ಹಳೆ ವಾರ್ಡೋಬ್ ಗೆ ನೀಡಿ ಹೊಸ ಮೆರಗು, ಮನೆ ಚೆಂದವಾಗಿಸಲು ಇಲ್ಲಿವೆ ಸೂಪರ್ ಟಿಪ್ಸ್

By Suvarna News  |  First Published Aug 25, 2022, 5:21 PM IST

ಮನೆಯನ್ನು ಸುಂದರವಾಗಿ ಅಲಂಕಾರ ಮಾಡಿರ್ತೇವೆ. ಆದ್ರೆ ದುಬಾರಿ ಬೆಲೆಯ ಹಳೆ ವಸ್ತುಗಳು ಅನೇಕ ಬಾರಿ ಸೌಂದರ್ಯಕ್ಕೆ ಧಕ್ಕೆ ತರುತ್ತವೆ. ಅದ್ರಲ್ಲಿ ಬೀರು ಕೂಡ ಒಂದು. ಹಳೆ ಬೀರು ಹೊಳೆಯಬೇಕೆಂದ್ರೆ ಕೆಲವೊಂದು ಟಿಪ್ಸ್ ಫಾಲೋ ಮಾಡ್ಬೇಕು.
 


ಮನೆ ಅಂದ್ಮೇಲೆ ವಾರ್ಡ್ರೋಬ್  ಇದ್ದೇ ಇರುತ್ತದೆ. ಬಹುತೇಕರ ಮನೆಯಲ್ಲಿ ಕಬ್ಬಿಣದ ವಾರ್ಡ್ರೋಬ್  ಖರೀದಿ ಮಾಡ್ತಾರೆ. ವಸ್ತುಗಳು, ಹಣ, ಆಭರಣವನ್ನು ಸುರಕ್ಷಿತವಾಗಿಡಲು ಇದನ್ನು ಬಳಸ್ತಾರೆ. ಇತ್ತೀಚಿನ ದಿನಗಳಲ್ಲಿ ಮರದ ವಾರ್ಡ್ರೋಬ್  ಕೂಡ ಮಾಮೂಲಿಯಾಗಿದೆ. ಆದ್ರೆ ಈ ವಾರ್ಡ್ರೋಬ್ ಗಳು ಅನೇಕ ದಿನ ಬಳಸಿದ ನಂತ್ರ ಬಣ್ಣ ಕಳೆದುಕೊಳ್ತವೆ. ಬಣ್ಣ ಮಾಸುತ್ತದೆ. ಹಳೆಯದರಂತೆ ಕಾಣುತ್ತದೆ. ಆಗ ವಾರ್ಡ್ರೋಬ್  ಬದಲಿಸುವ ಆಲೋಚನೆ ನಾವು ಮಾಡ್ತೇವೆ. ಈ ಆಲೋಚನೆ ಬಿಟ್ಟು ಸುಲಭವಾಗಿ ಕಬ್ಬಿಣದ ಬೀರು ಹೊಳೆಯುಂತೆ ಹೇಗೆ ಮಾಡೋದು ಎಂಬುದನ್ನು ತಿಳಿದುಕೊಳ್ಳಿ.   

ಕಬ್ಬಿಣದ ವಾರ್ಡ್ರೋಬ್ ಕ್ಲೀನ್ ಮಾಡೋದು ಹೇಗೆ? : 
ಟೂತ್ಪೇಸ್ಟ್  :
ಟೂತ್ಪೇಸ್ಟ್ ಬರೀ ಹಲ್ಲು ಕ್ಲೀನ್ ಮಾಡೋಕೆ ಮಾತ್ರವಲ್ಲ ಕಬ್ಬಿಣದ ವಾರ್ಡ್ರೋಬ್  ಕ್ಲೀನ್ ಮಾಡಲು ಒಂದು ಸುಲಭ ವಿಧಾನವಾಗಿದೆ. ಬೆಳ್ಳಿಯ ಮೇಲಿನ ಕಲೆಗಳನ್ನು ತೆಗೆದುಹಾಕಲು ಅನೇಕ ಮಹಿಳೆಯರು ಟೂತ್ಪೇಸ್ಟ್ ಬಳಸುತ್ತಾರೆ. ನಿಮ್ಮ ಬೀರು ತುಂಬಾ ಕೊಳಕಾಗಿದ್ದರೆ, ಟೂತ್ಪೇಸ್ಟ್ ಸಹಾಯದಿಂದ ನೀವು ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.ಒಂದು ಟೀ ಚಮಚ ಟೂತ್ಪೇಸ್ಟ್, ಒಂದು ಕಪ್  ಬಿಸಿ ನೀರು, ಒಂದು ಬೌಲ್ ಅಗತ್ಯ. ಬಟ್ಟಲಿಗೆ ಟೂತ್ಪೇಸ್ಟ್  ಹಾಕಿ, ನಂತ್ರ ಬಟ್ಟೆ ಅಥವಾ ಬ್ರಷ್ ಸಹಾಯದಿಂದ ಕಪಾಟಿಗೆ ನೀರನ್ನು ಹಾಕಿ ಕಪಾಟನ್ನು ಸ್ವಚ್ಛಗೊಳಿಸಿ. ನಂತ್ರ ಕಪಾಟಿಗೆ ಟೂತ್ಪೇಸ್ಟ್ ಹಚ್ಚಿ, ಉಜ್ಜಿ. ನಂತ್ರ ಮತ್ತೆ ನೀರು ಹಾಕಿ ಸ್ವಚ್ಛಗೊಳಿಸಿ. ಗಟ್ಟಿಯಾಗಿ ಉಜ್ಜಿದ್ರೆ ಕಪಾಟಿಗೆ ಗೀರು ಬೀಳುವ ಸಾಧ್ಯತೆಯಿರುತ್ತದೆ. ಹಾಗಾಗಿ ನಿಧಾನವಾಗಿ ಉಜ್ಜಬೇಕು.

Tap to resize

Latest Videos

ಕುಡಿಯೋಕೆ ಮಾತ್ರವಲ್ಲ ಆರೋಗ್ಯಕರ ಕೂದಲಿಗೂ ಕಾಫಿ ಬಳಸಿ

ಬಿಸಿ ನೀರು (Hot Water) ಮತ್ತು ಸೋಪ್ : ಕಬ್ಬಿಣದ ಬೀರುವನ್ನು ಸ್ವಚ್ಛಗೊಳಿಸಲು ಉತ್ತಮ ಮಾರ್ಗವೆಂದರೆ ಬೆಚ್ಚಗಿನ ನೀರು ಮತ್ತು ದ್ರವ ಸೋಪ್ ಮಿಶ್ರಣ.  ಅರ್ಧ ಕಪ್ ಬಿಸಿ ನೀರು, ಅರ್ಧ  ದ್ರವ ಸೋಪ್, 1 ಮಗ್ ನೀರು. ನೀರನ್ನು ಬಿಸಿ ಮಾಡಿ ಮತ್ತು ಅದರಲ್ಲಿ ದ್ರವ ಸೋಪ್ ಮಿಶ್ರಣ ಮಾಡಿ. ನಂತರ, ಕಪಾಟನ್ನು ಬಟ್ಟೆ ಅಥವಾ ಟೂತ್ ಬ್ರಷ್‌ನಿಂದ ಸ್ವಚ್ಛಗೊಳಿಸಿ ಮತ್ತು ಅಂತಿಮವಾಗಿ ಬೀರುವನ್ನು ಸೋಪ್ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ.  

ನಿಂಬೆ (Lemon) ಮತ್ತು ಅಡಿಗೆ ಸೋಡಾ (Cooking Soda) :  ಅಡಿಗೆ ಸೋಡಾ ಮನೆಯನ್ನು ಸ್ವಚ್ಛಗೊಳಿಸಲು ತುಂಬಾ ಉಪಯುಕ್ತವಾಗಿದೆ. ಇದು ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ವಸ್ತುಗಳನ್ನು ಸ್ವಚ್ಛವಾಗಿಡಲು ಸಹಕಾರಿ. ನಿಂಬೆಯನ್ನು ಅಡಿಗೆ ಸೋಡಾದೊಂದಿಗೆ ಬೆರೆಸಿದರೆ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅರ್ಧ ಕಪ್ ಬಿಸಿ ನೀರು, ಅರ್ಧ ಕಪ್ ನಿಂಬೆ ರಸ, ಒಂದು ಪಿಂಚ್ ಅಡಿಗೆ ಸೋಡಾ. ಈವೆಲ್ಲವನ್ನೂ ಮಿಕ್ಸ್ ಮಾಡಿ, ಕಪಾಟಿಗೆ ಅನ್ವಯಿಸಿ ಸ್ವಚ್ಛಗೊಳಿಸಬೇಕು.   

ಕೋಲಿನ್ : ಮಾರುಕಟ್ಟೆಯಲ್ಲಿ ಅನೇಕ ಲಿಕ್ವಿಡ್ ಸಿಗುತ್ತದೆ. ಅದ್ರಲ್ಲಿ ಕೋಲಿನ್ ಕೂಡ ಒಂದು. ಕೋಲಿನ್ ಸಹಾಯದಿಂದ ನೀವು ಕಪಾಟ್ ಸ್ವಚ್ಛಗೊಳಿಸಬಹುದು. ಕೋಲಿನ್ ಸ್ಪ್ರೇ ಮಾಡಿ ನಂತ್ರ ಬಟ್ಟೆಯಿಂದ ಒರೆಸಿದ್ರೆ ಕಪಾಟ್ ಹೊಳೆಯುತ್ತದೆ. 

ಮೆನ್‌ಸ್ಟ್ರುವಲ್ ಕಪ್ ಯೋನಿಯಲ್ಲಿ ಸಿಕ್ಕಾಕಿಕೊಂಡರೆ ಏನು ಮಾಡೋದು?

ಮರದ ಕಪಾಟಿನ ಸ್ವಚ್ಛತೆ : ಮರದ ಕಪಾಟುಗಳನ್ನು ಸ್ವಚ್ಛಗೊಳಿಸಲು ಹೆಚ್ಚು ನೀರು ಬಳಸುವಂತಿಲ್ಲ. ಅದನ್ನು ಸ್ವಚ್ಛಗೊಳಿಸಲು ನೀರು ಬಳಸಿದ್ರೆ ಕಪಾಟು ಹಾಳಾಗುತ್ತದೆ. ಹಾಗಾಗಿ ಬೇರೆ ವಿಧಾನದಿಂದ ಅದನ್ನು ಸ್ವಚ್ಛಗೊಳಿಸಬೇಕು. ಒಂದು ಬಟ್ಟಲಿಗೆ ಒಂದು ಟೀ ಸ್ಪೂನ್ ಅಡಿಗೆ ಸೋಡಾ, 3 ಟೀ ಸ್ಪೂನ್ ಬಿಳಿ ವಿನೆಗರ್ ಮತ್ತು 1 ಟೀ ಸ್ಪೂನ್ ಡಿಶ್ ವಾಶ್ ದ್ರವವನ್ನು ಮಿಕ್ಸ್ ಮಾಡಬೇಕು. ಇದಕ್ಕೆ ಸ್ವಲ್ಪ ನೀರು ಸೇರಿಸಬೇಕು. ನಂತ್ರ ಸ್ಕ್ರಬ್ಬರ್ ಸಹಾಯದಿಂದ ಕಬೋರ್ಡ್ ಮೇಲೆ ನಿಧಾನವಾಗಿ ಉಜ್ಜಬೇಕು. ಈ ಕೆಲಸ ಮುಗಿದ ತಕ್ಷಣ, ಒಣ ಬಟ್ಟೆಯಿಂದ ಬೀರು ಒರೆಸಬೇಕು. ಹೀಗೆ ಮಾಡಿದ್ರೆ ವಾರ್ಡ್ರೋಬ್ ಹೊಚ್ಚ ಹೊಸದಂತೆ ಹೊಳೆಯುತ್ತದೆ.

click me!