ತಿಂಗಳಿಗೆ 2 ಕೋಟಿ ಪಾಕೆಟ್ ಮನಿ ಕೊಟ್ಟರೂ ಗಂಡನ ಬಗ್ಗೆ ಕಂಪ್ಲೇಂಟ್ ನಿಂತಿಲ್ಲ, ನೆಟ್ಟಿಗರು ದುಡ್ಡಿಗೇ ಬದುಕಿದ್ಯಾ ಕೇಳ್ತಿದ್ದಾರೆ!

By Suvarna News  |  First Published Apr 16, 2024, 5:53 PM IST

 ಇಡೀ ದಿನ ಮನೆ ಕೆಲಸ ಮಾಡಿದ್ರೂ ಮನೆ ವಸ್ತು ಖರೀದಿಗೆ ಪತಿ ಹಣ ನೀಡಲ್ಲ ಅಂತ ಭಾರತದ ಅನೇಕ ಮಹಿಳೆಯರು ಗೊಣಗ್ತಾರೆ. ಆದ್ರೆ ಈ ಭೂಪ ಬರೀ ಶಾಪಿಂಗ್ ಗೆ ಕೋಟಿ ಹಣ ನೀಡ್ತಾನೆ. ಗೃಹಿಣಿ ಆದ್ರೂ ಕೋಟ್ಯಾಧಿಪತಿಯಾಗಿರೋ ಇವಳದ್ದು ಅದೃಷ್ಟವೋ ಅದೃಷ್ಟ. 
 


ಸಂಬಳವಿಲ್ಲದ ಕೆಲಸ ಯಾವುದು? ಥಟ್ ಅಂತ ಹೇಳಿ ಅಂದ್ರೆ ಬಹುತೇಕರು ಹೌಸ್‌ವೈಫ್ ಎನ್ನುತ್ತಾರೆ. ಭಾರತದಲ್ಲಿ ಇದು ನೂರಕ್ಕೆ ನೂರು ಸತ್ಯ. ಇಲ್ಲಿ ವಾರದಲ್ಲಿ ಎಲ್ಲ ದಿನ ರಜೆ ಇಲ್ಲದೆ ನಿರಂತರ ಕೆಲಸ ಮಾಡುವವರು ಗೃಹಿಣಿಯರು. 50- 60 ವರ್ಷ ಹಿಂದಿನ ಕಾಲ ಇದಲ್ಲ ಅನ್ನೋದನ್ನು ನಾವು ಒಪ್ಪಿಕೊಳ್ಳೋಣ. ಈಗ ಮಹಿಳೆಯರು ಮನೆಯಿಂದ ಹೊರಗೆ ಬರ್ತಿದ್ದಾರೆ. ಸ್ವಂತ ದುಡಿಮೆಯಿಂದ ಆರ್ಥಿಕವಾಗಿ ಸ್ವಾವಲಂಭಿಯಾಗಿದ್ದಾರೆ. ಈ ಹಿಂದೆ ಗೃಹಿಣಿಯರು ಪ್ರತಿಯೊಂದಕ್ಕೂ ಪತಿ ಮುಂದೆ ಕೈ ಚಾಚಬೇಕಿತ್ತು. ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡಬೇಕಿತ್ತು. ಕೆಲವು ಕಡೆ ಹಣ ಪಡೆದಿದ್ದಕ್ಕೆ ಲೆಕ್ಕ ನೀಡಬೇಕಿತ್ತು. ಆದ್ರೆ ಈಗ ಮಹಿಳೆಯರು ಸ್ಟ್ರಾಂಗ್ ಆಗ್ತಿದ್ದಾರೆ. ಅವರೇ ದುಡಿದು ತಮ್ಮ ಜೀವನ ನಡೆಸುತ್ತಿರೋದು ಒಂದ್ಕಡೆ ಆದ್ರೆ ಇನ್ನೊಂದು ಕಡೆ ಮನೆ ಕೆಲಸ ಮಾಡಿದ್ದಕ್ಕೆ ಹಣ ಕೇಳುವ ಮಹಿಳೆಯರು ಹೆಚ್ಚಾಗ್ತಿದ್ದಾರೆ. ಭಾರತದಲ್ಲಿ ಸಂಬಳ ಪಡೆದು ಮನೆ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಅತೀ ಕಡಿಮೆ. ಅಲ್ಲಿ ಇಲ್ಲಿ ಕೆಲ ಮಹಿಳೆಯರ ಖಾತೆಗೆ ಪತಿಯಿಂದ ಪಾಕೆಟ್ ಮನಿ ಬರ್ತಿರುತ್ತದೆ. ಆದ್ರೆ ದುಬೈನಂತಹ ಸ್ಥಳದಲ್ಲಿ ಇತ್ತೀಚಿಗೆ ಈ ಪ್ರವೃತ್ತಿ ಹೆಚ್ಚಾಗಿದೆ.  ಇಲ್ಲಿನ ಮಹಿಳೆಯರು ಪತಿಯಿಂದ ಪಾಕೆಟ್ ಮನಿ ಪಡೆಯುತ್ತಿದ್ದಾರೆ. ಬರೀ ಹಣ ಪಡೆಯೋದು ಮಾತ್ರವಲ್ಲ ಐಷಾರಾಮಿ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಅವರು ಮನೆ ಕ್ಲೀನಿಂಗ್, ಅಡುಗೆ ಅಂತ ತಮ್ಮ ಸಮಯ ಹಾಳು ಮಾಡೋದಿಲ್ಲ. ಕೋಟ್ಯಾಧಿಪತಿ ಕೈ ಹಿಡಿದು, ಕೋಟಿಗಟ್ಟಲೆ ಪಾಕೆಟ್ ಮನಿ ಪಡೆದು ಜೀವನವನ್ನು ಚಿಲ್ ಮಾಡ್ತಾರೆ.

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳ ಸುದ್ದಿ ವೈರಲ್ ಆಗಿತ್ತು. ಆಕೆ ಮದುವೆ (Marriage) ನಂತ್ರ ಮಗು ಪಡೆಯಲು 2 ಕೋಟಿ ಪಾಕೆಟ್ ಮನಿ (Pocket Money) ನೀಡುವಂತೆ ಬೇಡಿಕೆ ಇಟ್ಟಿದ್ದಳು. ಮಗು ಪಡೆಯೋದು ಸುಲಭವಲ್ಲ. ಆ ನೋವನ್ನು ನಾನು ಪುಕ್ಕಟ್ಟೆ ಅನುಭವಿಸಲಾರೆ ಎಂದು ಆಕೆ ಹೇಳಿದ್ದಳು.  ಈಗ ಇನ್ನೊಂದು ಮಹಿಳೆ ತನ್ನ ಲೈಫ್ ಸ್ಟೈಲ್ (Lifestyle ) ಬಗ್ಗೆ ಟಿಕ್ ಟಾಕ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.

Tap to resize

Latest Videos

ಭಾರತದ ಅತ್ಯಂತ ಶ್ರೀಮಂತ ಮುಸ್ಲಿಂ ಮಹಿಳೆ ಈಕೆ; 27,773 ಕೋಟಿ ಮೌಲ್ಯದ ಕಂಪನಿ ಒಡತಿ!

ಟಿಕ್ ಟಾಕ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಯುಎಇನ ಮಲೈಕಾ ರಾಜಾ, ಮಿಲಿಯನೇರ್ ಗೃಹಿಣಿ. ಶ್ರೀಮಂತ ಪತಿ ಕೈ ಹಿಡಿದಿರುವ ಆಕೆ ಪ್ರತಿ ತಿಂಗಳು 180,000  ಪೌಂಡ್ ಅಂದ್ರೆ 1 ಕೋಟಿ 87 ಲಕ್ಷಕ್ಕೂ ಹೆಚ್ಚು ಪಾಕೆಟ್ ಮನಿ ಪಡೆಯುತ್ತಿದ್ದಾಳೆ. ವಿಚಿತ್ರ ಅಂದ್ರೆ ಈ ಹಣವನ್ನು ಮಲೈಕಾ ರಾಜ್ ಉಳಿಸ್ತಾ ಇಲ್ಲ. ಪತಿ ನೀಡಿದ ಹಣವನ್ನು ಶಾಪಿಂಗ್ ಮಾಡೋದೆ ಆಕೆ ಕೆಲಸ. ದುಬೈ ಮಾಲ್ ಸುತ್ತಾಡುವ ಮಲೈಕಾ ರಾಜಾ, ತನಗಿಷ್ಟದ ವಸ್ತುಗಳನ್ನು ಖರೀದಿ ಮಾಡ್ತಾಳೆ. ಆಕೆ ಬಳಿ ಗುಲಾಬಿ ಬಣ್ಣದ ಕಾರ್ ಇದ್ದು, ಅದ್ರಲ್ಲಿ ಸುತ್ತಾಡೋದಾಗಿ ಟಿಕ್ ಟಾಕ್ ವಿಡಿಯೋದಲ್ಲಿ ಹೇಳಿದ್ದಾಳೆ.

ಪಾಕೆಟ್ ಮನಿ ಅಂತ ಇಷ್ಟೊಂದು ಹಣ ಪಡೆಯುವ ಮಲೈಕಾ ರಾಜಾ, ಬೇರೆ ಸಂದರ್ಭದಲ್ಲಿ ಪ್ರತ್ಯೇಕವಾಗಿ ಹಣ ಪಡೆಯುತ್ತಾಳೆ. ಈದ್ ಗೆ ಆಕೆ ಪತಿಯಿಂದ ಪ್ರತ್ಯೇಕವಾಗಿ ಹಣ ಪಡೆದಿದ್ದಾಳಂತೆ. ಅಂದ್ರೆ ಈ ತಿಂಗಳು ಆಕೆ ಕೈಗೆ ಸುಮಾರು 2ರಿಂದ ಎರಡುವರೆ ಕೋಟಿ ಹಣ ಸಿಕ್ಕಿದೆ. ಇಷ್ಟೆಲ್ಲ ಇದ್ರೂ ಗಂಡ ಕಾರ್ ಡೋರ್ ಓಪನ್ ಮಾಡಲ್ಲ ಎಂದು ಮಲೈಕಾ ಆರೋಪ ಮಾಡಿದ್ದಾಳೆ. 

ಬೇಜಾರಾಗ್ತಿದ್ಯಾ? ಈ ಕಂಪನಿ ನಿಮಗೆ ಅದಕ್ಕೂ ರಜೆ ಕೊಡುತ್ತೆ!

ಸಾಮಾಜಿಕ ಜಾಲತಾಣದಲ್ಲಿ ಆಕೆಯ ಜೀವನ ನೋಡಿ ಬಳಕೆದಾರರು ದಂಗಾಗಿದ್ದಾರೆ. ಪತಿ ಶ್ರೀಮಂತ ಎನ್ನುವ ಕಾರಣಕ್ಕೆ ಆಕೆ ಆತನ ಜೊತೆಗಿದ್ದಾಳೆಯೇ ವಿನಃ ಮತ್ತ್ಯಾಕೂ ಅಲ್ಲ ಎಂದು ಬಳಕೆದಾರರು ಹೇಳಿದ್ದಾರೆ. ಇನ್ನು ಕೆಲವರು ಈ ಹಣವನ್ನು ಒಳ್ಳೆ ಕೆಲಸಕ್ಕೆ ಬಳಸು ಎಂದಿದ್ದಾರೆ.  

click me!