1941ರಲ್ಲಿ ಹೀಗಿತ್ತು ಜಿಮ್ ! ಹಿಲ್ಸ್ ಹಾಕಿ ವರ್ಕೌಟ್ ಮಾಡ್ತಿದ್ದ ಹುಡುಗಿಯರು

Published : Feb 20, 2025, 10:55 AM ISTUpdated : Feb 20, 2025, 11:21 AM IST
1941ರಲ್ಲಿ ಹೀಗಿತ್ತು ಜಿಮ್ ! ಹಿಲ್ಸ್ ಹಾಕಿ ವರ್ಕೌಟ್ ಮಾಡ್ತಿದ್ದ ಹುಡುಗಿಯರು

ಸಾರಾಂಶ

ಹಿಂದಿನ ಕಾಲದಲ್ಲಿ ಜಿಮ್‌ಗಳು ಈಗಿನಂತಿರಲಿಲ್ಲ. 1941ರ ವಿಡಿಯೋದಲ್ಲಿರುವಂತೆ, ಆಗ ಯಂತ್ರಗಳೇ ವ್ಯಾಯಾಮ ಮಾಡುತ್ತಿದ್ದವು. ಮಹಿಳೆಯರು ಸುಂದರವಾಗಿ ತಯಾರಾಗಿ ಬಂದು, ಯಂತ್ರಗಳ ಸಹಾಯದಿಂದ ಕೊಬ್ಬು ಕರಗಿಸಿಕೊಳ್ಳುತ್ತಿದ್ದರು. 1920ರಲ್ಲೇ ಹುಡುಗಿಯರು ವರ್ಕೌಟ್‌ಗೆ ಆಸಕ್ತಿ ತೋರಿಸಿದ್ದರು, ಆದರೆ ಸಾರ್ವಜನಿಕವಾಗಿ ಬೆವರುವುದು ನಿಷಿದ್ಧವಾಗಿತ್ತು. 1940ರ ದಶಕದಲ್ಲಿ ಜಿಮ್‌ಗೆ ಹೋಗಲು ಪ್ರಾರಂಭಿಸಿದರು. ಭಾರತಕ್ಕೆ ಜಿಮ್ 1931ರಲ್ಲಿ ಬಂದಿತು.

ಸ್ವಿಮ್ಮಿಂಗ್ ಡ್ರೆಸ್ (Swimming dress) ಧರಿಸಿ, ಹೈ ಹಿಲ್ಸ್ (high heels) ಹಾಕೊಂಡು ಜಿಮ್ (gym) ಗೆ ಹೋಗ್ತೇನೆ ಅಂತ ಹೊರಟ್ರೆ ಜನ ನಗ್ತಾರೆ. ಜಿಮ್ ಗೆ ಹೇಗೆ ಹೋಗ್ಬೇಕು ಗೊತ್ತಿಲ್ವಾ ಅಂತ ಪ್ರಶ್ನೆ ಮಾಡ್ತಾರೆ. ಜಿಮ್ ಗೆ ಹೋಗಿ ಒಂದ್ಕಡೆ ನಿಂತ್ಕೊಳ್ಳುವ ಪ್ರಶ್ನೆಯೇ ಇಲ್ಲ. ಒಮ್ಮೆ ಥ್ರೆಡ್ ಮಿಲ್ ಇನ್ನೊಮ್ಮೆ ಡೆಂಬೆಲ್ಸ್ ಅಂತ ಒಂದಾದ್ಮೇಲೆ ಒಂದು ವರ್ಕ್ ಔಟ್ ಮಾಡಿ ಬೆವರಿಳಿಸಿಕೊಳ್ಬೇಕು. ಆದ್ರೆ ಹಿಂದಿನ ಕಾಲದಲ್ಲಿ ಇವೆಲ್ಲ ಇರ್ಲಿಲ್ಲ. ತುಂಬಾ ಆರಾಮದಾಯಕ ಜಿಮ್ ನಲ್ಲಿ ಹೈ ಹಿಲ್ಸ್ ಹಾಕಿ ಹುಡುಗಿಯರು ವರ್ಕ್ ಔಟ್ (workout) ಮಾಡ್ತಿದ್ದರು. 

ಫ್ಯಾಷನ್ ಪ್ರತಿ ದಿನ ಬದಲಾಗುವಂತದ್ದು. ಜನರು ಆರಂಭದಿಂದಲೂ ತಮ್ಮ ಸೌಂದರ್ಯ, ಫ್ಯಾಷನ್ ಗೆ ಹೆಚ್ಚು ಒತ್ತು ನೀಡ್ತಾನೆ ಬಂದಿದ್ದಾರೆ. ಹಿಂದೆಯೂ ಮಹಿಳೆಯರು ತಮ್ಮ ದೇಹ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡ್ತಾ ಇದ್ರು. ಸ್ಲಿಮ್ ದೇಹ ಪಡೆಯಲು ವರ್ಕ್ ಔಟ್ ಮಾಡ್ತಿದ್ದರು. ಆದ್ರೆ ಆಗಿನ ಹಾಗೂ ಈಗಿನ ಜಿಮ್ ಮಧ್ಯೆ ಸಾಕಷ್ಟು ಅಂತರ ಇದೆ. ಆಗಿನ ಕಾಲದಲ್ಲಿ ವರ್ಕ್ ಔಟ್ ವ್ಯಾಖ್ಯಾನ ಈಗಿನ ವರ್ಕ್ ಔಟ್ ವ್ಯಾಖ್ಯಾನಕ್ಕಿಂತ ಭಿನ್ನವಾಗಿದೆ. ಜಿಮ್ ನಲ್ಲಿ ಈಗ ಸಾಕಷ್ಟು ವಸ್ತುಗಳನ್ನು ನಾವು ನೋಡ್ಬಹುದು. ಆದ್ರೆ ಆಗ ರೋಲರ್ ನಂತಹ ಯಂತ್ರ ಹೆಚ್ಚು ಪ್ರಸಿದ್ಧಿ ಪಡೆದಿತ್ತು.

ವಾಸ್ತು ಪ್ರಕಾರ ಮಲ್ಲಿಗೆ ಅಥವಾ ಗುಲಾಬಿ ಯಾವುದು ಮುಡಿದರೆ ಮಹಿಳೆಗೆ ಶುಭ ತರುತ್ತದೆ?

 ಸೋಶಿಯಲ್ ಮೀಡಿಯಾದಲ್ಲಿ 1941ರ ವಿಡಿಯೋ ಒಂದು ವೈರಲ್ ಆಗ್ತಾನೆ ಇದೆ. 1941ರಲ್ಲಿ ಜಿಮ್ ಸ್ಟ್ರಕ್ಚರ್ ಭಿನ್ನವಾಗಿತ್ತು ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡ್ಬಹುದು. ಆಗ ಜನರು ಜಿಮ್ ಗೆ ಹೋಗಿ ಹೆಚ್ಚು ಬೆವರಿಳಿಸಬೇಕಾಗಿರಲಿಲ್ಲ. ಅವ್ರು ಒಂದ್ಕಡೆ ನಿಂತುಕೊಂಡ್ರೆ ಸಾಕು. ರೋಲರ್ ನಂತಹ ಮಶಿನ್ ಎಲ್ಲ ಕೆಲಸವನ್ನು ಮಾಡ್ತಿತ್ತು. ಕಾಲಿಗೆ, ಬೆನ್ನಿಗೆ, ಸೊಂಟಕ್ಕೆ ಜಿಮ್ ಮಶಿನ್ ಮಸಾಜ್ ಮಾಡ್ತಿರೋದನ್ನು ನೀವು ಕಾಣ್ಬಹುದು.  ಮಹಿಳೆಯರ ಸೊಂಟದ ಸುತ್ತ ಮಶಿನ್ ಮೇಲೆ ಕೆಳಗೆ ಹೋಗ್ತಿದೆ. ಇಲ್ಲಿ ಮಹಿಳೆಯರು ಯಾವ್ದೇ ವ್ಯಾಯಾಮ ಮಾಡ್ತಿಲ್ಲ. ಯಂತ್ರ ಮಾತ್ರ ಮೇಲೆ ಕೆಳಗೆ ಹೋಗ್ತಾ ವ್ಯಾಯಾಮ ಮಾಡ್ತಿದೆ. ಕೊಬ್ಬನ್ನು ಕರಗಿಸಲು ಜನರು ಆಗ ಈ ಯಂತ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡ್ತಿದ್ದರು. ಹೊಟ್ಟೆ ಕೊಬ್ಬು ಕರಗ್ಬೇಕು ಅಂದ್ರೆ ಅವರು ತಿರುಗುವ ಯಂತ್ರದ ಮೇಲೆ ಮಲಗ್ತಾ ಇದ್ರು. ಯಂತ್ರ ರೋಲ್ ಆಗ್ತಿತ್ತು. ಅದು ಹೊಟ್ಟೆಗೆ ಟಚ್ ಆಗ್ತಾ ಇದ್ದಿದ್ರಿಂದ ಹೊಟ್ಟೆ ಕೊಬ್ಬು ಇದ್ರಿಂದ ಕರಗುತ್ತೆ ಎಂಬುದು ಆಗಿನವರ ನಂಬಿಕೆಯಾಗಿತ್ತು. 

ಮಹಿಳೆಯರು ಸುಂದರವಾಗಿ ರೆಡಿಯಾಗಿ ಜಿಮ್ ಗೆ ಬರ್ತಿದ್ದರು. ಶಾರ್ಟ್ ಡ್ರೆಸ್, ಸ್ವಿಮ್ಮಿಂಗ್ ಡ್ರೆಸ್ ಧರಿಸಿ, ಕೇಶ ವಿನ್ಯಾಸ ಮಾಡ್ಕೊಂಡು ಜಿಮ್ ಗೆ ಬರ್ತಿದ್ದ ಹುಡುಗಿರು, ಯಂತ್ರಕ್ಕೆ ತಮ್ಮ ಕಾಲು, ಹೊಟ್ಟೆ, ಸೊಂಟವನ್ನು ಟಚ್ ಮಾಡ್ತಾ, ಕೊಬ್ಬು ಕರಗಿಸಿಕೊಳ್ತಿದ್ದರು. 1920 ರಲ್ಲೇ ಹುಡುಗಿಯರು ವರ್ಕ್ ಔಟ್ ಗೆ ಆಸಕ್ತಿ ತೋರಿದ್ದರು. ಆದ್ರೆ ಸಾರ್ವಜನಿಕ ಪ್ರದೇಶದಲ್ಲಿ ಹುಡುಗಿಯರು ಬೆವರಿಳಿಸೋದು ನಿಷಿದ್ಧವಾಗಿತ್ತು. ಆದ್ರೆ 1940ರ ದಶಕದಲ್ಲಿ ಹುಡುಗಿಯರು ಜಿಮ್ ನತ್ತ ಮುಖ ಮಾಡಲು ಶುರು ಮಾಡಿದ್ದರು. ಭಾರತಕ್ಕೆ 1931ರಲ್ಲಿ ಜಿಮ್ ಆಗಮನವಾಯ್ತು. 

ಪಾರ್ಟಿಯಲ್ಲಿ ಮಿಂಚಲು ಧರಿಸಿ ಸಿಲ್ವರ್-ಗ್ರೇ ಸೀರೆಗಳು: 6 ಆಕರ್ಷಕ ಆಯ್ಕೆಗಳು

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಇದು ಪರ್ಫೆಕ್ಟ್ ಜಿಮ್ ಅಂತ ಕಮೆಂಟ್ ಮಾಡಿದ್ದಾರೆ. ಜಿಮ್ ನಲ್ಲಿ ನಮ್ಮ ಕೆಲಸ ಏನೂ ಇಲ್ಲ, ಎಲ್ಲ ಯಂತ್ರವೇ ಮಾಡಿದ್ರೆ ಎಷ್ಟು ಬೆಸ್ಟ್ ಅನ್ನೋದು ಇನ್ನೊಬ್ಬರ ಅಭಿಪ್ರಾಯ. ಯಂತ್ರ ಅಪಾಯಕಾರಿ ಅಂತ ಒಬ್ಬರು ಹೇಳಿದ್ರೆ, ಈ ತರ ಜಿಮ್ ಮಾಡಿದ್ರೆ ಕೊಬ್ಬು ಕರಗುತ್ತಾ ಅಂತ ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!