ಮದ್ವೆನೂ ಬೇಡ... ಮಗುವಂತೂ ಬೇಡ್ವೇ ಬೇಡ... ಶೇ 45ರಷ್ಟು ಮಹಿಳೆಯರ ಆತಂಕದ ವರದಿ ಬಹಿರಂಗ

By Suchethana D  |  First Published Aug 26, 2024, 4:53 PM IST

2030ರ ಹೊತ್ತಿಗೆ ಶೇಕಡಾ 45ರಷ್ಟು ಮಹಿಳೆಯರು ಮದ್ವೆನೂ ಬೇಡ, ಮಕ್ಕಳೂ ಬೇಡ ಎನ್ನುತ್ತಾರಂತೆ. ಆತಂಕದ ವರದಿ ಬಿಡುಗಡೆ. ಏನಿದೆ ಇದರಲ್ಲಿ? 
 


ಹೆಣ್ಣುಮಕ್ಕಳು ವಯಸ್ಸಿಗೆ ಸರಿಯಾಗಿ ಮದ್ವೆಯಾಗ್ಬೇಕು ಎಂದು ಒಂದಿಷ್ಟು ಹೆಂಗಸರು ಪಿಸುಗುಡುತ್ತಿದ್ದರೆ, ಅವರಿಗೆ ತಿರುಗೇಟು ನೀಡುವ ಈ ಯುವತಿ, ವಯಸ್ಸಿಗೆ ಸರಿಯಾಗಿ ಅಲ್ಲ, ಮನಸ್ಸಿಗೆ ಬಂದಾಗ ಮದ್ವೆಯಾಗ್ಬೇಕು ಎನ್ನುತ್ತಾಳೆ... ಇದು ಪಾನೀಯವೊಂದರ ಜಾಹೀರಾತಿನ ವಿಷಯ. ಆ ಪಾನೀಯಕ್ಕೂ ಈ ಜಾಹೀರಾತಿಗೂ ಸಂಬಂಧವಿಲ್ಲದೇ ಹೋದರೂ ಈಗಿನ ಹೆಚ್ಚು ಹೆಣ್ಣುಮಕ್ಕಳ ಮನಸ್ಸಿನ ಮಾತು ಇದೇ ಆಗಿದೆ ಎನ್ನುವುದಂತೂ ದಿಟ. ಹೆಣ್ಣುಮಕ್ಕಳಿಗೆ 20-25 ವರ್ಷ ಆಗುತ್ತಿದ್ದಂತೆಯೇ ಮನೆಯಲ್ಲಿ ಅವರ ಮದುವೆಯ ಬಗ್ಗೆ ಚಿಂತೆ ಮಾಡುವುದು ಈಗಿನ ಕಾಲದಲ್ಲಿಯೂ ಮಾಮೂಲಿನ ವಿಷಯವೇ. ಆದರೆ ಹೆಚ್ಚಿನ ಯುವತಿಯರು ಮದುವೆಯ ಬಗ್ಗೆ ಚಿಂತಿಸದೇ ತಮ್ಮ ಕಾಲ ಮೇಲೆ ನಿಂತುಕೊಂಡು ಆಮೇಲೆ ಮದ್ವೆಯ ಕುರಿತು ಯೋಚಿಸೋಣ ಎಂದುಕೊಳ್ಳುತ್ತಾರೆ. ಕೆಲವು ಹೆಣ್ಣುಮಕ್ಕಳು ಯಾವುದ್ಯಾವುದೋ ಕಾರಣಗಳಿಂದ ಒಂಟಿ ಉಳಿಯಬೇಕಾದ ಅನಿವಾರ್ಯತೆ ಉಂಟಾದರೆ, ಹೆಚ್ಚಿನವರು  ಮದುವೆಯಾಗುವದನ್ನು ವಿಳಂಬ ಮಾಡುವುದು ಅವರ  ಆಯ್ಕೆಯಾಗಿರುತ್ತದೆ.  

ಆದರೆ ಶಾಕಿಂಗ್​ ಸಂಗತಿಯೇನೆಂದರೆ, ಹೆಚ್ಚಿನ ಮಹಿಳೆಯರು ಸಿಂಗಲ್​ ಆಗಿ ಇರುವುದಕ್ಕೆ ಅಥವಾ ಮದುವೆಯಾದರೂ ಮಕ್ಕಳು ಮಾಡಿಕೊಳ್ಳದೇ ಇರುವುದಕ್ಕೆ ತೀರ್ಮಾನಿಸುತ್ತಿರುವ ಟ್ರೆಂಡ್​ ಹೆಚ್ಚಾಗುತ್ತಿದೆ ಎಂದಿದೆ ಅಧ್ಯಯನ ವರದಿ. 2030 ರ ವೇಳೆಗೆ ಶೇಕಡಾ 45ರಷ್ಟು ಮಹಿಳೆಯರು ಒಂಟಿ ಮತ್ತು ಮಕ್ಕಳಿಲ್ಲದವರಾಗುವ ನಿರೀಕ್ಷೆಯಿದೆ ಎಂದು ಈ ವರದಿ ಹೇಳಿದೆ. ಅಮೆರಿಕದ ಮಹಿಳೆಯರನ್ನು ಹೆಚ್ಚಾಗಿ ಪರಿಗಣನೆಗೆ ತೆಗೆದುಕೊಂಡು ಈ ವರದಿಯನ್ನು ಸಿದ್ಧಪಡಿಸಿದ್ದರೂ, ಭಾರತದಲ್ಲಿಯೂ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂದೇ ಹೇಳಲಾಗುತ್ತಿದೆ.  ಅನೇಕ ಮಹಿಳೆಯರು ಆಧುನಿಕ ಸ್ತ್ರೀವಾದಿ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಮದುವೆಯಾಗದೇ ಇರಲು ನಿರ್ಧರಿಸುತ್ತಿದ್ದಾರೆ. ಮದುವೆಯಾಗಿ ಗರ್ಭಿಣಿಯಾದರೂ  ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ.

Tap to resize

Latest Videos

undefined

ಕೋಲ್ಕತಾ ರೇಪ್​ ಕೇಸ್​ನಲ್ಲಿ ಕೇಳಿಬರ್ತಿರೋ ಪಾಲಿಗ್ರಾಫ್​ ಟೆಸ್ಟ್​ ಅಂದ್ರೇನು? ಆರೋಪಿಗಳು ಸತ್ಯ ಬಾಯಿ ಬಿಟ್​ ಬಿಡ್ತಾರಾ?
 
22 ರಿಂದ 44 ವರ್ಷ ವಯಸ್ಸಿನ ಮಹಿಳೆಯರು ಹೀಗೆ ಯೋಚನೆ ಮಾಡುತ್ತಿದ್ದಾರೆ. ಒಂಟಿಯಾಗಲು ಇಷ್ಟಪಡುತ್ತಿದ್ದಾರೆ. ಯಾವುದೋ ಸಂದರ್ಭದಲ್ಲಿ ಮದುವೆಯಾದರೂ ಮಕ್ಕಳಾಗದೇ ಇರುವತ್ತ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ, ಅವರು ಸಂಪೂರ್ಣವಾಗಿ ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸುತ್ತಿದ್ದಾರೆ.  ಮಹಿಳೆಯರು ಉದ್ಯೋಗಿಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಬಯಸುತ್ತಿದ್ದಾರೆ.  ಆದ್ದರಿಂದ ಇಂಥದ್ದೊಂದು ಕಟು ನಿರ್ಧಾರಕ್ಕೆ ಬರುತ್ತಿದ್ದಾರಂತೆ! 

ಇದೇ ಟ್ರೆಂಡ್​ ಮುಂದುವರೆದರೆ,  ಮುಂದಿನ ಒಂದೆರಡು ದಶಕಗಳಲ್ಲಿ  ಕಡಿಮೆ ತಾಯಂದಿರು ಇರುತ್ತಾರೆ. ಇದು ಆತಂಕಕಾರಿ ಬೆಳವಣಿಗೆ. ಒಂಟಿ ಮಹಿಳೆಯರು ಸರಾಸರಿ  ಕುಟುಂಬಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ, ವಿಶೇಷವಾಗಿ ಪ್ರಯಾಣ, ರಾತ್ರಿ ಜೀವನ, ಆಹಾರ ಸೇವನೆ, ತ್ವಚೆ ಮತ್ತು ಸೌಂದರ್ಯ,  ಶಾಪಿಂಗ್, ಇತ್ಯಾದಿಗಳಿಗೆ ಅವರು ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಆದ್ದರಿಂದ ಇಂಥ ಜೀವನ ಶೈಲಿಗೆ ಹೆಚ್ಚು ದುಡಿಯಬೇಕು. ಮದುವೆಯಾದರೆ ಈ ಸ್ವಾತಂತ್ರ್ಯ ಅವರಿಗೆ ಸಿಗುವುದಿಲ್ಲ. ಇನ್ನು ಕೆಲವರು, ಮದುವೆಯಾಗಿ ಹಿಂಸೆ ಅನುಭವಿಸುತ್ತಿರುವ, ಉದ್ಯೋಗದಲ್ಲಿ ಪ್ರಗತಿ ಕಾಣಲು ಹಂಬಲಿಸ್ತಿರೋ ಮಹಿಳೆಯರನ್ನು ನೋಡಿ ಈ ನಿರ್ಧಾರಕ್ಕೆ ಬರುತ್ತಿದ್ದಾರೆ ಎಂದಿದ್ದಾರೆ.  

ಬ್ಯಾಚುಲರ್​ ಚಿತ್ರಾನ್ನ ಮಾಡಿದ ಚಂದನ್ ಶೆಟ್ಟಿ: ಬೇಗ್​ ಮದ್ವೆಯಾಗಿ ಗುರೂ ಅಂತಿರೋ ಫ್ಯಾನ್ಸ್​
 

click me!