Pregnancy Care : ಗರ್ಭಾವಸ್ಥೆಯಲ್ಲಿ ಮೆಕ್ಕೆ ಜೋಳ ತಿಂದ್ರೆ ಪರ್ವಾಗಿಲ್ವಾ?

By Contributor AsianetFirst Published Sep 5, 2022, 5:30 PM IST
Highlights

ಮಳೆಗಾಲದಲ್ಲಿ ಬಿಸಿ ಬಿಸಿ ಜೋಳ ತಿನ್ನುವ ಮಜವೇ ಬೇರೆ. ಸಾಮಾನ್ಯರು ಮಾತ್ರವಲ್ಲ ಗರ್ಭಿಣಿಯರು ಕೂಡ ಮೆಕ್ಕೆ ಜೋಳದ ಸವಿ ಸವಿಯಲು ಬಯಕೆ ವ್ಯಕ್ತಪಡಿಸ್ತಾರೆ. ಆದ್ರೆ ಗರ್ಭಾವಸ್ಥೆಯಲ್ಲಿ ಎಲ್ಲವನ್ನೂ ತಿನ್ನುವಂತಿಲ್ಲ. ಹಾಗಾಗಿ ಅದ್ರ ಸೇವನೆಯಿಂದ ಏನೆಲ್ಲ ಲಾಭವಿದೆ, ಏನೆಲ್ಲ ಸಮಸ್ಯೆಯಿದೆ ಎಂಬುದನ್ನು ಮೊದಲು ತಿಳಿದು ನಂತ್ರ ಸೇವನೆ ಮಾಡಿದ್ರೆ ಒಳಿತು.
 

ಮಗುವೊಂದನ್ನು ಗರ್ಭದಲ್ಲಿ ಹೊತ್ತುಕೊಂಡ ತಾಯಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಬೇಕಾಬಿಟ್ಟಿ ತಿನ್ನುವ ಹಾಗಿಲ್ಲ. ಗರ್ಭಿಣಿಯಾದವಳು ಯಾವ ಆಹಾರ ಸೇವನೆ ಮಾಡ್ಬೇಕು? ಯಾವ ಆಹಾರ ಸೇವನೆ ಮಾಡ್ಬಾರದು ಎಂಬುದನ್ನು ತಿಳಿದಿರಬೇಕು. ಸಾಮಾನ್ಯವಾಗಿ ಗರ್ಭಿಣಿಯರಿಗೆ ಜೋಳ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಹಾಗಾದ್ರೆ ಗರ್ಭಾವಸ್ಥೆಯಲ್ಲಿ ಜೋಳ ತಿನ್ನುವುದು ಎಷ್ಟು ಸರಿ? ಹಾಗೆ ಯಾವ ಪ್ರಮಾಣದಲ್ಲಿ ಜೋಳ ಸೇವನೆ ಮಾಡ್ಬೇಕು ಎಂಬೆಲ್ಲ ಪ್ರಶ್ನೆಗೆ ಇಂದು ಉತ್ತರ ನೀಡ್ತೇವೆ.

ಗರ್ಭಾವಸ್ಥೆ (Pregnancy) ಯಲ್ಲಿ ಮೆಕ್ಕೆ ಜೋಳ (Maize) :  ಗರ್ಭಿಣಿ ತನ್ನ ಜೊತೆ ಮಗುವಿನ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಗರ್ಭಿಣಿಗೆ ಯಾವುದೇ ಸಮಸ್ಯೆಯಾದ್ರೂ ಮಗು ಕೂಡ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೆ ಯಾವುದೇ ಆಹಾರ ಸೇವನೆ ಮಾಡುವುದು ಸೂಕ್ತವಲ್ಲ. ಸಾಮಾನ್ಯವಾಗಿ ಗರ್ಭಿಣಿ ಕಾಳುಗಳ ಸೇವನೆ ಮಾಡ್ಬೇಕು ಎನ್ನಲಾಗುತ್ತದೆ. ಆದ್ರೆ ಗರ್ಭಾವಸ್ಥೆಯಲ್ಲಿ ಬೇರೆ ಯಾವುದೇ ಸಮಸ್ಯೆಯಿದ್ದರೂ ಮಹಿಳೆ ಮೆಕ್ಕೆ ಜೋಳದಿಂದ ದೂರವಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದ್ರಲ್ಲಿ ಖನಿಜ, ವಿಟಮಿನ್ ಸಿ, ವಿಟಮಿನ್ ಬಿ 1, ವಿಟಮಿನ್ ಬಿ 5, ಫೈಬರ್ ಮತ್ತು ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿದೆ. ಮೆಕ್ಕೆಜೋಳವು ಪೌಷ್ಟಿಕವೂ ಹೌದು,ರುಚಿಕರವೂ ಹೌದು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಕಡುಬಯಕೆಗಳನ್ನು ಹೊಂದಿದ್ದರೆ ಕಾರ್ನ್ ಸೇವನೆ ಮಾಡ್ಬಹುದು. ಗರ್ಭಿಣಿಯರು ಮೆಕ್ಕೆ ಜೋಳ ಸೇವನೆ ಮಾಡಬಹುದು. ಆದ್ರೆ ಅದರ ಸೇವನೆ ಮೊದಲು ಕೆಲ ವಿಷ್ಯ ತಿಳಿದಿರಬೇಕು. 

ಔಷಧಿ – ಮಾತ್ರೆ ಸೇವನೆ ಅವಧಿ : ಗರ್ಭಿಣಿಯರ ದೇಹ ಸೂಕ್ಷ್ಮವಾಗಿರುತ್ತದೆ. ಆರಂಭದ ಮೂರು ತಿಂಗಳು ಹಾಗೂ ಕೊನೆಯ ಎರಡು ತಿಂಗಳು ಹೆಚ್ಚು ಜಾಗೃತಿ ವಹಿಸಬೇಕಾಗುತ್ತದೆ. ಒಂದ್ವೇಳೆ ನೀವು ವಿಟಮಿನ್ ಮಾತ್ರೆ ಅಥವಾ ಬೇರೆ ಯಾವುದೇ ಮಾತ್ರೆ ಸೇವನೆ ಮಾಡ್ತಿದ್ದರೆ, ಮೆಕ್ಕೆ ಜೋಳ ಸೇವನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಯಾಕೆಂದ್ರೆ ಈ ಮಾತ್ರೆಗಳು ಮೆಕ್ಕೆ ಜೋಳದ ಜೊತೆ ಸೇರಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.  ಇದ್ರಿಂದ ಗರ್ಭಿಣಿಯರು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

ಗರ್ಭಿಣಿಯರಿಗೆ ಈ ಕಾರಣಕ್ಕೆ ಕಾರ್ನ್ ಪ್ರಯೋಜನಕಾರಿ:

ಮಲಬದ್ಧತೆ ಸಮಸ್ಯೆಗೆ ಪರಿಹಾರ : ಮೆಕ್ಕೆಜೋಳದಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಲ್ಲಿರುವ ನಾರಿನ ಅಂಶವು ಗರ್ಭಿಣಿಯರಿಗೆ ಕಾಡುವ ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ.  ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯಕಾರಿಯಾಗಿದೆ. ಮೆಕ್ಕೆಜೋಳದಲ್ಲಿ ಫೋಲಿಕ್ ಆಮ್ಲ, ಪ್ರೋಟೀನ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್, ತಾಮ್ರ, ರಂಜಕ ಕಂಡುಬರುತ್ತದೆ. ಇದು ನಿಮ್ಮ ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ.   

ಮಗುವಿನ ಆರೋಗ್ಯಕ್ಕೆ ಮೆಕ್ಕೆಜೋಳ : ಗರ್ಭಿಣಿಯ ದೇಹದಲ್ಲಿ ಯಾವುದೇ ಪೌಷ್ಟಿಕಾಂಶದ ಕೊರತೆಯಿದ್ದರೆ  ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಮಗು ಆರೋಗ್ಯಕರವಾಗಿ ಜನಿಸಲು ಸಾಧ್ಯವಿಲ್ಲ. ಗರ್ಭಿಣಿಯರು ಸಾಮಾನ್ಯವಾಗಿ ರಕ್ತಹೀನತೆಗೆ ಒಳಗಾಗುತ್ತಾರೆ. ಇದು ಮಕ್ಕಳ ತೂಕದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ತೂಕ ಇದ್ರಿಂದ ಕಡಿಮೆಯಾಗುತ್ತದೆ. ಅನೇಕ ರೋಗಗಳು ಮಕ್ಕಳನ್ನು ಕಾಡುತ್ತದೆ. ಮೆಕ್ಕೆ ಜೋಳದಲ್ಲಿ ಕಂಡುಬರುವ ಫೋಲಿಕ್ ಆಮ್ಲ  ಮಗುವಿನ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೆಕ್ಕೆಜೋಳದಲ್ಲಿ ಕಂಡುಬರುವ ವಿಟಮಿನ್ ಬಿ ಮತ್ತು ಫೋಲಿಕ್ ಆಮ್ಲವು ಗರ್ಭಿಣಿಯರ ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.  

ಮಗುವಿನ ಕಣ್ಣಿನ ಆರೋಗ್ಯ ವೃದ್ಧಿ : ಮೆಕ್ಕೆ ಜೋಳದಲ್ಲಿ ಲುಟೀನ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚಾಗಿದೆ. ಈ ಪೋಷಕಾಂಶಗಳು ಮಕ್ಕಳ ಕಣ್ಣುಗಳಿಗೆ ಪ್ರಯೋಜನಕಾರಿ.  ಮಗುವಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.  

Women Health : ಮುಟ್ಟು ನಿಲ್ಲವಾಗ ಸೌಂದರ್ಯ ಟ್ರೀಟ್ಮೆಂಟ್‌ಗೆ ಹಾಕಿ ಬ್ರೇಕ್!

ನೆನಪಿನ ಶಕ್ತಿಗೆ ಒಳ್ಳೆಯದು : ಗರ್ಭಿಣಿಯರು ಮೆಕ್ಕೆಜೋಳ ಸೇವನೆ ಮಾಡುವುದ್ರಿಂದ ಮಗುವಿನ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಮಗುವಿನ ಮೆದುಳಿನ ಆರೋಗ್ಯಕರ ಬೆಳವಣಿಗೆಗೆ ಇದು ಸಹಕಾರಿ. 

ಸ್ನಾಯುಗಳಿಗೆ ಬಲ : ಗರ್ಭಾವಸ್ಥೆಯಲ್ಲಿ ಮೆಕ್ಕೆಜೋಳ ತಿಂದ್ರೆ ಅದು ಹುಟ್ಟುವ ಮಗುವಿನ ಸ್ನಾಯುಗಳಿಗೆ ಬಲ ನೀಡುತ್ತದೆ. ಸ್ನಾಯುಗಳ ಸಮಸ್ಯೆಯನ್ನು ಮಕ್ಕಳು ಮುಂದೆ ಎದುರಿಸುವುದಿಲ್ಲ.

ಚರ್ಮದ ಆರೋಗ್ಯ : ಮೆಕ್ಕೆ ಜೋಳದಲ್ಲಿ ಆಂಟಿಆಕ್ಸಿಡೆಂಟ್‌ಗಳು  ಕಂಡುಬರುತ್ತವೆ. ಆಂಟಿ ಆಕ್ಸಿಡೆಂಟ್ ಬೇಗ ವಯಸ್ಸಾಗುವುದನ್ನು ತಡೆಯುತ್ತದೆ. ಗರ್ಭಿಣಿಯರು ಕಾರ್ನ್ ಸೇವನೆ ಮಾಡಿದ್ರೆ ಚರ್ಮದಲ್ಲಿ ಬದಲಾವಣೆ ಕಾಣಬಹುದು. ಚರ್ಮದಲ್ಲಿ ಹೊಳಪು ಬರುತ್ತದೆ. ಚರ್ಮದ ಸೌಂದರ್ಯ ಹೆಚ್ಚಾಗುತ್ತದೆ. ಮೆಕ್ಕೆ ಜೋಳದಲ್ಲಿರುವ ಲಿನೋಲಿಕ್ ಆಮ್ಲವು ಚರ್ಮದ ತುರಿಕೆ ಹಾಗೂ ಶುಷ್ಕ ಚರ್ಮದ ಸಮಸ್ಯೆಯನ್ನು ಹೋಗಲಾಡಿಸುತ್ತದೆ.  

ಹದಿ ಹರೆಯದ ಮಗಳ ಜೊತೆ ಅಪ್ಪನ ಬಿಹೇವಿಯರ್ ಹೇಗಿರಬೇಕು?

ಗರ್ಭಾವಸ್ಥೆಯಲ್ಲಿ ಕಾರ್ನ್ ಅನಾನುಕೂಲತೆ : ಗರ್ಭಾವಸ್ಥೆಯಲ್ಲಿ ಮೆಕ್ಕೆಜೋಳ ಸೇವನೆ ಒಳ್ಳೆಯದು ಎನ್ನುವ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದು ಯೋಗ್ಯವಲ್ಲ. ಸೀಮಿತ ಪ್ರಮಾಣದಲ್ಲಿ ಇದನ್ನು ತಿನ್ನಬೇಕು.  ಇದು ಉತ್ತಮ ಪ್ರಮಾಣದ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆ ಜೋಳ ಸೇವನೆ ಮಾಡಿದ್ರೆ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
 

click me!