Weekend With Ramesh: ನನ್ನ ಜೀವನದಲ್ಲಿ ರಾಹುಲ್‌ ಗಾಂಧಿ ಮೂರನೇ ಪ್ರಭಾವಶಾಲಿ ವ್ಯಕ್ತಿ: ನಟಿ ರಮ್ಯಾ

By Kannadaprabha News  |  First Published Mar 28, 2023, 1:35 AM IST

 ‘ತಂದೆ ತೀರಿಕೊಂಡದ್ದು ನನ್ನ ಬದುಕಿನ ಅತ್ಯಂತ ದುಃಖದ ಕ್ಷಣ. ಆಗ ನಾನು ಪಟ್ಟನೋವು ಯಾವ ಮಟ್ಟಿನದಾಗಿತ್ತು ಅಂದರೆ ನಾನು ಜೀವನ ಕೊನೆಗೊಳಿಸೋಣ ಅಂದುಕೊಂಡಿದ್ದೆ’  ಎಂದು ಜೀ ಕನ್ನಡ ಜನಪ್ರಿಯ ಶೋ ‘ವೀಕೆಂಡ್‌ ವಿತ್‌ ರಮೇಶ್‌’ಕಾರ್ಯಕ್ರಮ ನಟಿ ರಮ್ಯಾ ಹೇಳಿದ್ದಾರೆ.


ಬೆಂಗಳೂರು (ಮಾ.28) : ‘ತಂದೆ ತೀರಿಕೊಂಡದ್ದು ನನ್ನ ಬದುಕಿನ ಅತ್ಯಂತ ದುಃಖದ ಕ್ಷಣ. ಆಗ ನಾನು ಪಟ್ಟನೋವು ಯಾವ ಮಟ್ಟಿನದಾಗಿತ್ತು ಅಂದರೆ ನಾನು ಜೀವನ ಕೊನೆಗೊಳಿಸೋಣ ಅಂದುಕೊಂಡಿದ್ದೆ’ ಎಂದು ನಟಿ ರಮ್ಯಾ ಹೇಳಿದ್ದಾರೆ.

ಜೀ ಕನ್ನಡ ಜನಪ್ರಿಯ ಶೋ ‘ವೀಕೆಂಡ್‌ ವಿತ್‌ ರಮೇಶ್‌’ (Weekend with ramesh)ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ತಮ್ಮ ಬದುಕಿನ ಜರ್ನಿ ಬಗ್ಗೆ ಹೇಳಿಕೊಂಡರು.

Tap to resize

Latest Videos

Weekend With Ramesh; ಮೊದಲ ಅತಿಥಿ ರಮ್ಯಾ, ಈ ಬಾರಿ ಸಾಧಕರ ಸೀಟ್‌ನಲ್ಲಿ ಯಾರೆಲ್ಲ ಇರ್ತಾರೆ? ಇಲ್ಲಿದೆ ಪಟ್ಟಿ

ಈ ವೇಳೆ ರಾಜಕೀಯ ಜೀವನದ ಬಗ್ಗೆಯೂ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ರಾಹುಲ್‌ ಗಾಂಧಿ(Rahul gandhi) ಅವರು ಪ್ರಭಾವ ಬೀರಿರುವ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ. ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಸಮಯವಾಗಿತ್ತು. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದೆ. ಮಂಡ್ಯ ಜನರ ಪ್ರೀತಿಯನ್ನು, ಅವರು ನೀಡಿದ ಧೈರ್ಯವನ್ನು ಮರೆಯುವಂತಿಲ್ಲ’ ಎಂದರು.

ತಂದೆ ಕಳೆದುಕೊಂಡು ದುಃಖದಲ್ಲಿದ್ದ ತಮಗೆ ರಾಹುಲ್‌ ಗಾಂಧಿ ಅವರು ಮಾಡಿದ ಸಹಾಯವನ್ನು ರಮ್ಯಾ ಈ ವೇಳೆ ನೆನಪಿಸಿಕೊಂಡರು.

‘ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೆಯವರು ನನ್ನ ತಂದೆ, ಮೂರನೇ ವ್ಯಕ್ತಿ ರಾಹುಲ್‌ ಗಾಂಧಿ’ ಎನ್ನುತ್ತ ರಮ್ಯಾ ಭಾವುಕರಾದರು.

News Hour: ಯುವನಿಧಿ ಹೆಸರಲ್ಲಿ ರಾಹುಲ್ ಗಾಂಧಿ ರಣಕಹಳೆ

‘ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ರಾಹುಲ್‌ ಗಾಂಧಿ ಸಹಾಯ ಮಾಡಿದ್ರು. ಸಾವು ಅಂದರೇನು, ಬದುಕು ಅಂದರೇನು, ನಾವು ಯಾಕೆ ಈ ಜಗತ್ತಿಗೆ ಬಂದಿದ್ದೇವೆ ಅಂತೆಲ್ಲ ವಿವರಿಸಿ ರಾಹುಲ್‌ ಧೈರ್ಯ ತುಂಬಿದ್ದರು. ಅವರು ನನ್ನ ಬದುಕಿನ ಮೂರನೇ ಪ್ರಭಾವಶಾಲಿ ಎಂದು ಹೇಳಿದರು.

click me!