ಇತ್ತೀಚಿನ ದಿನಗಳಲ್ಲಿ ಎಲ್ಲವೂ ಮಾಡರ್ನ್ ಆಗಿದೆ. ತಂತ್ರಜ್ಞಾನಗಳಿಂದ ಕೆಲಸ ಸುಲಭವಾಗಿದೆ. ಆದ್ರೆ ಇದೇ ಆರೋಗ್ಯ ಹಾಳು ಮಾಡಿದೆ. ನಿಂತು ಅಡುಗೆ ಮಾಡುವುದ್ರಿಂದ ಏನೆಲ್ಲ ನಷ್ಟವಿದೆ ಎಂಬದನ್ನು ನಾವಿಂದು ಹೇಳ್ತೇವೆ.
ಹಿಂದಿನ ಕಾಲದ ಮನೆ (Home) ಗಳಲ್ಲಿ ಈ ಎಲ್ಲ ಸೌಕರ್ಯಗಳಿರಲಿಲ್ಲ. ಟಿವಿ (TV) , ಫ್ರಿಜ್ ಹೋಗ್ಲಿ ಗ್ಯಾಸ್ ಒಲೆ ಕೂಡ ಇರಲಿಲ್ಲ. ಹಿರಿಯರು ಕಟ್ಟಿಗೆ ಒಲೆಯಲ್ಲಿ ಅಡುಗೆ (Cooking) ಮಾಡ್ತಿದ್ದರು. ಹಾಗೆಯೇ ಮಾಡರ್ನ್ (Modern) ಕಿಚನ್ ಸೌಲಭ್ಯ ಕೂಡ ಇರಲಿಲ್ಲ. ಇದೇ ಕಾರಣಕ್ಕೆ ಮಹಿಳೆಯರು ನೆಲದ ಮೇಲೆ ಕುಳಿತೇ ಅಡುಗೆ ಮಾಡ್ತಿದ್ದರು. ಆದ್ರೀಗ ಎಲ್ಲರ ಮನೆಯ ಕಿಚನ್ ಮಾಡರ್ನ್ ಆಗಿದೆ. ಅಲ್ಲೋ ಇಲ್ಲೋ ಹಳ್ಳಿಗಳಲ್ಲಿ ಮಹಿಳೆಯರು ಈಗ್ಲೂ ನೆಲದ ಮೇಲೆ ಕುಳಿತು ಅಡುಗೆ ಮಾಡ್ತಾರೆ. ನೆಲದ ಮೇಲೆ ಕುಳಿತು ಅಡುಗೆ ಮಾಡುವುದು ಹಳೆ ಪದ್ಧತಿ, ಇದನ್ನು ನೋಡಿ ಜನರು ನಕ್ತಾರೆ ಎಂದುಕೊಳ್ಳುವವರ ಸಂಖ್ಯೆ ಹೆಚ್ಚು. ನೆನಪಿರಲಿ, ನೆಲದ ಮೇಲೆ ಕುಳಿತು ಅಡುಗೆ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಆಯುರ್ವೇದದಲ್ಲೂ ಅದಕ್ಕೆ ಮಹತ್ವವಿದೆ. ಕುಳಿತು ಅಡುಗೆ ಮಾಡ್ತಿದ್ದ ಮಹಿಳೆಯರು ಅನೇಕ ರೋಗಗಳಿಂದ ದೂರವಿದ್ದರು. ಈಗಿನ ಮಹಿಳೆಯರು ಸಾಕಷ್ಟು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಳಗೆ ಕುಳಿತು ಅಡುಗೆ ಮಾಡುವುದ್ರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?
ನೆಲದ ಮೇಲೆ ಕುಳಿತು ಅಡುಗೆ ಮಾಡುವುದj ಪ್ರಯೋಜನಗಳು
ಈಗಲೂ ಅನೇಕ ಮಹಿಳೆಯರು ನೆಲದ ಮೇಲೆ ಕುಳಿತು ಕೆಲಸ ಮಾಡಲು ಇಷ್ಟಪಡ್ತಾರೆ. ಇದ್ರಿಂದ ಅನೇಕ ಪ್ರಯೋಜನಗಳಿವೆ. ಅಡುಗೆ ಮಾಡುವ ಮಹಿಳೆಯರು ಸಾಮಾನ್ಯವಾಗಿ ಒಂದು ಕಾಲನ್ನು ನೆಲದ ಮೇಲೆಟ್ಟು ಇನ್ನೊಂದು ಕಾಲನ್ನು ಹೊಟ್ಟೆಗೆ ತಾಗಿಸಿ ಕುಳಿತುಕೊಳ್ಳುತ್ತಾರೆ. ಇದೇ ಭಂಗಿಯಲ್ಲಿ ಸುಮಾರು ಒಂದೆರಡು ಗಂಟೆ ಇರ್ತಾರೆ. ಇದ್ರಿಂದ ಹೊಟ್ಟೆ, ಬೆನ್ನು ಹಾಗೂ ಸೊಂಟದ ಭಾಗಕ್ಕೆ ಪ್ರೆಶರ್ ಬೀಳುತ್ತದೆ. ಹಿಂದಿನ ಕಾಲದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಡುಗೆ ಮನೆಯಲ್ಲೇ ಇರ್ತಿದ್ದ ಮಹಿಳೆಯರಿಗೆ ಇದ್ರಿಂದ ಲಾಭವಿತ್ತು. ನೆಲದ ಮೇಲೆ ಕುಳಿತು ಕೆಲಸ ಮಾಡ್ತಿದ್ದ ಮಹಿಳೆಯರನ್ನು ಗಮನಿಸಿ ಅವರಿಗೆ ಹೊಟ್ಟೆ ಬರ್ತಿರಲಿಲ್ಲ. ಅವರು ಆರೋಗ್ಯವೂ ಚೆನ್ನಾಗಿರುತ್ತಿತ್ತು. ಹೌದು, ನೆಲದ ಮೇಲೆ ಕುಳಿತು ಅಡುಗೆ ಮಾಡುವ ಮಹಿಳೆಯರಿಗೆ ಹೊಟ್ಟೆ ಬರುವುದಿಲ್ಲ. ಕೆಳ ಸೊಂಟದಲ್ಲಿ ನೋವು ಬರುವುದಿಲ್ಲ.
ಯಾವಾಗಲೂ ಯಂಗ್ ಆಗಿರಲು ನಮ್ಮ ಹಿರಿಯರು ಇದನ್ನೇ ಬಳಸ್ತಿದ್ರು
ಬರೀ ಅಡುಗೆ ಮಾತ್ರವಲ್ಲ, ಮಹಿಳೆಯರು ಕುಳಿತೇ ಬಟ್ಟೆ ತೊಳೆಯುತ್ತಿದ್ದರು. ಪಾತ್ರೆ ತೊಳೆಯುತ್ತಿದ್ದರು. ಮನೆಗಳನ್ನು ಬಗ್ಗಿ ಒರೆಸುತ್ತಿದ್ದರು. ಇದೆಲ್ಲವೂ ಅವರಿಗೆ ಒಳ್ಳೆಯ ವ್ಯಾಯಾಮ ನೀಡ್ತಿತ್ತು. ಅಲ್ಲದೆ ಶರೀರಿದ ಯಾವುದೇ ಭಾಗದಲ್ಲಿ ಕೊಬ್ಬು ಬೆಳೆಯುತ್ತಿರಲಿಲ್ಲ. ತೂಕ ಇಳಿಸಿಕೊಳ್ಳಲು ಕಸರನ್ನು ಮಾಡುವ ಅವಶ್ಯಕತೆಯಿರಲಿಲ್ಲ. ಡಯಟ್ ಬೇಕಾಗಿರಲಿಲ್ಲ.
ಮಾಡರ್ನ್ ಕಿಚನ್‌ನಿಂದ ನಷ್ಟ : ಮಾಡರ್ನ್ ಕಿಚನ್ ನಲ್ಲಿ ಗ್ಯಾಸ್ ಒಲೆಗಳು ಎತ್ತರದಲ್ಲಿರುತ್ತವೆ. ಮಹಿಳೆಯರು ಬಹುತೇಕ ಸಮಯವನ್ನು ನಿಂತೇ ಕಳೆಯುತ್ತಾರೆ. ನಿಂತು ಅಡುಗೆ ಮಾಡುವುದರಿಂದ ಭುಜ ನೋವು ಹಾಗೂ ಬ್ಯಾಕ್ ಪೇನ್ ಶುರುವಾಗುತ್ತದೆ. ಇದಲ್ಲದೆ ನಿಂತೇ ಕೆಲಸ ಮಾಡುವ ಕಾರಣ ಶರೀರದ ತೂಕವೆಲ್ಲ ಬೆನ್ನು ಹಾಗೂ ಸೊಂಟದ ಮೇಲೆ ಬೀಳುತ್ತದೆ. ಅಲ್ಲದೆ ಈ ಭಾಗದಲ್ಲಿ ಬೊಜ್ಜು ಶುರುವಾಗುತ್ತದೆ. ಇದ್ರಿಂದ ದೇಹದ ಆಕಾರ ಬದಲಾಗುತ್ತದೆ. ಅನಿವಾರ್ಯವಾಗಿ ಬೊಜ್ಜು ಕರಗಿಸಿಕೊಳ್ಳಲು ವಾಕಿಂಗ್,ವ್ಯಾಯಾಮ ಮಾಡ್ಬೇಕಾಗುತ್ತದೆ.
ಇವುಗಳ ಜೊತೆಗೆ ಕುಳಿತು ಬಟ್ಟೆ ತೊಳೆಯುವುದು, ಕುಳಿತು ಪಾತ್ರೆ ತೊಳೆಯುವುದು ಕೂಡ ಈಗಿಲ್ಲ. ಬಟ್ಟೆಗೆ ವಾಶಿಂಗ್ ಮೆಷಿನ್ ಬಂದ್ರೆ ಪಾತ್ರೆಯನ್ನು ನಿಂತು ತೊಳೆಯಲು ಮಹಿಳೆಯರು ಇಷ್ಟಪಡ್ತಾರೆ. ಕೆಲವರ ಮನೆಯಲ್ಲಿ ಇದಕ್ಕೂ ಮೆಷಿನ್ ಬಂದಿದೆ. ಈ ಸೌಕರ್ಯಗಳು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರಿವೆ.
ತೂಕ ಇಳಿಸಿಕೊಂಡ Smriti Irani, ಈಕೆಯ ಬಹುಮುಖ ಪ್ರತಿಭೆ ಇಲ್ಲಿದೆ ನೋಡಿ!
ಮುಂದೆ ಬಗ್ಗುವ ವ್ಯಾಯಾಮ : ನಿಂತು ಕೆಲಸ ಮಾಡುವುದ್ರಿಂದ ಹೊಟ್ಟೆಗೆ ಯಾವುದೇ ವ್ಯಾಯಾಮವಾಗುವುದಿಲ್ಲ. ಹಾಗಾಗಿ ನಿಂತು ಕೆಲಸ ಮಾಡುವವರು ಮುಂದೆ ಬಗ್ಗುವ ವ್ಯಾಯಾಮವನ್ನು ಅವಶ್ಯಕವಾಗಿ ಮಾಡ್ಬೇಕು. ಪದ್ಮಾಸನ,ಪವನಮುಕ್ತಾಸನ, ಬಟರ್ಫ್ಲೈ ಸೇರಿದಂತೆ ಮುಂದೆ ಬಗ್ಗುವ ಆಸನಗಳನ್ನು ನಿಮ್ಮ ವ್ಯಾಯಾಮದಲ್ಲಿ ಸೇರಿಸಿ.