ರಾಧಿಕಾ ಆಫ್ಟೆ ಫೋಟೋ ವೈರಲ್ ಆಗ್ತಿದ್ದಂತೆ ಕಾಡಿದ ಪ್ರಶ್ನೆ, ಸಾರ್ವಜನಿಕ ಪ್ರದೇಶದಲ್ಲಿ ಎಷ್ಟು ಮಹಿಳೆಯರು ಬ್ರೆಸ್ಟ್ ಫೀಡ್ ಮಾಡ್ತಾರೆ

Published : Feb 20, 2025, 01:29 PM ISTUpdated : Feb 20, 2025, 05:39 PM IST
ರಾಧಿಕಾ ಆಫ್ಟೆ ಫೋಟೋ ವೈರಲ್ ಆಗ್ತಿದ್ದಂತೆ ಕಾಡಿದ ಪ್ರಶ್ನೆ, ಸಾರ್ವಜನಿಕ ಪ್ರದೇಶದಲ್ಲಿ ಎಷ್ಟು ಮಹಿಳೆಯರು ಬ್ರೆಸ್ಟ್ ಫೀಡ್ ಮಾಡ್ತಾರೆ

ಸಾರಾಂಶ

ಎದೆ ಹಾಲು ಮಗುವಿಗೆ ಅಮೃತವಿದ್ದಂತೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ತನ್ಯಪಾನ ಸವಾಲಾಗಿದೆ. ಕೇವಲ ಶೇಕಡಾ 6 ರಷ್ಟು ಭಾರತೀಯ ಮಹಿಳೆಯರು ಮಾತ್ರ ಯಾವುದೇ ತೊಂದರೆಯಿಲ್ಲದೆ ಹಾಲುಣಿಸುತ್ತಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 90 ರಷ್ಟು ಮಹಿಳೆಯರು ಕಾರಿನಲ್ಲಿ ಹಾಲುಣಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸಲು ತಾಯಂದಿರು ಮುಜುಗರ ಮತ್ತು ಸ್ವಚ್ಛತೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಸುಪ್ರೀಂ ಕೋರ್ಟ್ ಸಾರ್ವಜನಿಕ ಕಟ್ಟಡಗಳಲ್ಲಿ ಹಾಲುಣಿಸಲು ಪ್ರತ್ಯೇಕ ಸ್ಥಳಗಳನ್ನು ಒದಗಿಸಲು ಆದೇಶಿಸಿದೆ.

ಎದೆ ಹಾಲು (Breast milk) ಮಗುವಿಗೆ ಅಮೃತಕ್ಕೆ ಸಮಾನ. ಮಗು ಜನಿಸಿದ ಒಂದು ಗಂಟೆಯಲ್ಲಿ ಸ್ತನ್ಯಪಾನ ಮಾಡ್ಬೇಕು. ಇದು ಮಗುವಿನ ಆರೋಗ್ಯ (health)ಕ್ಕೆ ಬಹಳ ಮುಖ್ಯ. ಭಾರತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷಿದ್ಧ ಎನ್ನುವ ಕೆಲ ಕೆಲಸಗಳಿವೆ. ಅದ್ರಲ್ಲಿ ಸ್ತನ್ಯಪಾನ ಕೂಡ ಸೇರಿರೋದು ದುರಾದೃಷ್ಟಕರ.  ಮಗು ಎಷ್ಟೇ ಹಸಿದಿರಲಿ, ತಾಯಿಯಾದವಳು ನಾಲ್ಕು ಜನರ ಮುಂದೆ ಸ್ತನ್ಯಪಾನ ಮಾಡಲು ಹಿಂದೇಟು ಹಾಕ್ತಾಳೆ. ಎಲ್ಲೆಂದ್ರಲ್ಲಿ ಆಕೆ ಸ್ತನ್ಯಪಾನ ಮಾಡಿದ್ರೆ ಆಕೆಯನ್ನು ಜನರು ನೋಡುವ ದೃಷ್ಟಿಯೇ ಬದಲಾಗುತ್ತೆ. ಭಾರತದ ಸಾರ್ವಜನಿಕ ಪ್ರದೇಶದಲ್ಲಿ ಬ್ರೆಸ್ಟ್ ಫೀಡ್ (breast feeding) ಮಾಡೋದು ತಾಯಂದಿರಿಗೆ ದೊಡ್ಡ ಸವಾಲು.

ಸ್ತನ್ಯಪಾನ ಹಾಗೂ ಸಾರ್ವಜನಿಕ ಪ್ರದೇಶದ ಬಗ್ಗೆ ಜನರ ಮನಸ್ಸಿನಲ್ಲಿರುವ ತಪ್ಪು ಕಲ್ಪನೆ ತೊಡೆದು ಹಾಕಲು ಅನೇಕ ನಟಿಯರು ಪ್ರಯತ್ನಿಸಿದ್ದಾರೆ.  ಮಗುವಿಗೆ ಹಾಲುಣಿಸುವ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ರಾಧಿಕಾ ಆಫ್ಟೆ (Bollywood actress Radhika Apte), ಬಾಟಲಿಗೆ ಎದೆ ಹಾಲು ಪಂಪ್ ಮಾಡ್ತಿದ್ದ ಫೋಟೋ ಫೋಸ್ಟ್ ಮಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಈ ಮಧ್ಯೆ ಸುಪ್ರೀಂ ಕೋರ್ಟ್ ಕೂಡ ಹಾಲುಣಿಸುವ ಮಹತ್ವವನ್ನು ಎತ್ತಿ ಹಿಡಿದಿದೆ. ಸಾರ್ವಜನಿಕ ಕಟ್ಟಡಗಳಲ್ಲಿ ಮಕ್ಕಳ ಆರೈಕೆ ಮತ್ತು ಶಿಶುಗಳಿಗೆ ಹಾಲುಣಿಸಲು ಪ್ರತ್ಯೇಕ ಸ್ಥಳಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸರ್ಕಾರಿ ಕಟ್ಟಡಗಳಲ್ಲಿ ಇಂಥಹ ಸೌಲಭ್ಯ ಒದಗಿಸುವ ಮೂಲಕ ತಾಯಂದಿರ ಗೌಪ್ಯತೆ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚನೆ ನೀಡಿದೆ. 

ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದೇ ಬ್ರೆಸ್ಟ್ ಪಂಪಿಂಗ್ ಮಾಡಿದ ರಾಧಿಕಾ ಆಪ್ಟೆ ವಿರುದ್ಧ ನೆಟ್ಟಿಗರು ಗರಂ

ಭಾರತದ ಸಾರ್ವಜನಿಕ ಪ್ರದೇಶದಲ್ಲಿ ಎಷ್ಟು ಮಹಿಳೆಯರು ಸ್ತನ್ಯಪಾನ ಮಾಡ್ತಾರೆ ಎನ್ನುವ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಅಚ್ಚರಿ ಅಂದ್ರೆ ಭಾರತದಲ್ಲಿ ಶೇಕಡಾ 6ರಷ್ಟು ಮಹಿಳೆಯರು ಮಾತ್ರ, ಯಾವುದೇ ಸಮಸ್ಯೆ ಇಲ್ಲದೆ ತಮ್ಮ ಮಕ್ಕಳಿಗೆ ಎದೆಹಾಲು ಉಣಿಸ್ತಿದ್ದಾರೆ. ಉಳಿದವರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮಗುವಿಗೆ ಮಸಾಜ್ ಮಾಡುವಾಗ ಜಾಗರೂಕರಾಗಿರಿ, ಈ 5 ತಪ್ಪು ಮಾಡ್ಲೇಬೇಡಿ

ಭಾರತದಲ್ಲಿ ಶೇಕಡಾ 90ರಷ್ಟು ಮಹಿಳೆಯರು ಕಾರಿನಲ್ಲಿ ತಮ್ಮ ಮಕ್ಕಳಿಗೆ ಬ್ರೆಸ್ಟ್ ಫೀಡ್ ಮಾಡ್ತಾರೆ. ಸಾರ್ವಜನಿಕ ಸಾರಿಗೆಯಲ್ಲಿ ಶೇಕಡಾ 78ರಷ್ಟು ಮಹಿಳೆಯರು, ರೆಸ್ಟೋರೆಂಟ್ ನಲ್ಲಿ ಶೇಕಡಾ 56ರಷ್ಟು ಮಹಿಳೆಯರು ಬ್ರೆಸ್ಟ್ ಫೀಡ್ ಮಾಡ್ತಾರೆ. ಶೇಕಡಾ 49ರಷ್ಟು ತಾಯಂದಿರು ಕಾರ್ ಪಾರ್ಕಿಂಗ್ ಆಯ್ಕೆ ಮಾಡಿಕೊಂಡ್ರೆ ಶೇಕಡಾ 47ರಷ್ಟು ಮಹಿಳೆಯರು ಟ್ರೈಲ್ ರೂಮ್ ಬಳಸ್ತಾರೆ. ಶೌಚಾಲಯದಲ್ಲಿ ಶೇಕಡಾ 44ರಷ್ಟು ಮಂದಿ, ಧಾರ್ಮಿಕ ಸ್ಥಳದಲ್ಲಿ ಶೇಕಡಾ 41ರಷ್ಟು ತಾಯಂದಿರು ಮತ್ತು ಪಾರ್ಕ್ ನಲ್ಲಿ ಶೇಕಡಾ 32ರಷ್ಟು ಮಹಿಳೆಯರು ಬ್ರೆಸ್ಟ್ ಫೀಡ್ ಮಾಡ್ತಾರೆ. ಮರದ ಕೆಳಗೆ, ಪಾಸ್ ಪೋರ್ಟ್ ಕಚೇರಿಯಲ್ಲಿ, ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತಾಗ ಹಾಗೂ ಬಸ್ ನಿಲ್ದಾಣದಲ್ಲಿ ಹಾಲುಣಿಸುವಾಗ ಅನೇಕ ಮಹಿಳೆಯರು ಸಮಸ್ಯೆ ಎದುರಿಸುತ್ತಾರೆ. ಶೇಕಡಾ 81ರಷ್ಟು ಮಹಿಳೆಯರು ಸಾರ್ವಜನಿಕ ಪ್ರದೇಶದಲ್ಲಿ ಹಾಲುಣಿಸಲು ಸಮಸ್ಯೆ ಎದುರಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಸಾರ್ವಜನಿಕ ಪ್ರದೇಶದಲ್ಲಿ ಸ್ತನ್ಯಪಾನ ಮಾಡುವ ವೇಳೆ ಎಲ್ಲರ ಕಣ್ಣು ತಾಯಿ ಮೇಲಿರುತ್ತದೆ. ಅಲ್ಲದೆ ಸ್ವಚ್ಛತೆ ಇಲ್ಲಿ ಸವಾಲಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಆದ್ರೆ ಇದು ನಗರ ಪ್ರದೇಶದಲ್ಲಿ ಮಾತ್ರ ಎಂಬುದು ಅಚ್ಚರಿ ಸಂಗತಿ. ಬಹುತೇಕ ಹಳ್ಳಿಯ ಮಹಿಳೆಯರು ಇದಕ್ಕೆ ಹಿಂಜರಿಯುವುದಿಲ್ಲ. ಯಾವುದೇ ಮುಜುಗರವಿಲ್ಲದೆ ತಮ್ಮ ಕೆಲಸದ ಜೊತೆ ಮಗುವಿಗೆ ಹಾಲುಣಿಸುವ ಕೆಲಸವನ್ನು ಹಳ್ಳಿಯ ಮಹಿಳೆಯರು ಮಾಡ್ತಾರೆಂದು ಸಮೀಕ್ಷೆ ತಿಳಿಸಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!