ಹೆಣ್ಮಕ್ಕಳು ಸ್ವಾವಲಂಬಿಯಾಗಬೇಕೆಂದರೆ ಪೋಷಕರು ಹೀಗ್ ಮಾಡಬೇಕು

By Suvarna NewsFirst Published Jul 26, 2022, 3:07 PM IST
Highlights

ಮನೆಯಲ್ಲಿ ಹೆಚ್ಚು ಮುದ್ದಿನಿಂದ ಬೆಳೆಯುವ ಮಕ್ಕಳು ಅಂದ್ರೆ ಹೆಣ್ಮಕ್ಕಳು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿರುವ ತಾತ್ಸಾರ ಬಹುತೇಕ ಕಡಿಮೆಯಾಗಿದೆ. ಪಾಲಕರು ಮಕ್ಕಳನ್ನು ಅತಿ ಪ್ರೀತಿಯಿಂದ ಬೆಳೆಸ್ತಾರೆಯೇ ವಿನಃ ಹೆಣ್ಮಕ್ಕಳಿಗೆ ಅಗತ್ಯವಿರುವ ಕೆಲ ವಿಷ್ಯಗಳನ್ನು ತಿಳಿಸುವುದಿಲ್ಲ.
 

ಹೆಣ್ಮಕ್ಕಳು ಯಾವುದ್ರಲ್ಲೂ ಕಡಿಮೆಯಿಲ್ಲ. ಈಗಿನ ಕಾಲವೆಂದಲ್ಲ ಹಿಂದೆ ಕೂಡ ಭಾರತದಲ್ಲಿ ಮಹಿಳೆಯರು ಉನ್ನತ ಹದ್ದೆಗಳನ್ನು ಅಲಂಕರಿಸಿದ್ದರು. ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಕಾಲಿಡದ ಕ್ಷೇತ್ರವಿಲ್ಲ. ಎಲ್ಲ ಕ್ಷೇತ್ರದಲ್ಲೂ ಮಹಿಳೆ ಯಶಸ್ಸು ಸಾಧಿಸುತ್ತಿದ್ದಾಳೆ. ಉತ್ಸಾಹದಿಂದ ಕೆಲಸ ಮಾಡ್ತಿದ್ದಾಳೆ. ಹೆಣ್ಮಕ್ಕಳು ಸ್ವಾವಲಂಬಿ ಬದುಕು ಬದುಕಬೇಕು. ಇದಕ್ಕಾಗಿ ಪಾಲಕರು ಶಿಕ್ಷಣ ನೀಡ್ತಾರೆ. ಶಿಕ್ಷಣ ಸ್ವಾವಲಂಬಿ ಜೀವನಕ್ಕೆ ಅತ್ಯಗತ್ಯ. ಹಾಗೆಯೇ ಹೆಣ್ಣು ಮಕ್ಕಳಿಗೆ ಪಾಲಕರು ಇನ್ನೂ ಕೆಲ ವಿಷ್ಯಗಳನ್ನು ಕಲಿಸಬೇಕಾಗುತ್ತದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆ ತೆಗೆಯಬೇಕಾಗುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಕೆಲವೊಂದು ವಿಷ್ಯಗಳನ್ನು ಪಾಲಕರು ಕಲಿಸಬೇಕು. ಬಾಲ್ಯದಿಂದಲೇ ಹೆಣ್ಣುಮಕ್ಕಳಲ್ಲಿ ಕೌಶಲ್ಯಗಳನ್ನು ಬೆಳೆಸುವುದರಿಂದ  ಹೆಣ್ಣುಮಕ್ಕಳ ವ್ಯಕ್ತಿತ್ವ ವಿಕಸನ ಸುಲಭವಾಗುತ್ತದೆ.  ಭವಿಷ್ಯದಲ್ಲಿ ಅವರು ಯಶಸ್ವಿಯಾಗಲು ಇದು ನೆರವಾಗುತ್ತದೆ. ಮಗಳನ್ನು ಸ್ವಾವಲಂಬಿ ಮಾಡಲು ಪಾಲಕರು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಹೆಣ್ಣು ಮಕ್ಕಳಿಗೆ ಕಲಿಸಿ ಈ ವಿಷ್ಯ : 
ಕಾಳಜಿ (Concern) ವಹಿಸುವುದನ್ನು ಮಕ್ಕಳಿಗೆ ಕಲಿಸಿ :
ಬೇರೆಯವರನ್ನು ಕಾಳಜಿ ಮಾಡುವುದು ಇದ್ದೇ ಇದೆ. ಮಕ್ಕಳಿಗೆ ತಮ್ಮನ್ನು ತಾವು ಕಾಳಜಿ ಮಾಡುವುದನ್ನು ಕಲಿಸಬೇಕು. ಆಗ ಹೆಣ್ಣು ಮಕ್ಕಳು (Daughters ) ತಮ್ಮ ತನಕ್ಕೂ ಮಹತ್ವ ನೀಡುತ್ತಾರೆ.  ಅವರಿಗೆ ತಮ್ಮನ್ನು ತಾವು ಹೇಗೆ ನೋಡಿಕೊಳ್ಳಬೇಕು ಎಂದು ಪಾಲಕರು ತಿಳಿಸಬೇಕು. ಬಾಲ್ಯದಲ್ಲಿಯೇ ತಮ್ಮ ಬಗ್ಗೆ ಕಾಳಜಿವಹಿಸಿದ್ರೆ ಮುಂದೆ ಯಶಸ್ಸಿನ ಹಾದಿ ಸುಲಭವಾಗುತ್ತದೆ.  

ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಡಿ : ಹುಡುಗಿಯರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದ್ರೆ ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಾಲಕರು ಕಲಿಸಬೇಕು. ಸಾಮಾನ್ಯವಾಗಿ ಬಾಲ್ಯದಲ್ಲಿ ಏನೂ ಅರಿಯುವುದಿಲ್ಲ ಎನ್ನುವ ಕಾರಣಕ್ಕೆ ಅವರ ಎಲ್ಲ ನಿರ್ಧಾರದಲ್ಲಿ ನಾವು ಮೂಗು ತೂರಿಸುತ್ತೇವೆ. ದೊಡ್ಡದವಾಗ್ತಿದ್ದಂತೆ ಅವರು ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಅವರ ನಿರ್ಧಾರದ ಮಧ್ಯೆ ಪಾಲಕರ ಪ್ರವೇಶವಾಗುತ್ತದೆ. ಇದು ತಪ್ಪು.  ಹೆಣ್ಣುಮಕ್ಕಳು ತಮ್ಮ ನಿರ್ಧಾರಗಳಿಗಾಗಿ ಇತರರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಬೇಕು. ತಮ್ಮ ಜೀವನದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಆರಂಭದಿಂದಲೇ ಕಲಿಸಿದ್ರೆ ಮುಂದೆ ಅವರ ಬದುಕು ಸುಗಮವಾಗುತ್ತದೆ. 

ಜಾಗರೂಕತೆ ಅಗತ್ಯ : ಹೆಣ್ಣು ಮಕ್ಕಳಿಗೆ ನಿರ್ಧಾರ ತೆಗೆದುಕೊಳ್ಳಲು ನೀವು ಬಿಟ್ಟಾಗ ಕೆಲ ನಿರ್ಧಾರಗಳನ್ನು ಅವರು ತಪ್ಪಾಗಿ ತೆಗೆದುಕೊಳ್ಳಬಹುದು. ಹಾಗಾಗಿ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಹಾಗೆಯೇ ಪ್ರತಿ ಹೆಜ್ಜೆಯನ್ನು ಚಿಂತಿಸಿ ಇಡುವಂತೆ ಹೆಣ್ಣು ಮಕ್ಕಳಿಗೆ ಕಲಿಸಬೇಕು. ಸದಾ ಜಾಗೃತರಾಗಿರುವಂತೆ ಅವರಿಗೆ ಕಲಿಸಬೇಕು. ಹಿಂದೆ ಆದ ತಪ್ಪಿನ ನಂತ್ರ ಅದನ್ನು ಪುನಾರಾವರ್ತಿಸದೆ, ಅದರಿಂದ ಪಾಠ ಕಲಿತು ಮುಂದೆ ನಡೆಯುವಂತೆ ಅವರಿಗೆ ಹೇಳಬೇಕು.

ಅಯ್ಯೋ…! ಈ ದೇಶದಲ್ಲಿ ಮಹಿಳೆಯರಿಗೆ ಒಳ ಉಡುಪು ಧರಿಸುವ ಸ್ವಾತಂತ್ರ್ಯವೂ ಇಲ್ಲ!

ಹಕ್ಕುಗಳಿಗಾಗಿ ಹೋರಾಟ : ಅನೇಕ ಬಾರಿ ಸಮಾಜ ಅಥವಾ ಕುಟುಂಬದ ಒತ್ತಡದಿಂದಾಗಿ ಬಹುತೇಕ ಹೆಣ್ಣುಮಕ್ಕಳು ತಮ್ಮ ಬದುಕಿನೊಂದಿಗೆ  ರಾಜಿ ಮಾಡಿಕೊಳ್ಳುತ್ತಾರೆ. ಸಂಬಂಧಗಳನ್ನು ಗೌರವಿಸುವುದನ್ನು ಹುಡುಗಿಯರಿಗೆ ಕಲಿಸಿ. ಅದರಲ್ಲಿ ತಪ್ಪಿಲ್ಲ. ಆದ್ರೆ ಅವರ ಹಕ್ಕು ಕೂಡ ಇಲ್ಲಿ ಮಹತ್ವದ್ದಾಗುತ್ತದೆ. ತಮಗೆ ಹಕ್ಕು ಸಿಗ್ತಿಲ್ಲ ಎಂಬುದು ಗೊತ್ತಾದ ಸಂದರ್ಭದಲ್ಲಿ ಅದರ ವಿರುದ್ಧ  ಧ್ವನಿ ಎತ್ತಲು ಅವರನ್ನು ಪ್ರೋತ್ಸಾಹಿಸಲು ಮರೆಯಬೇಡಿ. 

ಮೊದಲ ಬಾರಿ ತಾಯಿಯಾಗುತ್ತಿದ್ದೀರಾ ? ಈ ವಿಚಾರಗಳ ಬಗ್ಗೆ ಗೊತ್ತಿರಲಿ

ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯ ಕೊಡಿ : ಹೆಣ್ಣು ಮಕ್ಕಳು ಅಂದ್ರೆ ವಿಶೇಷ ಪ್ರೀತಿ ಜೊತೆ ಆತಂಕ ಪಾಲಕರಲ್ಲಿರುತ್ತದೆ. ಅವರಿಗೆ ಮನೆಯಲ್ಲಿ ಮಾತ್ರ ಸ್ವಾತಂತ್ರ್ಯವಿರುತ್ತದೆ. ಮನೆಯಿಂದ ಹೊರಗೆ ಹೋಗಲೂ ಕೆಲ ಪಾಲಕರು ಅನುಮತಿ ನೀಡುವುದಿಲ್ಲ. ಅನೇಕ ಕಾರಣಕ್ಕೆ ಪಾಲಕರು, ಹೆಣ್ಣು ಮಕ್ಕಳನ್ನು ಬಂಧಿ ಮಾಡಿರುತ್ತಾರೆ. ಇದು ಸರಿಯಲ್ಲ. ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯ ನೀಡಬೇಕು. ಮನೆಯಲ್ಲೇ ಇದ್ದರೆ ಹುಡುಗಿಯರಿಗೆ ಪ್ರಪಂಚದ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ. ಅವರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ತಪ್ಪು ಗಳ ಬಗ್ಗೆ ತಿಳಿಯುವುದಿಲ್ಲ. ಅವರನ್ನು ಸ್ವಾವಲಂಬಿ ಮಾಡ್ಬೇಕೆಂದ್ರೆ ಅವರಿಗೆ ಸ್ವಾತಂತ್ರ್ಯ ನೀಡ್ಬೇಕಾಗುತ್ತದೆ.
 

click me!