6 ತಿಂಗಳು, 1 ಅಥವಾ ಎರಡು ವರ್ಷ…. ಎಲ್ಲಿಯರೆಗೂ ಮಕ್ಕಳಿಗೆ Breastfeeding ಮಾಡಬೇಕು?

Published : Jul 29, 2026, 11:26 AM IST
breastfeeding

ಸಾರಾಂಶ

Tips to New Mom: ಮಕ್ಕಳಿಗೆ ಎದೆಹಾಲು ಉಣಿಸುವುದನ್ನು ಯಾವಾಗ ನಿಲ್ಲಿಸಬೇಕು? ಈ ಪ್ರಶ್ನೆ ಹಲವಾರು ತಾಯಂದಿರಿಗೆ ಇರುತ್ತದೆ. ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ಎಷ್ಟು ತಿಂಗಳು ಎದೆಹಾಲು ನೀಡುವುದು ಉತ್ತಮ ಎಂಬ ತಜ್ಞರ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನವಜಾತ ಶಿಶುವಿಗೆ ಎದೆಹಾಲು ತುಂಬಾ ಮುಖ್ಯ

ನವಜಾತ ಶಿಶುವಿಗೆ ಎದೆಹಾಲು ಬಹಳ ಮುಖ್ಯ. ಎದೆಹಾಲು ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್‌ಗಳು, ಎಂಜೈಮ್, ವಿಟಮಿನ್‌ಗಳು, ಮಿನರಲ್ಸ್, ಆಂಟಿಬಾಡಿ ಮತ್ತು ಹಾರ್ಮೋನುಗಳು ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಇವೆಲ್ಲವೂ ಮಗುವಿನ ಬೆಳವಣಿಗೆಗೆ ನಿರ್ಣಾಯಕವಾಗಿವೆ. ಆದರೆ ಹೆಚ್ಚಿನ, ತಾಯಂದಿರಿಗೆ ತಮ್ಮ ಮಕ್ಕಳಿಗೆ ಯಾವಾಗ ಎದೆಹಾಲು ಉಣಿಸುವುದನ್ನು ನಿಲ್ಲಿಸಬೇಕು ಎನ್ನುವ ಕುರಿತು ಸಂಶಯ ಕಾಡುತ್ತದೆ. ಖ್ಯಾತ ತಜ್ಞರು ಹೇಳಿದ ಮಾಹಿತಿಯನ್ನು ಇಲ್ಲಿದೆ. ಇದರಿಂದ ಎದೆ ಹಾಲುಣಿಸುವ ಕುರಿತು ನಿಮ್ಮ ಸಂಶಯ ದೂರವಾಗಬಹುದು.

ಮಕ್ಕಳಿಗೆ ಎಷ್ಟು ಸಮಯದವರೆಗೆ ಎದೆಹಾಲುಣಿಸಬೇಕು?

ತಾಯಿಯು ಸೂಕ್ತ ಸಮಯದವರೆಗೆ ಎದೆಹಾಲುಣಿಸದಿದ್ದರೆ, ಅದು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮಗು ಮತ್ತು ತಾಯಿಯ ನಡುವಿನ ಭಾವನಾತ್ಮಕ ಬಾಂಧವ್ಯವು ದುರ್ಬಲಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೆಚ್ಚಾಗಿ ಎಲ್ಲರೂ ಮಕ್ಕಳಿಗೆ ಕೇವಲ 6 ತಿಂಗಳವರೆಗೆ ಮಾತ್ರ ಹಾಲುಣಿಸಬೇಕು ಎಂದು ಹೇಳುತ್ತವೆ. ಆದರೆ ನಿಜವಾಗಿಯೂ ಎಷ್ಟು ಸಮಯಗಳವರೆಗೆ ಮಗುವಿಗೆ ಹಾಲುಣಿಸಬಹುದು ನೋಡೋಣ.

ಎರಡು ವರ್ಷಗಳ ಕಾಲ ಎದೆಹಾಲು ಕುಡಿಸುವುದನ್ನು ಮುಂದುವರಿಸಿ

ಕನಿಷ್ಠ ಎರಡು ವರ್ಷಗಳ ಕಾಲ ಎದೆಹಾಲು ಕುಡಿಸುವುದನ್ನು ಮುಂದುವರಿಸಬೇಕು ತಜ್ಞರು ಹೇಳುತ್ತಾರೆ. ನಿಮ್ಮ ಮಗು ನಿಯಮಿತವಾಗಿ ಊಟ ಮಾಡಲು ಪ್ರಾರಂಭಿಸಿದ ನಂತರವೂ ಸ್ತನ್ಯಪಾ ಮಾಡುವುದು ಕೂಡ ಉತ್ತಮ. ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ ಮತ್ತು ತಾಯಿ ಮತ್ತು ಮಗುವಿನ ನಡುವೆ ಬಲವಾದ ಬಾಂಧವ್ಯವನ್ನು ನಿರ್ಮಿಸುತ್ತದೆ.

ಶಿಶುವೈದ್ಯರ ಪ್ರಕಾರ, ಆರು ತಿಂಗಳ ನಂತರ ಎದೆಹಾಲುಣಿಸುವುದು ಮಾತ್ರ ಸಾಕಾಗುವುದಿಲ್ಲ. ಮಗುವಿನ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸಲು ಎದೆಹಾಲುಣಿಸುವುದರ ಜೊತೆಗೆ ಪೌಷ್ಟಿಕ, ವಯಸ್ಸಿಗೆ ಸೂಕ್ತವಾದ ಪೂರಕ ಆಹಾರವನ್ನು ಒದಗಿಸುವುದು ಅತ್ಯಗತ್ಯ. ಪ್ರತಿಯೊಬ್ಬ ತಾಯಿ ಮತ್ತು ಮಗುವಿನ ಪ್ರಯಾಣವು ವಿಶಿಷ್ಟವಾಗಿದೆ, ಆದ್ದರಿಂದ ಮಗುವಿನ ಅಗತ್ಯತೆಗಳು ಮತ್ತು ತಾಯಿಯ ಅನುಕೂಲತೆಯ ಆಧಾರದ ಮೇಲೆ ಹಾಲುಣಿಸುವಿಕೆಯನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದಲ್ಲದೆ, ನಿಮ್ಮ ಮಗುವಿನ ಪೋಷಣೆಯ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಡ್ಲಿ-ದೋಸೆಗೆ ಪರ್ಫೆಕ್ಟ್ ಕಾಂಬಿನೇಶನ್.. ಅಪ್ಪಟ ಉಡುಪಿ ಶೈಲಿಯ ತೆಂಗಿನಕಾಯಿ ಚಟ್ನಿ ಮಾಡಲು ಇಲ್ಲಿದೆ ಸೀಕ್ರೆಟ್ ಟಿಪ್ಸ್
ಈ ರೀತಿ ಮೊಯಿಶ್ಚರೈಸರ್ ಯೂಸ್ ಮಾಡಿ, ಗ್ಲಾಸ್ ಸ್ಕಿನ್ ಪಡೆಯಿರಿ