ಸಾರಿಯಲ್ಲಿ ನಾರಿಯ ಕರಾಮತ್ತು..ಸೀರೆಯುಟ್ಟು ಗೋಲ್ ಹೊಡೆದ ಮಹಿಳಾಮಣಿಗಳು

By Vinutha Perla  |  First Published Mar 29, 2023, 10:33 AM IST

ಸೀರೆ ಎನಿದ್ರೂ ಸುಮ್ನೆ ಹಾಕ್ಕೊಂಡು ಓಡಾಡೋಕೆ ಚೆಂದ. ಸೀರೆಯುಟ್ಟು ಯಾವ ಕೆಲ್ಸಾನೂ ಮಾಡೋಕಾಗಲ್ಲ ಎಂದು ಹಲವರು ಹೇಳಿರೋದನ್ನು ನೀವು ಕೇಳಿರಬಹುದು. ಅದು ನಿಜವಲ್ಲ ಅನ್ನೋದನ್ನು ಇಲ್ಲೊಂದು ಮಹಿಳೆಯರ ತಂಡ ಸಾಬೀತುಪಡಿಸಿದೆ.


ಮಧ್ಯಪ್ರದೇಶ: ಹೆಣ್ಮಕ್ಕಳಂದ್ರೆ ಏನು ಸುಮ್ನೇನಾ..ಎಂಥಾ ಕೆಲಸಕ್ಕೂ ಸೈ..ಅಡುಗೆ ಮನೆಯಲ್ಲೂ ನಿಪುಣರು, ಮನೆಯ ಹೊರಗಿನ ಕೆಲಸದಲ್ಲೂ ಚತುರರು. ಕ್ರೀಡೆಯ ವಿಷಯಕ್ಕೆ ಬಂದಾಗ್ಲೂ ಹೆಣ್ಮಕ್ಕಳು ಹಿಂದೆ ಬಿದ್ದಿಲ್ಲ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಮಿಂಚೋ ಅದೆಷ್ಟೋ ಮಹಿಳೆಯರು ನಮ್ಮ ನಡುವೆಯಿದ್ದಾರೆ. ಗ್ರಾಮೀಣ ಹಿನ್ನಲೆಯಿಂದ ಬಂದಿದ್ದರೂ ಸಾಧಿಸಿ ತೋರುತ್ತಾರೆ. ಆದ್ರೆ ಇಲ್ಲೊಂದೆಡೆ ಗ್ರೌಂಡ್‌ಗಿಳಿದ ಹೆಣ್ಮಕ್ಕಳನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದರು. ಯಾಕಂದ್ರೆ ಇಲ್ಲಿ ಹೆಣ್ಮಕ್ಕಳು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದು ಸೀರೆಯನ್ನುಟ್ಟು. ಆಡಿದ್ದು ಫುಟ್ಬಾಲ್‌. ಸೀರೆಯುಟ್ಟು ಹೆಣ್ಮಕ್ಕಳು ಪುಟ್ಬಾಲ್ ಆಡಿರೋ ವಿಶುವಲ್ ಎಲ್ಲೆಡೆ ವೈರಲ್ ಆಗಿದೆ. 

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೀರೆಯುಟ್ಟ (Saree) ಮಹಿಳೆಯರೊಂದಿಗೆ ವಿಶಿಷ್ಟ ಫುಟ್‌ಬಾಲ್ ಪಂದ್ಯವನ್ನು (Football tournament) ಆಯೋಜಿಸಲಾಗಿತ್ತು. ಮಹಿಳೆಯರ ಫುಟ್‌ಬಾಲ್ ಪಂದ್ಯಾವಳಿಯನ್ನು 'ಗೋಲ್ ಇನ್ ಸೀರೆ' ಎಂದು ಕರೆಯಲಾಯಿತು. ಮಹಿಳೆಯರು ಕಚ್ಚೆ ರೂಪದಲ್ಲಿ ಸೀರೆಯುಟ್ಟು ಪುಟ್ಬಾಲ್ ಆಡಿರೋ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ಮಹಿಳೆಯರು ಫುಲ್ ಉತ್ಸಾಹದಲ್ಲಿ ಆಡುವುದನ್ನು ವೈರಲ್ ಆದ ವೀಡಿಯೋದಲ್ಲಿ ನೋಡಬಹುದು. ಪೂರ್ಣ ಉತ್ಸಾಹದಿಂದ ಅವರು ಫುಟ್ಬಾಲ್ ಆಡುತ್ತಾರೆ. 

Tap to resize

Latest Videos

ಮದ್ವೆ ಮನೆಯಲ್ಲಿ ಸೀರೆಯುಟ್ಟು ಹುಡುಗರ ಮಸ್ತ್ ಮಸ್ತ್ ಡ್ಯಾನ್ಸ್‌, ವೀಡಿಯೋ ವೈರಲ್‌

ಸೀರೆಯುಟ್ಟು ಗೋಲು ಹೊಡೆದ ಮಹಿಳೆಯರಿಗೆ ಪ್ರೇಕ್ಷಕರ ಪ್ರೋತ್ಸಾಹ
ಸೀರೆಯುಟ್ಟು ಗೋಲು ಹೊಡೆಯುತ್ತಿದ್ದ ಮಹಿಳೆಯರನ್ನು ಸಭಿಕರು  ಸಹ ಜೋರಾಗಿ ಪ್ರೋತ್ಸಾಹಿಸಿದರು (Encourage). ವೈರಲ್ ವೀಡಿಯೋಗೆ ಅದ್ಭುತ ಶೀರ್ಷಿಕೆಯನ್ನು ಸಹ ನೀಡಲಾಗಿದೆ. 'ನಮ್ಮೂರಿನ ಮಹಿಳೆಯರು ಮೆಸ್ಸಿಗಿಂತ ಕಡಿಮೆಯೇ..ಗ್ವಾಲಿಯರ್‌ನಲ್ಲಿ ಮಹಿಳೆಯರು ಸೀರೆಯುಟ್ಟು ಫುಟ್‌ಬಾಲ್ ಆಡುತ್ತಾರೆ' ಎಂಬ ಶೀರ್ಷಿಕೆ ಕೊಡಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಶನ್‌ನ ಆಯುಕ್ತ ಕಿಶೋರ್ ಕನ್ಯಾಲ್ ಅವರು ಫುಟ್‌ಬಾಲ್ ಪಂದ್ಯಾವಳಿಗೆ ವಿವರಣೆಯನ್ನು ಒದಗಿಸಿದರು.

ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯ ಸಂಘ (ಜಾಗತಿಕ ಲಾಭರಹಿತ ಎನ್‌ಜಿಒ) ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸಿತ್ತು. ಅಗ್ರ ಮೂರು ತಂಡಗಳಿಗೆ ಟ್ರೋಫಿಗಳ ಜೊತೆಗೆ ಸ್ಪರ್ಧಾತ್ಮಕ ತಂಡಗಳ ಪ್ರತಿ ಆಟಗಾರನಿಗೆ ಉಡುಗೊರೆಗಳನ್ನು ನೀಡಲಾಯಿತು. ಎಲ್ಲಾ ಮಹಿಳೆಯರು ಸೀರೆಯನ್ನುಟ್ಟು ಫುಟ್‌ಬಾಲ್ ಆಡಿದರು. ಅವರಲ್ಲಿ ಯಾರೂ ಮೊದಲು ಸ್ಪರ್ಧಾತ್ಮಕ ಆಟದಲ್ಲಿ ಭಾಗವಹಿಸಿರಲಿಲ್ಲ. ಮಹಿಳಾ ಆಟಗಾರರು 20 ರಿಂದ 72 ರ ವಯಸ್ಸಿನವರಾಗಿದ್ದರು, ದಲ್ಜಿತ್ ಸಿಂಗ್ ಮಾನ್ 72 ವರ್ಷ ವಯಸ್ಸಿನವರಾಗಿದ್ದಾರೆ. ವೈರಲ್ ಆದ ವೀಡಿಯೊವನ್ನು ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ, ಇದು 3.5K ವೀಕ್ಷಣೆಗಳನ್ನು ಹೊಂದಿದೆ.

Business Ideas : ಹೆಂಗಳೆಯರ ಅಚ್ಚುಮೆಚ್ಚಿನ ಸೀರೆ ಮಾರಾಟ ಮಾಡಿ ಹಣ ಗಳಿಸಿ

ಮರಾಠಿ ಸೀರೆಯುಟ್ಟು ಬೈಕ್ ಸವಾರಿ ಮಾಡೋ ನಾರಿ
ತಮ್ಮ ಕೆಲಸದ ಮೂಲಕ ನಮ್ಮ ದೇಶದ ಕೀರ್ತಿಯನ್ನು ಬೆಳಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಅನೇಕ ಮಂದಿ ಭಾರತದಲ್ಲಿದ್ದಾರೆ. ವಿಶ್ವ ಕೇಳರಿಯದ ಕೆಲಸವನ್ನು ಮಾಡಿ ತೋರಿಸಿದ ಜನರು ನಮ್ಮಲ್ಲಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ರಮಿಲಾ ಲತ್ಪಟೆ. 27 ವರ್ಷದ ಮಹಿಳಾ ಉದ್ಯಮಿ ನಂಬಲಾಗದ ಕನಸನ್ನು ಈಡೇರಿಸಲು ಹೊರಟಿದ್ದಾರೆ. ಅವರು ತಮ್ಮ ಮೋಟಾರ್ ಸೈಕಲ್ ಮೂಲಕ 20 ರಿಂದ 30 ದೇಶ ಸುತ್ತಲಿದ್ದಾರೆ. ಸುಮಾರ 100,000 ಕಿಲೋಮೀಟರ್ ದೂರವನ್ನು ಮೋಟರ್ ಸೈಕಲ್ ನಲ್ಲಿ ಕ್ರಮಿಸಲಿದ್ದಾರೆ.  ರಮಿಲಾ ಸಾಂಪ್ರದಾಯಿಕ ಮರಾಠಿ (Marathi) ಸೀರೆಯನ್ನು ಧರಿಸಿ ಮೋಟಾರ್‌ಸೈಕಲ್‌ನಲ್ಲಿ ಈ ಪ್ರಯಾಣ ಶುರು ಮಾಡಿದ್ದಾರೆ.  

म्हारी महिलायें क्या से कम हैं.. ग्वालियर में महिलाओं ने साड़ी वेशभूषा में फुटबॉल खेली। pic.twitter.com/Hi6PmTJp2i

— Brajesh Rajput (@brajeshabpnews)
click me!