ಶಾಪಿಂಗ್. ಪ್ರತಿಯೊಬ್ಬರಿಗೂ ಇಷ್ಟವಾಗುವ ಕೆಲಸ. ಬೇರೆ ಊರುಗಳಿಗೆ ಹೋದಾಗ ಶಾಪಿಂಗ್ ಮಾಡ್ಲೇಬೇಕು. ಅದ್ರಲ್ಲೂ ವಾರಣಾಸಿಗೆ ಹೋದಾಗ ಬರಿಗೈನಲ್ಲಿ ಬರೋಕೆ ಸಾಧ್ಯವಾ? ಮನೆ ಮಂದಿಗೆಲ್ಲ ಒಂದಷ್ಟು,ನನಗೊಂದಿಷ್ಟು ಸೀರೆ ಅಂತಾ ಸಿಎಂ ಪತ್ನಿಯರು ಖರೀದಿ ಶುರು ಮಾಡಿದ್ದಾರೆ.
ಶ್ರೀ ಕಾಶಿ ವಿಶ್ವನಾಥ (Shri Kashi Vishwanath ) ಧಾಮ ಎಲ್ಲರ ಗಮನ ಸೆಳೆಯುತ್ತಿದೆ. ಜಗತ್ತಿನ ಜನರ ಕಣ್ಣು ಸದ್ಯ ವಾರಣಾಸಿ ಮೇಲಿದೆ. ಶ್ರೀ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭಕ್ಕೆ ಬಿಜೆಪಿ (BJP) ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು(Chief Ministers) ಮತ್ತು ಉಪಮುಖ್ಯಮಂತ್ರಿಗಳನ್ನು ವಾರಣಾಸಿಗೆ ಆಹ್ವಾನಿಸಲಾಗಿದೆ. ಸುಮಾರು 10 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 12 ರಾಜ್ಯಗಳ ಉಪ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಬಹುತೇಕ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ತಮ್ಮ ಪತ್ನಿಯೊಂದಿಗೆ ವಾರಣಾಸಿಯಲ್ಲಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರೊಂದಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆ ಪ್ರಾರಂಭವಾದರೆ ಇತ್ತ ಪತ್ನಿ (Wife)ಯರು ತಮ್ಮ ನೆಚ್ಚಿನ ಕೆಲಸ ಅಂದರೆ ಶಾಪಿಂಗ್ ಶುರು ಮಾಡಿದ್ದಾರೆ.
ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾದ ವಾರಣಾಸಿಯಲ್ಲಿ ಬನಾರಸಿ (Banarasi) ಸೀರೆ (Saree)ಗಳು ಎಲ್ಲರ ಆಕರ್ಷಣೆ. ಜನಸಾಮಾನ್ಯರಿರಲಿ,ವಿಐಪಿ (VIP )ಇರಲಿ ವಾರಣಾಸಿಗೆ ಬಂದ ಮೇಲೆ ಬನಾರಸಿ ಸೀರೆಯ ರಂಗನ್ನು ಕಣ್ತುಂಬಿಕೊಳ್ಳಲೇಬೇಕು. ಒಂದಿಷ್ಟು ಸೀರೆಗಳ ಖರೀದಿ ನಡೆಯಲೇಬೇಕು. ಇನ್ನು ವಾರಣಾಸಿಗೆ ಬಂದ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳ ಪತ್ನಿಯರು ಇದನ್ನು ಬಿಡುತ್ತಾರಾ? ಗಂಡಂದಿರು ಮೀಟಿಂಗ್ ಗೆ ತೆರಳುತ್ತಿದ್ದಂತೆ ಇವರು ಶಾಪಿಂಗ್ (Shopping) ಗೆ ಪ್ಲಾನ್ ಮಾಡಿದ್ದಾರೆ.
ಒಂದು ಕಡೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಭೆಯಲ್ಲಿ ತಮ್ಮ ಪ್ರೆಸೆಂಟೇಶನ್ ಕೊಡುತ್ತಿದ್ದರೆ ,ಮತ್ತೊಂದೆಡೆ ಹೆಂಡತಿಯರ ಶಾಪಿಂಗ್ ಜೋರಾಗಿ ನಡೆದಿದೆ. ಹೆಚ್ಚಿನವರು ಬನಾರಸಿ ಸೀರೆಗಳು ಮತ್ತು ಕೈಯಿಂದ ಮಾಡಿದ ಆಭರಣಗಳ ಖರೀದಿಗೆ ಮನಸ್ಸು ಮಾಡಿದ್ದಾರೆ. ತಮ್ಮ ಅಂಗಡಿಗೆ ಏಕಕಾಲಕ್ಕೆ ಹಲವಾರು ಮುಖ್ಯಮಂತ್ರಿಗಳ ಪತ್ನಿಯರು ಬಂದಿದ್ದನ್ನು ನೋಡಿ ಅಂಗಡಿಯವರು ದಬ್ಬಿಬ್ಬಾದ ದೃಶ್ಯ ಕೂಡ ಕಂಡು ಬಂತು. ಸೀರೆ ಅಥವಾ ಆಭರಣ ಖರೀದಿ ಮಾಡಿದ ಮೇಲೆ ಜನಸಾಮಾನ್ಯರು ಚೌಕಾಸಿ ಮಾಡ್ತಾರೆ. ಸಿಎಂ ಪತ್ನಿಯರು ಹೇಳಿದಷ್ಟು ಹಣ ಕೊಡ್ತಾರೆ. ಹೀಗಂದುಕೊಂಡ ಕೆಲವರಿಗೆ ಸ್ವಲ್ಪ ಇರುಸುಮುರುಸಾಗಿದೆ. ಅಂಗಡಿಯವರು ಹೇಳಿದಷ್ಟು ಹಣ ನೀಡಿದರೂ ಕೆಲ ಸಿಎಂ ಪತ್ನಿಯರು ಚೌಕಾಸಿಗೂ ಪ್ರಯತ್ನಿಸಿದ್ದಾರೆ. ಯಾರ ಪತ್ನಿಯೇ ಇರಲಿ,ಮಹಿಳೆಯರ ಸ್ವಭಾವ ಅದಲ್ವಾ?
ಬೊಮ್ಮಯಿ ಸೇರಿ ಬಿಜೆಪಿ ಸಿಎಂ ಜೊತೆ ಮೋದಿ ಮ್ಯಾರಥಾನ್ ಸಭೆ
undefined
ಇಂದು ಬೆಳಿಗ್ಗೆ ಸಿಎಂ ಪತ್ನಿಯರನ್ನು ಲಾಲ್‌ಪುರ (Lalpur)ದಲ್ಲಿರುವ ದೀನದಯಾಳ್ ಉಪಾಧ್ಯಾಯ ಹಸ್ತಕಲಾ ಸಂಕುಲಕ್ಕೆ ಶಾಪಿಂಗ್‌ಗಾಗಿ ಕರೆತರಲಾಗಿತ್ತು. ಇಲ್ಲಿ ಬನಾರಸಿ ಸೀರೆ, ಮರದ ಆಟಿಕೆಗಳು, ಆಭರಣಗಳಿಂದ ಹಿಡಿದು ಒಂದೇ ಸೂರಿನಡಿ ಇರುವ ಅಲಂಕಾರಿಕ ವಸ್ತುಗಳು ಎಲ್ಲರ ಕಣ್ಮನ ಸೆಳೆದವು. ಎಲ್ಲರೂ ತಮ್ಮ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದರು. ಸಿಎಂ ಪತ್ನಿಯಂದಿರು ಸೀರೆ ಹಾಗೂ ಆಭರಣಗಳನ್ನು ಹೆಚ್ಚು ಖರೀದಿ ಮಾಡಿದ್ದಾರೆ. ರೇಷ್ಮೆಯಿಂದ ಮಾಡಿದ ದುಪಟ್ಟಾ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಈ ದುಪಟ್ಟಾಗಳನ್ನು ಹೆಚ್ಚಿನ ವಿಐಪಿ ಪತ್ನಿಯರು ಇಷ್ಟಪಡುತ್ತಾರೆ ಮತ್ತು ಖರೀದಿಸುತ್ತಾರೆ.
ಇದಕ್ಕೂ ಮುನ್ನ ಸೋಮವಾರ ತಡರಾತ್ರಿವರೆಗೂ ಕಾಶಿಯ ಪೌರಾಣಿಕ ಕ್ಷೇತ್ರಗಳಿಗೆ ಸಿಎಂ ಪತ್ನಿಯಂದಿರು ಭೇಟಿ ನೀಡಿದ್ದರು. ಹಲವು ಮುಖ್ಯಮಂತ್ರಿಗಳು ಕುಟುಂಬ ಸಮೇತ ವಿಶ್ವನಾಥ ದೇಗುಲಕ್ಕೆ ಆಗಮಿಸಿದ್ದರು. ಬೆಳಗ್ಗೆ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದವರಲ್ಲಿ ಉತ್ತರಾಖಂಡ ಸಿಎಂ ಧಾಮಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದ್ದಾರೆ. ಖರೀದಿಗೂ ಮುನ್ನ ಮುಖ್ಯಮಂತ್ರಿಗಳ ಪತ್ನಿಯರು ವಾರಣಾಸಿಯ ಪ್ರಸಿದ್ಧ ಸಂಕಟ ಮೋಚನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ವಿಐಪಿ ಪತ್ನಿಯರು ಸೋಮವಾರ ಸಂಜೆ ನಗರದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ವೀಕ್ಷಿಸಿದ್ದಾರೆ. ಸಿಎಂ,ಉಪ ಸಿಎಂ ಪತ್ನಿಯರ ಜೊತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಪಿ.ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಕೂಡ ಸಾರನಾಥಕ್ಕೆ ಭೇಟಿ ನೀಡಿದ್ದರು.