಮೆ (Less) ನೀರು ಸಾಕು. ಹೆಚ್ಚು ನೀರು ಹಾಕುವುದರಿಂದ ಅವು ಕೊಳೆತುಹೋಗಬಹುದು. ಗಿಡದಿಂದ ಗಿಡಕ್ಕೆ ನೀರಿನ ಅಗತ್ಯದಲ್ಲಿ ವ್ಯತ್ಯಾಸವಿರುತ್ತದೆ. ಅದನ್ನು ಗಮನಿಸಿ ನೀರುಣಿಸಬೇಕು. 

•    ರೂಮಿನ ತಾಪಮಾನ (Temperature) ನಿಯಂತ್ರಿಸಿ
ತಾಪಮಾನ ಬದಲಾವಣೆಯನ್ನು ಬಹಳಷ್ಟು ಒಳಾಂಗಣ ಸಸ್ಯಗಳು ಸಹಿಸಿಕೊಳ್ಳಲಾರವು. ಅಂದರೆ, ನೀವು ಸಸ್ಯಗಳನ್ನು ಇರಿಸಿರುವ ಸ್ಥಳಕ್ಕೆ  ಕಿಟಕಿ (Window) ಅಥವಾ ಬಾಗಿಲ (Door) ಮೂಲಕ ತಣ್ಣನೆಯ ಗಾಳಿ ಸೋಕುವುದು ಹಾಗೂ ಫ್ರಿಡ್ಜ್ ಅಥವಾ ಇನ್ನಿತರ ವಿದ್ಯುತ್ ಸಲಕರಣೆ(Electronic Items) ಗಳಿಂದ ಬಿಸಿಯೂ ಸೋಕುವುದು ಆದಾಗ ಅವು ಬಾಡಿ ಹೋಗುತ್ತವೆ. ಹೀಗಾಗಿ, ಸಸ್ಯಗಳಿರುವ ಮನೆಯೊಳಗೆ ಒಂದೇ ರೀತಿಯ ಸ್ಥಿರವಾದ ತಾಪಮಾನ ಇರಿಸುವುದು ಮುಖ್ಯ.

•    ಕೋಣೆಯಲ್ಲಿನ ತೇವಾಂಶ (Humidity) ಗಮನಿಸಿ
ಒಳಾಂಗಣ ಸಸ್ಯಗಳು ಸಾಮಾನ್ಯವಾಗಿ ತಂಪನೆಯ ಸ್ಥಳದಲ್ಲಿ ಮಾತ್ರ ಹೊಂದಿಕೊಂಡಿರುತ್ತವೆ. ಚಳಿಗಾಲದಲ್ಲಿ ನೀವು ಮನೆಯೊಳಗೆ ಹೀಟರ್ ಹಾಕಿದಾಗ ಅಥವಾ ಬೆಂಕಿಯ ಶಾಖ ಇರಿಸಿದಾಗ ವಾತಾವರಣದಲ್ಲಿ ಶುಷ್ಕತೆ ಆವರಿಸುತ್ತದೆ. ಮನೆಯೊಳಗೆ ತೇವಾಂಶ ಇಲ್ಲದೆ ಹೋದಾಗ ಅವು ಒಣಗುತ್ತವೆ. ಹೀಗಾಗಿ, ಮನೆಯೊಳಗಿನ ವಾತಾವರಣದ ಬಗ್ಗೆ ಗಮನವಿಡಿ.

ವಾಸ್ತು ದೋಷ ದೂರ ಮಾಡೋ ಗಿಡಗಳಿವು

•    ಸ್ವಚ್ಛವಾಗಿಡಿ (Keep Clean)
ಒಳಾಂಗಣ ಸಸ್ಯಗಳನ್ನು ಸ್ವಚ್ಛವಾಗಿಡುವುದು ಅತಿ ಮುಖ್ಯ. ಒಂದೊಮ್ಮೆ ಅವುಗಳ ಮೇಲೆ ಧೂಳು ಕವಿದು ಕೂತಿದ್ದರೆ ಕೀಟಗಳನ್ನು ಸೆಳೆಯಬಹುದು. ಆಗ ಸಸ್ಯಗಳಿಗೆ ಹಾನಿಯಾಗಬಹುದು. ಒಂದು ಎಲೆಯನ್ನು ಕೀಟ ಕೊರೆತಿದ್ದರೂ ಅದನ್ನು ಕಿತ್ತು ಸ್ವಚ್ಛ ಮಾಡಬೇಕು. ಇವುಗಳನ್ನು ಬ್ರಷ್ (Brush) ನಿಂದಲೇ ಚೊಕ್ಕಟಗೊಳಿಸುವುದು ಸೂಕ್ತ. ಬಳಿಕ, ನೀರನ್ನು ಸ್ಪ್ರೇ (Sprey) ಮಾಡಬೇಕು. ಬುಡದಲ್ಲಿ ಗಿಡದಿಂದ ಬಿದ್ದ ಎಲೆ ಇಲ್ಲದ ಹಾಗೆ ನೋಡಿಕೊಳ್ಳಬೇಕು. ಆಗಾಗ ಸ್ವಚ್ಛಗೊಳಿಸಬೇಕು. 
 

click me!