
ಹೆಣ್ಣುಮಕ್ಕಳು ಸೌಂದರ್ಯ (Beauty)ದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ಹಲವು ಆರ್ಯುವೇದಿಕ್ ವಿಧಾನಗಳ ಮೂಲಕ ಚರ್ಮದ, ತ್ವಚೆಯ ಆರೋಗ್ಯ (Health)ವನ್ನು ಕಾಪಾಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗೆ ಸೌಂದರ್ಯದ ಬಗೆಗಿರುವ ಅಪಾರದ ಕಾಳಜಿಯನ್ನು ನೋಡಿಕೊಂಡೇ ಬ್ಯೂಟಿ ಪಾರ್ಲರ್ (Beauty Parlour) ಎಂಬ ಕಾನ್ಸೆಪ್ಟ್ ಬಂದಿದೆ. ಮೊದಲ್ಲೆಲ್ಲಾ ಹೆಣ್ಣು ಮಕ್ಕಳು ಮನೆಯಲ್ಲೇ ಅರಿಶಿನ, ಗಂಧ ತೇಯ್ದು ಮುಖಕ್ಕೆ ಹಚ್ಚಿಕೊಳ್ಳಬೇಕಿತ್ತು. ಆದರೆ, ಈಗ ಬ್ಯೂಟಿಪಾರ್ಲರ್‌ನಲ್ಲಿ ತರಹೇವಾರಿ ಫೇಶಿಯಲ್‌ಗಳು ಲಭ್ಯವಿದೆ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರಿಗೆ ತಲೆನೋವಾಗುವ ವಿಷಯ ಮುಖದಲ್ಲಿನ, ದೇಹದ ಇತರ ಭಾಗಗಳಲ್ಲಿರುವ ಕೂದಲುಗಳು. ಬ್ಯೂಟಿಪಾರ್ಲರ್‌ನಲ್ಲಿ ಥ್ರೆಡ್ಡಿಂಗ್, ವ್ಯಾಕ್ಸಿಂಗ್ ಮೂಲಕ ಇವುಗಳನ್ನೂ ತೆಗೆದು ಹಾಕಲಾಗುತ್ತದೆ.
ಆದರೆ, ಕಾಲ ಅದೆಷ್ಟು ಬದಲಾದರೂ ಹೆಣ್ಣುಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಸೌಂದರ್ಯ ಸಾಧನಗಳು ಹೆಚ್ಚು ಪ್ರಿಯವಾಗುತ್ತವೆ. ಪಾರ್ಲರ್‌ನಲ್ಲಿ ಲಭ್ಯವಾಗುವ ಬ್ಯೂಟಿ ಪ್ರಾಡಕ್ಸ್, ಸೌಂದರ್ಯ ವೃದ್ಧಿಸಲು ಬಳಸಿಕೊಳ್ಳುವ ರೀತಿ ಆರೋಗ್ಯಕ್ಕೆ ಹಾನಿ ಎಂಬ ಅಭಿಪ್ರಾಯ ಎಲ್ಲರಲ್ಲೂ ಇದೆ.
ಅಪ್ಪರ್ ಲಿಪ್ ಕೂದಲ ನಿವಾರಿಸಲು ಇಲ್ಲಿವೆ ಈಸಿ ಟಿಪ್ಸ್!
ಸಕ್ಕರೆ ಮತ್ತು ನಿಂಬೆ ರಸ
ನೈಸರ್ಗಿಕವಾಗಿ ದೇಹದ ಮೇಲಿರುವ ಕೂದಲನ್ನು ತೊಡೆದು ಹಾಕಲು ಇದು ಅತ್ಯಂತ ಸುಲಭ ವಿಧಾನ. ಮೊದಲಿಗೆ, ಎರಡು ಚಮಚ ಸಕ್ಕರೆ ಮತ್ತು ನಿಂಬೆ ರಸ, ಮತ್ತು 8-9 ಚಮಚ ತಣ್ಣೀರು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬಿಸಿ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈಗ ಇದನ್ನು ಕೂದಲು (Hair) ಇರುವ ಜಾಗಕ್ಕೆ ಹಚ್ಚಿ ಸುಮಾರು 25-30 ನಿಮಿಷಗಳ ಕಾಲ ಬಿಡಿ. ತಂಪಾದ ನೀರಿನಿಂದ ಅದನ್ನು ತೊಳೆಯಿರಿ. ಸಕ್ಕರೆ ಅದ್ಭುತವಾದ ನೈಸರ್ಗಿಕ ಎಫ್ಫೋಲಿಯೇಟಿಂಗ್ ಪ್ರಮಾಣವನ್ನು ಹೊಂದಿದೆ. ಹೀಗಾಗಿ ನಿಂಬೆ (Lemon) ರಸದ ಬಳಕೆ ಚರ್ಮದ ಕೂದಲಿಗೆ ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ.
ನಿಂಬೆ ಮತ್ತು ಜೇನುತುಪ್ಪ
ವ್ಯಾಕ್ಸಿಂಗ್ ಬದಲು ಕೂದಲು ತೆಗೆಯಲು ಈ ಸುಲಭ ವಿಧಾನವನ್ನು ಸಹ ಅನುಸರಿಸಬಹುದು. ಇದಕ್ಕಾಗಿ ಮೊದಲು ಎರಡು ಚಮಚ ಸಕ್ಕರೆ, ಸ್ಪಲ್ಪ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ (Honey)ವನ್ನು ಮಿಶ್ರಣ ಮಾಡಬೇಕು. ಈಗ, ಮಿಶ್ರಣವನ್ನು ಸುಮಾರು 3 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಬೇಕು. ಮಿಶ್ರಣವನ್ನು ತೆಳ್ಳಗೆ ಮಾಡಲು ಸ್ವಲ್ಪ ನೀರು ಸೇರಿಸಬಹುದು.
ವ್ಯಾಕ್ಸಿಂಗ್ ನಂತರದ ಸ್ಕಿನ್ ರಾಷಸ್ ನಿವಾರಣೆಗೆ ಪರಿಣಾಮಕಾರಿ ಮನೆಮದ್ದು
ನಂತರ ಪೇಸ್ಟ್ ತಣ್ಣಗಾಗಲು ಬಿಡಿ. ಆ ಬಳಿಕ ಈ ಪೇಸ್ಟ್‌ನ್ನು ಕೂದಲಿರುವ ಕಡೆ ಹಚ್ಚಿ, ಪಾರ್ಲರ್‌ನಲ್ಲಿ ವ್ಯಾಕ್ಸಿಂಗ್ ಮಾಡುವ ರೀತಿಯೇ ಹತ್ತಿ ಬಟ್ಟೆಯನ್ನು ಕೂದಲಿರುವ ಕಡೆ ಪ್ರೆಸ್ ಮಾಡಿ ಹಿಡಿದು ಎಳೆಯಿರಿ. ಈ ವಿಧಾನ ಸುಲಭವಾಗಿ ಬೇಡದ ಕೂದಲುಗಳನ್ನು ತೆಗೆದು ಹಾಕುತ್ತದೆ. ಅಲ್ಲದೆ, ಜೇನುತುಪ್ಪದ ಬಳಕೆ ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಅದರಲ್ಲೂ ನೀವು ಒಣ ಚರ್ಮವನ್ನು ಹೊಂದಿದ್ದರೆ ಈ ವಿಧಾನವು ತುಂಬಾ ಪ್ರಯೋಜನಕಾರಿಯಾಗಿದೆ.
ಓಟ್ ಮೀಲ್ ಮತ್ತು ಬಾಳೆಹಣ್ಣು
ಓಟ್ ಮೀಲ್ ಮತ್ತು ಬಾಳೆಹಣ್ಣನ್ನು (Banana) ಸೇರಿಸಿಕೊಂಡು ಸಹ ಸುಲಭವಾಗಿ ಬೇಡದ ಕೂದಲುಗಳನ್ನು ತೆಗೆಯಬಹುದು. ಇದನ್ನು ತಯಾರಿಸಲು ಒಂದು ಮಾಗಿದ ಬಾಳೆಹಣ್ಣಿನ ಜೊತೆಗೆ 2 ಚಮಚ ಓಟ್ ಮೀಲ್ ಅನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲು ಇರುವ ಜಾಗಕ್ಕೆ ಹಚ್ಚಿ, ಸುಮಾರು 15-20 ನಿಮಿಷಗಳ ಕಾಲ ಮಸಾಜ್ ಮಾಡಿ, ತದನಂತರ ತಾಜಾ ನೀರಿನಿಂದ ತೊಳೆಯಿರಿ.
ಓಟ್ ಮೀಲ್ ಅತ್ಯುತ್ತಮವಾದ ಹೈಡ್ರೇಟಿಂಗ್ ಸ್ಕ್ರಬ್ ಆಗಿ ಮಾಡುತ್ತದೆ ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಬೇಡವಾದ ಕೂದಲನ್ನು ತೆಗೆಯುವುದು ಮಾತ್ರವಲ್ಲದೆ, ನುಣುಪಾದ ಚರ್ಮವನ್ನು ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.