ಕೋಲ್ಕತಾ ರೇಪ್​ ಕೇಸ್​ನಲ್ಲಿ ಕೇಳಿಬರ್ತಿರೋ ಪಾಲಿಗ್ರಾಫ್​ ಟೆಸ್ಟ್​ ಅಂದ್ರೇನು? ಆರೋಪಿಗಳು ಸತ್ಯ ಬಾಯಿ ಬಿಟ್​ ಬಿಡ್ತಾರಾ?

ಕೋಲ್ಕತಾ ವೈದ್ಯೆಯ ರೇಪ್​ ಆ್ಯಂಡ್​  ಮರ್ಡರ್​ ಕೇಸ್​ನಲ್ಲಿ ಕೇಳಿಬರ್ತಿರೋ ಪಾಲಿಗ್ರಾಫ್​ ಟೆಸ್ಟ್​ ಅಂದ್ರೇನು? ಆರೋಪಿಗಳು ಸತ್ಯ ಬಾಯಿ ಬಿಟ್​ ಬಿಡ್ತಾರಾ?
 

What is the polygraph test heard in Kolkata doctors case Will the accused tell the truth always suc

 ಇಡೀ ದೇಶವನ್ನೇ ತಲ್ಲಣಗೊಳಿಸಿರೋ ಕೋಲ್ಕತಾದ ವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳ ಸುಳ್ಳುಪತ್ತೆ ಪರೀಕ್ಷೆಯ ಸುದ್ದಿ ಸದ್ದು ಮಾಡುತ್ತಿದೆ. ಇಂಗ್ಲಿಷ್​ನಲ್ಲಿ ಪಾಲಿಗ್ರಾಫ್​ ಟೆಸ್ಟ್​ (Polygraph Test) ಎಂದೂ ಕನ್ನಡದಲ್ಲಿ ಸುಳ್ಳುಪತ್ತೆ ಪರೀಕ್ಷೆ ಎಂದೂ ಇದನ್ನು ಕರೆಯಲಾಗುತ್ತದೆ.  ಕೋಲ್ಕತಾದ ಕೇಸ್​ನಲ್ಲಿ ಪ್ರಮುಖ ಆರೋಪಿ ಸಂಜಯ್​ ರಾಯ್​ ಎಂದೇ ಹೇಳಲಾಗಿತ್ತು. ಈತನೇ ಅತ್ಯಾಚಾರ ಎಸಗಿ ಕೊಲೆ  ಮಾಡಿದ್ದಾನೆ ಎನ್ನಲಾಗಿತ್ತು. ಇದೀಗ ಸುಳ್ಳುಪತ್ತೆ ಪರೀಕ್ಷೆಯಲ್ಲಿ ಆತ ತಾನು ಇದನ್ನು ಮಾಡಿಲ್ಲ ಎಂದಿದ್ದಾರೆ.  ನಾನು ಆಕೆಯನ್ನು  ನೋಡಿದಾಗಲೇ ಆಕೆ ಸತ್ತು ಹೋಗಿದ್ದಳು.  ಆದರೆ ಭಯಗೊಂಡು ನಾನು ಆ ಪ್ರದೇಶದಿಂದ ಓಡಿ ಹೋಗಿದ್ದೆ ಎಂದು ಆತ ಹೇಳಿದ್ದಾನೆ. ಆದರೆ ಈ ಹಿಂದೆ ಕೋಲ್ಕತಾ ಪೊಲೀಸರು ಹೇಳಿದ್ದ ಪ್ರಕಾರ, ಘಟನೆ ನಡೆದ ನಂತರ ಸಂಜಯ್ ರಾಯ್ ತಾನು ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದ.  ನಂತರದಲ್ಲಿ ಆತ ತನ್ನ ಪ್ಲೇಟ್ ಬದಲಿಸಿದ್ದು, ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ, ನಾನೊಬ್ಬ ನಿರಪರಾಧಿ ಎಂದು ಹೇಳಿದ್ದ. 

ಹಾಗಿದ್ದರೆ ಏನಿದು ಪಾಲಿಗ್ರಾಫ್ ಟೆಸ್ಟ್​? ಸುಳ್ಳುಪತ್ತೆಯನ್ನು ಮಾಡುವಲ್ಲಿ ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣತ್ತೆ ಎನ್ನುವ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯನ್ನು ಸಾಮಾನ್ಯವಾಗಿ,  ಅಪರಾಧ ಪ್ರಕರಣದಲ್ಲಿ ಆರೋಪಿಗಳ ಮೇಲೆ ಮಾಡಲಾಗುತ್ತದೆ. ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದರೆ, ಆತನ ಮೇಲೆ ಸಿಕ್ಕಾಪಟ್ಟೆ ಡೌಟ್​ ಇದ್ದಾಗ ಇಂಥ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹಾಗೆಂದು ಎಲ್ಲಾ ಆರೋಪಿಗಳ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಸುಪ್ರೀಂಕೋರ್ಟ್​ ತೀರ್ಪಿನ ಅನ್ವಯ ಇಂಥ ಪರೀಕ್ಷೆಗೆ ಒಳಪಡುವ ಮೊದಲು ಆರೋಪಿ ಇದಕ್ಕೆ ಒಪ್ಪಿಗೆ ಸೂಚಿಸುವುದು ಕಡ್ಡಾಯ. ಒಂದು ವೇಳೆ ಆರೋಪಿ ಈ ಪರೀಕ್ಷೆಗೆ  ಒಳಗಾಗಲು ಒಪ್ಪಿಗೆ ಸೂಚಿಸದೇ ಹೋದರೆ, ಆಗಲೂ ಪರೀಕ್ಷೆ ಮಾಡಿದರೆ,  ಭಾರತೀಯ ಸಂವಿಧಾನದ ಆರ್ಟಿಕಲ್ 20(3) ಪ್ರಕಾರ ಅದು ಕಾನೂನು ವಿರೋಧಿ ಆಗುತ್ತದೆ. 

ಕೋಲ್ಕತ್ತಾ ರೇಪ್ ಕೇಸ್‌ಗೆ ಟ್ವಿಸ್ಟ್‌: ಸಿಬಿಐ ಸತ್ಯ ಪರೀಕ್ಷೆ ವೇಳೆ ಆರೋಪಿ ಸಂಜಯ್ ರಾಯ್ ಹೇಳಿದ್ದೇನು?

ಹಾಗಿದ್ದರೆ ಈ ಪರೀಕ್ಷೆ ಹೇಗೆ ಮಾಡುತ್ತಾರೆ ಎಂದು ನೋಡುವುದಾದರೆ, ಆರೋಪಿಗೆ  ಮೊದಲು ಚುಚ್ಚು ಮದ್ದು ನೀಡುತ್ತಾರೆ. ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಪ್ರಶ್ನೆ ಮಾಡಲಾಗುತ್ತದೆ.  ಆ ಪ್ರಶ್ನೆಗೆ ಆತ ಅಥವಾ ಆಕೆ ಉತ್ತರಿಸುವ ಸಂದರ್ಭದಲ್ಲಿ  ಅವರ ಉಸಿರಾಟ ಸೇರಿದಂತೆ ಮನಸಿನಲ್ಲಿ ಉಂಟಾಗುವ ಒತ್ತಡವನ್ನು ಆಧರಿಸಿ ಸುಳ್ಳು ಪತ್ತೆ ಯಂತ್ರ ಗ್ರಾಫಿಂಗ್​ ಮಾಡುತ್ತದೆ. ಉಸಿರಾಟ, ಹೃದಯ ಬಡಿತ ಎಲ್ಲವೂ ಇದಕ್ಕೆ ಕೌಂಟ್​ ಆಗುತ್ತದೆ. ಈ ಗ್ರಾಫ್​  ಆಧಾರದ ಮೇಲೆ  ಆರೋಪಿ ಸುಳ್ಳು ಹೇಳುತ್ತಿದ್ದಾನೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳು ಸಾಧ್ಯವಾಗುತ್ತದೆ. ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾ ಪ್ರಯೋಗಾಲಯದಲ್ಲಿ ಸಹ ಈ ಪರೀಕ್ಷೆ ನಡೆಸಲಾಗುತ್ತದೆ. ಇದರ ಮುಂದುವರಿದ ಭಾಗವಾಗಿ ನಾರ್ಕೋ ಅನಾಲಿಸಿಸ್​ ಟೆಸ್ಟ್​, ಬ್ರೇನ್​ ಮ್ಯಾಪಿಂಗ್​ ಟೆಸ್ಟ್​ ಎಲ್ಲವೂ ನಡೆಯುತ್ತದೆ. ಅಲ್ಲಿ ಕೂಡ ಆರೋಪಿಯ ಅನುಮತಿ ಕಡ್ಡಾಯ.

ಹಾಗಾದರೆ, ಇದು 100 ಪರ್ಸೆಂಟ್​ ವರ್ಕ್​ ಆಗತ್ತಾ ಎಂದು ಪ್ರಶ್ನಿಸಿದರೆ ಉತ್ತರ ಇಲ್ಲ. ಒಂದಷ್ಟು ಮಟ್ಟಿಗೆ ಇದನ್ನು ನಂಬಬಹುದಷ್ಟೇ. ಆರೋಪಿ ಹೊಸಬ ಆಗಿದ್ದರೆ, ಆತನ ಹೃದಯ ಬಡಿತ, ಉಸಿರಾಟ ಎಲ್ಲವನ್ನೂ ನಿಖರವಾಗಿ ತಿಳಿಯಬಹುದೇನೋ.  ಆದರೆ ಆರೋಪಿ ನುರಿತವನಾಗಿದ್ದರೆ, ಆತನಿಗೆ ಈ ಪರೀಕ್ಷೆಯ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ, ಸುಳ್ಳು ಹೇಳುವಾಗಲೂ ಆತನ ಉಸಿರಾಟ ಮೇಲೆ ಕೆಳಗೆ ಆಗದೇ ಹೋಗಬಹುದು. ಅಂಥ ಸಂದರ್ಭಗಳಲ್ಲಿ ಆರೋಪಿ ಸತ್ಯ ಹೇಳುತ್ತಿದ್ದಾನೋ, ಸುಳ್ಳೋ ಎಂದು ತಿಳಿಯುವುದು ಕಷ್ಟ ಎನ್ನುತ್ತಾರೆ ತಜ್ಞರು. ಇದೇ ಸಂದರ್ಭದಲ್ಲಿ ಇವರ ಉಸಿರಾಟ, ಹೃದಯ ಬಡಿತದ ಗ್ರಾಫ್​ ಮಾಡಿರುವ ಸಂದರ್ಭಗಳಲ್ಲಿ ಅದರ ರೀಡಿಂಗ್​ ಕೂಡ ಅಷ್ಟೇ ಮುಖ್ಯವಾಗುತ್ತದೆ. ಜೊತೆಗೆ ಯಂತ್ರಕ್ಕೆ ಪರೀಕ್ಷಾ ಸಾಧನಗಳನ್ನು ಅಳವಡಿಸುವಾಗ ಎಡವಟ್ಟಾಗಿದ್ದರೂ ಫಲಿತಾಂಶವೂ ಎಡವಟ್ಟೇ ಬರುತ್ತದೆ ಎನ್ನುತ್ತಾರೆ ಅವರು. 

ನಟ ಸಿದ್ದಿಕಿ ಮಗಳೇ ಎಂದು ರೇಪ್​ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್‌ ಖಾನ್‌ ಫೋನ್​ನಲ್ಲೇ... ನಟಿಯ ಕರಾಳ ಅನುಭವ...

Latest Videos
Follow Us:
Download App:
  • android
  • ios