ಹಬ್ಬವೆಂದ್ಮೇಲೆ ಸ್ವೀಟ್ ತರ್ಲೇಬೇಕು. ಸ್ವೀಟ್ ಜೊತೆ ಬಾಕ್ಸ್ ಬರುತ್ತೆ. ಸ್ವೀಟ್ ತಿಂದ ನಾವು ಬಾಕ್ಸ್ ಎಸೆಯುತ್ತೇವೆ. ಆದ್ರೆ ಅದನ್ನು ಅನೇಕ ಕೆಲಸಕ್ಕೆ ಬಳಕೆ ಮಾಡ್ಬಹುದು ನಿಮಗೆ ಗೊತ್ತಾ?
ಮನೆಯಲ್ಲಿ ಬೇಕಾಗಿದ್ದು, ಬೇಡದ್ದು ಎಲ್ಲ ವಸ್ತುಗಳಿರ್ತವೆ. ಅನೇಕ ವಸ್ತುಗಳು ಪ್ರಯೋಜನಕ್ಕೆ ಬರೋದಿಲ್ಲ ಎಂದು ಮೂಲೆಗೆ ಹಾಕಿರ್ತೇವೆ. ಮತ್ತೆ ಕೆಲ ವಸ್ತುಗಳನ್ನು ನಾವು ಕಸಕ್ಕೆ ಹಾಕಲು ಸಿದ್ಧತೆ ಮಾಡಿಕೊಳ್ತೇವೆ. ಆದ್ರೆ ಮನೆಯಲ್ಲಿರುವ ಯಾವುದೇ ವಸ್ತು ವೇಸ್ಟ್ ಅಲ್ಲ ಎಂಬುದನ್ನು ನೀವು ನೆನಪಿಡಿ. ನಿಮ್ಮ ಕ್ರಿಯೆಟಿವಿ ಬಳಸಿಕೊಂಡು ನೀವು ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ಕೂಡ ಸುಂದರ ವಸ್ತು ಮಾಡಬಹುದು. ಇದಕ್ಕೆ ನಿಮ್ಮ ಅನನ್ಯ ಕಲ್ಪನೆ ಮುಖ್ಯ. ಮನೆಯಲ್ಲಿರುವ ಹಾಲಿನ ಪ್ಯಾಕ್ ನಿಂದ ಹಿಡಿದು ಹಬ್ಬದಲ್ಲಿ ಬರುವ ಸ್ವೀಟ್ ಬಾಕ್ಸ್ ಕೂಡ ಮರುಬಳಕೆ ಮಾಡಬಹುದು.
ಸ್ವೀಟ್ ಬಾಕ್ಸ (Sweet Box) ನ್ನು ಫೈಲ್ ಇಡಲು ಬಳಕೆ ಮಾಡಿ: ಇತ್ತೀಚಿನ ದಿನಗಳಲ್ಲಿ, ಸ್ವೀಟ್ ಬಾಕ್ಸ್ ಒಳಗೆ ಕಾರ್ಡ್ಬೋರ್ಡ್ ಇಡಲಾಗುತ್ತದೆ. ಅದ್ರ ಒಳಗೆ ಸ್ವೀಟ್ ಇರುತ್ತದೆ. ನೀವು ಸ್ವೀಟ್ ತಿಂದ ಬಳಿಕ ಆ ಕಾರ್ಡ್ ಬೋರ್ಡ್ (Card Board) ತೆಗೆಯಿರಿ. ನಂತ್ರ ಆ ಬಾಕ್ಸ್ ನಲ್ಲಿ ನಿಮ್ಮ ಯಾವುದೇ ಪೇಪರ್ ಗಳನ್ನು ನೀವು ಸಂಗ್ರಹಿಸಿ ಇಡಬಹುದು. ಬಾಕ್ಸ್ ಗೆ ಎಣ್ಣೆ ಅಥವಾ ತುಪ್ಪ ತಾಗಿದ್ದರೆ ಮುಖ್ಯವಾದ ಪೇಪರ್ ಇಡಬೇಡಿ. ತಳಭಾಗದಲ್ಲಿ ಹಳೆಯ ಪೇಪರ್ ಹಾಕಿ ನಂತ್ರ ಅದ್ರ ಮೇಲೆ ನೀವು ಮುಖ್ಯ ಪೇಪರ್ ಇಡಬಹುದು.
ಮೇಕ್ಅಪ್ (Makeup) ಬಾಕ್ಸ್ ಆಗಿ ಇದನ್ನು ಬಳಸಿ : ಮೇಕಪ್ ಬಾಕ್ಸ್ ಗೆ ನೀವು ಮಾರುಕಟ್ಟೆಯಿಂದ ಯಾವುದೇ ಬಾಕ್ಸ್ ಖರೀದಿಸುವ ಅಗತ್ಯವಿಲ್ಲ. ಶೂ ತಂದ ಅಥವಾ ಸ್ವೀಟ್ ಬಾಕ್ಸ್ ತಂದ ಬಾಕ್ಸನ್ನು ನೀವು ಮೇಕಪ್ ಬಾಕ್ಸ್ ಆಗಿ ಬಳಕೆ ಮಾಡಬಹುದು. ಈ ಬಾಕ್ಸ್ ಗೆ ಅಲಂಕಾರ ಮಾಡಿ. ಅದರೊಳಗೆ ನೀವು ಮೇಕಪ್ ಐಟಂಗಳನ್ನು ಇಡಬಹುದು. ಮಧ್ಯದಲ್ಲಿ ನೀವು ರೊಟ್ಟಿನ ಪೀಸ್ ಇಡುವ ಮೂಲಕ ನೀವು ಮೇಕಪ್ ಬಾಕ್ಸನ್ನು ಇಬ್ಭಾಗ ಮಾಡಹುದು.
RECYCLING IDEAS : ತರಕಾರಿ ತಂದ ಪೇಪರ್ ಬ್ಯಾಗ್ ಎಸೆಯಬೇಡಿ
ಶೂ ಬಾಕ್ಸ್ (Shoe Box) ನಿಂದ ಹೀಗೆ ತಯಾರಿಸಿ ಆಟಿಕೆ: ಮಕ್ಕಳ ಆಟಿಕೆ ಈಗ ದುಬಾರಿ. ಒಂದಲ್ಲ ಒಂದು ಆಟಿಕೆಯನ್ನು ಮಕ್ಕಳು ಕೇಳ್ತಿರುತ್ತಾರೆ. ನೀವು ಸ್ವಲ್ಪ ಬುದ್ದಿ ಉಪಯೋಗಿಸಿ ಶೂ ಅಥವಾ ಚಪ್ಪಲಿ ಬಾಕ್ಸನ್ನು ಆಟಿಕೆಯಾಗಿ ಬಳಕೆ ಮಾಡಬಹುದು. ಕಾರ್ಡ್, ಮನೆ, ಕಾರ್ ಹೀಗೆ ಅನೇಕ ಆಟಿಕೆಗಳನ್ನು ಶೂ ಬಾಕ್ಸ್ ನಿಂದ ನೀವು ತಯಾರಿಸಬಹುದು.
ಮನೆಯ ಅಲಂಕಾರಕ್ಕೆ ಬಳಸಿ ಸ್ವೀಟ್ ಬಾಕ್ಸ್: ಸ್ವೀಟ್ ಬಾಕ್ಸ್ ಈಗ ಅನೇಕ ಡಿಸೈನ್ ಗಳಲ್ಲಿ ಲಭ್ಯವಿದೆ. ಕೆಲವು ಡಬ್ಬದ ಮೇಲೆ ಫ್ಲಾವರ್, ಮತ್ತೆ ಕೆಲ ಡಬ್ಬದ ಮೇಲೆ ಸುಂದರ ಡಿಸೈನ್ ಇರುತ್ತದೆ. ಅದನ್ನು ನೀವು ಕತ್ತರಿಸಿ, ಡ್ರೆಸ್ಸಿಂಗ್ ಟೇಬಲ್ ಸೇರಿದಂತೆ ಮನೆಯ ಬಾಗಿಲಿಗೆ ಹಾಕಬಹುದು. ಇಲ್ಲವೆ ಅದನ್ನು ಬಳಸಿಕೊಂಡು ಅಲಂಕಾರಿಕ ವಸ್ತು ತಯಾರಿಸಬಹುದು. ಯುಟ್ಯೂಬ್ ನಲ್ಲಿ ಇದನ್ನು ಮರುಬಳಕೆ ಮಾಡಲು ಸಾಕಷ್ಟು ಐಡಿಯಾಗಳು ನಿಮಗೆ ಸಿಗುತ್ತವೆ.
Kitchen Hacks: ಕತ್ತರಿಸಿದ ಈರುಳ್ಳಿ ವಾಸನೆ ಬರುತ್ತೆ ಅಲ್ವಾ? ಏನು ಮಾಡಬೇಕು ಅದಕ್ಕೆ?
ಖಾಲಿ ಬಾಕ್ಸ್ ನಲ್ಲಿಡಿ ಮನೆಯ ಸಾಮಗ್ರಿ : ಸಿಹಿ ತಿಂಡಿ ಬಂದ ಬಾಕ್ಸ್ ಅಥವಾ ಬೇರೆ ಆಟಿಕೆಗಳು, ಪುಸ್ತಕಗಳು ಬಂದ ಬಾಕ್ಸ್ ಗಳನ್ನು ನೀವು ಎಸೆಯುವ ಬದಲು ಮರುಬಳಕೆ ಮಾಡಬಹುದು. ಅದ್ರಲ್ಲಿ ನಿಮ್ಮ ಮನೆಯಲ್ಲಿರುವ ತಿಂಡಿಗಳನ್ನು ಇಡಬಹುದು. ಬಿಸ್ಕತ್, ಚಾಕೋಲೇಟ್ ಸೇರಿದಂತೆ ಮನೆಯ ಯಾವುದೇ ವಸ್ತುವನ್ನು ನೀವು ಅದ್ರಲ್ಲಿ ಇಡಬಹುದು. ಅನೇಕರು ಅದನ್ನು ಫಾಸ್ಟ್ ಆಡ್ ಬಾಕ್ಸ್ ಆಗಿ ಕೂಡ ಬಳಕೆ ಮಾಡ್ತಾರೆ. ದೀಪಾವಳಿ ಶುರುವಾಗಿದೆ. ಒಂದಿಷ್ಟು ಸ್ವೀಟ್ ಬಾಕ್ಸ್ ಮನೆ ಸೇರುತ್ತದೆ. ಅದನ್ನು ಎಸೆಯುವ ಬದಲು ಹೇಗೆ ಮರುಬಳಕೆ ಮಾಡೋದು ಅಂತಾ ಪ್ಲಾನ್ ಮಾಡಿ.