
ಗಂಡು ಮಕ್ಕಳು ದೊಡ್ಡವರಾಗ್ತಿದ್ದಂತೆ ಗಡ್ಡ, ಮೀಸೆ ಬರಲು ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರು, ಕ್ರಿಕೆಟ್ ಸ್ಟಾರ್ಸ್ ಮೀಸೆ, ಗಡ್ಡ ಬಿಡೋದು ಫ್ಯಾಷನ್ ಆಗಿದೆ. ಇದೇ ಕಾರಣಕ್ಕೆ ಅನೇಕ ಯುವಕರು, ಮೀಸೆ ಹಾಗೂ ಗಡ್ಡ ಬೆಳೆಸ್ತಿದ್ದಾರೆ. ಸುಂದರ ಗಡ್ಡಕ್ಕೆ ಅಂತಾನೆ ಮಾರುಕಟ್ಟೆಯಲ್ಲಿ ಕೆಲ ಕ್ರೀಂ ಕೂಡ ಸಿಗುತ್ತದೆ. ಹುಡುಗರಿಗೆ ಗಡ್ಡ, ಮೀಸೆ ಬರಲು ಹಾರ್ಮೋನ್ ಕಾರಣ. ಕೆಲ ಬಾರಿ ಹಾರ್ಮೋನ್ ಕಾರಣಕ್ಕೆ ಹುಡುಗರಿಗೆ ಮೀಸೆ, ಗಡ್ಡ ಬರುವುದಿಲ್ಲ. ಆದ್ರೆ ಹಾರ್ಮೋನ್ ಏರುಪೇರಿನಿಂದಾಗಿ ಮಹಿಳೆಯರಿಗೆ ಗಡ್ಡ ಬರಲು ಶುರುವಾಗುತ್ತದೆ. ಮಹಿಳೆಯರು ಸೌಂದರ್ಯ ಪ್ರಿಯರು. ಐಬ್ರೋದಲ್ಲಿರುವ ಕೂದಲನ್ನೇ ಕತ್ತರಿಸಿ ಅದಕ್ಕೆ ಸುಂದರ ರೂಪ ನೀಡ್ತಾರೆ. ಇನ್ನು ಮೀಸೆ, ಗಡ್ಡ ಬಂದ್ರೆ ಕೇಳ್ಬೇಕಾ? ಮಹಿಳೆಯರು ಕ್ರೀಮ್, ಶೇವಿಂಗ್ ಹೀಗೆ ಬೇರೆ ಬೇರೆ ವಿಧಾನದ ಮೂಲಕ ಬಂದ ಕೂದಲನ್ನು ತೆಗೆಯುತ್ತಾರೆ. ಇಲ್ಲೊಬ್ಬ ಮಹಿಳೆ ಮೀಸೆ ಬಂದ್ರೂ ತಲೆ ಕೆಡಿಸಿಕೊಂಡಿಲ್ಲ. ಆಕೆ ಯಾರು ಹಾಗೆ ಹೆಣ್ಮಕ್ಕಳಿಗೆ ಮೀಸೆ ಬರಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಮೀಸೆ (Mustache) ಇರುವ ಮಹಿಳೆ ಯಾರು ? : ಮೀಸೆ ಇರುವ ಆ ಮಹಿಳೆ ಹೆಸರು ಶೈಜಾ (Shayja). ಇವರು ಕೇರಳ ರಾಜ್ಯದ ಕಣ್ಣೂರಿನವರು. 35 ವರ್ಷದ ಶೈಜಾ ಮೀಸೆ ಅನೇಕರ ಜೋಕ್ ಗೆ ಕಾರಣವಾಗಿದೆ. ಆದ್ರೂ ಆಕೆ ಧೈರ್ಯ ಮಾಡಿ ಮೀಸೆ ಬಿಟ್ಟಿದ್ದಾಳೆ. ನನಗೆ ಮೀಸೆ ಬೆಳೆಸುವುದು ಇಷ್ಟ. ಹಾಗಾಗಿ ನಾನು ಅದನ್ನು ಕತ್ತರಿಸಿಲ್ಲ ಎನ್ನುತ್ತಾಳೆ ಶೈಜಾ. ಅನೇಕರು ಮೀಸೆ ಕತ್ತರಿಸುವಂತೆ ನನಗೆ ಸಲಹೆ ನೀಡಿದ್ದಾರೆ. ಆದ್ರೆ ನನಗೆ ಅದು ಅವಶ್ಯಕ ಎನ್ನಿಸಲಿಲ್ಲ. ಎಂದೂ ನಾನು ಸುಂದರವಾಗಿಲ್ಲ ಎನ್ನುವ ಭಾವನೆ ನನಗೆ ಬರಲಿಲ್ಲ ಎನ್ನುತ್ತಾಳೆ ಶೈಜಾ.
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಈ ಕಾರಣಕ್ಕೆ ಮೀಸೆ ಕತ್ತರಿಸಿಲ್ಲ : ನನಗೆ ಎರಡು ಜೀವನವಿದ್ದರೆ ನಾನು ಒಂದನ್ನು ಜನರಿಗಾಗಿ ಬದುಕುತ್ತಿದ್ದೆ. ಆದ್ರೆ ನನಗೆ ಇರೋದು ಒಂದೇ ಜೀವನ. ನನಗೆ ಇಲ್ಲಿಯವರೆಗೆ 5 ಶಸ್ತ್ರಚಿಕಿತ್ಸೆಯಾಗಿದೆ. ಪ್ರತಿ ಬಾರಿಯೂ ಇದು ಕೊನೆ ಆಪರೇಷನ್ ಎಂದುಕೊಂಡೇ ನಾನು ಥಿಯೇಟರ್ ಗೆ ಹೋಗಿದ್ದೇನೆ. ನನಗೆ ಖುಷಿ ಎನ್ನಿಸುವ ಜೀವನ ನಾನು ನಡೆಸಬೇಕೆಂದು ಆಗ ನನಗೆ ಅನ್ನಿಸಿತು. ಅಲ್ಲಿಂದ ನಾನು ಮೀಸೆ ತೆಗೆಯದಿರುವ ನಿರ್ಧಾರ ಮಾಡಿದೆ ಎನ್ನುತ್ತಾಳೆ.
ಕೂದಲು ಬೆಳೆಯಲು ಕಾರಣವೇನು ? : ಕೆಲವು ಮಹಿಳೆಯರಿಗೆ ದೇಹದ ಕೆಲವು ಭಾಗಗಳಲ್ಲಿ ಹೆಚ್ಚು ಕೂದಲು ಬರುತ್ತದೆ. ಈ ಕೂದಲು ತುಟಿಗಳ ಮೇಲ್ಭಾಗದಲ್ಲಿ, ಗಲ್ಲ, ಎದೆ, ಹೊಟ್ಟೆಯ ಕೆಳಗಿನ ಭಾಗದಲ್ಲಿದೆ ಬೆಳೆಯುತ್ತದೆ. ಕಾಲಾನಂತರದಲ್ಲಿ ಅದು ದಪ್ಪವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ, ಈ ಸ್ಥಿತಿಯನ್ನು ಹಿರ್ಸುಟಿಸಮ್ ಎಂದು ಕರೆಯಲಾಗುತ್ತದೆ. ಶರೀರದಲ್ಲಿ ಮೇಲ್ ಹಾರ್ಮೋನ್ ಹೆಚ್ಚಾಗಿ, ಮಹಿಳಾ ಹಾರ್ಮೋನ್ ಕಡಿಮೆಯಾದಾಗ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.
ಕಂಕುಳ ಕೂದಲು ಉದ್ದ ಬಿಟ್ಕೊಂಡು ಕೋಟಿ ಕೋಟಿ ಗಳಿಸ್ತಾಳೆ ಈಕೆ
ಹಿರ್ಸುಟಿಸಮ್ (Hirsutism) ಎನ್ನುವುದು ನಿಮ್ಮ ದೇಹದ ಕೆಲವು ಭಾಗಗಳಲ್ಲಿ ಹೆಚ್ಚುವರಿ ಕೂದಲು ಬೆಳೆಯುವ ಸ್ಥಿತಿಯಾಗಿದೆ. ಮಹಿಳೆಯರಿಗೆ ಏಕಾಏಕಿ ಕೂದಲು ಬೆಳೆಯಲು ಶುರುವಾಗುವುದಲ್ಲದೆ ಧ್ವನಿಯಲ್ಲಿ ಬದಲಾವಣೆಯಾಗುತ್ತದೆ. ಸ್ತನದ ಗಾತ್ರ ಕಡಿಮೆಯಾಗುತ್ತದೆ.ಸ್ನಾಯುಗಳು ಬೆಳೆಯುತ್ತವೆ. ಸೆಕ್ಸ್ ಡ್ರೈವ್ ಹೆಚ್ಚಾಗುತ್ತದೆ. ಮೊಡವೆ ಕಾಣಿಸಿಕೊಳ್ಳುತ್ತದೆ. ಯಾವ ಮಹಿಳೆಯರಿಗೆ ಪಿಸಿಒಎಸ್ ಸಮಸ್ಯೆ ಇರುತ್ತದೆಯೋ ಅವರಿಗೆ ಈ ಸಮಸ್ಯೆ ಕಾಡುವುದು ಹೆಚ್ಚು. ಇದಕ್ಕೆ ಅನೇಕ ಕಾರಣವಿದೆ. ಆಂಡ್ರೊಜೆನ್ ಉತ್ಪಾದನೆ, ಹೆಚ್ಚಿನ ಔಷಧ, ಋತುಬಂಧದ ನಂತರ ಹೀಗೆ ಅನೇಕ ಕಾರಣಕ್ಕೆ ಇದು ಕಾಡುತ್ತದೆ. ದಕ್ಷಿಣ ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ವಾಸಿಸುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.