
ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ (Malaika Aurora )ತನ್ನ ಫಿಟ್‌ನೆಸ್ (Fitness) ಮತ್ತು ಫ್ಯಾಶನ್ (Fashion) ಸೆನ್ಸ್ ನಿಂದ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಮಲೈಕಾ ಅರೋರಾ ಫ್ಯಾಶನ್ ಸ್ಟೈಲ್ ಮತ್ತು ಡಾನ್ಸ್ (Dance) ಸ್ಟೈಲ್ ಅನ್ನು ಜನರು ತುಂಬಾ ಇಷ್ಟಪಡ್ತಾರೆ. ಮಲೈಕಾ,ಫಿಟ್ನೆಸ್ ಮೆಂಟೆನೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಹಿಂದಿಗಿಂತ ಈಗ ಮಲೈಕಾ ಬದಲಾಗಿದ್ದಾರೆ. ಅವರ ಹಳೆಯ ಹಾಗೂ ಹೊಸ ಫೋಟೋಗಳನ್ನು ನೋಡಿದ್ರೆ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಮಲೈಕಾ ಅರೋರಾ ನೋಡಿ, ಅವರ ನಿಖರವಾದ ವಯಸ್ಸನ್ನು ಊಹಿಸಲು ಸಾಧ್ಯವಿಲ್ಲ. ಅರ್ಬಾಜ್ ಖಾನ್ ಜೊತೆ ಮದುವೆ ಮುರಿದು ಬಿದ್ದ ನಂತರ ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.ಇಬ್ಬರ ಮಧ್ಯೆ ಹೊಂದಾಣಿಕೆ ಚೆನ್ನಾಗಿದೆ. ಮಲೈಕಾ ಅರೋರಾಗೆ ಈಗ 48 ವರ್ಷ. ಅರ್ಬಾಜ್ ಖಾನ್ ಜೊತೆ 19 ವರ್ಷಗಳ ಕಾಲ ಸಂಸಾರ ನಡೆಸಿದ್ದ ಮಲೈಕಾ ಅರೋರಾ ಕೆಲ ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದಾರೆ. ಅಭಿಮಾನಿಗಳು ಮಲೈಕಾ ಮತ್ತು ಅರ್ಜುನ್ ಜೋಡಿಗೆ ಸೈ ಎಂದಿದ್ದಾರೆ. ಅರ್ಜುನ್ ಯಾವಾಗ ಮಲೈಕಾ ಕೈ ಹಿಡಿಯುತ್ತಾರೆಂಬ ಕುತೂಹಲ ಎಲ್ಲರಿಗೂ ಇದೆ.
ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ :
ಮಲೈಕಾ ಅಕ್ಟೋಬರ್ 23,1973 ರಂದು ಜನಿಸಿದರು. ಮಲೈಕಾ ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಆರಂಭಿಸಿದ್ದರು. ಅವರು 1990 ರ ದಶಕದ ಅಂತ್ಯದಲ್ಲಿ ವೀಡಿಯೊ ಜಾಕಿಯಾಗಿ ಆಯ್ಕೆಯಾದರು. ಫಿಟ್ನೆಸ್, ಡ್ರೆಸ್ ಮತ್ತು ಡ್ಯಾನ್ಸ್ ನಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮಲೈಕಾ ಐಟಂ ಡಾನ್ಸ್ ಗಳಲ್ಲಿ ಮಿಂಚುತ್ತಿದ್ದಾರೆ.
ಅಭಿಮಾನಿಗಳ ನಿದ್ರೆ ಕದ್ದ ಬೆಡಗಿ :
ಸದ್ಯ ಬಾಲಿವುಡ್ ನ ಐಟಂ ಸಾಂಗ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೆ ಹೋದ್ರೂ ಅಭಿಮಾನಿಗಳಿಂದ ಮಲೈಕಾ ದೂರವಿಲ್ಲ. ಅನೇಕ ಬ್ರಾಂಡ್ ಪ್ರಮೋಷನ್ ಮಾಡ್ತಿರುವ ಮಲೈಕಾ ಸೌಂದರ್ಯ ಉತ್ಪನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ಬೆಡಗಿ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಡಾನ್ಸ್ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ಜಿಮ್ ಮುಂದೆ ಮಲೈಕಾ ಅನೇಕ ಬಾರಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಅವರ ಡ್ರೆಸ್ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್‌ನ Single Mothers ತಮ್ಮ ತಾಯ್ತನದ ಬಗ್ಗೆ ಹೇಳುವುದೇನು?
ಮಲೈಕಾ ನಿವ್ವಳ ಆಸ್ತಿ ಮೌಲ್ಯ ಗೊತ್ತಾ? : ಮಲೈಕಾ ಆರ್ಥಿಕವಾಗಿ ಸಾಕಷ್ಟು ಬಲ ಹೊಂದಿದ್ದಾರೆ. ಮಲೈಕಾ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 100 ಕೋಟಿ ರೂಪಾಯಿ. ಯಸ್. ಸಿನಿಮಾನಗಳಲ್ಲಿ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವ ಮಲೈಕಾ ದುಬಾರಿ ನಟಿ. ಒಂದು ಡಾನ್ಸ್ ಗೆ ಮಲೈಕಾ 1.75 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ. ಇದರ ಜೊತೆ ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿರುವ ಮಲೈಕಾ ಅಲ್ಲಿಂದಲೂ ಗಳಿಸುತ್ತಾರೆ. ಇದಲ್ಲದೆ ಮಲೈಕಾ ಅರೋರಾ ಅವರ ದಿವಾ ಯೋಗ ಸ್ಟುಡಿಯೋ ಕೂಡ ಆದಾಯದ ಮೂಲವಾಗಿದೆ.
Zodiacs and Relationship: ರಾಶಿ ಪ್ರಕಾರ, ವಿವಾಹ ಜೀವನ ಸಿಹಿಯಾಗಿರಲು ನೀವೇನು ಮಾಡ್ಬೇಕು..?
ಮಲೈಕಾ ಬಳಿ ಇದೆ ದುಬಾರಿ ವಾಹನ :
ಬಾಲಿವುಡ್ ಇಂಡಸ್ಟ್ರಿಯ ಶ್ರೀಮಂತ ನಟಿಯರಲ್ಲಿ ಮಲೈಕಾ ಅರೋರಾ ಹೆಸರು ಸೇರಿದೆ. ಅವರ ಬಳಿ ಅತ್ಯಂತ ದುಬಾರಿ ಕಾರುಗಳ ಸಂಗ್ರಹವಿದೆ. ಮಲೈಕಾ ಮುಂಬೈನಲ್ಲಿ ತನ್ನದೇ ಆದ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ನಟಿ ರೇಂಜ್ ರೋವರ್, ಬಿಎಂಡಬ್ಲ್ಯೂ7 ಸಿರೀಸ್ 730 ಎಲ್ ಡಿ (BMW 7Series 730 LD), ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta), ಬಿಎಂಡಬ್ಲ್ಯೂ ಎಕ್ಸ್ 7 (BMW X7) ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಮಲೈಕಾ ಒಡೆತನದ ರೇಂಜ್ ರೋವರ್ ಕಾರಿನ ಬೆಲೆ 2.11 ಕೋಟಿ ರೂಪಾಯಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.