Home Decoration Tips: ಚಿಕ್ಕ ಲಿವಿಂಗ್ ರೂಮ್ ದೊಡ್ಡದಾಗಿ ಕಾಣಬೇಕಾ?

By Suvarna NewsFirst Published Jun 22, 2022, 5:39 PM IST
Highlights

ಲಿವಿಂಗ್ ರೂಮ್ ಎಷ್ಟೇ ದೊಡ್ಡದಾಗಿದ್ದರೂ ಇನ್ನೂ ದೊಡ್ಡದಾಗಿರಬೇಕಿತ್ತು ಎನಿಸುತ್ತದೆ. ಚಿಕ್ಕದಾಗಿದ್ದರಂತೂ ಹೇಳುವುದೇ ಬೇಡ. ಆದರೆ, ಚಿಕ್ಕ ಲಿವಿಂಗ್ ರೂಮನ್ನೂ ಸಹ ಕೆಲವು ಮಾರ್ಗಗಳ ಮೂಲಕ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಅದಕ್ಕಾಗಿ ಕೆಲವು ಹೋಮ್ ಡೆಕೋರೇಷನ್ ಟಿಪ್ಸ್. 

ಇಂದಿನ ದುಬಾರಿ ಕಾಲದಲ್ಲಿ ಎಲ್ಲರಿಗೂ ದೊಡ್ಡ ಮನೆಯನ್ನೇ ಕಟ್ಟಿಸಲು ಸಾಧ್ಯವಾಗುವುದಿಲ್ಲ. ಅದೆಷ್ಟೋ ಜನರಿಗೆ ಸ್ವಂತ ಮನೆ (Home) ಹೊಂದಲೂ ಸಾಧ್ಯವಾಗದೆ ಇರಬಹುದು. ಹೀಗಾಗಿ, ಇರುವ ಸ್ಥಳವನ್ನೇ ಸುಂದರವಾಗಿಟ್ಟುಕೊಳ್ಳಲು ಯತ್ನಿಸುವುದು ಜಾಣತನ. ಮನೆಯಲ್ಲಿರುವ ಎಲ್ಲ ಸ್ಥಳಗಳೂ ಮುಖ್ಯವೇ. ಆದರೆ. ಲಿವಿಂಗ್ ರೂಮ್ (Living Room) ಅಥವಾ ಹಾಲ್ (Hall) ಸ್ವಲ್ಪ ಹೆಚ್ಚು ಮುಖ್ಯವೆನಿಸುತ್ತದೆ. ಏಕೆಂದರೆ, ಹೊರಗಿನ ಜನರೂ ಬಂದಾಗ ಇಲ್ಲಿಯೇ ಸ್ವಲ್ಪ ಕಾಲವಾದರೂ ಇರಬೇಕಾಗುತ್ತದೆ. ಹೀಗಾಗಿ, ಲಿವಿಂಗ್ ರೂಮ್ ಸ್ವಲ್ಪ ದೊಡ್ಡ(Big)ದಾಗಿದ್ದರೆ ಉತ್ತಮ. ಒಂದೊಮ್ಮೆ ದೊಡ್ಡದಾಗಿಲ್ಲದಿದ್ದರೆ ಚಿಂತೆ ಬೇಕಾಗಿಲ್ಲ. ಏಕೆಂದರೆ, ಕೆಲವು ಸರಳ ಮಾರ್ಗಗಳ ಮೂಲಕ ಲಿವಿಂಗ್ ರೂಮ್ ಅನ್ನು ದೊಡ್ಡದಾಗಿ ಕಾಣುವಂತೆ ಮಾಡಬಹುದು. 

•    ವಸ್ತುಗಳನ್ನು ಜೋಡಿಸುವಲ್ಲಿ ಶಿಸ್ತು (Declutter)
ಹಾಲ್ ನಲ್ಲಿ ವಿವಿಧ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದರೆ ಎಷ್ಟು ದೊಡ್ಡದಾಗಿದ್ದರೂ ಕಿರಿದಾಗಿ ಭಾಸವಾಗುತ್ತದೆ. ಕಿರಿಕಿರಿ ಎನಿಸುತ್ತದೆ. ಅದರ ಬದಲು ಹಾಲ್ ನಲ್ಲಿರಬೇಕಾದ ಎಲ್ಲ ವಸ್ತುಗಳನ್ನು ಜೋಡಿಸುವಲ್ಲಿ ಶಿಸ್ತನ್ನು ಅನುಸರಿಸುವುದು ಮುಖ್ಯ. ಉದಾಹರಣೆಗೆ ಹಳೆಯ ಪೀಠೋಪಕರಣಗಳಿಗೆ ಹೆಚ್ಚು ಸ್ಥಳ ಬೇಕಿದ್ದರೆ ಅವುಗಳನ್ನು ಬದಲಿಸಬಹುದು. ಸೋಫಾ ಕಮ್ ಬೆಡ್, ಟಿವಿ ಯೂನಿಟ್ (Tv Unit) ಜತೆಗೆ ಹಲವಾರು ಡ್ರಾ(Draw)ಗಳಿರುವ ಟೇಬಲ್, ಮಡಚಬಹುದಾದ ಟೇಬಲ್ ಹೀಗೆ ಹಲವು ರೀತಿಯಲ್ಲಿ ಬಳಕೆಗೆ ಬರುವಂತೆ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಚಿಕ್ಕ ಲಿವಿಂಗ್ ರೂಮಿಗೆ ದೊಡ್ಡ ಸೋಫಾ(Sofa)ಗಳು ಚೆಂದ ಕಾಣುವುದಿಲ್ಲ. ಯಾರದ್ದೋ ಮನೆಯಲ್ಲಿದೆ ಎಂದು ಅಂಥವುಗಳನ್ನು ಹಾಕಬೇಡಿ.

ಲಿವಿಂಗ್ ರೂಮಲ್ಲಿ ಪಾಸಿಟಿವ್ ಎನರ್ಜಿ ತರಲು ಇಲ್ಲಿವೆ ವಾಸ್ತು ಟಿಪ್ಸ್

•    ಅಮುಖ್ಯ ಆದರೂ ಮುಖ್ಯ!
ಒಟೊಮನ್ (Ottoman), ಆರ್ಮ್ ಚೇರ್ (Armchair), ಪುಟ್ಟ ಟೇಬಲ್ (Small Table) ಇಂತಹ ಪೀಠೋಪಕರಣಗಳನ್ನು ಗೋಡೆಗೆ ಜೋಡಿಸುವಂತೆ ಇಡಿ. ಇದರಿಂದ ಅವು ಹೆಚ್ಚು ಸ್ಥಳ ಆಕ್ರಮಿಸಿವೆ ಎಂದೆನಿಸುವುದಿಲ್ಲ. ಇಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ಓಡಾಡುವ ವೃತ್ತದಲ್ಲಿಡುವುದು ಸೂಕ್ತವಲ್ಲ. ಇದರಿಂದ ಸ್ಥಳಾವಕಾಶ ಕಡಿಮೆಯಾಗುತ್ತದೆ. ಅವು ಪ್ರತ್ಯೇಕವಾಗಿದ್ದರೆ ರೂಮ್ (Room) ದೊಡ್ಡದಾಗಿರುವಂತೆ ಕಾಣುತ್ತದೆ.

•    ತಿಳಿ ಬಣ್ಣ (Light Colour) ಆಯ್ಕೆ ಮಾಡಿ
ತಿಳಿಬಣ್ಣದ ಗೋಡೆಗಳಿಂದ ಲಿವಿಂಗ್ ರೂಮ್ ಹೆಚ್ಚು ದೊಡ್ಡದಾಗಿರುವಂತೆ ಭಾಸವಾಗುತ್ತದೆ. ತಿಳಿ ಹಸಿರು, ಬೇಬಿ ಪಿಂಕ್, ಬೇಬಿ ಬ್ಲೂ ಸೇರಿದಂತೆ ತಿಳಿಬಣ್ಣದ ಪೇಂಟ್ ಗೋಡೆಗೆ ಹೆಚ್ಚು ಸೂಕ್ತ. ತಿಳಿನೀಲಿ ಬಣ್ಣ ಬೆಳಕನ್ನು ಪ್ರತಿಫಲಿಸುತ್ತದೆ ಹಾಗೂ ರೂಮ್ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ, ವಿಶಿಷ್ಟ ಲುಕ್ ಬರಲು ನೀಲಿ (Pastel) ಬಣ್ಣವನ್ನೂ ಆಯ್ಕೆ ಮಾಡಿಕೊಳ್ಳಬಹುದು. 

•    ಮಿರರ್ ಗ್ಲಾಸ್ಗಳ (Mirror Glass) ಬಳಕೆ
ರೂಮಿನಲ್ಲಿ ಕನ್ನಡಿ ಗ್ಲಾಸ್ ಗಳನ್ನು ಬಳಕೆ ಮಾಡುವುದರಿಂದ ಸ್ಥಳ ದೊಡ್ಡದಾಗಿರುವಂತೆ ಕಾಣಿಸಬಹುದು. ಪ್ರತಿಫಲಿಸುವ ಟೇಬಲ್ ಮೇಲ್ಮೈ, ಡ್ರಾವರ್ ಎದುರು ಭಾಗ, ಕಪ್ ಬೋರ್ಡ್ ಮುಂತಾದ ಪೀಠೋಪಕರಣಗಳಲ್ಲಿ ಮಿರರ್ ಗ್ಲಾಸ್ ಬಳಕೆ ಮಾಡುವುದು ಉತ್ತಮ.

•    ಸೂಕ್ತ ಕರ್ಟನ್ (Perfect Curtains)
ಚಿಕ್ಕ ಹಾಲ್ ಗೆ ಗಾಢ ಬಣ್ಣದ ಕರ್ಟನ್ ಗಳು ಹೊಂದಾಣಿಕೆ ಆಗುವುದಿಲ್ಲ. ಅವು ಸ್ಥಳವನ್ನು ಇನ್ನಷ್ಟು ಚಿಕ್ಕದಾಗಿ ಕಾಣುವಂತೆ ಮಾಡುತ್ತವೆ. ಹೀಗಾಗಿ, ಹೆಚ್ಚು ಡಿಸೈನ್ ಗಳಿರದ, ಹಗುರ ಬಟ್ಟೆಯ ತಿಳಿಬಣ್ಣದ ಕರ್ಟನ್ ಗಳು ಸೂಕ್ತ. ಇನ್ನು, ಪೀಠೋಪಕರಣಗಳಿಗೂ ಗೋಡೆಯ ಬಣ್ಣದ ಬಟ್ಟೆಗಳನ್ನೇ ಹಾಕಿದರೆ ಹೆಚ್ಚು ಸ್ಥಳಾವಕಾಶ ಇರುವ ಭಾವನೆ ಮೂಡುತ್ತದೆ. 

ಬಾಲಿವುಡ್ ಬೇಬೋ ಮನೋ ಲಿವಿಂಗ್ ರೂಮ್ ಹೇಗಿದೆ ನೋಡಿ

•    ನೈಸರ್ಗಿಕ ಬೆಳಕು (Natural Light) ಇರಲಿ
ನೈಸರ್ಗಿಕವಾಗಿ ಬೆಳಕು ಬರುವ ಪ್ರದೇಶವನ್ನು ಸಾಧ್ಯವಾದಷ್ಟು ಬಂದ್ ಮಾಡಬೇಡಿ. ಅವುಗಳಿಗೆ ಅಡ್ಡವಾಗಿ ಏನೋ ವಸ್ತುಗಳನ್ನು ಇಡಬೇಡಿ. ನೈಸರ್ಗಿಕ ಬೆಳಕು ಚೆನ್ನಾಗಿರುವುದು ಮುಖ್ಯ. ಹಾಗೂ ಲಿವಿಂಗ್ ರೂಮ್ ನ ಅಲ್ಲಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿ. ಇದರಿಂದ ದೊಡ್ಡದಾಗಿ ತೋರುತ್ತದೆ. 
 

click me!