ಗರ್ಭಪಾತದ ನೋವನ್ನು ಹೇಳೋಕೆ ಸಾಧ್ಯವಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಗೆ ಗರ್ಭ ಬರಿದಾದ್ರೆ ಅಸಾಧ್ಯವಾದ ನೋವಾಗುತ್ತದೆ. ಗರ್ಭಪಾತಕ್ಕೆ ಅನೇಕ ಕಾರಣವಿದೆ. ಆದರೆ ಗರ್ಭಪಾತವಾದ ತಕ್ಷಣ ಎಲ್ಲರೂ ದೂರುವುದು ಮಹಿಳೆಯನ್ನೇ.
ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆಂದು ಎಲ್ಲ ಮಹಿಳೆಯರು ನೂರಾರು ದೇವರಿಗೆ ಹರಕೆ ಹೊತ್ತಿರುತ್ತಾರೆ. ಯಾವಾಗ್ಲೂ ತೆಗೆದುಕೊಳ್ಳದ ಕಾಳಜಿಯನ್ನು ಗರ್ಭಿಣಿಯಾದಾಗ ತೆಗೆದುಕೊಳ್ತಾರೆ. ಆರೋಗ್ಯದ ಬಗ್ಗೆ ಅತಿ ಹೆಚ್ಚು ಗಮನ ನೀಡ್ತಾರೆ. ಆದ್ರೆ ಅನೇಕರು ಬಯಸಿದಂತೆ ಆಗೋದಿಲ್ಲ. ಮಗು ಹೊರಗೆ ಬರುವ ಮೊದಲೇ ಗರ್ಭಪಾತವಾಗಿರುತ್ತದೆ. ಗರ್ಭಪಾತಕ್ಕೆ ಕಾರಣಗಳು ಹಲವು. ಗರ್ಭಪಾತಕ್ಕೊಳಗಾದ ಹೆಚ್ಚಿನ ಮಹಿಳೆಯರು ಹೆಚ್ಚು ಬಿಸಿಲಿರುವ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಬೇಸಿಗೆಯಲ್ಲಿ ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗಿ ಅದು ಗರ್ಭಕ್ಕೆ ತೊಂದರೆ ನೀಡಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದಲ್ಲದೆ ಬೇಸಿಗೆಯಲ್ಲಿ ಗರ್ಭಾಶಯದಲ್ಲಿ ಕಳಪೆ ರಕ್ತ ಪರಿಚಲನೆಯುಂಟಾಗುವ ಕಾರಣ ಬೇರೆ ಋತುವಿಗಿಂತ ಈ ಋತುವಿನಲ್ಲಿ ಹೆಚ್ಚು ಗರ್ಭಪಾತವಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಗರ್ಭಪಾತಕ್ಕೆ ಮಹಿಳೆ ಕಾರಣವಲ್ಲ !
ಕೆಲಸದ ಒತ್ತಡ, ಗರ್ಭಾವಸ್ಥೆಯಲ್ಲಿ ಲೈಂಗಿಕತೆ, ಭಾರವಾದ ವಸ್ತುಗಳನ್ನು ಎತ್ತುವುದು, ಗರ್ಭನಿರೋಧಕ ಸಾಧನಗಳು ಅಥವಾ ಗರ್ಭಧಾರಣೆಯ ಮೊದಲು ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವುದು ಸೇರಿದಂತೆ ಗರ್ಭಪಾತ (Miscarriage)ಗಳಿಗೆ ಕಾರಣವೆಂದು ಜನರು ನಂಬುವ ಇತರ ಅಂಶಗಳಿವೆ. ಕೆಲವು ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲು ಸಲಹೆ ನೀಡುತ್ತಾರೆ ಮತ್ತು ನಂತರ ಅವರು ಗರ್ಭಪಾತದ ವೇಳೆ ಹಾಗೆ ಮಾಡದಿದ್ದಕ್ಕಾಗಿ ದೂಷಿಸುತ್ತಾರೆ. ಪ್ರತಿಬಾರಿಯೂ ಗರ್ಭಪಾತವಾದಾಗ ಮಹಿಳೆ (Woman)ಯನ್ನೇ ದೂಷಿಸಲಾಗುತ್ತದೆ. ಆದ್ರೆ ಮಹಿಳೆಯರು ಮಾಡುವ ಯಾವುದಾದರೂ ಕಾರಣದಿಂದ ಗರ್ಭಪಾತಗಳು ಸಂಭವಿಸುವುದಿಲ್ಲ ಎನ್ನುತ್ತದೆ ವಿಜ್ಞಾನ (Science). ಹಾಗಾದರೆ ಸಮಾಜವು ಮಹಿಳೆಯರನ್ನೇ ದೂಷಿಸುವುದನ್ನು ಯಾಕೆ ಮಾಡುತ್ತದೆ.
Ayurveda Tips: ಗರ್ಭಪಾತ ತಡೆಯಲು ಆಯುರ್ವೇದ ಸರಳ ಸೂತ್ರಗಳು
ಹಿಂದಿನ ಕಾಲದಲ್ಲಿ ಗರ್ಭಪಾತ ಎಂಬುದು ಹಲವು ಮೂಢನಂಬಿಕೆಗಳನ್ನೂ ಒಳಗೊಂಡಿತ್ತು. ಗರ್ಭಪಾತಕ್ಕೆ ಒಳಗಾದ ಮಹಿಳೆ ಹಿಂದಿನ ಜನ್ಮದಲ್ಲಿ ಏನಾದರೂ ತಪ್ಪು ಮಾಡಿರಬೇಕು ಎಂದು ಹೇಳಲಾಗುತ್ತಿತ್ತು. ಆದರೆ ಇವತ್ತಿಗೆ ಆ ಮೂಢನಂಬಿಕೆಯಿಲ್ಲ. ಆದರೆ ಮಹಿಳೆಯರನ್ನು ದೂಷಿಸುವ ಅಭ್ಯಾಸವೂ ನಿಂತಿಲ್ಲ. ಈಗಲೂ ಮಿಸ್ ಕ್ಯಾರೇಜ್ ಆದಾಗ ಮಹಿಳೆಯನ್ನೇ ದೂರಲಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನವು ಯಾದೃಚ್ಛಿಕವಾಗಿ ಸಂಭವಿಸುವ ವರ್ಣತಂತು ಅಸಹಜತೆಗಳು ಹೆಚ್ಚಿನ ಗರ್ಭಪಾತಗಳಿಗೆ ಕಾರಣವಾಗುತ್ತವೆ ಎಂದು ದೃಢಪಡಿಸಿದೆ. ಮುಖ್ಯವಾಗಿ, ಸ್ತ್ರೀಯರ ದೇಹವು (Body) ಕೇವಲ ಹೊಸ ಜೀವನದ ಅಕ್ಷಯಪಾತ್ರೆಗಳಲ್ಲ ಎಂಬುದನ್ನು ಅಧ್ಯಯನ ತಿಳಿಸಿದೆ. ಅದು ಯಂತ್ರದಂತೆ ಕಾರ್ಯನಿರ್ವಹಿಸುತ್ತಿರಬೇಕು. ಬದಲಾಗಿ, ಭ್ರೂಣದ ಆರೋಗ್ಯ ಮತ್ತು ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡುವಲ್ಲಿ ದೇಹಗಳು ಸಕ್ರಿಯವಾಗಿ ಪಾತ್ರವಹಿಸುತ್ತವೆ ಎಂದು ಸಂಶೋಧನೆ ತೋರಿಸುತ್ತದೆ.
ಗರ್ಭಪಾತ ಆಗುವುದು ಹೇಗೆ ?
ಮಗುವಿನ ಅನುವಂಶಿಕ ರಚನೆಯು ರೂಪುಗೊಂಡಂತೆ, ಒಟ್ಟು ವರ್ಣತಂತುಗಳ ದೋಷಯುಕ್ತ ಸಂಖ್ಯೆಗಳು ಇರಬಹುದು, ಇದು ಮಾನವನ ಸಾಮಾನ್ಯ ಅನುವಂಶಿಕ ರಚನೆಯಲ್ಲ ಎಂದು ದೇಹವು ಅರಿತುಕೊಳ್ಳುತ್ತದೆ. ಆಗ ಗರ್ಭಾವಸ್ಥೆಯ ಬೆಳವಣಿಗೆ ನಿಂತು, ಗರ್ಭಪಾತವಾಗಿ ಪರಿವರ್ತನೆಯಾಗುತ್ತದೆ ಎಂದು ಮುಂಬೈನ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ವೈಶಾಲಿ ಜೋಶಿ ವಿವರಿಸಿದರು. ಇದು ಜನರು ಊಹಿಸುವುದಕ್ಕಿಂತ ಬೇರೆಯದೇ ರೀತಿಯಲ್ಲಿ ಸಂಭವಿಸುತ್ತದೆ. ಗರ್ಭಪಾತವು ಗರ್ಭಾವಸ್ಥೆಯಂತೆಯೇ ನೈಸರ್ಗಿಕ ಕ್ರಿಯೆ ಎಂದು ತಜ್ಞರು ತಿಳಿಸಿದ್ದಾರೆ. ಗರ್ಭಪಾತ ಎಂಬ ಪ್ರಕ್ರಿಯೆಯು ಏನಾದರೂ ತಪ್ಪಾದಾಗ ದೇಹ ಗುರುತಿಸುವ ಮಾರ್ಗವಾಗಿದೆ ಎಂದು ತಿಳಿಸಲಾಗಿದೆ.
ಗರ್ಭಪಾತದ ಬಳಿಕ ದೇಹದ ಶಕ್ತಿ ಹೆಚ್ಚಿಸಲು ಈ ಆಹಾರ ಬೆಸ್ಟ್
ಕೆಲವೊಮ್ಮೆ, ಇಬ್ಬರು ಸಂಗಾತಿಗಳ ಸಂಯೋಜನೆಯು ಆರೋಗ್ಯಕರ ಮಾನವ ಜೀವನವನ್ನು ಬೆಂಬಲಿಸದ ರೀತಿಯಲ್ಲಿ ಇರಬಹುದು. ಗರ್ಭಪಾತವು ಒಂದು ಕಾರ್ಯಸಾಧ್ಯವಾದ, ಆರೋಗ್ಯಕರ ಭ್ರೂಣವನ್ನು ಉಂಟುಮಾಡುವ ಸಾಧ್ಯತೆಯಿಲ್ಲದ ಗರ್ಭಧಾರಣೆಯ ದೇಹದ ಸ್ವಾಭಾವಿಕ ಮುಕ್ತಾಯವಾಗಿದೆ. ಅಂದರೆ, ಇವುಗಳು ಆಕಸ್ಮಿಕವಾಗಿರುತ್ತವೆ. ಗರ್ಭಪಾತಕ್ಕೆ ಮತ್ತು ಪೋಷಕರಿಗೆ ಯಾವುದೇ ಸಂಬಂಧವಿಲ್ಲ. ಪರಿಣಾಮವಾಗಿ, ಗರ್ಭಪಾತಗಳು ಸಂಭವಿಸುವುದನ್ನು ತಡೆಯಲು ಯಾವುದೇ ಮಾರ್ಗವಿಲ್ಲ. ಹೀಗಿದ್ದೂ ಗರ್ಭಪಾತವಾದ ತಕ್ಷಣ ಮಹಿಳೆಯರನ್ನು ದೂಷಿಸುವ ಪ್ರಕ್ರಿಯೆ ಸಾಮಾನ್ಯವಾಗಿದೆ. ಇದರಿಂದಾಗಿ ಕೆಲವೊಮ್ಮೆ ಮಹಿಳೆಯರು ಖಿನ್ನತೆಗೂ ಒಳಗಾಗುತ್ತಾರೆ.
ಗರ್ಭಪಾತದ ನಂತರ, ಮಹಿಳೆಯ ಮೆದುಳು ದುಃಖದ ಕಾರಣದಿಂದಾಗಿ ಅತ್ಯಂತ ದುರ್ಬಲವಾಗಿ ಬದಲಾಗುತ್ತದೆ, ಮತ್ತು ಅವಳು ತನ್ನನ್ನು ದೂಷಿಸಲು ಎಲ್ಲಾ ರೀತಿಯ ತರ್ಕಬದ್ಧವಲ್ಲದ ಕಾರಣಗಳನ್ನು ಕಂಡುಕೊಳ್ಳುತ್ತಾಳೆ. ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ಮದುವೆಗೆ ಮೊದಲು ಲೈಂಗಿಕ ಸಂಬಂಧಗಳನ್ನು ಹೊಂದಿದ್ದರಿಂದ ಗರ್ಭಾವಸ್ಥೆಯಲ್ಲಿ ತನ್ನ ಮಗುವನ್ನು ಕಳೆದುಕೊಂಡಿದ್ದೇನೆ ಎಂದೇ ನಂಬಿದ್ದರು, ಎಂದು ಕ್ಲಿನಿಕಲ್ ಮತ್ತು ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞ ಆರ್ತಿ ಶರ್ಮಾ ಹೇಳುತ್ತಾರೆ.