ಅನೇಕ ಕಾರಣಗಳಿಗೆ ತಾಯಿಯಾಗುವ ಅವಕಾಶ ಕೆಲ ಮಹಿಳೆಯರಿಗೆ ಸಿಗುವುದಿಲ್ಲ. ಮುದ್ದಾದ ಮಗುವನ್ನು ಮಡಿಲಲ್ಲಿ ಮಲಗಿಸಿಕೊಳ್ಳುವ ಬಯಕೆ ಸದಾ ಇರುತ್ತದೆ. ಮಗು ಪಡೆಯಲು ಬಾಡಿಗೆ ತಾಯಿಯ ಹುಡುಕಾಟ ನಡೆಸುತ್ತಾರೆ. ಲಕ್ಷಾಂತರ ರೂಪಾಯಿ ನೀಡಿದ್ರೆ ಆ ದೇಶದಲ್ಲಿ ಬೇಕಾದಷ್ಟು ತಾಯಂದಿರು ಸಿಕ್ತಾರೆ.
ತೊದಲು ನುಡಿಯಲ್ಲಿ ಮಕ್ಕಳು (Children) ಅಮ್ಮಾ (Monther )ಎಂದಾಗ ಆಗುವ ಸಂತೋಷ (Happiness)ವನ್ನು ವರ್ಣಿಸಲು ಸಾಧ್ಯವಿಲ್ಲ. ಮಹಿಳೆ ಮಗುವಿಗೆ ಜನ್ಮ ನೀಡುತ್ತ ಪುನರ್ಜನ್ಮ ಪಡೆಯುತ್ತಾಳೆ. ಆದ್ರೆ ಕರುಳಿನ ಕುಡಿಯನ್ನು ಎತ್ತಿ ಆಡಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ.ಇದಕ್ಕೆ ಅನೇಕ ಕಾರಣಗಳಿವೆ. ಗರ್ಭಧಾರಣೆ ಸಾಧ್ಯವಾಗದ ಮಹಿಳೆಯರು ಹಿಂದೆ ನೋವಿನಲ್ಲಿ ಜೀವನ ನಡೆಸುತ್ತಿದ್ದರು. ಕೆಲವರು ಮಕ್ಕಳನ್ನು ದತ್ತು ಪಡೆದು ಅವರಿಗೆ ಹೊಸ ಜೀವನ ನೀಡುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅನೇಕ ವಿಧಾನಗಳ ಮೂಲಕ ಮಕ್ಕಳನ್ನು ಪಡೆಯಬಹುದಾಗಿದೆ. ಅದ್ರಲ್ಲಿ ಬಾಡಿಗೆ ತಾಯಿ ವಿಧಾನವೂ ಒಂದು. ವಿಶ್ವದಾದ್ಯಂತ ಅನೇಕ ದಂಪತಿ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವ ಜನರು ಇದನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ಭಾರತದಂತಹ ದೇಶದಲ್ಲಿ ಈ ವಿಷ್ಯವನ್ನು ಗೌಪ್ಯವಾಗಿಡಲಾಗುತ್ತದೆ. ಆದ್ರೆ ವಿಶ್ವದ ಒಂದು ದೇಶದಲ್ಲಿ ಬಾಡಿಗೆ ತಾಯಿಯನ್ನು ಒಂದು ಬ್ಯುಸಿನೆಸ್ ರೀತಿಯಲ್ಲಿ ನೋಡಲಾಗ್ತಿದೆ. ಇಂದು ಆ ದೇಶ ಯಾವುದು? ಅಲ್ಲಿ ಬಾಡಿಗೆ ತಾಯಂದಿರಿಗೆ ಎಷ್ಟು ಹಣ ಸಿಗುತ್ತೆ ಎಂಬ ವಿಷ್ಯವನ್ನು ಹೇಳ್ತೆವೆ.
ಈ ದೇಶದಲ್ಲಿ ಬ್ಯುಸಿನೆಸ್ (Business) ಆಗ್ತಿದೆ ಬಾಡಿಗೆ ತಾಯ್ತನ : ಯುಕ್ರೇನ್ (Ukraine),ಬಾಡಿಗೆ ತಾಯ್ತನಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಿದೆ. ಇದರ ನಂತ್ರ ಯುಕ್ರೇನ್ ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ವರ್ಷ ಈ ದೇಶದಲ್ಲಿ ಸಾವಿರಾರು ಮಕ್ಕಳು ಜನಿಸ್ತಿದ್ದಾರೆ. ಇದೇ ಕಾರಣಕ್ಕೆ ಇದನ್ನು ಬಾಡಿಗೆ ತಾಯ್ತನದ ಫ್ಯಾಕ್ಟರಿ ಎಂದು ಕರೆಯಲಾಗ್ತಿದೆ. ಮಕ್ಕಳನ್ನು ಪಡೆಯಲು ಬಯಸುವವರು ಯುಕ್ರೇನ್ ಗೆ ಬರ್ತಿದ್ದಾರೆ. ಅಲ್ಲಿ ಬಾಡಿಗೆ ತಾಯಿಗೆ ಹಣ ನೀಡಿ ಮಕ್ಕಳನ್ನು ಪಡೆದು ತಮ್ಮ ದೇಶಕ್ಕೆ ವಾಪಸ್ ಆಗ್ತಿದ್ದಾರೆ.
undefined
ಬಾಡಿಗೆ ತಾಯಿಗೆ ತಿಂಗಳಿಗೆ ನೀಡ್ಬೇಕು ಇಷ್ಟು ಹಣ : ಯುಕ್ರೇನ್ ನಲ್ಲಿ ಅನೇಕ ಕಂಪನಿಗಳು ಬಾಡಿಗೆ ತಾಯ್ತನದ ಬ್ಯುಸಿನೆಸ್ ಶುರು ಮಾಡಿವೆ. ವಿಶೇಷವೆಂದ್ರೆ ಈ ಕಂಪನಿಗಳು ಪ್ರಚಾರಕ್ಕಾಗಿ ವಿಡಿಯೋ ಹಾಗೂ ಇವೆಂಟ್ ನಡೆಸ್ತವೆ. ಮಕ್ಕಳ ಜೊತೆಗಿರುವ ಪಾಲಕರನ್ನು ನೋಡಿ,ಮಕ್ಕಳಿಲ್ಲದ ದಂಪತಿ ಖುಷಿಯಾಗ್ತಾರೆ. ಈ ಕಂಪನಿಗಳ ಜೊತೆ ಕೈಜೋಡಿಸಿ ಮಕ್ಕಳನ್ನು ಪಡೆಯುವ ಪ್ಲಾನ್ ಮಾಡ್ತಾರೆ. ಬಾಡಿಗೆ ತಾಯಿಗೆ ಮೊದಲು ದಂಪತಿ 11000 ಡಾಲರ್ ಅಂದ್ರೆ 8,00,000 ರೂಪಾಯಿ ನೀಡಬೇಕು. ಇದಾದ್ಮೇಲೆ ಪ್ರತಿ ತಿಂಗಳು 250 ಡಾಲರ್ ಅಂದ್ರೆ 18,000 ರೂಪಾಯಿ ನೀಡಬೇಕಾಗುತ್ತದೆ.
ಯುಕ್ರೇನ್ 2002ರಲ್ಲಿ ಬಾಡಿಗೆ ತಾಯ್ತನಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಿದೆ. ಅದಾದ್ಮೇಲೆ ಅನೇಕ ವಿದೇಶಿ ದಂಪತಿ ಇಲ್ಲಿಗೆ ಬರ್ತಾರೆ. ಬಾಡಿಗೆ ತಾಯ್ತನದ ಪ್ಯಾಕೇಜ್ ಗಳನ್ನೂ ಕಂಪನಿಗಳು ಆಫರ್ ಮಾಡ್ತವೆ. ಅದ್ರ ಬೆಲೆ 30,000 ಡಾಲರ್. ಅಂದ್ರೆ 22ರಿಂದ 23 ಲಕ್ಷ ರೂಪಾಯಿ.
Female Friends: ಸಂತೋಷದ ಜೊತೆ ಆರೋಗ್ಯಕ್ಕೆ ಅತ್ಯುತ್ತಮ ಮದ್ದು ಗೆಳತಿ
ಭಾರತ ಸೇರಿ ನೆರೆ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ : 2015ರಲ್ಲಿ ಭಾರತ,ನೇಪಾಳ ಸೇರಿದಂತೆ ಅನೇಕ ದೇಶಗಳು ಬಾಡಿಗೆ ತಾಯ್ತನದ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿವೆ. ಯುಕ್ರೇನ್ ಇದ್ರ ಲಾಭ ಪಡೆಯುತ್ತಿದೆ. ಮಕ್ಕಳಾಗದಿರುವ ದಂಪತಿ ನೆರವಿಗೆ ಯುಕ್ರೇನ್ ಧಾವಿಸಿದೆ. ಯುಕ್ರೇನ್ ನಲ್ಲಿ ಇದು ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ಅಲ್ಲಿನ ಸರ್ಕಾರ,ಬಾಡಿಗೆ ತಾಯಂದಿರ ಪಟ್ಟಿ ನೀಡಲು ಸಾಧ್ಯವಾಗ್ತಿಲ್ಲ.
ಪ್ರತಿ ವರ್ಷ ಇಲ್ಲಿ ಜನಿಸ್ತಾರೆ ಇಷ್ಟೊಂದು ಮಕ್ಕಳು : ಕೇಳಿದ್ರೆ ಅಚ್ಚರಿಯಾಗ್ಬಹುದು. ಯುಕ್ರೇನ್ ನಲ್ಲಿ ಪ್ರತಿ ವರ್ಷ 2,000 ದಿಂದ 2500 ಮಕ್ಕಳು,ಬಾಡಿಗೆ ತಾಯ್ತನದ ಮೂಲಕ ಜನಿಸ್ತಾರೆ. ವಿಶೇಷವೆಂದ್ರೆ ಈ ಮೂಲಕ ಮಕ್ಕಳನ್ನು ಪಡೆಯುತ್ತಿರುವ ಪಾಲಕರಲ್ಲಿ ಮುಕ್ಕಾಲು ಪಾಲು ಚೀನಾದವರಿದ್ದಾರೆ. ಮಕ್ಕಳಿಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಬಾಡಿಗೆ ತಾಯಂದಿರ ಮೇಲೆ ಶೋಷಣೆಯೂ ಹೆಚ್ಚಾಗ್ತಿದೆ.
National girl child day: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಭಯಾನಕವಾಗಿದೆ ಬಾಡಿಗೆ ತಾಯಂದಿರ ಸ್ಥಿತಿ : ಬಾಡಿಗೆ ತಾಯಂದಿರ ಸ್ಥಿತಿ ಚಿಂತಾಜನಕವಾಗಿದೆ. ಒಂದೇ ಹಾಸಿಗೆ ಮೇಲೆ ಇಬ್ಬರು ಮಲಗುವ ಸ್ಥಿತಿಯಿದೆ. ಸರಿಯಾದ ಯಾವುದೇ ವ್ಯವಸ್ಥೆ ಅವರಿಗಿಲ್ಲ. ಗ್ರಾಮೀಣ ಪ್ರದೇಶದ,ಬಡ ಕುಟುಂಬದಿಂದ ಬಂದ ಮಹಿಳೆಯರನ್ನು ಇದಕ್ಕೆ ಒತ್ತಾಯಿಸಲಾಗುತ್ತದೆ. ಅವರಿಗೆ ಕುಟುಂಬದ ಜೊತೆ ಮಾತನಾಡಲೂ ಅವಕಾಶ ನೀಡಲಾಗುವುದಿಲ್ಲ.